ಕೈಲಾಶ್ ಖೇರ್ ಹಾಡಿಗೆ ಹೆಜ್ಜೆ ಹಾಕಿ ನಗೆಪಾಟಲಿಗೀಡಾದ ರಾಮದೇವ್
ಯೋಗ ದಿನಾಚರಣೆ
ಹೊಸದಿಲ್ಲಿ, ಜೂ. 22 : ಜೂನ್ ೨೧ ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪೂರ್ವಭಾವೀ ತರಬೇತಿ ಕಾರ್ಯಕ್ರಮದಲ್ಲಿ ಗಾಯಕ ಕೈಲಾಶ್ ಖೇರ್ ಅವರ ಹಾಡಿಗೆ ಹೆಜ್ಜೆ ಹಾಕಲು ಹೋಗಿ ಬಾಬಾ ರಾಮದೇವ್ ಅವರು ನಗೆಪಾಟಲಿಗೀಡಾದ ಘಟನೆ ನಡೆದಿದೆ. ದಿಲ್ಲಿಯ ರಾಜಪಥ್ ನಲ್ಲಿ ನಡೆದ ಈ ಕಾರ್ಯಕ್ರಮದ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರೂ ರಾಮದೇವ್ ರ ಈ ವಿಚಿತ್ರ ಯೋಗ ವನ್ನು ನೋಡಿ ನಗುತ್ತಿದ್ದಾರೆ.
ಮರುದಿನದ ಕಾರ್ಯಕ್ರಮಕ್ಕೆ ತರಬೇತಿ, ಮಾರ್ಗದರ್ಶನ ನೀಡಬೇಕಿದ್ದ ರಾಮದೇವ್ ಇದ್ದಕ್ಕಿದ್ದಂತೆ ಗಾಯಕ ಖೇರ್ ಅವರ ಹಾಡಿಗೆ ಯೋಗ ಭಂಗಿಯಲ್ಲೇ ಹೆಜ್ಜೆ ಹಾಕಲು ಪ್ರಾರಂಭಿಸಿದರು. ಈಗ ಅದರ ವೀಡಿಯೊ ಎಲ್ಲರ ತಮಾಷೆಯ ವಸ್ತುವಾಗಿದೆ.
video Courtesy : abpnews
Next Story