ಬಿಹಾರದಲ್ಲಿ ಟ್ರಕ್- ಟ್ರಾಕ್ಟರ್ ಢಿಕ್ಕಿ: ಹನ್ನೊಂದು ಮಂದಿ ಮೃತ್ಯು, 20 ಮಂದಿಗೆ ಗಾಯ
ಸಾಸಾರಾಮ್: ಬಿಹಾರದ ರೋಹತಾಸ್ ಜಿಲ್ಲೆಯ ಶಿವಸಾಗರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಉಂಆ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ಎರಡರಲ್ಲಿ ಇಂದು ಟ್ರಕ್ ಮತ್ತು ಟ್ರಾಕ್ಟರ್ ಢಿಕ್ಕಿಯಾದ ಘಟನೆ ನಡೆದಿದ್ದು, ಹನ್ನೊಂದು ಮಂದಿ ಮೃತರಾದರು. 20 ಮಂದಿ ಗಾಯಗೊಂಡಿದ್ದಾರೆ.ಪೊಲೀಸ್ ಮೂಲಗಳ ಪ್ರಕಾರ ಭೋಜ್ಪುರ್ ಜಿಲ್ಲೆಯ ಜಗದೀಶಪುರ ಕುಸುಂಭ ಗ್ರಾಮದ ಕೆಲವರು ವಸಂತಪಂಚಮಿ ನಿಮಿತ್ತ ರೋಹತಾಸ್ ಜಿಲ್ಲೆಯ ಚೆನಾರಿ ಸಮೀಪದ ಶಿವಮಂದಿರಕ್ಕೆ ಪೂಜೆ ಸಲ್ಲಿಸಲು ಹೊರಟಿದ್ದರು. ಅವರು ಪೂಜೆ ಮುಗಿಸಿ ಟ್ರಾಕ್ಟರ್ನಲ್ಲಿ ಹಿಂದಿರುಗುತ್ತಿದ್ದಾಗ ಅಉಂಆ ಗ್ರಾಮದ ಬಳಿ ವೇಗವಾಗಿ ಬರುತ್ತಿದ್ದ ಟ್ರಕ್ ಟ್ರಾಕ್ಟರ್ಗೆ ಢಿಕ್ಕಿ ಹೊಡೆದಿತ್ತು.
ಟ್ರಾಕ್ಟರ್ನಲ್ಲಿದ್ದ ಐವರು ಮಹಿಳೆಯರು, ಐವರು ಪುರುಷರು ಹಾಗೂ ಒಂದು ಮಗು ಘಟನಾ ಸ್ಥಳದಲ್ಲೇ ಮೃತಗೊಂಡಿದೆ. ಮೃತ ವ್ಯಕ್ತಿಗಳನ್ನು ಸದ್ಯ ಗುರುತಿಸಲಾಗಿಲ್ಲ. ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ.
Next Story