ಥಳಿಸಲು, ಕೊಲ್ಲಲು ಲೈಸೆನ್ಸ್ | Vartha Bharati- ವಾರ್ತಾ ಭಾರತಿ

ಥಳಿಸಲು, ಕೊಲ್ಲಲು ಲೈಸೆನ್ಸ್

ಎಪ್ರಿಲ್ 16ರಂದು ಉತ್ತರ ಪ್ರದೇಶದ ಚಜ್ಜಾಪುರ್ ಹಳ್ಳಿಯ ನಿವಾಸಿ 19ರ ಹರೆಯದ ಮುಹಮ್ಮದ್ ರಿಝ್ವಿನ್ ಬಿಸ್ಕಿಟ್ ತರಲೆಂದು ಮನೆಯಿಂದ ಹೊರಗೆ ಹೋದ. ಪೊಲೀಸರು ಅವನನ್ನು ಕೋವಿಯ ಹಿಡಿಯಿಂದ ಹಾಗೂ ಲಾಠಿಗಳಿಂದ ಥಳಿಸಿದರು. ಇತರ ನಿವಾಸಿಗಳು ಅಂಗಡಿಯಿಂದ ದಿನಸಿ ಸಾಮಾನುಗಳನ್ನು ಕೊಂಡುಕೊಳ್ಳುತ್ತಿರುವಾಗಲೇ ಈ ಘಟನೆ ನಡೆಯಿತು. ಹಿಗ್ಗಾಮುಗ್ಗಾ ಥಳಿಸಲ್ಪಟ್ಟ ರಿಝ್ವಾನ್ ಅಂತೂ ಹೇಗೋ ಮನೆ ತಲುಪಿದ ಮನೆ ಮದ್ದಿನಿಂದ ಏನೂ ಉಪಯೋಗವಾಗದಿದ್ದಾಗ ಅವನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಆತ ಎಪ್ರಿಲ್ 18ರ ನಸುಕಿನ ವೇಳೆ ಕೊನೆಯುಸಿರೆಳೆದ.

ವಲಸೆ ಕಾರ್ಮಿಕರು ಭಾರೀ ತ್ರಾಸದಾಯಕವಾದ ಅಂತರ್‌ರಾಜ್ಯ ಪ್ರಯಾಣ ಕೈಗೊಂಡು ತಮ್ಮ ಹಳ್ಳಿಗಳಿಗೆ ಮರಳಲು ಪ್ರಯತ್ನಿಸುತ್ತಿರುವಾಗ ಇಂತಹ ಘಟನೆ ನಡೆದದ್ದರಲ್ಲಿ ಅಸಮಾನ್ಯವೇನೂ ಇಲ್ಲ ಅಥವಾ ಪೊಲೀಸರಿಂದ ನಡೆದಿರುವ ಇದೇ ರೀತಿಯ ಇತರ ಪಾಶವೀ ದೌರ್ಜನ್ಯ ನಡೆದಿರುವುದರಲ್ಲಿ ಆಶ್ಚರ್ಯವೂ ಇಲ್ಲ. ಹಲವು ಸ್ಥಳಗಳಲ್ಲಿ ಪೊಲೀಸರು ಹಿರಿಯ ನಾಗರಿಕರನ್ನು ಕ್ರಿರವಾಗಿ ಥಳಿಸಿದ್ದಾರೆ. ಈಗ ಮುಂದುವರಿದಿರುವ ಲಾಕ್‌ಡೌನ್‌ನ ಹಲವು ಹಂತಗಳಲ್ಲಿ ಪೊಲೀಸರು ಕಾನೂನನ್ನು ಕೈಗೆತ್ತಿಕೊಂಡು ನಡೆಸಿದ ದೌರ್ಜನ್ಯ ಎಲ್ಲಿಯವರೆಗೆ ನಡೆಯಿತೆಂದರೆ, ಯಾವ ಮಟ್ಟಕ್ಕೆ ಹೋಯಿತೆಂದರೆ ತಮಿಳುನಾಡಿನ ಮಾನವ ಹಕ್ಕು ಆಯೋಗಕ್ಕೆ ಅರ್ಜಿಯೊಂದನ್ನು ಕೂಡ ಸಲ್ಲಿಸಲಾಯಿತು. ಪೊಲೀಸರು ನಡೆಸುವ ಅತಿರೇಕಗಳ ವಿಚಾರಣೆ ನಡೆಸಲು ಸೂಕ್ತ ಸಮಿತಿಯೊಂದರ ರಚನೆಯಾಗಬೇಕೆಂದು ಆ ಅರ್ಜಿಯಲ್ಲಿ ವಿನಂತಿಸಲಾಯಿತು.

