ಬೇರೆ ವೌಲ್ಯಯುತ ಕೃತಿಗಳ ಬಗ್ಗೆಯೂ ವಿಚಾರ ವಿಮರ್ಶೆ ನಡೆಯಲಿ

ಮಾನ್ಯರೆ,

ಇತ್ತೀಚೆಗೆ ಪೇಜಾವರ ಮಠಾಧೀಶರು ಎಸ್.ಎಲ್. ಭೈರಪ್ಪನವರ ಹೊಸ ಕಾದಂಬರಿ ಉತ್ತರಕಾಂಡವನ್ನು ವಿಮರ್ಶಿಸುತ್ತಾ, ಅದರಲ್ಲಿ ಸೀತೆಗೆ ನ್ಯಾಯ ಒದಗಿಸುವ ಭರದಲ್ಲಿ ಲೇಖಕರು ರಾಮನ ವ್ಯಕ್ತಿತ್ವಕ್ಕೆ ಅವಮಾನ ಮಾಡಿದ್ದಾರೆ, ಹಾಗಾಗಿ ಭೈರಪ್ಪನವರ ಈ ಕೃತಿ ತಮಗೆ ರುಚಿಸಲಿಲ್ಲ ಎಂದು ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೀಲ ಎಂಬುದು ಕೇವಲ ಸ್ತ್ರೀಗೆ ಮಾತ್ರ ಯಾಕೆ ಅನ್ವಯ ಗಂಡಸರಿಗೆ ಯಾಕೆ ಅನ್ವಯವಿಲ್ಲ ಎಂದು ಸೀತೆ ರಾಮನಿಗೆ ಕೇಳುವುದು ಪೇಜಾವರಶ್ರೀಗಳಿಗೆ ಅಪಥ್ಯವಾಗಿರುವಂತಿದೆ. ಕಾರಣ ಮಹಿಳೆಯರನ್ನು ಹಾಗೂ ಶೂದ್ರರನ್ನು ‘ನಿತ್ಯ ನಾರಕಿಗಳು’ ಎಂದು ಕರೆದಿರುವ ಮಧ್ವಾಚಾರ್ಯರ ಪರಂಪರೆಯವರು ನಮ್ಮ ಈ ಪೇಜಾವರಶ್ರೀಗಳು ತಾನೇ! ಭೈರಪ್ಪನವರ ಉತ್ತರಕಾಂಡ ಕಾದಂಬರಿಯನ್ನು ವಿಮರ್ಶೆ ಮಾಡಿದ ಪೇಜಾವರ ಶ್ರೀಗಳು ಅಥವಾ ಉಡುಪಿಯಲ್ಲಿ ಇದರ ಬಗ್ಗೆ ಸಂವಾದ-ಸಮೀಕ್ಷೆ ನಡೆಸಿದ ನುರಿತ ಲೇಖಕ ಲೇಖಕಿಯರು ತಮ್ಮ ವಿಮರ್ಶೆಗಳನ್ನು ಕೇವಲ ಪ್ರಸಿದ್ಧ ಲೇಖಕ ಭೈರಪ್ಪನವರ ಕೃತಿಗಳಿಗೆ ಮಾತ್ರ ಸೀಮಿತಗೊಳಿಸದೆ ಇತ್ತೀಚೆಗೆ ಪ್ರಕಟವಾದ ಇತರ ಲೇಖಕರ ಅತ್ಯಂತ ಪರಿಣಾಮಕಾರಿ ಕಾದಂಬರಿ ಮತ್ತು ಕಾವ್ಯಗಳನ್ನೂ ವಿಮರ್ಶೆ ಮಾಡಬೇಕು. ಉದಾಹರಣೆಗೆ ಕರಾವಳಿಯಲ್ಲಿ ದೊಡ್ಡ ದೊಡ್ಡ ಖಾಸಗಿ ಕಂಪೆನಿಗಳ ಭೂದಾಹ ಹಾಗೂ ಸ್ಥಳೀಯ ಗ್ರಾಮವಾಸಿಗಳನ್ನು, ಅದರಲ್ಲೂ ಬ್ರಾಹ್ಮಣ ಕುಟುಂಬಗಳನ್ನು ಒಕ್ಕಲೆಬ್ಬಿಸುವಾಗ ಮತ್ತು ತಮ್ಮ ಹಿರಿಯರು ಭೂಮಿಯಿಂದ ಹೊಕ್ಕುಳ ಬಳ್ಳಿ ಕಡಿದುಕೊಳ್ಳುವಾಗ ಸ್ಥಳೀಯರಿಗೆ ಆಗುವ ದುಖಃ, ನೋವು, ತಳಮಳ, ಅನಾಥ ಪ್ರಜೆಗಳ ಅದ್ಭುತ ಪರಿಚಯ ಕೊಡುವ, ಬಿ ಜನಾರ್ದನ ಭಟ್ಟರು ಬರೆದಿರುವ ‘ಮೂರು ಹೆಜ್ಜೆ ಭೂಮಿ’ ಇತ್ತೀಚೆಗೆ ಪ್ರಕಟವಾದ ಕಾದಂಬರಿಗಳಲ್ಲೇ ಉತ್ಕೃಷ್ಟವಾದದ್ದು. ಪುರಾಣದಲ್ಲಿ ವಾಮನನು ಮೋಸದಿಂದ ಬಲೀಂದ್ರನಿಂದ ಮೂರು ಹೆಜ್ಜೆ ಭೂಮಿ ಪಡೆಯುವ ರೂಪಕ ಜನಾರ್ದನ ಭಟ್ಟರ ಹೊಸ ಕಾದಂಬರಿಯಲ್ಲಿ ಅಡಗಿದೆ.

