ಕೇರಳ: ಪಿ.ಸಿ. ಜಾರ್ಜ್ರಿಂದ ಹೊಸ ಪಕ್ಷ
ಕೋಟ್ಟಯಂ,ಜ.7: ಶಾಸಕ ಪಿಸಿ ಜಾರ್ಜ್ ಹೊಸ ರಾಜಕೀಯ ಪಕ್ಷ ಸ್ಥಾಪಿಸುತ್ತಿದ್ದಾರೆ. ಕೇರಳ ಜನಪಕ್ಷಂ ಎಂದು ಪಕ್ಷಕ್ಕೆ ಹೆಸರಿಸಲಾಗಿದೆ. ಜನವರಿ 30ಕ್ಕೆ ಪಕ್ಷದ ಅಧಿಕೃತ ಘೋಷಣೆ ಮತ್ತು ಸಮಾವೇಶ ನಡೆಯಲಿದೆ ಎಂದು ಚ್ಯಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪಿ.ಸಿ.ಜಾರ್ಜ್ ವಿವರಿಸಿದ್ದಾರೆಂದು ವರದಿಯಾಗಿದೆ.
ಕೇಂದ್ರ ಸರಕಾರದ ನೋಟು ಅಮಾನ್ಯ ಕ್ರಮವನ್ನು ವಿರೋಧಿಸಿ ಪಕ್ಷ ಮೊದಲ ಹೋರಾಟವನ್ನು ಆರಂಭಿಸಲಿದೆಯೆಂದು ಅವರು ಘೋಷಿಸಿದ್ದಾರೆ. ಪ್ರತಿಭಟನೆಯಲ್ಲಿ 5000 ಮಂದಿಯನ್ನು ಪಾಲ್ಗೊಳ್ಳುವರು ಎಂದ ಅವರು ಈಗಾಗಲೇ ಕೋಟ್ಟಯಂನಲ್ಲಿ ಪಕ್ಷದ ಎಲ್ಲ ಜಿಲ್ಲಾ ನಾಯಕರಿಗೆ ಶಿಬಿರ ನಡೆಸಲಾಗಿದೆ. ಕೇರಳದ ಮೂರು ರಾಜಕೀಯ ಒಕ್ಕೂಟಗಳಿಂದ ತನ್ನ ಪಕ್ಷ ಸಮಾನ ಅಂತರವನ್ನು ಕಾಯ್ದು ಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
Next Story