ಪೊಲೀಸ್ ದೌರ್ಜನ್ಯ ಹಾಗೂ ಅತಿರೇಕವನ್ನು ಗಂಭೀರವಾಗಿ ಪರಿಗಣಿಸಿದ ‘ಕಾಮನ್ ವೆಲ್ತ್ ಹ್ಯೂಮನ್‌ರೈಟ್ಸ್, ಇನಿಶಿಯೇಟಿವ್’ ಮಾರ್ಚ್ ತಿಂಗಳಲ್ಲಿ ಪೊಲೀಸರು ಅನುಸರಿಸಬೇಕಾದ ಒಂದಷ್ಟು ಮಾರ್ಗದರ್ಶಿ ನಿಯಮಗಳನ್ನು ಪ್ರಕಟಿಸಿತು. ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಯಾವುದೇ ರೀತಿಯ ಬಲ ಪ್ರಯೋಗ ಮಾಡುವುದನ್ನು ಅದು ನಿಷೇಧಿಸಿತು. ಈ ನಿಟ್ಟಿನಲ್ಲಿ ಬೆಂಗಳೂರು ಪೊಲೀಸ್ ಇಲಾಖೆ, ಸ್ವಲ್ಪ ಸಮಯದ ಬಳಿಕ, ಪೊಲೀಸರ ಕೈಯಲ್ಲಿ ಲಾಠಿ ಇರದಂತೆ ನೋಡಿಕೊಂಡು ಒಂದು ಆದರ್ಶವನ್ನು ಮೆರೆಯಿತು. ಲಾಕ್‌ಡೌನ್ ಅನ್ನು ಗಂಭೀರವಾಗಿ ಅನುಷ್ಠಾನಗೊಳಿಸಲು ಪೊಲೀಸರು ಲಾಠಿಗೆ ಬದಲಾಗಿ ಜನರ ಮನವೊಲಿಸುವ, ಅವರನ್ನು ಒತ್ತಾಯಿಸುವ ವಿಧಾನಗಳನ್ನು ಬಳಸಿದರು.

