ಈ ಬೈಕಿನ ಬೆಲೆ ಬರೋಬ್ಬರಿ 1.12 ಕೋಟಿ ರೂ.!
ಹೊಸದಿಲ್ಲಿ,ಜ.15: ಹೌದು,ಭಾರತದಲ್ಲಿ ಅತ್ಯಂತ ದುಬಾರಿಯಾದ ಬೈಕ್ ಈಗ ಲಭ್ಯವಿದೆ. ದಿಲ್ಲಿಯ ಶೋರೂಮ್ನಲ್ಲಿ ಇದರ ಬೆಲೆ 1,12,20,000 ರೂ.ಗಳು. ಇಟಲಿಯ ಪ್ರಖ್ಯಾತ ಡುಕಾಟಿ ಕಂಪನಿ ವಿಶ್ವಾದ್ಯಂತ ಮಾರಾಟಕ್ಕಾಗಿ ಇಂತಹ ಕೇವಲ 500 ಬೈಕ್ಗಳನ್ನು ತಯಾರಿಸುತ್ತಿದ್ದು, ಭಾರತಕ್ಕೆ ಎಷ್ಟು ಬೈಕ್ಗಳನ್ನು ರವಾನಿಸಲಾಗುವುದು ಎನ್ನುವುದನ್ನು ಪ್ರಕಟಿಸಿಲ್ಲ.
‘ಗಾಲಿಗಳ ಮೇಲಿನ ಕಲಾಕೃತಿ ’ಎಂದು ಬಣ್ಣಿಸಲಾಗುತ್ತಿರುವ ಡುಕಾಟಿ 1299 ಸೂಪರ್ಲೆಗ್ಗರ್ ವಿಶ್ವದ ಅತ್ಯಂತ ಶಕ್ತಿಶಾಲಿ 1285 ಸಿಸಿ ಅವಳಿ ಸಿಲಿಂಡರ್ ಇಂಜಿನ್ ಹೊಂದಿದೆ. ಬೈಕಿನ ರಚನೆಗಾಗಿ ಕಾರ್ಬನ್ ಫೈಬರ್ನ್ನು ಬಳಸಲಾಗಿದೆ. ಕೇವಲ 167 ಕೆ.ಜಿ.ತೂಗುತ್ತದೆ.
Next Story