ಅಕ್ಷಯವಾಗದ ತೃತೀಯ?
ಮಾನ್ಯರೆ,
ಕಳೆದ ಕೆಲವು ವರ್ಷಗಳಿಂದ ಭಾರೀ ಪ್ರಚಾರ ಪಡೆದ ‘ಅಕ್ಷಯ ತೃತೀಯ’ ಚಿನ್ನದ ವ್ಯಾಪಾರ ಈ ವರ್ಷ ಕಳೆಗುಂದಿದ್ದು, ಕಳೆದ ವರ್ಷಕ್ಕಿಂತ ಶೇ.20ರಿಂದ 30ರಷ್ಟು ಕಡಿಮೆಯಾಗಿವೆಯೆಂದು ವರದಿಯಾಗಿವೆ.
ಆ ದಿನ ಚಿನ್ನ ಕೊಂಡರೆ ವರ್ಷವಿಡೀ ಚಿನ್ನದ ಅಂಗಡಿಗಳಿಗೆ ಎಡತಾಕಬಹುದೆಂಬಂತೆ ಜಾಹೀರಾತುಗಳ ಮೂಲಕ ಜನರನ್ನು ಮರುಳು ಮಾಡುತ್ತಿದ್ದ ಚಿನ್ನದ ವ್ಯಾಪಾರಿಗಳಿಗೆ ಈ ಬಾರಿ ಹೆಚ್ಚಿನ ಜನತೆ ಮರುಳಾದಂತೆ ಕಾಣುತ್ತಿಲ್ಲ. ಇದಕ್ಕೆ ಹಿಂದಿನ ವರ್ಷಗಳ ಚಿನ್ನದ ಖರೀದಿಯ ಅನುಭವವೂ(!) ಕಾರಣವೆನ್ನಬಹುದಾಗಿದೆ.
ಈಗ ಅತಿ ಹೆಚ್ಚಾಗಿರುವ ಚಿನ್ನದ ಬೆಲೆಯಿಂದಾಗಿ ಕೇವಲ ‘ಅಕ್ಷಯ ತೃತೀಯ’ದ ವೌಢ್ಯಕ್ಕೊಳಗಾಗಿ ಚಿನ್ನ ಕೊಂಡುಕೊಂಡರೆ ಇನ್ನು ಕೆಲವೇ ದಿನಗಳಲ್ಲಿ ‘ವೌಢ್ಯ’ದ (ಹಿಂದೂ ಸಂಪ್ರದಾಯದಂತೆ) ದಿನಗಳಲ್ಲಿ ಚಿನ್ನ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾದರೆ ತಾವು ಮೂರ್ಖರಾಗುವುದು ಖಂಡಿತವೆಂಬುದು ಹೆಚ್ಚಿನ ಗ್ರಾಹಕರಿಗೆ ಅರಿವಿಗೆ ಬಂದಿರಬೇಕು. ಆದ್ದರಿಂದಲೇ ಈ ಬಾರಿಯ ‘ಅಕ್ಷಯ ತೃತೀಯ’ ಕಳೆಗುಂದಿದು, ಗ್ರಾಹಕರು ಜಾಗೃತರಾಗಿದ್ದಾರೆಂದು ತಿಳಿಯುತ್ತಿದೆ.
-ಅನಂತ ಕೆ., ಕಾರವಾರ