ಪ್ರಧಾನಿ ಮೋದಿಗೆ ವಿಭಿನ್ನವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ ಕನ್ಹಯ್ಯ
ಹೊಸದಿಲ್ಲಿ, ಸೆ. 17 : 65% ಯುವಜನತೆ ಇರುವ ದೇಶಕ್ಕೆ 65 ವರ್ಷದ ಪ್ರಧಾನಿ ಇರುವುದು ಹೇಗೆ ? ಎಂದು ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಪ್ರಶ್ನಿಸಿದ್ದಾರೆ.
"ಇಂದು ಪ್ರಧಾನಿ ತಮ್ಮ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಆದರೆ ದೇಶದ ಅರ್ಧ ಜನ ಬೀದಿಗಳಲ್ಲಿ, ಉಳಿದರ್ಧ ಜನ ಜೈಲುಗಳಲ್ಲಿದ್ದಾರೆ. ಸಂಭ್ರಮಕ್ಕೆ ಇದಕ್ಕಿಂತ ಕಾರಣ ಬೇಕೆ ? " ಎಂದು ಕನ್ಹಯ್ಯ ಪ್ರಧಾನಿಯನ್ನು ಕುಟುಕಿದ್ದಾರೆ.
" ಗಾಂಧೀಜಿ ಹಾಗೂ ಭಗತ್ ಸಿಂಗ್ ಕೂಡ ಜೈಲಿಗೆ ಹೋಗಿದ್ದಾರೆ. ಈ ಜಗತ್ತು ಹಲವರ ಪಾಲಿಗೆ ಜೈಲು. ಸ್ವಾತಂತ್ರ್ಯವಿಲ್ಲದ ಮಹಿಳೆಯರು, ನಿರುದ್ಯೋಗಿ ಯುವಕರ ಪಾಲಿಗೆ ಈ ಜಗತ್ತು ಜೈಲು " ಎಂದು ತಮ್ಮ ವಾಸದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರು.
ಇಂಡಿಯಾ ಟುಡೇ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ಹಯ್ಯ ಮಾತನಾಡಲು ಸಭಿಕರಲ್ಲಿ ಕೆಲವರು ಅಡ್ಡಿ ಪಡಿಸಿದ ಬಳಿಕ ಕನ್ಹಯ್ಯ ತಮ್ಮ ಭಾಷಣವನ್ನು ಅರ್ಧದಲ್ಲೇ ಮೊಟಕು ಗೊಳಿಸಬೇಕಾಯಿತು.
Next Story