ಮದ್ಯದ ನಶೆಯಲ್ಲಿ ವಾಹನ ಚಾಲನೆ ತ್ರಿಪುರಾದ ನ್ಯಾಯಾಧೀಶರಿಗೆ ಶಿಕ್ಷೆ
ಅಗರ್ತಲ, ಜ.23: ಮದ್ಯದ ನಶೆಯಲ್ಲಿ ವಾಹನ ಚಾಲನೆ ಮಾಡಿದ ಆರೋಪದಡಿ ವಿಚಾರಣೆ ಎದುರಿಸುತ್ತಿದ್ದ ತ್ರಿಪುರಾದ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರಿಗೆ ತ್ರಿಪುರ ಹೈಕೋರ್ಟ್ ಶಿಕ್ಷೆ ವಿಧಿಸಿದೆ.
2014ರ ಜೂನ್ 6ರ ಮಧ್ಯರಾತ್ರಿ ವಿಪರೀತ ಮದ್ಯಸೇವಿಸಿದ್ದ ಬಿಶಾಲ್ಗರ್ ನ್ಯಾಯಾಲಯದ ಸಿವಿಲ್ ಜಡ್ಜ್ ಮೊಟೊಮ್ ಡೆಬ್ಬರ್ಮ ಎಂಬವರು ತನ್ನ ಖಾಸಗಿ ವಾಹನವನ್ನು ಅಪಾಯಕಾರಿಯಾಗಿ ಮತ್ತು ನಿರ್ಲಕ್ಷವಾಗಿ ಚಲಾಯಿಸಿದ ಕಾರಣ ಪೊಲೀಸರು ಬಂಧಿಸಿದ್ದರು.
ಈ ಪ್ರಕರಣದಲ್ಲಿ ಡೆಬ್ಬರ್ಮ ತಪ್ಪು ಒಪ್ಪಿಕೊಂಡ ಕಾರಣ ಅವರ ಎರಡು ಸಂಬಳ ಭಡ್ತಿಯನ್ನು ತಡೆಹಿಡಿಯಲಾಗಿದೆ ಎಂದು ಹೈಕೋರ್ಟ್ ನ್ಯಾಯಾಧೀಶರು ತಿಳಿಸಿದ್ದಾರೆ.
ನ್ಯಾಯಾಧೀಶರು ತನ್ನ ತಪ್ಪನ್ನು ಒಪ್ಪಿಕೊಂಡು ಲಿಖಿತ ರೂಪದಲ್ಲಿ ಕ್ಷಮಾಪಣೆ ಕೇಳಿದ್ದಾರೆ ಎಂದು ಹೈಕೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
Next Story