"ನಾನು ಓಡಿ ಹೋಗಿಲ್ಲ... ನಾನು ಅಂತಾರಾಷ್ಟ್ರೀಯ ಉದ್ಯಮಿ": ಮಲ್ಯ
ಲಂಡನ್ನಿಂದ ಟ್ವೀಟ್ ಮಾಡಿದ ಮದ್ಯದ ದೊರೆ
ಹೊಸದಿಲ್ಲಿ, ಮಾ.11: ಮದ್ಯದ ದೊರೆ ವಿಜಯ್ ಮಲ್ಯ ಬ್ಯಾಂಕಿನಿಂದ ಪಡೆದಿರುವ ಕೋಟಿಗಟ್ಟಲೆ ಹಣ ಮರುಪಾವತಿಗೆ ಬ್ಯಾಂಕ್ ಗಳಿಂದ ಒತ್ತಡ ಎದುರಿಸುತ್ತಿದ್ದಾರೆ. ಇದೀಗ ಭಾರತದಿಂದ ಕೆಲವು ದಿನಗಳ ಹಿಂದೆ ಸದ್ದಿಲ್ಲದೆ ಪಲಾಯನಗೈದು ಲಂಡನ್ ನ ತನ್ನ ಎಸ್ಟೇಟ್ ಸೇರಿರುವ ಮಲ್ಯ ಮಾಧ್ಯಮಗಳಲ್ಲಿ ತನ್ನ ಬಗ್ಗೆ ಬರುತ್ತಿರುವ ವರದಿಯ ಬಗ್ಗೆ ಕೋಪಗೊಂಡಿದ್ದಾರೆ " ನಾನು ತಪ್ಪಿಸಿಕೊಂಡು ಓಡಿಹೋಗುವನಲ್ಲ.. ನಾನೊಬ್ಬ ಅಂತಾರಾಷ್ಟ್ರೀಯ ಮಟ್ಟದ ಉದ್ಯಮಿ.. ದೇಶದ ಕಾನೂನಿನ ಮೇಲೆ ಗೌರವ ಇದೆ ” ಎಂದು ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.
ಅರುವತ್ತರ ಹರೆಯದ ಉದ್ಯಮಿ ಇದೇ ವೇಳೆ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. ಟಿಆರ್ ಪಿ ಗಾಗಿ ಮಾಧ್ಯಮಗಳು ಇಂತಹ ಸುಳ್ಳು ಸುದ್ದಿ ಬಿತ್ತರಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲೂ ಮಲ್ಲ ಲಂಡನ್ ಗೆ ತೆರಳಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ವಿಪಕ್ಷಗಳು ಸರಕಾರವನ್ನು ಗುರುವಾರ ತರಾಟೆಗೆ ತೆಗೆದುಕೊಂಡಿತ್ತು.
Next Story