ಬೆಟ್ಟಿಂಗ್ಗಾಗಿ ಹದಿನೈದು ವರ್ಷದ ಮಗಳನ್ನು 40 ಸಾವಿರ ರೂಪಾಯಿಗೆ ಗಿರವಿ ಇಟ್ಟ ಭೂಪ!
ಬಾಗ್ಪತ್, ಮಾರ್ಚ್.17: ಈ ದಿನಗಳಲ್ಲಿ ಬೆಟ್ಟಿಂಗ್ ದಂಧೆ ಎಷ್ಟು ಹೀನಾಯ ತಿರುವು ತೆಗೆದುಕೊಳ್ಳುತ್ತಿದೆಯೆಂಬುದಕ್ಕೆ ಉತ್ತರ ಪ್ರದೇಶದಿಂದ ವರದಿಯಾದ ಘಟನೆಯಲ್ಲಿ ಬಹುದೊಡ್ಡ ಉದಾಹರಣೆಯಿದೆ. ಉತ್ತರ ಪ್ರದೇಶದ ಭಾಗ್ಪತ್ನ ಬಡೌತ್ನಲ್ಲಿ ಬೆಟ್ಟಿಂಗ್ ಆಡಿ ಸಾಲಗಾರನಾದ ವ್ಯಕ್ತಿಯೊಬ್ಬ ತನ್ನ ಹದಿನೈದು ವರ್ಷದ ಮಗಳನ್ನೇ ಸಾಲ ನೀಡುವ ಮಹಿಳೆಗೆ ಸಾಕ್ಷಿಗಳ ಸಮಕ್ಷಮದಲ್ಲಿ ಗಿರವಿ ಇಟ್ಟುಬಿಟ್ಟಿದ್ದಾನೆ ಎನ್ನಲಾಗಿದೆ. ವರದಿಯಾಗಿರುವ ಪ್ರಕಾರ ಬರೇ 40 ಸಾವಿರ ರೂಪಾಯಿಗೆ ಹದಿನೈದು ವರ್ಷದ ಮಗಳನ್ನು ಗಿರವಿ ಇಟ್ಟು ಬಿಟ್ಟಿದ್ದಾನೆ ಈ ಭೂಪ!
ಮಾಹಿತಿ ತಿಳಿದು ಪೊಲೀಸರೊಳಗೆಯೇ ಕೋಲಾಹಲಕ್ಕೆ ಕಾರಣವಾಯಿತು. ಆದರೆ ಪೊಲೀಸರು ಇಂತಹ ಮಾಹಿತಿಯನ್ನು ಸಿಕ್ಕಿಲ್ಲ ಎಂದು ನಿರಾಕರಿಸಿದ್ದಾರೆ. ಬಡೌತ್ ಕೋತ್ವಾಲಿಯ ಬಾಬಲಿ ರಸ್ತೆಯಲ್ಲಿ ವಾಸಿಸುವ ಈ ವ್ಯಕ್ತಿ ಬೆಟ್ಟಿಂಗ್ ಹಾಗೂ ಶರಾಬು ಪ್ರಿಯನಾಗಿದ್ದು ತನ್ನ ಅಧಿಕಾಂಶ ಸಂಪತ್ತನ್ನೇ ಬೆಟ್ಟಿಂಗ್ನಲ್ಲಿ ಕಳಕೊಂಡಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅವನ ಸಾಲದ ವ್ಯಾಪ್ತಿ ನಿರಂತರ ಹೆಚ್ಚಳವಾಗುತ್ತಾ ಹೋಗುತ್ತಿತ್ತು.
ಸಾಲವನ್ನು ಭರಿಸಲಿಕ್ಕಾಗಿ ತನ್ನ ಹದಿನೈದು ವರ್ಷದ ಮಗಳನ್ನು ಇಲ್ಲಿನ ಪಠಾಣ್ಕೋಟ್ ಮೊಹಲ್ಲಾದ ಒಬ್ಬ ಮಹಿಳೆಯ ಬಳಿ ನಲ್ವತ್ತು ಸಾವಿರ ರೂಪಾಯಿಗೆ ಗಿರವಿ ಇಟ್ಟನೆನ್ನಲಾಗಿದೆ. ಈ ಮಹಿಳೆ ಸಾಲ ನೀಡುವುದನ್ನು ಉದ್ಯೋಗ ಮಾಡಿಕೊಂಡಿದ್ದು ನಲ್ವತ್ತು ಸಾವಿರ ರೂಪಾಯಿಯನ್ನು ಒಂದು ತಿಂಗಳೊಳಗೆ ಪಾವತಿಸಿ ತನ್ನ ಮಗಳನ್ನು ಕರೆದೊಯ್ಯುವೆ ಎಂದು ಸಾಲ ಪಡೆದ ಆವ್ಯಕ್ತಿ ಹೇಳಿದ್ದಾನೆ. ಮಾತ್ರವಲ್ಲ ಗಿರವಿಗೆ ಕೆಲವು ಮಂದಿ ಸಾಕ್ಷಿಗಳುಇದ್ದಾರೆಂದು ವರದಿಯಾಗಿದೆ.
ಗ್ರಾಮಸ್ಥರು ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ ಎನ್ನುತ್ತಿದ್ದಾರೆ. ಆದರೆ ಮಂಗಳವಾರ ರಾತ್ರಿ ಪೊಲೀಸ್ ಅಧಿಕಾರಿಗಳು ಇಂತಹ ಘಟನೆ ನಡೆದಿರುವ ಕುರಿತು ನಿರಾಕರಿಸಿದ್ದಾರಲ್ಲದೆ ಒಂದು ವೇಳೆ ಇಂತಹ ಘಟನೆ ನಡೆದದ್ದು ಗಮನಕ್ಕೆ ಬಂದರೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
.