ದ್ವೇಷ ಭಾಷಣದ ರಾಜಕಾರಣ

ತಾನು ದ್ವೇಷ ಭಾಷಣ ಹಾಗೂ ತಪ್ಪು/ಸುಳ್ಳು ಮಾಹಿತಿಯ ವಿರುದ್ಧ ತನ್ನ ನೀತಿಗಳನ್ನು ಅನುಷ್ಠಾನಗೊಳಿಸಲು ಬದ್ಧನಿದ್ದೇನೆ ಎಂದು ಫೇಸ್‌ಬುಕ್ ಹಲವು ವರ್ಷಗಳಿಂದ ನಮ್ಮನ್ನು ನಂಬಿಸುತ್ತಾ ಬಂದಿದೆ. ಆದರೆ ಅದು ದ್ವೇಷ ಭಾಷಣವನ್ನು ನಿಯಂತ್ರಿಸುವಲ್ಲಿ ಸಮರ್ಥವಾಗಿಲ್ಲವಷ್ಟೇ ಅಲ್ಲ, ಇತರ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಅದು ದ್ವೇಷ ಹರಡುವ ಮಾತುಗಳಿಗೆ (ಹೇಟ್‌ಸ್ಪೀಚ್) ಸಂಬಂಧಿಸಿ ತಾರತಮ್ಯ ನೀತಿ ಅನುಸರಿಸುತ್ತಿದೆ. 'ದಿ ವಾಲ್ ಸ್ಟ್ರೀಟ್ ಜರ್ನಲ್'ನಲ್ಲಿ ಇತ್ತೀಚೆಗೆ ಪ್ರಕಟವಾದ ಲೇಖನವೊಂದು ಇದನ್ನು ಸ್ಪಷ್ಟಪಡಿಸಿದೆ.

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ವೇಳೆ ತನ್ನ ಜಾಹೀರಾತುಗಳಲ್ಲಿ ಪ್ರಕಟವಾಗುವ ಹೇಟ್‌ಸ್ಪೀಚ್‌ನ್ನು ನಿಷೇಧಿಸುವುದಕ್ಕಾಗಿ ಕಂಪೆನಿಯ ನಿಯಮಗಳನ್ನು ಬದಲಾಯಿಸುವುದಾಗಿ ಅದರ ಸಿಇಒ ಘೋಷಿಸಿದ್ದರು. ಅಷ್ಟೇ ಅಲ್ಲ, ಹಿಂಸೆಯನ್ನು ಪ್ರಚೋದಿಸುವ ಅಥವಾ ಮತದಾನವನ್ನು ಹತ್ತಿಕ್ಕಲು ಪ್ರಯತ್ನಿಸುವ ಪೋಸ್ಟರ್‌ಗಳನ್ನು ಕಿತ್ತು ಹಾಕುವುದಾಗಿಯೂ ಫೇಸ್‌ಬುಕ್ ಹೇಳಿತು. ತನ್ನ ಈ ಹೊಸ ನೀತಿಗಳಿಗೆ ತಾನು ಬದ್ಧ ಎಂದು ತೋರಿಸುವುದಕ್ಕಾಗಿ ಅದು ಡೊನಾಲ್ಡ್ ಟ್ರಂಪ್ ಅವರ ಮರು ಚುನಾವಣಾ ಪ್ರಚಾರದಲ್ಲಿ ಬಳಸಲಾದ ನಾಝಿ ಪ್ರತಿಮೆ (ಇಮೇಜರಿ)ಗಳನ್ನು ಬಳಸಿದ ಪೋಸ್ಟರ್‌ಗಳನ್ನು ಹಾಗೂ ಜಾಹೀರಾತುಗಳನ್ನು ಫೇಸ್‌ಬುಕ್‌ನಿಂದ ಕಿತ್ತು ಹಾಕಿತ್ತು. ಆದರೆ ಭಾರತಕ್ಕಾಗುವಾಗ ಮಾತ್ರ ಅದು ಸಂಪೂರ್ಣವಾಗಿ ಭಿನ್ನವಾದ ನಿಯಮಗಳನ್ನು ತಾರತಮ್ಯ ನೀತಿಯನ್ನು ಅನುಸರಿಸುತ್ತಿರುವಂತೆ ಕಾಣಿಸುತ್ತಿದೆ. ಇಲ್ಲಿ ಅದು ದ್ವೇಷ ಭಾಷಣ, ಸುಳ್ಳು ಮಾಹಿತಿ ಹಾಗೂ ಬೆದರಿಕೆಗಳು, ಮತಾಂಧತೆ ಹಾಗೂ ಕಿರುಕುಳದ ವಿರುದ್ಧ ಫೇಸ್‌ಬುಕ್‌ನಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಫೇಸ್‌ಬುಕ್‌ನಲ್ಲಿ ಅಲ್ಪಸಂಖ್ಯಾತರ ವಿರುದ್ಧ ಪ್ರಕಟವಾದ ಹೇಟ್‌ಸ್ಪೀಚ್‌ನಿಂದಾಗಿ ಭಯಾನಕ ಹಿಂಸೆ ಸಂಭವಿಸಿದೆ ಎಂದು ಸಾಬೀತುಪಡಿಸುವ ಪುರಾವೆಗಳು ಲಭಿಸಿದ ಮೇಲೆ ಕೂಡ ಫೇಸ್‌ಬುಕ್ ಆ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಸುಳ್ಳು ಸುದ್ದಿಗಳ ಸತತ ಹರಡುವಿಕೆ ಭಾರತದಲ್ಲಿ ದ್ವೇಷ ಅಪರಾಧಿಗಳಿಗೆ ಬಹಳಷ್ಟು ಕುಮ್ಮಕ್ಕು ನೀಡಿದೆ. ಈ ವರ್ಷ ದಿಲ್ಲಿಯಲ್ಲಿ ನಡೆದ ದೊಂಬಿಗಳು ಇದಕ್ಕೆ ಅತ್ಯಂತ ಇತ್ತೀಚಿನ ಉದಾಹರಣೆ. ಭಾರತದಲ್ಲಿ ಹೇಟ್‌ಸ್ಪೀಚ್ ಎಷ್ಟರ ಮಟ್ಟಿಗೆ ಅನಿಯಂತ್ರಿತವಾಗಿದೆ ಎಂದರೆ ದೇಶದ ಅತ್ಯಂತ ಗೌರವಾನ್ವಿತ ಪತ್ರಕರ್ತರಿಗೆ ಹಾಗೂ ಭಿನ್ನ ಧ್ವನಿಯ ಇತರರಿಗೆ ಹಲವಾರು ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಅತ್ಯಾಚಾರ ಹಾಗೂ ಕೊಲೆ ಬೆದರಿಕೆಗಳು ಎದುರಾಗುತ್ತಲೇ ಇರುತ್ತವೆ.

