ಈ ಪೊಲೀಸ್ ಅಧಿಕಾರಿಗಳ ಆಸ್ತಿ 500 ಕೋಟಿ !
ನಂ. 1 ಅಧಿಕಾರಿಯ ಸೊತ್ತು 152 ಕೋಟಿ
ಮೊಹಾಲಿ : ಪಂಜಾಬಿನ 130ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳ ಒಟ್ಟು ಘೋಷಿತ ಆಸ್ತಿಯ ಮೌಲ್ಯ ಸುಮಾರು ರೂ 500 ಆಗಿದ್ದರೆ, ಮೊಹಾಲಿಯ ಹಿರಿಯ ಸುಪರಿಂಟೆಂಡೆಂಟ್ ಆಫ್ ಪೊಲೀಸ್ಗುರುಪ್ರೀತ್ ಸಿಂಗ್ ಭುಲ್ಲರ್ ಬಳಿ ಬರೋಬ್ಬರಿ ರೂ 152 ಕೋಟಿ ಮೌಲ್ಯದ ಆಸ್ತಿಯಿದ್ದು ಎಲ್ಲರಿಗಿಂತ ಮೊದಲನೇ ಸ್ಥಾನದಲ್ಲಿದ್ದಾರೆ. ಹಾಗೆಂದು ಕೇಂದ್ರ ಗೃಹ ಇಲಾಖೆಯ ಅಂರ್ತಜಾಲತಾಣದಲ್ಲಿಕಾಣಿಸಲಾದ ಐಪಿಎಸ್ ಅಧಿಕಾರಿಗಳ ಆಸ್ತಿ ವಿವರ ಮಾಹಿತಿ ಹೇಳುತ್ತದೆ. ಈ ಮೂಲಕ ಭುಲ್ಲರ್ ಈ ಹಿಂದೆ ಅತ್ಯಂತ ಹೆಚ್ಚು ಆಸ್ತಿ ಹೊಂದಿದವರೆಂದು ಪರಿಗಣಿಸಲಾದಕಾಂಗ್ರೆಸ್ ಶಾಸಕರಾದ ಕೇವಲ್ ಧಿಲ್ಲಾನ್ (ರೂ 137 ಕೋಟಿ) ಹಾಗೂ ಕರಣ್ ಕೌರ್ ಬ್ರಾರ್ (ರೂ 128 ಕೋಟಿ) ಅವರನ್ನು ಮೀರಿಸಿದ್ದಾರೆ.
ಮೊಹಾಲಿಯ ಎಎಸ್ಪಿಯಾಗಿ ಅತಿ ಹೆಚ್ಚು ಅವಧಿ ಸೇವೆ ಸಲ್ಲಿಸಿರುವಭುಲ್ಲರ್ ಸಲ್ಲಿಸಿದ ವಿವರಗಳಂತೆ ಅವರ ಬಳಿ 16 ಆಸ್ತಿಗಳಿದ್ದು ಅವುಗಳಲ್ಲಿ ಎಂಟು ಗೃಹ ಕಟ್ಟಡಗಳಾಗಿದ್ದರೆ, ಮೂರು ವಾಣಿಜ್ಯ ನಿವೇಶನಹಾಗೂ ನಾಲ್ಕು ಕೃಷಿ ಭೂಮಿಗಳು ಸೇರಿವೆ. ಇವುಗಳಲ್ಲಿಕೇಂದ್ರ ದೆಹಲಿಯ ಬಾರಾಖಂಬ ರಸ್ತೆಯಲ್ಲಿರುವ ರೂ 85 ಲಕ್ಷ ಮೌಲ್ಯದ ಕಮರ್ಷಿಯಲ್ ಸೈಟ್,ದೆಹಲಿಯ ಪ್ರತಿಷ್ಠಿತ ಸೈನಿಕ್ ಫಾರ್ಮ್ಸ್ಪ್ರದೇಶದಲ್ಲಿ 1,500 ಚ.ಅ. ಖಾಲಿ ನಿವೇಶನ ಸೇರಿವೆ.ಅವರು ಹೊಂದಿರುವ ಅತ್ಯಂತ ಬೆಲೆಬಾಳುವ ‘ಕೃಷಿಯೋಗ್ಯವಲ್ಲದ’ಭೂಮಿಮೊಹಾಲಿಯ ಬರೇಲಿ ಗ್ರಾಮದಲ್ಲಿದೆ. ದಾಖಲೆಗಳ ಪ್ರಕಾರ ಹೆಚ್ಚಿನಆಸ್ತಿಗಳನ್ನು ಅವರು ಅನುವಂಶಿಕವಾಗಿ ಪಡೆದಿದ್ದಾರೆ.
ಭುಲ್ಲರ್ ಎರಡು ಅವಧಿಗೆ ಮೊಹಾಲಿಯ ಎಎಸ್ಪಿಯಾಗಿ ಸೇವೆ ಸಲ್ಲಿಸಿದ್ದು (2009-2013 ಹಾಗೂ 2015ರಿಂದ ಈಗಿನವರೆಗೆ) ಕನಿಷ್ಠ 12 ಸೊತ್ತುಗಳು ತಮ್ಮ ಹೆಸರಿಗೆ ಜನವರಿ 11,2013ರಲ್ಲಿ ಬಂದಿದೆಯೆಂದು ಅವರು ಸಲ್ಲಿಸಿರುವ ದಾಖಲೆಗಳು ತಿಳಿಸುತ್ತವೆ.
ಅತಿ ಹೆಚ್ಚು ಆಸ್ತಿ ಹೊಂದಿರುವ ಇತರ ಹಿರಿಯ ಅಧಿಕಾರಿಗಳೆಂದರೆ ಡಿಜಿಪಿ ಸುರೇಶ್ ಅರೋರಾ ( ರೂ 4.1 ಕೋಟಿ),ಮಾಜಿ ಡಿಜಿಪಿಸುಮೇಧ್ ಸೈನಿ (ರೂ 16.6 ಕೋಟಿ) ಹಾಗೂ ಡಿಜಿಪಿ ಸಂಜೀವ್ ಗುಪ್ತಾ(ರೂ 8.75 ಕೋಟಿ).