ಬ್ರಿಟಿಷ್ ಆಡಳಿತಗಾರರ ಒಂದು ಬಳುವಳಿಯಾಗಿರುವ ಪಾಶವೀಯತೆ, ದೌರ್ಜನ್ಯ ಭಾರತದ ಪೊಲೀಸ್ ವ್ಯವಸ್ಥೆಯ ಒಂದು ಸ್ವ್ವಭಾವವಾಗಿ ಉಳಿದುಕೊಂಡಿದೆ. ಈ ಪಾಶವೀಯತೆಯನ್ನು ನಿರ್ಮೂಲನ ಮಾಡುವ ಪ್ರಯತ್ನಗಳು ನಡೆದಿರುವುದು ಅಲ್ಪಸ್ವಲ್ಪ ಮಾತ್ರ. ಬಹುತೇಕ ಪೊಲೀಸರಿಗೆ ತರಬೇತಿಯ ಅವಧಿಯಲ್ಲಿಯೇ, ಕ್ರೌರ್ಯ ಪಾಶ್‌ವೀಯತೆ ಅವರು ಮುಂದಕ್ಕೆ ನಿರ್ವಹಿಸಬೇಕಾದ ಕೆಲಸದ ಅವಿಭಾಜ್ಯ ಅಂಗವಾಗಿದೆ ಎಂದು ಅವರು ನಂಬುವಂತೆ ಮಾಡಲಾಗುತ್ತದೆ. ನಾಗರಿಕರಲ್ಲಿ ಭಯ ಮೂಡಿಸಲು ಇದು ಅಗತ್ಯವೆಂದು ಅವರು ತಿಳಿಯುತ್ತಾರೆ. ಪೊಲೀಸ್ ತರಬೇತುದಾರರು ಈ ಭಾವನೆಯನ್ನು ತರಬೇತಿ ಪಡೆಯುವಾಗ ತಪ್ಪೆಸಗಿದವರನ್ನು ಬೈಯುವ ಮತ್ತು ದೈಹಿಕವಾಗಿ ಶಿಕ್ಷಿಸುವ ಮೂಲಕ ಕೂಡ, ಇನ್ನಷ್ಟು ದೃಢವಾಗಿಸುತ್ತಾರೆ. ಪರಿಣಾಮವಾಗಿ, ತರಬೇತಿ ಮುಗಿಸಿ ಅವರು ಖಾಕಿ ಧರಿಸಿದ ಬಳಿಕ ತಮ್ಮ ಅನಿಯಂತ್ರಿತ ಅಧಿಕಾರವನ್ನು ನಾಗರಿಕರನ್ನು ಥಳಿಸಲು ಮತ್ತು ಕೊಲ್ಲಲು ಕೂಡ ಬಳಸುತ್ತಾರೆ.

ಬಲಪ್ರಯೋಗದ ಬಳಕೆ ಖಂಡಿತವಾಗಿಯು ಕಾನೂನು ರೀತಿಯ ಒಂದು ಅವಶ್ಯಕತೆ. ಪೊಲೀಸರಿಗೆ ಲಾಠಿ, ಪಿಸ್ತೂಲ್‌ಗಳು, ರೈಫಲ್‌ಗಳು ಹಾಗೂ ಇತರ ಆಧುನಿಕ ಅಸ್ತ್ರಗಳನ್ನು ಒದಗಿಸಲಾಗುತ್ತದೆ. ಆದರೆ ಲಾಠಿ ಹಾಗೂ ಅಸ್ತ್ರಗಳನ್ನು ಹೊಂದಿದ್ದೇವೆಂಬ ಮಾತ್ರಕ್ಕೆ ಅವರು ಅಮಾಯಕರ ಅಥವಾ ಆಪಾದಿತರ ವಿರುದ್ಧ ಕೂಡ ಆ ಅಸ್ತ್ರಗಳನ್ನು ಬೇಕಾಬಿಟ್ಟಿ ಬಳಸುವುದು ಸಮರ್ಥನೀಯವಾಗುವುದಿಲ್ಲ.

ಮಾನವ ಹಕ್ಕುಗಳು ಪೊಲೀಸ್ ತರಬೇತಿಯ ಪಠ್ಯಕ್ರಮದಲ್ಲಿ ಒಂದು ವಿಷಯ ಹೌದಾದರೂ ಇದಕ್ಕೆ ಗಂಭೀರ ಗಮನ ಕೊಡುತ್ತಿಲ್ಲ. ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಪೊಲೀಸರನ್ನು ತರಾಟೆಗೆ ತೆಗೆದುಕೊಳ್ಳುವುದು ತೀರಾ ಅಪರೂಪ. ಇಂತಹ ಪೊಲೀಸರ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕಾದವರು ಅದೇ ಇಲಾಖೆಯ ಹಿರಿಯ ಅಧಿಕಾರಿಗಳಾಗಿರುವುದರಿಂದ ಅವರು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದರರ್ಥ ಹಿಂಸೆಯ ಅಸಮರ್ಥನೀಯ ಬಳಕೆಯನ್ನು ವಿರೋಧಿಸುವ ಪೊಲೀಸ್ ಅಧಿಕಾರಿಗಳು ಇಲ್ಲವೆಂದಲ್ಲ. ಆದರೆ ಅಂತಹವರ ಸಂಖ್ಯೆ ಬಹಳ ಕಡಿಮೆ.

