ಸಿನೆಮಾದ ದೃಶ್ಯವೊಂದರಲ್ಲಿ ರಾಷ್ಟ್ರಗೀತೆ ಮೊಳಗಿದಾಗ ಎದ್ದು ನಿಲ್ಲದ ವೀಕ್ಷಕನಿಗೆ ಕಪಾಳಮೋಕ್ಷ...!
ಮುಂಬೈ, ಜ.23: ಸಿನೆಮಾದ ದೃಶ್ಯವೊಂದರಲ್ಲಿ ರಾಷ್ಟ್ರಗೀತೆ ಮೊಳಗಿದಾಗ ಥಿಯೇಟರ್ನಲ್ಲಿ ಕುಳಿತು ಸಿನೆಮಾ ವೀಕ್ಷಿಸುತ್ತಿದ್ದ ವ್ಯಕ್ತಿಯೋರ್ವರು ಎದ್ದು ನಿಂತು ಗೌರವ ಸೂಚಿಸಿಲ್ಲ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಲಾದ ಘಟನೆ ನಡೆದಿದೆ.
ಕಳೆದ ಬುಧವಾರ ಗೋರೆಗಾಂವ್ ಉಪನಗರದಲ್ಲಿರುವ ಥಿಯೇಟರ್ನಲ್ಲಿ ಈ ಘಟನೆ ನಡೆದಿದೆ. ಅಮಲ್ರಾಜ್ ದಾಸನ್ (59 ವರ್ಷ) ಎಂಬವರು ‘ದಂಗಲ್’ ಸಿನೆಮಾ ವೀಕ್ಷಣೆಗೆ ಥಿಯೇಟರ್ಗೆ ಹೋಗಿದ್ದರು. ಈ ವೇಳೆ ಸಿನೆಮಾದ ದೃಶ್ಯವೊಂದರಲ್ಲಿ ಮಹಾವೀರ್ ಪೋಗತ್ನ ಮಗಳು ಚಿನ್ನದ ಪದಕ ಗೆದ್ದಾಗ ರಾಷ್ಟ್ರಗೀತೆ ಮೊಳಗಿದೆ. ಈ ವೇಳೆ ದಾಸನ್ ಎದ್ದು ನಿಲ್ಲಲಿಲ್ಲ ಎಂದು ಆಕ್ರೋಶಗೊಂಡ ಶಿರೀಶ್ ಮಧುಕರ್ ಎಂಬಾತ ಆತನ ಕಪಾಳಕ್ಕೆ ಬಾರಿಸಿದ್ದಾನೆ ಎನ್ನಲಾಗಿದೆ.
ಹಲ್ಲೆಗೈದ ಆರೋಪಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story