18 ತಿಂಗಳಲ್ಲಿ ಟೀ, ತಿಂಡಿಗೆ ಆಮ್ ಆದ್ಮಿಯ ಕೋಟಿ ಖರ್ಚು ಮಾಡಿದ ಸರಕಾರ !
ಹೊಸದಿಲ್ಲಿ, ಸೆ. 5 : ಆಮ್ ಆದ್ಮಿ ಪಕ್ಷದ ನಾಯಕ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗು ಅವರ ಕೇವಲ 6 ಮಂದಿಯ ಸಂಪುಟ ಕಳೆದ 18 ತಿಂಗಳಲ್ಲಿ ತಮ್ಮ ಕಚೇರಿ ಹಾಗು ಅಧಿಕೃತ ನಿವಾಸಗಳಲ್ಲಿ ಅತಿಥಿಗಳಿಗೆ ಟೀ , ಕಾಫಿ, ತಿಂಡಿಗಾಗಿ ಖರ್ಚು ಮಾಡಿದ್ದು ಒಂದು ಕೋಟಿಗೂ ಹೆಚ್ಚು ಖರ್ಚು ಮಾಡಿದ್ದಾರೆ. ವಿವೇಕ್ ಗಾರ್ಗ್ ಎಂಬವರು ಸಲ್ಲಿಸಿದ ಆರ್ ಟಿ ಐ ಅರ್ಜಿ ಮೂಲಕ ಈ ವಿಷಯ ಬಹಿರಂಗವಾಗಿದೆ.
ಅರವಿಂದ್ ಕೇಜ್ರಿವಾಲ್ : ಮುಖ್ಯಮಂತ್ರಿಯ ಕಚೇರಿಯ ಬಿಲ್ 22,42,320 ರೂ. ಆಗಿದ್ದರೆ , ಅವರ ಗೃಹ ಕಚೇರಿಯ ಬಿಲ್ 24,86,921 ರೂ. ಆಗಿದೆ.
ಡಿಸಿಎಂ ಮನೀಶ್ ಸಿಸೋಡಿಯಾ : ಗೃಹ ಕಚೇರಿಗೆ 5,66,304 ರೂಪಾಯಿ ಬಿಲ್ ಬಂದಿದ್ದರೆ ಕಚೇರಿಯ ಬಿಲ್ 5,62,125 ರೂ. ಒಟ್ಟು ಮೊತ್ತ 11,28,429 ರೂಪಾಯಿ.
ಮಾಜಿ ಸಾರಿಗೆ ಸಚಿವ ಗೋಪಾಲ್ ರಾಯ್ : ಭ್ರಷ್ಟಾಚಾರ ಆರೋಪದಲ್ಲಿ ವಜಾಗೊಂಡ ಗೋಪಾಲ್ , ಕಚೇರಿಯಲ್ಲಿ 5,44,856 ರೂಪಾಯಿ ಖರ್ಚು ಮಾಡಿದ್ದರೆ ಗೃಹ ಕಚೇರಿಯಲ್ಲಿ 5,61,416 ರೂಪಾಯಿ ಖರ್ಚು ಮಾಡಿದ್ದಾರೆ. ಒಟ್ಟು 11 ಲಕ್ಷಕ್ಕೂ ಹೆಚ್ಚು ಖರ್ಚು.
ಮಾಜಿ ಸಮಾಜ ಕಲ್ಯಾಣ ಸಚಿವ ಸಂದೀಪ್ ಕುಮಾರ್ : ಅಶ್ಲೀಲ ಸಿಡಿ ವಿಷಯದಲ್ಲಿ ವಜಾಗೊಂಡ ಸಂದೀಪ್ ಅವರ ಕಚೇರಿ ಬಿಲ್ 4,97,346 ರೂ. ಗೃಹ ಕಚೇರಿ ಬಿಲ್ 4,13,833 ರೂ.
ಆರೋಗ್ಯ ಸಚಿವ ಸತ್ಯೇನ್ದ್ರ ಜೈನ್ : ಇವರ ಗೃಹ ಕಚೇರಿ ಬಿಲ್ 3,57,303 ರೂ. ಪೈಲಟ್ ವಾಹನದ ಖರ್ಚು 5,53,008 ರೂ. ಒಟ್ಟು ಖರ್ಚು ಒಂಬತ್ತು ಲಕ್ಷಕ್ಕೂ ಹೆಚ್ಚು.
ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ : ಇವರ ಗೃಹ ಕಚೇರಿ ಬಿಲ್ ಕೇವಲ 36,232 ರೂ. ಆದರೆ ಕಚೇರಿ ಬಿಲ್ 5.9 ಲಕ್ಷ ರೂ.
ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಇಮ್ರಾನ್ ಹುಸೇನ್ : ಎಲ್ಲರಿಗಿಂತ ಕಡಿಮೆ ಖರ್ಚು ಇವರದ್ದು. ಗೃಹ ಕಚೇರಿಯಲ್ಲಿ 1,67,933 ರೂ. ಬಿಲ್ ಬಂದಿದ್ದರೆ, 4,21,188 ರೂ. ಬಿಲ್ ಕಚೇರಿಗೆ ಬಂದಿದೆ.