ಸಹಕಾರಿ ಬ್ಯಾಂಕಿನಿಂದ 1.56 ಕೋ.ರೂ.ವಶ
ಜೈಪುರ,ಡಿ.12: ನಗರದ ಇಂಟಿಗ್ರಲ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು 1.56 ಕೋ.ರೂ.ಗಳನ್ನು ವಶ ಪಡಿಸಿಕೊಂಡಿದ್ದು, ಈ ಪೈಕಿ 1.38 ಕೋ.ರೂ.2000 ರೂ.ನೋಟುಗಳಲ್ಲಿದೆ.
ನೋಟುಗಳ ವಿನಿಮಯದಲ್ಲಿ ಅಕ್ರಮಗಳ ದೂರಿನ ಮೇರೆಗೆ ಆದಾಯ ತೆರಿಗೆ ಅಧಿಕಾರಿಗಳು ನಿನ್ನೆ ಸಂಜೆ ಬ್ಯಾಂಕಿನ ಮೇಲೆ ದಾಳಿ ನಡೆಸಿದ್ದರು.
ಬ್ಯಾಂಕಿನ ಶೇರುದಾರರು ತಮ್ಮ ಕಪ್ಪುಹಣವನ್ನು ಹೊಸನೋಟುಗಳಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಅನಾಮಧೇಯ ಲಾಕರ್ವೊಂದರಲ್ಲಿದ್ದ ಬೆಳ್ಳಿ ಮತ್ತು ಚಿನ್ನಾಭರಣಗಳನ್ನೂ ವಶ ಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
Next Story