ಈಸ್ಟ್ ವಿಂಡ್ ಎಕ್ಸ್ ಪ್ರೆಸ್ | Vartha Bharati- ವಾರ್ತಾ ಭಾರತಿ

ಬೀಜಿಂಗ್‌ನಿಂದ ಲಂಡನ್‌ಗೆ ಗೂಡ್ಸ್ ರೈಲು

ಈಸ್ಟ್ ವಿಂಡ್ ಎಕ್ಸ್ ಪ್ರೆಸ್

ಚೀನಾ ತನ್ನ ಸೇನಾ ಬಲವನ್ನು ಭರ್ಜರಿಯಾಗಿ ಹೆಚ್ಚಿಸಿಕೊಂಡಿದೆ. ತಾನು ಬಂಡವಾಳ ಹೂಡಿದ ದೇಶಗಳಲ್ಲಿ ಬಂದರುಗಳು, ವಿಮಾನ ನಿಲ್ದಾಣಗಳ ನಿರ್ವಹಣೆ ತನ್ನ ವಶದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಕ್ಸಿ ಜಿನ್‌ಪಿಂಗ್‌ರಸಿಲ್ಕ್ ರೋಡ್ ವ್ಯೆಹದಲ್ಲಿ ಚೀನಾ ಇಕನಾಮಿಕ್ ಕಾರಿಡಾರ್ ನಿರ್ಮಾಣ ಭಾರತಕ್ಕೆ ಆತಂಕಕಾರಿ ಎನಿಸಿದೆ.

