ದೇಹದ ಮಸಲ್ಸ್ ಹೆಚ್ಚಿಸಲು ಹೋಗಿ ನಪುಂಸಕರಾಗದಿರಿ ಜೋಕೆ!
ಪಟಿಯಾಲ, ಮಾರ್ಚ್. 14: ಪಂಜಾಬ್ನ ಯುವಕರು ಶರೀರವನ್ನು ಗಟ್ಟಿಮುಟ್ಟು ಮಾಡಲಿಕ್ಕೆ ಫಿಟ್ನೆಸ್ ಸಪ್ಲಿಮೆಂಟ್ನ ಹಿಂದೆ ಬಿದ್ದಿದ್ದಾರೆ. ಜೊತೆಗೆ ಭಯಾನಕ ರೋಗಕ್ಕೂ ಗುರಿಯಾಗುತ್ತಿದ್ದಾರೆ. ಬಾಡಿ ಬಿಲ್ಡಿಂಗ್ ಮಾಡುವ ಕಾತರದಲ್ಲಿ ನಶೆಪ್ರಿಯರೂ ಆಗುತ್ತಿದ್ದಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ವರದಿಯಾಗಿರುವ ಪ್ರಕಾರ ಇವರಲ್ಲಿ ಹೆಚ್ಚಿನವರು ಯುವಕರಾಗಿದ್ದು ಕಬಡ್ಡಿ, ಕುಸ್ತಿ, ಓಟ ಮತ್ತು ಇತರ ಆಟಗಳಲ್ಲಿ ಭಾಗವಹಿಸಲಿಕ್ಕಾಗಿ ತಮ್ಮನ್ನು ಸಿದ್ಧ ಪಡಿಸುವವರು. ಅಥವಾ ಶರೀರದಲ್ಲಿ ಮಸಲ್ಸ್ನ್ನು ಬೆಳೆಸಲು ಜಿಮ್ಗೆ ಹೋಗುವವರು ಪರಸ್ಪರ ಶಕ್ತಿಶಾಲಿಗಳನ್ನಾಗಿಸಿಕೊಳ್ಳಲು ಹಲವು ರೀತಿಯ ಫುಡ್ ಸಪ್ಲಿಮೆಂಟ್, ಅಥವಾ ಸ್ನಾಯುವರ್ಧಕ ಔಷಧವನ್ನು ಬಳಸುತ್ತಿದ್ದಾರೆ. ಆದರೆ ಇದರಿಂದ ಶರೀರಕ್ಕಾಗುವ ಲಾಭ ಕಡಿಮೆ ಬದಲಾಗಿ ಹಾನಿಯೇ ಹೆಚ್ಚು.
ಮಾರುಕಟ್ಟೆಯಲ್ಲಿ ಬೇರೆ ಬೇರೆ ಕಂಪೆನಿಗಳ ನಕಲಿ ಸಪ್ಲಿಮೆಂಟ್ಸ್ ಮಾರಲಾಗುತ್ತಿದೆ. ಇವುಗಳನ್ನು ಸೇವಿಸುವುದರಿಂದ ಯುವಕರ ಹಣ ಕೂಡಾ ನಷ್ಟ ಜೊತೆಗೆ ಶಾರೀರಿಕ ರೋಗಕ್ಕೂ ತುತ್ತಾಗಬೇಕಾಗಿದೆ. ಐಎನ್ಸಿಒ ನಡೆಸಿರುವ ಅಧ್ಯಯನವೊಂದರಲ್ಲಿ ದೇಶದಲ್ಲಿ ಮಾರಲಾಗುತ್ತಿರುವ ಶೆ. 60ರಿಂದ 70ರವರೆಗೂ ಈ ಪೌಷ್ಟಿಕಾಹಾರ ಅಥವಾ ಔಷಧಗಳು ನಕಲಿ ಆಗಿವೆ. ಪಂಜಾಬ್ನಲ್ಲಿ 1,450 ನಮೂನೆಯ ಕಲಬೆರಕೆಯ ಆಹಾರಗಳು ಕಳೆದ ವರ್ಷ ಪತ್ತೆಯಾಗಿವೆ. ಮಾರುಕಟ್ಟೆಯ ಫಿಟ್ನೆಸ್ ಸಪ್ಲಿಮೆಂಟ್ ಮೆಡಿಕಲ್ ಅಂಗಡಿಗಳಲ್ಲದೆ ಪಟ್ಟಣದ ದೊಡ್ಡದೊಡ್ಡ ಅಂಗಡಿಗಳಲ್ಲಿಯೂ ಲಭ್ಯವಿದೆ.
