ವಿಶಾಖಪಟ್ಟಣಂ ಫಾರ್ಮಾ ಸಿಟಿಯಲ್ಲಿ ಅಗ್ನಿ ದುರಂತ:10 ಜನರಿಗೆ ಗಾಯ
ವಿಶಾಖಪಟ್ಟಣಂ,ಮೇ 23: ನಗರದ ಹೊರವಲಯದ ಪರವಾಡಾದಲ್ಲಿರುವ ಜವಾಹರಲಾಲ್ ನೆಹರು ಫಾರ್ಮಾ ಸಿಟಿಯಲ್ಲಿನ ಔಷಧಿ ತಯಾರಿಕೆ ಕಂಪನಿಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 10 ಕಾರ್ಮಿಕರು ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಎಲ್ಲ ಗಾಯಾಳುಗಳನ್ನು ಇಲ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಫಾರ್ಮಾ ಸಿಟಿಯಲ್ಲಿನ ಶ್ರೀಕರ್ ಲ್ಯಾಬೋರೇಟರೀಸ್ನಲ್ಲಿ ಅಮೋನಿಯಂ ನೈಟ್ರೇಟ್ ಸಂಗ್ರಹಿಸಿಡಲಾಗಿದ್ದ ಟ್ಯಾಂಕ ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ. ಅದರ ಬಳಿಯಲ್ಲಿಯೇ ಇದ್ದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರೆ, ಸಮೀಪದ ಗೋಡೆ ಕುಸಿದು ಇತರ ಎಂಟು ಜನರು ಗಾಯಗೊಂಡರು. ಉಳಿದ ಕಾರ್ಮಿಕರು ಸುರಕ್ಷಿತ ಸ್ಥಳಕ್ಕೆ ಧಾವಿಸುವ ಮೂಲಕ ಅಪಾಯದಿಂದ ಪಾರಾಗಿದ್ದಾರೆ.
Next Story