---

ಬಿಲ್ಲವರಿಗೆ ನಾರಾಯಣಗುರುಗಳಿಗಿಂತ ವಿವೇಕಾನಂದರೇ ಮೇಲಾದರೇ?

ಮಾನ್ಯರೆ,

ಸ್ವಾಮಿ ವಿವೇಕಾನಂದರು ಮತ್ತು ನಾರಾಯಣ ಗುರುಗಳು ಸಮಕಾಲೀನರು. ಸ್ವಾಮಿ ವಿವೇಕಾನಂದರು 1892ರಲ್ಲಿ ಕೇರಳಕ್ಕೆ ತಮ್ಮ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಭೇಟಿ ಇತ್ತಿದ್ದರು. ಅವರು ನಾಯರ್ ಜಾತಿಯ ಚತ್ತಾಂಬಿ ಸ್ವಾಮಿಗಳನ್ನು ಭೇಟಿಯಾದರು ಹಾಗೂ ಕೇರಳದಲ್ಲಿಯ ಅತ್ಯಂತ ಹೀನ ಜಾತಿ ಶೋಷಣೆಯನ್ನು ನೋಡಿ ಸ್ಥಂಭೀಭೂತರಾಗಿ ಕೇರಳವನ್ನು ಒಂದು ಹುಚ್ಚಾಸ್ಪತ್ರೆ ಎಂದು ಕರೆದು ಮರಳಿ ಕೋಲ್ಕತಾಗೆ ಹೋದರು ಅಷ್ಟೇ. ಅವರು ಕೇರಳದಲ್ಲಿ ಸ್ವಲ್ಪಸಮಯ ನಿಂತು ಅಲ್ಲಿಯ ಜಾತಿ ಶೋಷಣೆಯ ವಿರುದ್ಧ ಯಾವುದೇ ತರದ ಹೋರಾಟವನ್ನೂ ಮಾಡಲಿಲ್ಲ ಅಥವಾ ಘೋರ ಜಾತೀಯತೆ ಹೋಗಲಾಡಿಸಲು ಯಾವುದೇ ಸಂಘಟನೆ ಹುಟ್ಟು ಹಾಕಲಿಲ್ಲ. ವಿವೇಕಾನಂದರು 1892ರಲ್ಲಿ ಕೇರಳಕ್ಕೆ ಬಂದಾಗ ನಾರಾಯಣ ಗುರುಗಳಿಗೆ 36 ವರ್ಷ ಪ್ರಾಯವಾಗಿತ್ತು ಹಾಗೂ ಅವರು ಆಗಲೇ ತಮ್ಮ ಈಳವ ಜನಾಂಗವನ್ನು ಹೀನ ಜಾತಿ ಶೋಷಣೆಯಿಂದ ರಕ್ಷಿಸಲು ತಮ್ಮ ಹೋರಾಟವನ್ನು ಶುರು ಮಾಡಿದ್ದರು ಹಾಗೂ 1887ರಲ್ಲಿ ನಾರಾಯಣ ಗುರುಗಳ ನೇತೃತ್ವದಲ್ಲಿ ನಡೆದ ವೈಕಂ ಸತ್ಯಾಗ್ರಹದಲ್ಲಿ 60 ಜನ ಈಳವರು ಅಲ್ಲಿಯ ತುಂಡರಸನ ಸೈನಿಕರ ದಾಳಿಯಿಂದ ಮೃತಪಟ್ಟಿದ್ದರು (ವೈಕಂ ಪಟ್ಟಣದ ಇಂದಿನ ಬಸ್‌ಸ್ಟಾಂಡ್ ಆ 60 ಜನ ಈಳವರ ಸಾಮೂಹಿಕ ಸಮಾಧಿಯ ಮೇಲೆಯೇ ನಿಂತಿರುವುದು).

ವಿವೇಕಾನಂದರಿಗೆ ಇವೆಲ್ಲಾ ಗೊತ್ತಿದ್ದರೂ ಅವರು ನಾರಾಯಣ ಗುರುಗಳನ್ನು ಭೇಟಿಯಾಗಿ ಅವರಿಗೆ ಬೆಂಬಲ ಸೂಚಿಸಲಿಲ್ಲ. ಕೇವಲ ಬಾಯಿಯಲ್ಲಿ ಕೇರಳ ಒಂದು ಹುಚ್ಚಾಸ್ಪತ್ರೆ ಎಂದು ಕರೆದ ಮಾತ್ರಕ್ಕೆ ಅಲ್ಲಿಯ ಫ್ಯೂಡಲ್ ಮೇಲ್ಜಾತಿಯವರು ಕೆಳಜಾತಿಯವರ ಶೋಷಣೆ ನಿಲ್ಲಿಸಲಿಲ್ಲ. ಹಾಗೆ ನೋಡಿದರೆ ವಿವೇಕಾನಂದರು ಎಲ್ಲಿಯೇ ಆಗಲಿ ಕೇವಲ ಬೋಧನೆ ಭಾಷಣಗಳನ್ನು ಮಾಡುತ್ತಾ ತಿರುಗಿದರೇ ಹೊರತು ಅವರು ನೇರವಾಗಿ ಫೀಲ್ಡಿಗಿಳಿದು ಹೋರಾಟ ಮಾಡಿದ ಉದಾಹರಣೆ ಇಲ್ಲ. ಆದರೆ ನಾರಾಯಣ ಗುರುಗಳು ಕೇವಲ ಬೋಧನೆಗೆ ತಮ್ಮನ್ನು ಸೀಮಿತಗೊಳಿಸದೇ, ಮೇಲ್ಜಾತಿಯಿಂದ ತಮ್ಮ ಜೀವಕ್ಕಿದ್ದ ಅಪಾಯವನ್ನೂ ಲೆಕ್ಕಿಸದೆ ಊರೂರು ತಿರುಗಿ ಜನರನ್ನು ಸಂಘಟಿಸಿ ತಮ್ಮ ಹೋರಾಟ ತೀವ್ರಗೊಳಿಸಿ ಈಳವ ಸಮುದಾಯದಲ್ಲಿ ಜಾಗ್ರತಿ ಮೂಡಿಸಿ ಅವರಿಗೆ ಪ್ರತ್ಯೇಕ ದೇವಸ್ಥಾನಗಳನ್ನು ಹುಟ್ಟುಹಾಕಿ ಅವರಲ್ಲಿ ಆತ್ಮಸಮ್ಮಾನ ಮೂಡಿಸಿದರು.