ಪೂರ್ವ ಚೀನಾ ರಾಜ್ಯ ಜಿನ್‌ಜಿಯಾಂಗ್‌ನಲ್ಲಿನ ಇಪೂ ನಗರದಿಂದ 2017 ಜನವರಿ 1ರಂದು 44 ಕಂಟೈನರ್‌ಗಳೊಂದಿಗೆ ಕಾರ್ಗೋ ಎಕ್ಸ್‌ಪ್ರೆಸ್ ರೈಲು ‘ಈಸ್ಟ್ ವಿಂಡ್’ಗೆ ಹೊರಟಿತು. 18 ದಿನಗಳು ಪಯಣಿಸಿ ಜನವರಿ 18ರಂದು ಲಂಡನ್ ಹೊರವಲಯದಲ್ಲಿನ ಬಾರ್ಕಿಂಗ್‌ನಲ್ಲಿರುವ ಯೂರೋ ಹಬ್ ಸರಕುಗಳ ಟರ್ಮಿನಲನ್ನು ಸೇರಿತು. ಮಧ್ಯದಲ್ಲಿ ರೈಲ್ವೆ ಲೈನ್ ಗೇಜ್‌ನಲ್ಲಿನ ವ್ಯತ್ಯಾಸಗಳ ಕಾರಣದಿಂದ ಮೂರು ಕಡೆ ಸರಕು ಬೇರೆ ರೈಲುಗಳಿಗೆ ವರ್ಗಾವಣೆಗೊಂಡಿತು. ಕಳೆದ ಕೆಲ ವರ್ಷಗಳಿಂದ ಹೊಸ ನಡೆಗಳನ್ನು ತುಳಿಯುತ್ತಿರುವ ಚೀನಾ-ಯುರೋಪ್ ವಾಣಿಜ್ಯ ರಂಗದಲ್ಲಿ ಇದೊಂದು ಪ್ರಧಾನವಾದ ಘಟ್ಟ. ಇವೂನಿಂದ ಹೊರಟ ರೈಲು ಕಜಕಿಸ್ತಾನ್, ರಶ್ಯಾ, ಬೆಲಾರಿಸ್, ಪೋಲೆಂಡ್, ಜರ್ಮನಿ, ಬೆಲ್ಜಿಯಂ, ಫ್ರಾನ್ಸ್..... ಒಟ್ಟು ಒಂಬತ್ತು ದೇಶಗಳ ಮೇಲಿಂದ 12,000 ಕಿ.ಮೀ. ದೂರ ಪಯಣಿಸಿ ಬ್ರಿಟನ್ ತಲುಪಿತು. ದಾರಿಯಲ್ಲಿ ಎಷ್ಟೋ ಪರ್ವತಗಳು, ಕಾಡುಗಳು, ನದಿಗಳು, ಮರುಭೂಮಿಗಳು, ಬಯಲುಗಳನ್ನು ದಾಟಿತ್ತು ಆ ರೈಲು. ಸಾಮಾನ್ಯವಾಗಿ ದೇಶಗಳ ಮಧ್ಯೆ ನಡೆವ ಸರಕುಗಳ ಆಮದು ರಫ್ತುಗಳು ಸಮುದ್ರ ಮಾರ್ಗದಲ್ಲಿ ಅಥವಾ ವಿಮಾನಗಳ ಮೂಲಕ ನಡೆಯುತ್ತವೆ. ‘ಈಸ್ಟ್ ವಿಂಡ್’ ಹೊತ್ತು ತಂದ ಸರಕುಗಳನ್ನು ಒಂದು ವೇಳೆ ನೌಕೆಗಳಲ್ಲಿ ಲಂಡನ್‌ಗೆ ತಲುಪಿಸಬೇಕೆಂದರೆ ಕನಿಷ್ಠ 45 ದಿನಗಳು ಹಿಡಿಯುತ್ತವೆ. ವಿಮಾನದಲ್ಲಾದರೆ ಸಮಯ ಕಡಿಮೆಯೇ ಆಗುತ್ತದೆ. ಆದರೆ ರೈಲಿಗಿಂತ ಕನಿಷ್ಠ 5 ಪಟ್ಟು ಹೆಚ್ಚು ಖರ್ಚಾಗುತ್ತದೆ. ಆಕಾಶ ಮಾರ್ಗಕ್ಕಿಂತ ಭಾರೀ ಅಗ್ಗವಾಗಿ, ಸಮುದ್ರ ಮಾರ್ಗಕ್ಕಿಂತ ಮೂರು ಪಟ್ಟು ವೇಗವಾಗಿ ವಿದೇಶಿ ಮಾರ್ಕೆಟ್‌ಗಳಿಗೆ ಸರಕುಗಳನ್ನು ಸಾಗಿಸುವುದಕ್ಕೆ ಚೀನಾ ತನ್ನ ಹಳೆ ಸಿಲ್ಕ್ ರೂಟನ್ನೆ ಹೊಚ್ಚ ಹೊಸದಾಗಿ ರೂಪಿಸಿಕೊಂಡಿದೆ. ನಾಲ್ಕು ವರ್ಷಗಳಿಂದ ಕಾರ್ಗೋ ಕಂಟೈನರ್‌ಗಳೊಂದಿಗೆ ಚೀನಾ ಸಿಟಿಯಿಂದ 12ಕ್ಕೂ ಹೆಚ್ಚು ರೈಲುಗಳು ಯುರೋಪಿನ 15 ನಗರಗಳಿಗೆ ಓಡಾಡುತ್ತಿವೆ. ಮುಂದೆ ವಾರಕ್ಕೊಮ್ಮೆ ಬದಲು ದಿನವೂ ರೈಲು ಸೇವೆಗಳನ್ನು ಒದಗಿಸುವ ಬಗ್ಗೆ ಚೀನಾ ಯೋಚಿಸುತ್ತಿದೆ. ಚೀನಾದ 31 ರಾಜ್ಯಗಳಿಂದ ಯುರೋಪ್‌ಗೆ ನೆಟ್‌ವರ್ಕ್ ಏರ್ಪಡಿಸುವ ಸಿದ್ಧತೆಯಲ್ಲಿದೆ ಚೀನಾ ಸರಕಾರ. ಸದ್ಯ ಚೀನಾ ರೈಲುಗಳು 10-15 ದಿನಗಳಿಗೆ ಯುರೋಪ್ ನಗರಗಳನ್ನು ತಲುಪುತ್ತಿವೆ. ಈ ಅವಧಿಯನ್ನು 3-4 ದಿನಗಳಿಗೆ ತಗ್ಗಿಸುವಂತಹ ಹೈಸ್ಟೀಡ್ ಕಾರ್ಗೋ ರೈಲುಗಳನ್ನು ಓಡಿಸುವುದು ಚೀನಾದ ಮುಂದಿನ ಗುರಿ. ಚೀನಾ ಐರೋಪ್ಯ ದೇಶಗಳೊಂದಿಗೆ 60,000 ಕೋಟಿ ಡಾಲರ್‌ಗಳ ವ್ಯವಹಾರ ಮಾಡುತ್ತಿದೆ. 2020ರ ವೇಳೆಗೆ ಇದು ಲಕ್ಷ ಕೋಟಿ ಡಾಲರ್‌ಗಳಿಗೆ ಏರುವ ಅಂದಾಜು ಇದೆ. ಚೀನಾದ ಒಟ್ಟು ಉತ್ಪಾದನೆಗಳಲ್ಲಿ ಐರೋಪ್ಯ ದೇಶಗಳು ಮೂರನೇ ಒಂದು ಭಾಗದಷ್ಟನ್ನು ಆಮದು ಮಾಡಿಕೊಳ್ಳುತ್ತಿವೆ. ಯುರೋಪ್ ರಫ್ತುಗಳಲ್ಲಿ ಶೇ.50 ಪಾಲುದಾರಿಕೆ ಚೀನಾಗಿದೆ. (ಇಯು) ರಫ್ತುಗಳಿಗೆ ಸಹಾ ಚೀನಾ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇದು ಚೀನಾ- ಯುರೋಪ್‌ಗಳೆರಡಕ್ಕೂ ಲಾಭ ತರುವ ಯೋಜನೆ. ಬ್ರೆಕ್ಸಿಟ್ ಭೂತದ ಭಯವಿರುವುದರಿಂದ ಚೀನಾಗೆ ಯುರೋಪ್‌ನೊಂದಿಗೆ ವ್ಯವಹಾರ ತಗ್ಗಿದರೆ ಆ ಜಾಗಕ್ಕೆ ಬರಲು ಬ್ರಿಟನ್ ಬಾಯ್ದೆರೆದು ಕುಳಿತಿದೆ.

