ಭಿನ್ನಸಾಮರ್ಥ್ಯದ ಬಾಲಕಿಗೆ ಕಿರುಕುಳ ನೀಡಿದ ಅಧ್ಯಾಪಕನ ಬಂಧನ
ಬಾಲುಶ್ಶೇರಿ, ನ. 5: ಭಿನ್ನಸಾಮರ್ಥ್ಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂಬ ಆರೋಪದಡಿಯಲ್ಲಿ ಶಿಕ್ಷರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ವಡಗರ ಕಡಮೇರಿ ರಹ್ಮಾನಿಯ ಹೈಯರ್ ಸೆಕಂಡರಿಶಾಲೆಯ ಅಧ್ಯಾಪಕ ಪುನೂರ್ ಪುದಿಯಂಬಾರ ಅಬ್ದುಲ್ ನಿಸಾರ್(42) ಬಂಧನಕ್ಕೊಳಗಾದ ವ್ಯಕ್ತಿಯಾಗಿದ್ದಾನೆ. ಕಿರುಕ್ಕೊಳಗಾದ ಬಾಲಕಿಯ ಹೆತ್ತವರು ನೀಡಿದ ದೂರಿನ ಅನ್ವಯ ಬಾಲುಶ್ಶೇರಿ ಸಿಐ ಕೆ. ಸುಶೀರ್ ಈತನ್ನು ಬಂಧಿಸಿದ್ದಾರೆ.
ಸಂಬಂಧಿಕರ ಮನೆಗೆ ಬಂದಿದ್ದ ಈತ ಸಮೀಪದ ಮನೆಯ ಬಾಲಕಿಗೆ ಆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಳೆದ ನವೆಂಬರ್ ಎರಡರಂದು ಕಿರುಕುಳ ನೀಡಿದ್ದ ಎನ್ನಲಾಗಿದೆ. ಬಾಲಕಿ ಕಿರುಕುಳಕ್ಕೊಳಗಾದ ವಿಷಯವನ್ನು ಹೆತ್ತವರಿಗೆ ತಿಳಿಸಿದ್ದಾಳೆ. ನಂತರ ಅವರು ಬಾಲುಶ್ಶೇರಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯನ್ನು ಪೊಲೀಸರು ಕೋರ್ಟಿಗೆ ಹಾಜರು ಪಡಿಸಿದ್ದು ಅದು ಆರೋಪಿಗೆ ರಿಮಾಂಡ್ ವಿಧಿಸಿದೆ ಎಂದು ವರದಿ ತಿಳಿಸಿದೆ.
Next Story