ರಾಮನೇಕೆ ಒಬ್ಬಂಟಿ?

ಮಾನ್ಯರೇ,

ರಾಮನೇಕೆ ಒಬ್ಬಂಟಿ? ವೈದೇಹಿ ಏನಾದಳು? ಹೌದು ಹಿಂದಿನ 15-20 ವರ್ಷಗಳಿಂದ ಸಂಘ ಪರಿವಾರದ ಬ್ಯಾನರುಗಳಲ್ಲಿ ಮತ್ತು ಕ್ಯಾಲಂಡರ್‌ಗಳಲ್ಲಿ ನಮ್ಮ ಪುರಾತನ ಸಂಪ್ರದಾಯಕ್ಕೆ ವಿರುದ್ಧವಾಗಿ ರಾಮನನ್ನು ಒಬ್ಬಂಟಿಯಾಗಿ ಚಿತ್ರಿಸಲಾಗುತ್ತಿದೆ. ಪುರುಷ ಪ್ರಧಾನ ಸಮಾಜದ ಸಂಘ ಪರಿವಾರದವರಿಗೆ ಸೀತೆ ಯಾಕೆ ಬೇಡವಾದಳು ಎಂಬುದನ್ನು ಊಹಿಸುವುದು ಕಷ್ಟವಲ್ಲ. ಸೀತೆಯನ್ನು ಮದುವೆ ಆಗಿದ್ದೇ ತಡ ಅವಳ ಕೆಟ್ಟ ಕಾಲ್ಗುಣದಿಂದ ರಾಮ ವನವಾಸಕ್ಕೆ ಹೋಗಬೇಕಾಯಿತಂತೆ, ದಶರಥ ಸಾಯಬೇಕಾಯಿತಂತೆ, ರಾಜ್ಯವು ರಾಮನ ಮಲತಮ್ಮ ಭರತನ ಪಾಲಾಯಿತಂತೆ, ಸೀತೆಯ ಅಪಹರಣದಿಂದ ಶಿವಭಕ್ತ ರಾವಣನೊಂದಿಗೆ ರಾಮನ ಯುದ್ಧವಾಗಿ ಲಕ್ಷಾಂತರ ಅಮಾಯಕ ಯೋಧರನ್ನು ಕೊಲ್ಲುವ ಘೋರ ಪಾಪ ರಾಮ ಮಾಡಬೇಕಾಯಿತಂತೆ. ಅದಕ್ಕಾಗಿ ಈಗಿನ ಪುರುಷ ಪ್ರಧಾನ ಮನಸ್ಥಿತಿಯ ಸಂಘ ಪರಿವಾರಿಗ ಚಿತ್ರಕಾರರು ಅಶುಭ ಕಾಲ್ಗುಣದ ಸೀತೆಯನ್ನು ರಾಮನಿಂದ ದೂರ ಇಡುತ್ತಿದ್ದಾರಂತೆ. ಆದರೆ ಹಿಂದಿನ ಕಾಲದಲ್ಲಿ ಸಾತ್ವಿಕ ಜನರಲ್ಲಿ ಇದ್ದ ನಂಬಿಕೆಯೆಂದರೆ ಸೀತೆ, ಲಕ್ಷ್ಮಣ, ಹನುಮಂತರೊಂದಿಗೆ ಇದ್ದ ರಾಮನ ಚಿತ್ರ ಮಾತ್ರ ಮನೆಯಲ್ಲಿ ಇಡುವುದರಿಂದ ಶುಭವಾಗುತ್ತದೆ ಎಂಬುದು. ಆಗೆಲ್ಲ ರಾಮನನ್ನು ಮಂದಸ್ಮಿತ, ಭಕ್ತವತ್ಸಲ, ಕೃಪಾಕರ ಭಂಗಿಯಲ್ಲಿ ಮಾತ್ರ ಚಿತ್ರಿಸಲಾಗುತ್ತಿತ್ತು.

