ಎನ್ ಕೌಂಟರ್ ಗೆ ಲಷ್ಕರ್ ನ ಕಮಾಂಡರ್ ಬಲಿ
ಶ್ರೀನಗರ, ಜ.19: ಉತ್ತರ ಕಾಶ್ಮೀರದ ಬಂಡಿಪುರ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಪೊಲೀಸರು ಇಂದು ಬೆಳಗ್ಗೆ ನಡೆಸಿದ ಕಾರ್ಯಾಚರಣೆಯ ವೇಳೆ ಎನ್ ಕೌಂಟರ್ ಗೆ ಲಷ್ಕರ್ ಎ ತೋಬ್ಬಾ ಉಗ್ರ ಸಂಘಟನೆಯ ಲೆಫ್ಟಿನೆಂಟ್ ಕಮಾಂಡರ್ ಅಬು ಮುಸೈಬ್ ಬಲಿಯಾಗಿದ್ದಾನೆ. ಈ ವೇಳೆ ಓರ್ವ ಪೊಲೀಸ್ ಪೇದೆಗೆ ಗಾಯವಾಗಿದೆ
ಬಂಡಿಪುರದ ಪಾರ್ರೈ ಮೊಹಲ್ಲಾದಲ್ಲಿ ಅಡಗಿರುವ ಉಗ್ರರಿಗಾಗಿ ಭದ್ರತಾ ಪಡೆ ಮತ್ತು ಪೊಲೀಸರು ಜಂಟಿಯಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ಜನವರಿ 6 ರಂದು ಸೇನೆ ಜಮ್ಮು ಕಾಶ್ಮೀರದ ಬುದ್ಗಮ್ ಜಿಲ್ಲೆ ಮಚು ಪ್ರದೇಶದಲ್ಲಿ ಎನ್ ಕೌಂಟರ್ ನ ಡೆಸಿತ್ತು. ಈ ವೇಳೆ ನಿಷೇಧಿತ ಅಲ್-ಬದರ್ ಉಗ್ರ ಸಂಘಟನೆಯ ಮುಝಫರ್ ಅಹಮದ್ ನನ್ನು ಹತ್ಯೆ ಮಾಡಿತ್ತು.
Next Story