100, 50ರೂ. ನೋಟು ರದ್ದಿಲ್ಲ: ಕೇಂದ್ರಸರಕಾರ
ಹೊಸದಿಲ್ಲಿ,ನ. 17: 100ರೂಪಾಯಿ,50ರೂಪಾಯಿ ನೋಟುಗಳನ್ನು ರದ್ದುಪಡಿಸುವ ಉದ್ದೇಶವಿಲ್ಲ ಎಂದು ಕೇಂದ್ರಸರಕಾರ ಬಹಿರಂಗಪಡಿಸಿದೆ ಎಂದು ವರದಿಯಾಗಿದೆ. ಈ ನೋಟುಗಳನ್ನು ರದ್ದುಪಡಿಸಲಿಕ್ಕೆ ಪ್ರಧಾನಿ ಪುನಃ ದೇಶವನ್ನು ಉದ್ದೇಶಿ ಮಾತಾಡಲಿದ್ದಾರೆಂದು ವದಂತಿಗಳು ಹರಡಿದ ಹಿನ್ನೆಲೆಯಲ್ಲಿ ಕೇಂದ್ರಸರಕಾರ ಸ್ಪಷ್ಟೀಕರಣ ನೀಡಿದೆ. ಇಂತಹ ಪ್ರಚಾರಗಳು ನಿರಾಧಾರವಾದುದು ಎಂದು ಕೇಂದ್ರ ಸರಕಾರ ತಿಳಿಸಿದೆ.
ಹೊಸ 2000ರೂಪಾಯಿ ನೋಟುಗಳು ಕಡಿಮೆ ಗುಣಮಟ್ಟದ್ದು. ಬಣ್ಣ ಕದಡಿಹೋಗುತ್ತಿವೆ ಎಂಬ ದೂರುಗಳಲ್ಲಿ ನಿಜಾಂಶವಿಲ್ಲ ಎಂದು ಕೇಂದ್ರ ಹೇಳಿದೆ. ಬಣ್ಣ ಕದಡುವುದು ನೋಟಿನ ಸುರಕ್ಷಾವಿಶೇಷತೆಯ ಭಾಗವಾಗಿದೆ. 2000ರೂಪಾಯಿ ನೋಟುಗಳಲ್ಲಿ ಚಿಪ್ ಇರಿಸಲಾಗಿದೆ ಎಂಬುದು ಕೇವಲ ಊಹೆ ಮಾತ್ರವಾಗಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ.
Next Story