ಹುಟ್ಟುಹಬ್ಬದಂದು ದಿವಂಗತ ಪತ್ನಿಗೆ ನಿತೀಶ ಕುಮಾರ್ ಗೌರವಾರ್ಪಣೆ
ಪಾಟ್ನಾ,ಫೆ.25: ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ್ ಅವರು ಶನಿವಾರ ತನ್ನ ದಿವಂಗತ ಪತ್ನಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಮಂಜು ಸಿನ್ಹಾ ಅವರ ಹುಟ್ಟುಹಬ್ಬವನ್ನಾಚರಿಸಿದರು.
ಇಲ್ಲಿಯ ಕಂಕೇರಬಾಗ್ ಪ್ರದೇಶದಲ್ಲಿರುವ ಸ್ಮಾರಕ ಉದ್ಯಾನವನದಲ್ಲಿ ಮಂಜು ಸಿನ್ಹಾ ಅವರ ಪ್ರತಿಮೆಗೆ ನಿತೀಶ ಮಾಲಾರ್ಪಣೆ ಮಾಡಿದರು. ಪುತ್ರ ನಿಶಾಂತ ಕುಮಾರ್, ಹಿರಿಯ ಸೋದರ ಸತೀಶ ಕುಮಾರ ಮತ್ತು ಕುಟುಂಬದ ಇತರ ಸದಸ್ಯರು ಈ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ನಿತೀಶ ಜೊತೆಯಲ್ಲಿದ್ದರು.
ಮಂಜು ಸಿನ್ಹಾ ಎರಡು ವರ್ಷಗಳ ಹಿಂದೆ ನಿಧನರಾಗಿದ್ದಾರೆ.
Next Story