ಕೇಂದ್ರ ಸರಕಾರದ ಆರೋಗ್ಯ ಯೋಜನೆ ವಲಯವಾರು ನೇಮಕಾತಿ: ಕನ್ನಡಿಗರಿಗೆ ಅನ್ಯಾಯ | Vartha Bharati- ವಾರ್ತಾ ಭಾರತಿ

ಕೇಂದ್ರ ಸರಕಾರದ ಆರೋಗ್ಯ ಯೋಜನೆ ವಲಯವಾರು ನೇಮಕಾತಿ: ಕನ್ನಡಿಗರಿಗೆ ಅನ್ಯಾಯ

ಮಾನ್ಯರೇ,

ಕೇಂದ್ರ ಸರಕಾರದ ಆರೋಗ್ಯ ಯೋಜನೆಯ ‘ಸಿ’ ಮತ್ತು ‘ಡಿ’ ವರ್ಗದ ಖಾಲಿ ಹುದ್ದೆಗಳ ನೇಮಕಾತಿಯು ಪ್ರಸ್ತುತ ಆಯಾ ರಾಜ್ಯಗಳಲ್ಲೇ ನಡೆಯುತ್ತಿದೆ. ಇದರಿಂದ ಹೆಚ್ಚು ಖರ್ಚು, ಅನಗತ್ಯ ಮಾನವ ಸಂಪನ್ಮೂಲ ಬಳಕೆಯಾಗುತ್ತಿದೆ. ಜೊತೆಗೆ ಕೆಲಸದ ಪುನರಾವರ್ತನೆ ಆಗುತ್ತಿದೆ. ಅಭ್ಯರ್ಥಿಗಳು ಪ್ರತಿ ಪರೀಕ್ಷೆಗೂ ಶುಲ್ಕ ಪಾವತಿಸ ಬೇಕಾಗುತ್ತದೆ ಅನಗತ್ಯ ಸಮಯ ಬಳಕೆ ಮತ್ತು ವೆಚ್ಚವನ್ನು ತಗ್ಗಿಸಲು ಸಮಗ್ರ ನೇಮಕಾತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳವ ಆದೇಶವನ್ನು ಕೇಂದ್ರ ಆರೋಗ್ಯ ಮತ್ತು ಸಮಾಜ ಕಲ್ಯಾಣ ಸಚಿವಾಲಯವು 28-05-2020ರಂದು (F.No- A-12011/35/2019-CGHS-II Dated 28/05/2020) ಹೊರಡಿಸಿದೆ.

ಹೊಸ ನಿಯಮದಂತೆ ಈಗಿರುವ ರಾಜ್ಯವಾರು ಆಯ್ಕೆಯ ಬದಲಿಗೆ, ನಾಲ್ಕು ವಲಯಗಳಲ್ಲಿ ಆಯ್ಕೆ ನಡೆಯುತ್ತದೆ(ದಿಲ್ಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾಗಳಲ್ಲಿ). ಈ ಆದೇಶದಿಂದ ಆಯ್ಕೆ ಪ್ರಕ್ರಿಯೆ 30 ವರ್ಷಗಳ ಹಿಂದೆ ಇದ್ದಕ್ರಮ ಮರು ಜಾರಿ ಮಾಡಿದಂತಾಗಿದೆ. ಹಿಂದೆ ಎಲ್ಲ ದಕ್ಷಿಣ ರಾಜ್ಯಗಳ ಕೇಂದ್ರ ಕಚೇರಿ/ಸಂಸ್ಥೆಗಳಿಗೆ ಆಯ್ಕೆ ಮದ್ರಾಸ್‌ನಲ್ಲಿ ನಡೆಯುತ್ತಿತ್ತು. ಆಗ ಕನ್ನಡಿಗರಿಗೆ ಕೆಲಸ ಸಿಗುತ್ತಿರಲಿಲ್ಲ. ಆಗ ಕನ್ನಡ ಸಂಘಟನೆಗಳು ಹೋರಾಟ ನಡೆಸಿದ್ದರಿಂದ ಸಿಬ್ಬಂದಿ ಆಯ್ಕೆ ಸಮಿತಿ, ರೈಲ್ವೆ, ಬ್ಯಾಂಕ್ ಮುಂತಾದ ಆಯ್ಕೆ ಸಮಿತಿಗಳ ಪ್ರಾದೇಶಿಕ ಕಚೇರಿಗಳು ಬೆಂಗಳೂರಿಗೆ ಬಂದವು.

ಸ್ವಲ್ಪ ಮಟ್ಟಿಗೆ ಕನ್ನಡಿಗರಿಗೆ ಕೆಲಸ ಸಿಗುವಂತಾಯಿತು. ಈಗ ನೇಮಕಾತಿ ಪ್ರಕ್ರಿಯೆಯನ್ನು ಸರಳೀಕರಣ, ಅನಗತ್ಯ ವೆಚ್ಚಗಳನ್ನು ಉಳಿಸುವ ನೆಪದಲ್ಲಿ ಕೇಂದ್ರ ಸರಕಾರವು ವಿಕೇಂದ್ರೀಕರಣ ವ್ಯವಸ್ಥೆಯನ್ನು ಮತ್ತೆ ಕೇಂದ್ರೀಕೃತ ವ್ಯವಸ್ಥೆಗೆ ಬದಲಿಸುತ್ತಿದೆ. ಪ್ರಾದೇಶಿಕ ಆಯ್ಕೆ ರದ್ದಾದ ನಂತರ ಗ್ರಾಮೀಣ ಪ್ರದೇಶದ ಬ್ಯಾಂಕ್‌ಗಳಿಗೂ ಕನ್ನಡ ಬಾರದವರು ಬರುತ್ತಿದ್ದಾರೆ. ಅದೇ ಪರಿಸ್ಥಿತಿ ಅರೋಗ್ಯ ಇಲಾಖೆಗೂ ಬರುತ್ತದೆ ಮತ್ತು ನಿಧಾನವಾಗಿ ಎಲ್ಲ ಇಲಾಖೆಗಳ ಆಯ್ಕೆಗಳೂ ಕೇಂದ್ರೀಕೃತವಾಗಿ ಸ್ಥಳೀಯರಿಗೆ ಉದ್ಯೋಗ ಗಗನ ಕುಸುಮವಾಗುತ್ತದೆ. ಈಗಲೇ ಕನ್ನಡಿಗರು ಜಾಗೃತರಾಗಿ ಈ ಪ್ರವೃತ್ತಿಯನ್ನು ಪ್ರತಿಭಟಿಸಬೇಕು. ನಮ್ಮ ಸಂಸದರು ಪಕ್ಷಭೇದ ಮರೆತು ಒಂದಾಗಿ ಈ ಹೊಸ ಆದೇಶವನ್ನು ಹಿಂದೆೆಗೆದು ಕೊಳ್ಳಲು ಕೇಂದ್ರ ಸರಕಾರವನ್ನು ಒತ್ತಾಯಿಸಬೇಕೆಂದು ಕನ್ನಡ ಗೆಳೆಯರ ಬಳಗವು ಆಗ್ರಹಿಸುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top