ಕುವೆಂಪು ಪ್ರಶಸ್ತಿಯ ಹಣದ ಕುರಿತ ಸ್ಪಷ್ಟನೆ

ಮಾನ್ಯರೇ,
ಕೆಲವು ದಿನಗಳಿಂದ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬೇಂದ್ರೆ ಪ್ರಶಸ್ತಿ ಹತ್ತು ಸಾವಿರ; ಕುವೆಂಪು ಪ್ರಶಸ್ತಿ ಐದು ಲಕ್ಷ. ಯಾಕೆ ಈ ತಾರತಮ್ಯ ಎಂಬ ಸುದ್ದಿಗಳು ಪ್ರಚಾರವಾಗುತ್ತಿವೆ. ಈ ಕುರಿತು ಕುವೆಂಪು ಪ್ರತಿಷ್ಠಾನವು ಸ್ಪಷ್ಟೀಕರಣ ನೀಡಲು ಇಚ್ಛಿಸುತ್ತದೆ. ನಾವು ಕೊಡುತ್ತಿರುವ ಪ್ರಶಸ್ತಿಯ ಮೊಬಲಗು ಸರಕಾರದ ಹಣ ಅಲ್ಲ. ಓರ್ವ ದಾನಿಗಳು (ದಿವಂಗತ ಎಂ. ಚಂದ್ರಶೇಖರ ಕುಟುಂಬ) 75 ಲಕ್ಷ ರೂಪಾಯಿಗಳ ದೇಣಿಗೆಯನ್ನು ಪ್ರತಿಷ್ಠಾನಕ್ಕೆ ನೀಡಿರುತ್ತಾರೆ. ದಾನಿಗಳ ಆಶಯದಂತೆ, ಅದರ ಉತ್ಪತ್ತಿಯಿಂದ ಪ್ರಶಸ್ತಿಯ ಮೊಬಲಗನ್ನು ನೀಡುತ್ತಿದ್ದೇವೆ.
ಕುವೆಂಪು ಪ್ರತಿಷ್ಠಾನದ ಬೆಳವಣಿಗೆಯನ್ನು ನೋಡಿ ನಾಡಿನಾದ್ಯಂತ ಮತ್ತು ಹೊರರಾಜ್ಯಗಳಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಅದರ ನಡುವೆಯೂ ಕೆಲವರಲ್ಲಿ, ಸರಕಾರಿ ಅನುದಾನದ ವಿಷಯದಲ್ಲಿ ತಪ್ಪುಅಭಿಪ್ರಾಯಗಳಿವೆ. ಆದ್ದರಿಂದ ಈ ಕೆಳಗಿನ ವಿವರಗಳನ್ನು ಸಾರ್ವಜನಿಕರ ಗಮನಕ್ಕೆ ತರಲು ಇಚ್ಛಿಸುತ್ತೇವೆ.
ಸರಕಾರ ಎಲ್ಲ 23 ಪ್ರತಿಷ್ಠಾನಗಳಿಗೆ ನೀಡುವಂತೆ ಸಮಾನವಾದ ವಾರ್ಷಿಕ ಅನುದಾನವನ್ನು ಕುವೆಂಪು ಪ್ರತಿಷ್ಠಾನಕ್ಕೂ ನೀಡುತ್ತಿದೆ. ಕವಿಶೈಲದ ಸ್ಮಾರಕ (ವಿ.ಜಿ. ಸಿದ್ಧಾರ್ಥ ಹೆಗ್ಗಡೆಯವರ ನೆರವು) ಮತ್ತು ಪೂರ್ಣಚಂದ್ರ ತೇಜಸ್ವಿ ಸ್ಮಾರಕ ಇವುಗಳು ಸುಮಾರು 70 ಲಕ್ಷ ರೂಪಾಯಿಗಳಲ್ಲಿ ದಾನಿಗಳ ನೆರವಿನಿಂದ ನಿರ್ಮಾಣ ಗೊಂಡಿರುತ್ತವೆ. ಇದ್ಯಾವುದಕ್ಕೂ ಸರಕಾರಿ ಹಣ ಬಳಸಿರುವುದಿಲ್ಲ. ವಾರ್ಷಿಕ, ಸುಮಾರು ಒಂದೂವರೆ ಲಕ್ಷ ಜನರು ಕವಿಮನೆಗೆ ಭೇಟಿ ನೀಡುತ್ತಿರುವುದರಿಂದ, ಪ್ರವೇಶ ಶುಲ್ಕ, ಪುಸ್ತಕಗಳ ಮಾರಾಟ ಹಾಗೂ ಸಾರ್ವಜನಿಕ ದೇಣಿಗೆಗಳಿಂದ ಪ್ರತಿಷ್ಠಾನವು ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿರುತ್ತದೆ. 1992ರಿಂದ ಎಲ್ಲ ಸರಕಾರಗಳು ವಿಶೇಷ ಸಂದರ್ಭಗಳಲ್ಲಿ ನೀಡಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇವೆ ಎಂಬುದು ಗಮನಾರ್ಹ. ಸುಮಾರು 3,500 ಎಕರೆ ಕುವೆಂಪು ಸ್ಮಾರಕ ಜೈವಿಕ ಅರಣ್ಯ, ಕವಿಮನೆ, ಕವಿಶೈಲ, ಜನ್ಮಶತಮಾನೋತ್ಸವ ಭವನ, ಹಿರೇಕೊಡಿಗೆ ಜನ್ಮಸ್ಥಳ ಸ್ಮಾರಕ, ಫೋಟೊಗ್ಯಾಲರಿಗಳನ್ನು ನಿರ್ಮಿಸಿ, ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಕುಪ್ಪಳಿಯು ಕರ್ನಾಟಕದ ಒಂದು ಸಾಂಸ್ಕೃತಿಕ ಕೇಂದ್ರವಾಗಿ ರೂಪಗೊಂಡಿದ್ದು ದೇಶದ ಬೇರೆ ಬೇರೆ ಭಾಷೆಗಳ ಸಾಹಿತಿ ಕಲಾವಿದರ ಆಕರ್ಷಣೆಯಾಗಿದೆ. ದೇಶದ ಯಾವೊಬ್ಬ ಕವಿಗೂ ಈ ಪ್ರಮಾಣದ ಸ್ಮಾರಕ ನಿರ್ಮಾಣವಾಗಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದರ ಹಿಂದೆ ಪ್ರತಿಷ್ಠಾನದ ಅವಿರತ ಶ್ರಮ ಇದೆ ಎಂಬುದನ್ನು ಮನಗಾಣಬೇಕಾಗಿ ವಿನಂತಿ.
 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top