ಸ್ಕ್ಯಾನಿಂಗ್ ನಲ್ಲಿ ಅವಳಿ, ಆದರೆ ಹುಟ್ಟಿದ್ದು ಒಂದೇ ಮಗು !
ಸಾಂದರ್ಭಿಕ ಚಿತ್ರ
ನೋಯ್ಡಾ, ಜೂ. 22 : ಅಲ್ಟ್ರಾ ಸೌಂಡ್ ಪರೀಕ್ಷೆಯಲ್ಲಿ ಅವಳಿ ಮಕ್ಕಳಿವೆ ಎಂದು ತೋರಿಸಿದ್ದ ಮಹಿಳೆ ಒಂದೇ ಮಗುವಿಗೆ ಜನ್ಮ ನೀಡಿದ ಬಳಿಕ ಇಲ್ಲಿನ ಬಿ. ಆರ್. ಅಂಬೇಡ್ಕರ್ ಆಸ್ಪತ್ರೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಇದರಿಂದ ಮಹಿಳೆಯ ಮನೆಯವರು ಪ್ರತಿಭಟನೆಗಿಳಿದರು.
" ನಾನು ರವಿವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಿಸಿದ್ದೇವೆ. ಅವಳಿ ಮಕ್ಕಳನ್ನು ಶಸ್ತ್ರಚಿಕಿತ್ಸೆ ಮೂಲಕವೇ ಹೆರಿಗೆ ಮೂಡಿಸಬೇಕೆಂದು ವೈದ್ಯರು ಹೇಳಿದ್ದರು. ಶಸ್ತ್ರಚಿಕಿತ್ಸೆ ನಡೆಯುತ್ತಿರುವಾಗ ಮೂರು ಬಾರಿ ವಿದ್ಯುತ್ ಕೈಕೊಟ್ಟಿದೆ. ಶಸ್ತ್ರಚಿಕಿತ್ಸೆ ಮುಗಿದ ಮೇಲೆ ಮಗುವಿನ ಬಟ್ಟೆ ತನ್ನಿ ಎಂದು ಹೇಳಿದರು. ಮತ್ತೆ ರಕ್ತ, ಔಷಧಿ ಇತ್ಯಾದಿ ತರಲು ಹೇಳಿದರು. ಕೊನೆಗೆ ನಮಗೆ ಒಂದೇ ಮಗುವನ್ನು ನೀಡಿದ್ದಾರೆ " ಎಂದು ಮಹಿಳೆ ಸಂಗೀತ ದೇವಿಯ ಸಂಬಂಧಿಕ ದೇವೇಂದ್ರ ಕುಮಾರ್ ಎಂಬವರು ಹೇಳಿದ್ದಾರೆ.
Next Story