ಇದಕ್ಕಿಂತ ಹೆಚ್ಚು ಆತಂಕಕಾರಿ, ಆಘಾತಕಾರಿ ಸಂಗತಿಯೆಂದರೆ ಫೇಸ್‌ಬುಕ್ ದ್ವೇಷ ಸಂದೇಶಗಳನ್ನು ಅಸಮಾನವಾಗಿ ತಾರತಮ್ಯದಿಂದ ನಿರ್ವಹಿಸುತ್ತಿರುವ ರೀತಿ. ಟೈಮ್ ಮ್ಯಾಗಝಿನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ವಿಶ್ವಾದ್ಯಂತ ನಲವತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಹೇಟ್ ಸ್ಪೀಚ್‌ನ್ನು ಪತ್ತೆ ಹಚ್ಚುವ ತಾಂತ್ರಿಕ ವ್ಯವಸ್ಥೆ ತನ್ನಲ್ಲಿದೆ ಎಂದು ಫೇಸ್‌ಬುಕ್ ಹೇಳಿತು. ಆದರೆ ಭಾರತದಲ್ಲಿ ಸುಮಾರು 800 ಭಾಷೆಗಳಿವೆ. ಇವುಗಳಲ್ಲಿ 22 ಭಾಷೆಗಳು ಸರಕಾರ ಮಾನ್ಯ ಮಾಡಿರುವ ಅಧಿಕೃತ ಭಾಷೆಗಳು. ಇವುಗಳಲ್ಲಿ ಕೇವಲ ನಾಲ್ಕು ಭಾಷೆಗಳು ಮಾತ್ರ (ಹಿಂದಿ, ಬಂಗಾಳಿ, ಉರ್ದು ಮತ್ತು ತಮಿಳು) ಫೇಸ್‌ಬುಕ್‌ನಿಂದ ಪತ್ತೆ ಹಚ್ಚುವ ವ್ಯವಸ್ಥೆಯೊಳಗೆ ಸೇರಿವೆ. 2011ರ ಭಾರತದ ಜನಗಣತಿಯ ಟೈಮ್ ಮ್ಯಾಗಝಿನ್ ವಿಶ್ಲೇಷಣೆಯ ಪ್ರಕಾರ, ಭಾರತದ ಜನಸಂಖ್ಯೆಯ ಶೇ.25 ಮಂದಿ ಆ ನಾಲ್ಕು ಭಾಷೆಗಳಲ್ಲಿ ಒಂದು ಭಾಷೆಯನ್ನು ಕೂಡ ಅಥವಾ ಇಂಗ್ಲಿಷನ್ನು ಮಾತನಾಡದವರು. ಪರಿಣಾಮವಾಗಿ ಭಾರತದ ಅಲ್ಪಸಂಖ್ಯಾತರು ಮತ್ತು ಸಮಾಜದ ಕೆಳಹಂತದ ಸಮುದಾಯಗಳು ದ್ವೇಷ ಭಾಷಣದ, ದ್ವೇಷ ಸಂದೇಶಗಳ ಪರಿಣಾಮವಾಗಿ ಸಂಭವಿಸುವ ಹಿಂಸೆಗೆ ಅತ್ಯಂತ ಸುಲಭವಾಗಿ ಬಲಿಪಶುಗಳಾಗುವ ಅಪಾಯದಲ್ಲಿದ್ದಾರೆ.

