ಪಶ್ಚಿಮ ಬಂಗಾಳ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಾಜೀನಾಮೆ
ಒಂದೇ ಒಂದು ಟಿಕೆಟ್ ಮುಸ್ಲಿಮರಿಗೆ ನೀಡಿಲ್ಲ
ಕೋಲ್ಕತ್ತಾ , ಮಾ. 16 : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ 20 ದಿನಗಳಿಗೂ ಕಡಿಮೆ ಸಮಯವಿರುವಾಗ ಬಿಜೆಪಿಗೆ ದೊಡ್ಡದೊಂದು ಹಿನ್ನಡೆಯಾಗಿದೆ.
ಪಕ್ಷದ ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೀಲ್ ಅನ್ಸಾರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
" ಬಿಜೆಪಿಯಲ್ಲಿ ಅಲ್ಪಸಂಖ್ಯಾತರನ್ನು ಕೇವಲ ಪ್ರದರ್ಶನಕ್ಕೆ ಮಾತ್ರ ಇಟ್ಟಿದ್ದಾರೆ. ಈವರೆಗೆ ಘೋಷಿಸಿದ ೫೨ ಸ್ಥಾನಗಳಲ್ಲಿ ಒಂದೇ ಒಂದು ಟಿಕೆಟ್ ಮುಸ್ಲಿಮರಿಗೆ ನೀಡಿಲ್ಲ " ಎಂಬುದು ಅವರ ಆರೋಪ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಲಭ್ಪುರ್ ಹಾಗು ಬಿರ್ಭುಮ್ ಜಿಲ್ಲೆಗಳ ಮುಸ್ಲಿಂ ಕಾರ್ಯಕರ್ತರು ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ.
Next Story