(OBR) ಎಂದರೆ...

(‘one belt, one road’) ಇದು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರ ಇತ್ತೀಚಿನ ಘೋಷಣೆ. ಇದನ್ನು (new stick econemic road)

 ಎಂದು ಕರೆಯುತ್ತಾರೆ. ಹಳೆಯ ಸಿಲ್ಕ್ ರೋಡ್ ಮೂಲಕವೇ ಚೀನಾ ಈ ಪ್ರಾಜೆಕ್ಟ್‌ಗಳ ಮೂಲಕ ಏಶ್ಯಾ ಯುರೋಪ್, ಆಫ್ರಿಕಾಗಳ ಪ್ರಮುಖ ಕೇಂದ್ರಗಳನ್ನು ತಲುಪುವಂತೆ ಮಾಡುವುದು ಜಿನ್‌ಪಿಂಗ್ ತಂತ್ರ. ಸುಮಾರು 1,600 ವರ್ಷಗಳ ಕಾಲ ಅಂತರ್‌ರಾಷ್ಟ್ರೀಯ ವಾಣಿಜ್ಯ ವಿಕಾಸಗೊಂಡ ಮಾರ್ಗ ಇದೇ. 1453ರಲ್ಲಿ ಕಾನ್‌ಸ್ಟಾನ್‌ಟಿ ನೋಪಲ್‌ಗೆ ದುರ್ದೆಸೆ ಹಿಡಿದ ಬಳಿಕ ಸಿಲ್ಕ್ ರೋಡಿಗೂ ಅದೇ ಗತಿ ಒದಗಿತು. ಪಾಶ್ಚಿಮಾತ್ಯ ದೇಶಗಳೊಂದಿಗಿನ ಮನಃಸ್ತಾಪದಿಂದಾಗಿ ಸಿಲ್ಕ್ ರೋಡ್ ಮುಚ್ಚಲ್ಪ ಟ್ಟಿತು. ಯುರೋಪ್‌ನ ರಾಜಕೀಯ, ಆರ್ಥಿಕ ಪರಿವರ್ತನೆಗಳ ಹಿನ್ನಲೆಯಲ್ಲಿ ಸಿಲ್ಕ್ ರೋಡ್ ಪೂರಾ ಮುದುರಿಕೊಂಡಿತು. 18ನೇ ಶತಮಾನದಲ್ಲಿ ಐರೋಪ್ಯ ದೇಶಗಳು ವಾಣಿಜ್ಯದ ಮೇಲೆ ಹಿಡಿತ ಸಾಧಿಸಿದವು. 200-300 ವರ್ಷಗಳ ಕಾಲ ಏಶ್ಯಾ ದೇಶಗಳ ವೈಭವವು ತಣ್ಣಗಾಗಿತ್ತು. ಈಗೀಗ ಪರಿಸ್ಥಿತಿ ಬದಲಾಗುತ್ತಿದೆ. ಏಶ್ಯಾದ ಪ್ರಮುಖ ಆರ್ಥಿಕ ಶಕ್ತಿಗಳೆಂದು ಚೀನಾ ಮತ್ತು ಭಾರತಗಳನ್ನು ಗುರುತಿಸಲಾಗಿದೆ. ಯುರೋಪಿನಲ್ಲಿ ಪ್ರಕ್ಷುಬ್ಧ್ದತೆ ತಲೆ ಎತ್ತಿದೆ. ಅಮೆರಿಕದಲ್ಲಿ ವಿಜೃಂಭಿಸುತ್ತಿ ರುವ ಟ್ರಂಪ್ ಅಮೆರಿಕವನ್ನು ಯಾವ ಗತಿಗೆ ತರುತ್ತಾರೋ ಹೇಳಲಾಗದು. ಚೀನಾ ಅಮೆರಿಕೆಯನ್ನು ಸ್ಥಾನ ಪಲ್ಲಟ ಗೊಳಿಸಿ ‘ದೊಡ್ಡಣ್ಣ ’ ಆಗಲು ಹವಣಿಸುತ್ತದೆ. ಹಳೇ ಸಿಲ್ಕ್ ರೂಟ್ ಹಿನ್ನೆಲೆಯಲ್ಲಿ ರೈಲ್ವೆ ನೆಟ್‌ವರ್ಕ್‌ಗಳ ನಿರ್ಮಾಣ ಇದರಲ್ಲೊಂದು ಭಾಗವಾಗಿದೆ.

