ಮಹಿಳೆ ಬ್ಯಾಂಕಿಗೆ ಹಾಕಲು ತಂದ 1.87 ಲಕ್ಷ ರೂ. ಕಿತ್ತು ಪರಾರಿಯಾದ ಕಳ್ಳ!
ಗುರುಗ್ರಾಮ,ನ. 18: ಹರಿಯಾಣದ ಗುರುಗ್ರಾಮದಲ್ಲಿ ಬ್ಯಾಂಕಿನ ಮುಂದೆ ಸಾಲಲ್ಲಿ ನಿಂತಿದ್ದ ಮಹಿಳೆಯೊಬ್ಬರ 1.87 ಲಕ್ಷ ರೂಪಾಯಿಯಿದ್ದ ಬ್ಯಾಗನ್ನು ಅಪರಿಚಿತ ವ್ಯಕ್ತಿಯೊಬ್ಬ ಕಿತ್ತುಪರಾರಿಯಾದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮಹಿಳೆ ಬ್ಯಾಂಕಿನ ತನ್ನ ಖಾತೆಗೆ ಜಮೆ ಮಾಡಲು ಇಷ್ಟು ಮೊತ್ತದ ಹಣವನ್ನು ತಂದಿದ್ದರು. ಇವೆಲ್ಲವೂ ಅಪಮೌಲ್ಯಗೊಳಿಸಿದ ಕರೆನ್ಸಿಗಳಾಗಿದ್ದವು.
ಗುರುಗ್ರಾಮದ ಪಂಜಾಬ್ ನ್ಯಾಶನಲ್ ಬ್ಯಾಂಕ್ನ ಮುಂದೆ ಈ ಘಟನೆ ನಡೆದಿದೆ. ನಿರ್ಮಲಾ ದೇವಿ(45) ಎಂಬ ಮಹಿಳೆ ಭಾರಿ ಜನರಿದ್ದ ಸರತಿ ಸಾಲಿನಲ್ಲಿ ನಿಂತಿದ್ದರೂ ಕಳ್ಳ ಮಹಿಳೆಯಿಂದ ಬ್ಯಾಗ್ ಎಳೆದಾಗ ಯಾರೂ ನೆರವಿಗೆ ಬರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಉದ್ದದ ಕ್ಯೂ ಇದ್ದುದರಿಂದ ಕ್ಯೂನಿಂದ ತಪ್ಪಿಹೋದರೆ ಎಂಬ ಭೀತಿ ಇದಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆಂದು ವರದಿ ತಿಳಿಸಿದೆ.
Next Story