ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಮೇಲೆ ಅದೇ ಆರೋಪಿಗಳಿಂದ ಮತ್ತೆ ಅತ್ಯಾಚಾರ !
ರಾಷ್ಟ್ರ ರಾಜಧಾನಿಯ ಸಮೀಪವೇ ಘೋರ ಘಟನೆ
ರೊಹ್ಟಕ್, ಜು. 17 : ದೇಶದ ರಾಜಧಾನಿಯಿಂದ ಕೇವಲ 60 ಕಿಮಿ ದೂರದಲ್ಲಿ ಸುಮಾರು 20 ವರ್ಷದ ಯುವತಿಯೊಬ್ಬಳನ್ನು ಐದು ಮಂದಿಯ ತಂಡ ಸಾಮೂಹಿಕ ಅತ್ಯಾಚಾರ ನಡೆಸಿ ಚಿಂತಾಜನಕ ಸ್ಥಿತಿಯಲ್ಲಿ ರಸ್ತೆ ಬದಿ ಇರುವ ಪೊದೆಗಳ ಬಳಿ ಬಿಟ್ಟು ಹೋಗಿದೆ.
ವಿಪರ್ಯಾಸವೆಂದರೆ, 2013 ರಲ್ಲಿ ಈಕೆಯ ಮೇಲೆ ಇದೇ ಐದು ಮಂದಿಯ ತಂಡ ಸಾಮೂಹಿಕ ಅತ್ಯಾಚಾರ ನಡೆಸಿತ್ತು.
20 ರ ಆಜುಬಾಜಿನ ವಯಸ್ಸಿನ ಈ ಐದು ಯುವಕರು ಜಾಮೀನಿನ ಮೇಲೆ ಬಿಡುಗಡೆಯಾಗಿ ಪ್ರಕರಣವನ್ನು ರಾಜಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಯುವತಿ ನ್ಯಾಯಾಲಯದಲ್ಲಿ ಪ್ರಕರಣವನ್ನು ಮುಂದುವರೆಸಿದ್ದರಿಂದ ಆಕೆಯ ಮೇಲೆ ಸೇಡು ತೀರಿಸಲು ಮತ್ತೆ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಲಾಗಿದೆ.
ಮೇಲ್ವರ್ಗಕ್ಕೆ ಸೇರಿದ ಈ ಯುವಕರು 50 ಲಕ್ಷ ರೂಪಾಯಿ ತೆಗೆದುಕೊಂಡು ಪ್ರಕರಣವನ್ನು ಮುಕ್ತಾಯ ಮಾಡುವಂತೆ ಯುವತಿಯ ಮೇಲೆ ಒತ್ತಡ ಹಾಕುತ್ತಿದ್ದರು.
2013 ರಲ್ಲಿ ಸಾಮೂಹಿಕ ಅತ್ಯಾಚಾರ ನಡೆದ ಮೇಲೆ ಭಿವಾನಿಯಿಂದ ಯುವತಿಯ ಕುಟುಂಬ ಸುರಕ್ಷತೆಗಾಗಿ ರೊಹಟಕ್ ಗೆ ವಲಸೆ ಹೋಗಿತ್ತು. ಆದರೆ ಅಲ್ಲಿಗೂ ಬಂದು ಈ ಯುವಕರ ತಂಡ ಮತ್ತೆ ಆಕೆಯ ಮೇಲೆ ಅತ್ಯಾಚಾರ ನಡೆಸಿದೆ !