ಭಾರತದಲ್ಲಿ 290 ಮಿಲಿಯ ಮಂದಿ ಫೇಸ್‌ಬುಕ್ ಬಳಕೆದಾರರು ಹಾಗೂ 400 ಮಿಲಿಯ ಮಂದಿ ವಾಟ್ಸ್ ಆ್ಯಪ್ ಬಳಕೆದಾರರಿರುವುದರಿಂದ ಫೇಸ್‌ಬುಕ್‌ನ ಕಣ್ಣು ಇಲ್ಲಿ ತಾನು ಕೊಳ್ಳೆ ಹೊಡೆಯಬಹುದಾದ ಲಾಭದ ಮೇಲಿದೆ ಎಂಬುದು ಸ್ಪಷ್ಟ. ಗರಿಷ್ಠ ಬಾರಿ ಫೇಸ್‌ಬುಕ್ ಮೆಸೇಜುಗಳನ್ನು ಬಳಕೆದಾರರು ನೋಡುವಂತೆ ಮಾಡಿದಲ್ಲಿ ಮಾತ್ರ ಅದರ ಲಾಭ ಹೆಚ್ಚುತ್ತದೆ. ಆದ್ದರಿಂದ ಯಾವ ಸಮುದಾಯಗಳು ಅತ್ಯಂತ ಹೆಚ್ಚು ಸಮಯ, ಅತ್ಯಂತ ಹೆಚ್ಚು ಬಾರಿ ಫೇಸ್‌ಬುಕ್ ಸಂದೇಶಗಳನ್ನು ವೀಕ್ಷಿಸುತ್ತವೆಯೋ ಅಂತಹ ಸಮುದಾಯಗಳನ್ನು ಫೇಸ್‌ಬುಕ್ ಗುರಿ ಮಾಡುತ್ತದೆ. ಆ ಸಮುದಾಯಗಳು ಫೇಸ್‌ಬುಕ್‌ನಲ್ಲಿ ನೋಡುವ, ಓದುವ ಸಂದೇಶಗಳು, ಅಭಿಪ್ರಾಯಗಳು ದ್ವೇಷ ಜನಾಂಗವಾದ, ಸ್ತ್ರೀದ್ವೇಷ, ಇಸ್ಲಾಂ ದ್ವೇಷ, ಧಾರ್ಮಿಕ ಅಸಹನೆ ಹರಡಲು ಬಳಕೆಯಾದರೂ ಫೇಸ್‌ಬುಕ್ ಆ ಬಗ್ಗೆ ಚಿಂತಿಸುವುದಿಲ್ಲ.

ಸಿಲಿಕಾನ್ ವ್ಯಾಲಿಯಲ್ಲಿ ಕುಳಿತಿರುವ ಜನ ನಮ್ಮ ಪ್ರಜಾಪ್ರಭುತ್ವದ ಕತ್ತುಹಿಸುಕುವ ಮೂಲಕ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಈ ಮೇಲಿನ ಅಂಶಗಳು ಸ್ಪಷ್ಟಪಡಿಸುತ್ತವೆ. ಆದ್ದರಿಂದ ಫೇಸ್‌ಬುಕ್ ಕಂಪೆನಿಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕಾಗಿ ನಾವು ಹಕ್ಕೊತ್ತಾಯ ಸಲ್ಲಿಸಲು ಇದು ಸಕಾಲ. ಬಹಳ ಸಮಯದ ಹಿಂದೆ ಫೇಸ್‌ಬುಕ್‌ನಲ್ಲಿ ನಾನು ಓದಿದ ಒಂದು ವಾಕ್ಯ ಹೀಗಿದೆ- ''ಇಷ್ಟಪಡುವುದು ಮತ್ತು ಬೆಲೆ ಕಟ್ಟುವುದರ ನಡುವೆ ವ್ಯತ್ಯಾಸವಿದೆ'' ಫೇಸ್‌ಬುಕ್ ಇದನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ಕೃಪೆ: thehindu

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top