ಐಸಿಸಿ ನೂತನ ಮುಖ್ಯಸ್ಥರಾಗಿ ಶಶಾಂಕ್ ಮನೋಹರ್
ದುಬೈ, ಮೇ 12: ಬಿಸಿಸಿಐನ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್ ಐಸಿಸಿಯ ಪ್ರಥಮ ಸ್ವತಂತ್ರ ಮುಖ್ಯಸ್ಥರಾಗಿ ಅವಿರೋಧ ವಾಗಿ ಆಯ್ಕೆಯಾಗಿದ್ದು, ಮುಂದಿನ ಎರಡು ವರ್ಷಗಳ ಕಾಲ ಅಧಿಕಾರದಲ್ಲಿರುತ್ತಾರೆ. ಗುರುವಾರ ಇಲ್ಲಿ ನಡೆದ ಗುಪ್ತ ಮತದಾನದಲ್ಲಿ ಮನೋಹರ್ ಐಸಿಸಿಯ ಹೊಸ ಸಾರಥಿಯಾಗಿ ಆಯ್ಕೆಯಾದರು. ಮನೋಹರ್ ಎರಡು ದಿನಗಳ ಹಿಂದೆ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ತೊರೆದಿದ್ದರು.
ಕಳೆದ ಎಪ್ರಿಲ್ನಲ್ಲಿ ನಡೆದಿದ್ದ ಐಸಿಸಿ ಸಭೆಯಲ್ಲಿ ಐಸಿಸಿ ಸ್ವತಂತ್ರ ಅಧ್ಯಕ್ಷರಾಗುವವರು ಬೇರೊಂದು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿರಬಾರದು ಎಂದು ನಿಯಮದಲ್ಲಿ ತಿದ್ದುಪಡಿಮಾಡಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನ ತೊರೆದಿರುವ 58ರ ಹರೆಯದ ಮನೋಹರ್ ಐಸಿಸಿ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.
Next Story