ಮುಂಬೈಯಲ್ಲಿ ಮಲೇಶ್ಯಾದ ವಿಮಾನಗಳ ತಪಾಸಣೆ
ಇಂಟರ್ಪೋಲ್ ಎಚ್ಚರಿಕೆ ಹಿನ್ನಲೆ
ಮುಂಬೈ, ಜ.11: ಮಲೇಶ್ಯಾದ ಕೆಲ ವಿಮಾನಗಳಿಗೆ ಬಾಂಬ್ ಬೆದರಿಕೆ ಇದೆ ಎಂಬ ಇಂಟರ್ಪೋಲ್ ಎಚ್ಚರಿಕೆ ಹಿನ್ನೆಲೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಮಲೇಶ್ಯಾದ ಮೂರು ವಿಮಾನಗಳನ್ನು ತಪಾಸಣೆಗೆ ಗುರಿಪಡಿಸಲಾದ ಘಟನೆ ನಡೆದಿದೆ.
ಮುಂಬೈಯಿಂದ ಮಲೇಶ್ಯಾಕ್ಕೆ ಪ್ರಯಾಣಿಸಲಿರುವ ಮಲೇಶಿಯಾದ ವಿಮಾನಗಳಲ್ಲಿ ಬಾಂಬ್ ಇರಿಸಿರುವ ಸಾಧ್ಯತೆಯಿದೆ ಎಂದು ಇಂಟರ್ಪೋಲ್ನಿಂದ ಸೋಮವಾರ ಮಾಹಿತಿ ಬಂದ ಪ್ರಕಾರ, ಕೌಲಾಲಂಪುರಕ್ಕೆ ತೆರಳಬೇಕಿದ್ದ ಮೂರು ವಿಮಾನ, ಅದರಲ್ಲಿದ್ದ ಪ್ರಯಾಣಿಕರು ಮತ್ತು ಅವರ ಲಗೇಜುಗಳನ್ನು ಮಂಗಳವಾರ ಬೆಳಗ್ಗಿನ ಜಾವದ ತನಕ ಕೂಲಂಕುಷವಾಗಿ ಪರಿಶೀಲಿಸಲಾಯಿತು. ಆದರೆ ಯಾವುದೇ ಅಪಾಯಕಾರಿ ವಸ್ತು ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
Next Story