ಆದರೆ 1990ರ ಅಡ್ವಾಣಿಯ ರಥ ಯಾತ್ರೆಯ ಸಮಯದಲ್ಲಿ ಈ ಸಂಕೇತದ ಮೂಲಕ ಹಿಂದೂ-ಮುಸ್ಲಿಂ ದ್ವೇಷ ಹರಡಲು ಅನುಕೂಲವಾಗಲಿ ಎಂದು ರಾಮನು ಒಂಟಿಯಾಗಿ ಕೈಯಲ್ಲಿ ಬಾಣ ಹಿಡಿದು ಯುದ್ಧೋನ್ಮಾದದಿಂದ ಎಲ್ಲಿಗೋ ಓಡುವಂತೆ ಚಿತ್ರಿಸುವ ಪದ್ಧತಿ ಆರಂಭವಾಯಿತು. ಅದೇ ಕಾಲದಲ್ಲಿ ಮೂಲತಃ ಸೌಮ್ಯ ಮುಖದ ಭಕ್ತಿಭಾವದ ಹನುಮಂತನನ್ನೂ ಕ್ರೂರ ರುದ್ರ ಮುಖಚರ್ಯೆಯಲ್ಲಿ ಚಿತ್ರಿಸಿದ ಸ್ಟಿಕ್ಕರುಗಳನ್ನು ವಾಹನಗಳ ಹಿಂಬದಿಯಲ್ಲಿ ಅಂಟಿಸುವ ಪದ್ಧತಿ ಶುರುವಾಯಿತು. ಪ್ರಜಾಪ್ರಿಯ ಛತ್ರಪತಿ ಶಿವಾಜಿಯ ಮುಖಕ್ಕೂ ಕೋಪ, ಕ್ರೌರ್ಯದ ಭಾವ ತೊಡಿಸಲಾಯಿತು. ಬಹುಶ ಈ ಸಂಕೇತದಿಂದ ಅಲ್ಪಸಂಖ್ಯಾತರ ಮನದಲ್ಲಿ ಭಯ ಹರಡಲು ಒಂಟಿ ರಾಮನನ್ನು ಯುದ್ಧೋನ್ಮಾದದ ಪೋಸ್‌ನಲ್ಲಿ ಹಾಗೂ ಶಿವಾಜಿ ಮತ್ತು ಹನುಮಂತನನ್ನು ಕ್ರೂರ ಕೋಪಿಷ್ಠ ಮುಖಚರ್ಯೆಯಲ್ಲಿ ಚಿತ್ರಿಸುವುದು ಈಗಲೂ ಮುಂದುವರಿಯುತ್ತಿರುವಂತಿದೆ. ಹೆಚ್ಚಿನ ಆರೆಸ್ಸೆಸ್ ನೇತಾರರು ಅವಿವಾಹಿತ ಒಬ್ಬಂಟಿಗಳು. ದೇಶದ ಪ್ರಧಾನ ಸೇವಕರೂ ಒಬ್ಬಂಟಿಗರು. ಅದಕ್ಕಾಗಿ ಬಹುಶ ಒಬ್ಬಂಟಿ ರಾಮನ ಚಿತ್ರ ಇವರೆಲ್ಲರಿಗೂ ಹೆಚ್ಚು ಪ್ರಿಯವಾಗಿರುವಂತೆ ಕಾಣುತ್ತಿದೆ! ಆದರೆ ದೇಶದ ಈಗಿನ ಕಷ್ಟಕಾಲದಲ್ಲಿ ಸೌಮ್ಯ ಮುಖದ, ವರದ ಹಸ್ತದ, ಕೃಪಾಕರ ಭಂಗಿಯ ಮಂದಸ್ಮಿತ ದೇವರ ಚಿತ್ರಗಳೇ ಜನರ ಮನಸ್ಸಿಗೆ ಹೆಚ್ಚು ಸ್ಥೈರ್ಯ, ಧೈರ್ಯ ನೀಡುವುದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top