ಮೊನ್ನೆ ಫೆ. 11-12ಕ್ಕೆ ಮಂಗಳೂರಲ್ಲಿ ಸ್ವಾಮಿ ವಿವೇಕಾನಂದರ ಶಿಷ್ಯೆ ನಿವೇದಿತಾರ 150ನೆ ಜನ್ಮದಿನೋತ್ಸವವನ್ನು ಸಂಘ ಪರಿವಾರ ತುಂಬಾ ವಿಜೃಂಭಣೆಯಿಂದ ಆಚರಿಸಿತು. ಆ ಎರಡೂ ದಿನ ಬಿಲ್ಲವರು ದೊಡ್ಡ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಆದರೆ ನಾರಾಯಣ ಗುರುಗಳ ಯಾವುದೇ ಕಾರ್ಯಕ್ರಮದಲ್ಲಿ ಬಿಲ್ಲವರು ಇಷ್ಟು ಉತ್ಸಾಹದಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದು ಯಾರೂ ಕಂಡಿಲ್ಲ. ಮೊನ್ನೆ ಸೋಮವಾರ (ಫೆ.20ಕ್ಕೆ) ಬಲ್ಮಠ ಸಹೋದಯ ಹಾಲ್‌ನಲ್ಲಿ ನಾರಾಯಣ ಗುರುಗಳ ಬಗ್ಗೆ ಪ್ರಸಿದ್ಧ ಬಿಲ್ಲವ ಸಂಶೋಧಕ ಮತ್ತು ಲೇಖಕ ಪೇರೂರು ಜಾರು ಇವರು ಬರೆದ 1,200 ಚರಣಗಳ ಅಂದರೆ ಆರು ಸಾವಿರ ಸಾಲುಗಳ ಒಂದು ಬೃಹತ್ ತುಳು ಕಾವ್ಯದ ಬಿಡುಗಡೆ ಆಯಿತು.

ಇಂತಹ ಒಂದು ಮಹಾಕಾವ್ಯ ಈ ಹಿಂದೆ ತುಳುವಿನಲ್ಲಿ ಯಾರೂ ಬರೆದಿರಲಿಲ್ಲ. ಬಿಲ್ಲವರು ತಮ್ಮ ಜಾತಿಯನ್ನು ಮೇಲೆತ್ತಲು ಏನೂ ಮಾಡದ ಕಾಯಸ್ಥ-ಕ್ಷತ್ರಿಯ ಮೇಲು ಜಾತಿಯ ವಿವೇಕಾನಂದರ ಬಗ್ಗೆ ತೋರಿದ ಅಭಿಮಾನದಲ್ಲಿ ಒಂದು ಸಣ್ಣ ಭಾಗವನ್ನಾದರೂ ತಮ್ಮ ಸಮುದಾಯಕ್ಕೆ ಅಸ್ಮಿತೆಯನ್ನು ತಂದಿತ್ತ ನಾರಾಯಣ ಗುರುಗಳಿಗೆ ತೋರಿಸಿದ್ದರೆ ಸಾಕಿತ್ತು. ಆದರೆ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬೇರೆಲ್ಲಾ ಜಾತಿಯವರು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರೂ ಬಿಲ್ಲವರು ಬಂದಿದ್ದು ನಾಲ್ಕೇ ಜನ. ನಾರಾಯಣ ಗುರುಗಳು ತಮ್ಮ ಇಡೀ ಜೀವನವನ್ನು ಈಳವ-ಬಿಲ್ಲವ ಸಮುದಾಯವನ್ನು ಹೀನ ಜಾತಿ ಶೋಷಣೆಯಿಂದ ಮುಕ್ತ ಮಾಡಲು ಮುಡಿಪಾಗಿಟ್ಟಿದ್ದರು. ಆದರೆ ಬಿಲ್ಲವರ ಕಣ್ಣಿಗೆ ಈಗ ಕೇಸರಿ ಮೌಢ್ಯದ ಪೊರೆ ಬಂದು ನಾರಾಯಣ ಗುರುಗಳ ತತ್ವಾದರ್ಶಗಳ ಬಗ್ಗೆ ಆಸಕ್ತಿ ಕುಂದಿರುವುದು ದುರದೃಷ್ಟಕರ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top