ಪರಿಸ್ಥಿತಿ ಮತ್ತಷ್ಟು ಹದಗೆಡಲು ಇನ್ನೂ ಒಂದು ಕಾರಣವಿದೆ: ತಮ್ಮ ಕೆಳಗಿನ ಶ್ರೇಣಿಯ ಸಿಬ್ಬಂದಿ ಕರ್ತವ್ಯನಿರತರಾಗಿರುವಾಗ ಆ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿರುವುದು ತುಂಬ ಅಪರೂಪ. ಅವರು ಅಲ್ಲಿ ಹಾಜರಿದ್ದಲ್ಲಿ ಪರಸ್ಪರ ಸೌಹಾರ್ದ ಉತ್ತಮಗೊಳ್ಳುವುದಲ್ಲದೆ ಆ ಸಿಬ್ಬಂದಿ ಯಾವುದೇ ತಪ್ಪುಗಳನ್ನು ಎಸಗದಂತೆ ತಡೆಯುವುದು ಕೂಡ ಸಾಧ್ಯವಾಗುತ್ತದೆ.

ದೀರ್ಘಾವಧಿಯ ಕೆಲಸ, ಕರ್ತವ್ಯದಿಂದಾಗಿ ಪೊಲೀಸರು ತುಂಬ ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂಬುದು ನಿಜ. ಆಗ ಅವರು ಅಮಾಯಕರ ಮೇಲೆ ತಮ್ಮ ಸಿಟ್ಟು, ಅಸಹನೆಯನ್ನು ತೋರ್ಪಡಿಸುತ್ತಾರೆ. ಪೊಲೀಸ್ ಪಡೆಯಲ್ಲಿ ಬೃಹತ್ ಸಂಖ್ಯೆಯ ಹುದ್ದೆಗಳು ಭರ್ತಿಯಾಗದೆ ಇರುವುದು ಕೂಡ ಅವರ ಕೆಲಸದ ಒತ್ತಡಕ್ಕೆ ಕಾರಣ. ವಿಶ್ವಸಂಸ್ಥೆಯ ಶಿಫಾರಸುಗಳ ಪ್ರಕಾರ ಒಂದು ಲಕ್ಷ ಜನಸಂಖ್ಯೆಗೆ 222 ಮಂದಿ ಪೊಲೀಸ್ ಸಿಬ್ಬಂದಿ ಇರಬೇಕು. ನಮ್ಮ ದೇಶದ ಹೆಚ್ಚಿನ ರಾಜ್ಯಗಳಲ್ಲಿ ಈ ಸಂಖ್ಯೆ ಸುಮಾರು 100 ಮಾತ್ರ ನೇಮಕಾತಿಯಲ್ಲಿ ಸೂಕ್ತವಾದ ಯೋಜನೆ, ತರಬೇತಿ, ಸೇವೆಯಲ್ಲಿರುವಾಗಲೇ ಪೊಲೀಸರಿಗೆ ಸರಿಯಾದ ಕೋರ್ಸ್‌ಗಳನ್ನು ನಡೆಸುವುದು ಮತ್ತು ಹಿರಿಯ ಅಧಿಕಾರಿಗಳಿಂದ ತೀವ್ರವಾದ ಮೇಲ್ವಿಚಾರಣೆತಿಯಿಂದ ಪೊಲೀಸರ ಪಾಶವೀಯತೆಯನ್ನು ನಿರ್ಮೂಲನಗೊಳಿಸಲಾಗದಿದ್ದರೂ ಅದನ್ನು ಕಡಿಮೆಮಾಡುವುದು ಸಾಧ್ಯವಾದೀತು.

(ಕೃಪೆ: The Hindu)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top