ಅದರಂತೆ ಇತ್ತೀಚಿನ ತುಳು ಭಾಷೆಯ ಕೃತಿಗಳಲ್ಲಿ ಪೇರೂರು ಜಾರುರವರು ಛಂದಸ್ಸಿನ ರೂಪದಲ್ಲಿ ಬರೆದಿರುವ ‘ಗುರುಕುಲೆ ಗುರು ನಾರಾಯಣ’ ಎಂಬ 1,200 ಚರಣಗಳ ತುಳು ಕಾವ್ಯ ನಿಜಕ್ಕೂ ಅದ್ಭುತವಾದದ್ದು. ಇಂತಹ ಕೃತಿ ಈ ಹಿಂದೆ ತುಳುವಿನಲ್ಲಿ ಯಾರೂ ಬರೆದಿರಲಿಲ್ಲ ಹಾಗೂ ಮುಂದೆಯೂ ಇಂತಹ ಕೃತಿ ಬೇಗದಲ್ಲಿ ಬರುವುದು ಕಷ್ಟ. ಕೇರಳದ ಕ್ರಾಂತಿಕಾರಿ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಹಾಗೂ ಕಾರ್ಯಗಳ ಬಗ್ಗೆ ಸಮಗ್ರ ವಿವರಣೆ ಇರುವ ಪೇರೂರು ಜಾರುರವರ ಕೃತಿ ಕೇವಲ ಬಿಲ್ಲವರು ಮಾತ್ರವಲ್ಲ ನನ್ನಂತಹ ಬ್ರಾಹ್ಮಣರೂ ಓದಿ ಅಪಾರವಾಗಿ ಮೆಚ್ಚಿಕೊಂಡಿರುವ ಕೃತಿ. ಕೇರಳದ ಸಮಾಜ ಸುಧಾರಕ ನಾರಾಯಣ ಗುರುಗಳಿಗೆ ಹೋಲಿಸಿದರೆ ಇಲ್ಲಿನ ಮಧ್ವಾಚಾರ್ಯರ ವ್ಯಕ್ತಿತ್ವ ಮತ್ತು ಕಾರ್ಯಗಳು ಶೂದ್ರರಿಗೆ ಸಮಾಜ ವಿರೋಧಿ ಅನಿಸುವುದು ಸಹಜ. ಜಾತಿ ಪೂರ್ವಾಗ್ರಹ ತೊರೆದು ಪೇಜಾವರ ಶ್ರೀಗಳೂ ನಾರಾಯಣ ಗುರುಗಳ ಜೀವನ ಚರಿತ್ರೆ ಓದಿದರೆ ಅವರಿಗೂ ಮಧ್ವರಿಗಿಂತ ನಾರಾಯಣ ಗುರುಗಳೇ ದೊಡ್ಡ ಸಂತ ಹಾಗೂ ಮಾನವತಾವಾದಿ ಎಂದು ಅನಿಸುವುದರಲ್ಲಿ ಸಂದೇಹವಿಲ್ಲ. ಪೇರೂರು ಜಾರು ಹಾಗೂ ಜನಾರ್ದನ ಭಟ್ಟರ ಇಂತಹ ಅಪರೂಪದ ಕೃತಿಗಳ ಬಗ್ಗೆ ಪೇಜಾವರ ಶ್ರೀಗಳು ಹಾಗೂ ಎಲ್ಲಾ ಜಾತಿಯ ಕರಾವಳಿಯ ಸಾಹಿತಿಗಳು ಪೂರ್ವಾಗ್ರಹವಿಲ್ಲದೆ ಮುಕ್ತ ಮನಸ್ಸಿನಿಂದ ವಿಚಾರ ವಿಮರ್ಶೆ ನಡೆಸಿದರೆ ಸಾಹಿತ್ಯ ಲೋಕಕ್ಕೆ ಅದೊಂದು ಅಪರೂಪದ ಕಾಣಿಕೆಯಾದೀತು.
 

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top