ಬಹಳಷ್ಟು ಕಬಡ್ಡಿ ಆಟಗಾರರು ತಮ್ಮ ಸ್ಟೆಮಿನ ಮತ್ತು ಶರೀರಕ್ಕೆ ಆಕರ್ಷಕ ರೂಪು ನೀಡಲಿಕ್ಕಾಗಿ ಇಂತಹ ಅಪಾಯಕಾರಿ ವಸ್ತುಗಳನ್ನು ಸೇವಿಸುತ್ತಿದ್ದಾರೆಂದು ಪತ್ತೆಯಾಗಿದೆ ಎಂದು ಅಧ್ಯಯನದ ವರದಿ ತಿಳಿಸಿದೆ. ಇವುಗಳ ಸೇವನೆ ಅವರನ್ನು ನಪುಂಸಕಗೊಳಿಸಬಹುದು. ಅವುಗಳಲ್ಲಿ ಕೆಲವು ಸ್ಟಿರಾಯಿಡ್ ಮಾತ್ರೆಗಳನ್ನು ಬಳಸಲಾಗುತ್ತಿದೆ. ಇದು ಶರೀರಕ್ಕೆ ಪಂಪ್ ಮಾಡುತ್ತದೆ ಮತ್ತು ಶಾರೀರಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂದುವೇಳೆ ವೈದ್ಯರು ನಕಲಿ ಫುಡ್ ಸಪ್ಲಿಮೆಂಟ್ನಲ್ಲಿ ಸ್ಟಿರಾಯಿಡ್ ಇದೆಯೆಂದರೆ ಅಂತಹ ಆಹಾರ ವಸ್ತುಗಳು ಶರೀರಕ್ಕೆ ಬಹಳ ಹಾನಿಕಾರಕ. ಅವುಗಳಿಂದ ಹೃದಯಾಘಾತ ಹೃದ್ರೋಗ ಇತ್ಯಾದಿ ಇತರ ರೋಗಗಳಲ್ಲಿ ಹೆಚ್ಚಳ ಸಂಭವಿಸಬಹುದು.
ವರದಿಯಲ್ಲಿ ತಿಳಿಸಲಾದಂತೆ ದೇಶದ ಫಿಟ್ನೆಸ್ ಸಪ್ಲಿಮೆಂಟ್ನ ಮಾರುಕಟ್ಟೆ ಈಗ ಎರಡು ಬಿಲಿಯನ್ ಡಾಲರ್ ಆಗಿದೆ. ಇದು 2020ಕ್ಕಾಗುವಾಗ ನಾಲ್ಕು ಬಿಲಿಯನ್ ಡಾಲರ್ಗೆ ತಲುಪಬಹುದು. ಮಾರುಕಟ್ಟೆಯಲ್ಲಿ ಮಾರಲಾಗುತ್ತಿರುವುದರಲ್ಲಿ ಶೇ. 60ರಿಂದ 70ರವರೆಗೂ ನಕಲಿ ಮತ್ತು ನೋಂದಣಿಯಾಗದ ಆಹಾರಗಳಾಗಿವೆ.
ಫುಡ್ ಸಪ್ಲಿಮೆಂಟ್ ಕುರಿತು ಜಿಮ್ ಹೋಗುವವರು ಮತ್ತು ಕಡ್ಡಿ ಆಟಗಾರರಲ್ಲಿ ಕೆಲವರನ್ನು ಪ್ರಶ್ನಿಸಿದಾಗ ಅವರು ದೇಶಿ ಆಹಾರ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಅದರಿಂದ ಶರೀರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಅವರ ನಂಬಿಕೆಯಾಗಿದೆ. ಮಾರುಕಟ್ಟೆಯಲ್ಲಿ ಖರೀದಿಸುವ ಆಹಾರದಿಂದ ಶರೀರ ಭಾರೀ ಬೇಗನೆ ಪುಷ್ಟಿಯಾಗುತ್ತದೆ. ಈಗ ಅದಿಲ್ಲದೆ ಇಂತಹವರಿಗೆ ಪ್ರಾಕ್ಟಿಸ್ ಮಾಡಲು ಮನಸು ಒಪ್ಪುವುದಿಲ್ಲ. ಕೆಲವರು ಆಟ ಆಡುವ ಮೊದಲು ತಮ್ಮನ್ನು ಸಿದ್ಧ ಪಡಿಸಲಿಕ್ಕಾಗಿ ಇಂಜೆಕ್ಷನ್ ಮುಖಾಂತರ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಾರೆ. ಫುಡ್ ಸಪ್ಲಿಮೆಂಟ್ ಬಿಟ್ಟರೆ ಅವರಿಗೆ ಪ್ರಾಕ್ಟಿಸ್ ಮಾಡಲು ತುಂಬ ಕಷ್ಟವಾಗಬಹುದೆಂದು ಕೆಲವು ಆಟಗಾರರೇ ಒಪ್ಪಿಕೊಂಡಿದ್ದಾರೆ.