ಇದು ನಾಲ್ಕು ವರ್ಷಗಳ ಸಿದ್ಧತೆ. ಅದಕ್ಕೂ 5ವರ್ಷಗಳ ಮೊದಲಿನಿಂದಲೇ ಚೀನಾ ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ರೈಲು ಮಾರ್ಗದ ಸಂಪರ್ಕಕ್ಕೆ ಕೃಷಿ ಆರಂಭಿಸಿತು. (OBR) ಕೇವಲ ರಹದಾರಿಗಳು, ರೈಲ್ವೆ ನೆಟ್‌ವರ್ಕ್ ಮಾತ್ರವೇ ಅಲ್ಲ. ಹಳೆ ಸಿಲ್ಕ್ ರೋಡ್‌ನಲ್ಲ್ಲಿದ್ದ ಸಮುದ್ರ ಜಲಮಾರ್ಗಗಳ ಸಂಪರ್ಕವೂ ಇದರಲ್ಲಿ ಸೇರುತ್ತದೆ. ಇದನ್ನು ‘ಮಾರಿಟೈಮ್ ಸಿಕ್ ರೋಡ್’ ಎಂದು ಕರೆಯಲಾಗಿದೆ. ಒನ್ ಬೆಲ್ಟ್ ಅಂದರೆ ರಹದಾರಿಗಳು, ರೈಲ್ವೆ ನೆಟ್‌ವರ್ಕ್, ಒನ್‌ರೋಡ್ ಅಂದರೆ ಸಮುದ್ರ ಮಾರ್ಗ.

(OBR) ಪ್ರಾಜೆಕ್ಟ್‌ಗಳಲ್ಲಿ ರಹದಾರಿ ಉದ್ದಕ್ಕೂ ಇರುವ 60 ದೇಶಗಳನ್ನು ಸಂಪರ್ಕಿಸಬೇಕೆನ್ನುವುದು ಚೀನಾ ಉದ್ದೇಶ. ಮೂರನೇ ಎರಡರಷ್ಟು ಜಾಗತಿಕ ಸಂಖ್ಯೆ ಜನರನ್ನು ಈ 60 ದೇಶಗಳಲ್ಲಿ ಹೊಂದಿವೆ. ಜಾಗತಿಕ ಜಿಡಿಪಿಯಲ್ಲಿ ಶೇ.55 ವಾಟಾ, ಜಾಗತಿಕ ಇಂಧನ ಸಂಗ್ರಹದಲ್ಲಿ ಶೇ.75 ವಾಟಾ ಈ ದೇಶಗಳಿಗೆ ಇವೆ.

 ಈ ಬೃಹತ್ ಪ್ರಾಜೆಕ್ಟ್‌ನ ಭಾಗವಾಗಿ 1.3 ಲಕ್ಷ ಕೋಟಿ ಡಾಲರ್‌ಗಳ ಖರ್ಚಿನಲ್ಲಿ 900 ಇನ್‌ಫ್ರಾ ಪ್ರಾಜೆಕ್ಟ್‌ಗಳನ್ನು ಕೈಗೊಳ್ಳುತಾರೆ. ಈ ಅಪಾರ ಮೊತ್ತವನ್ನು ಚೀನಾ ಬ್ಯಾಂಕ್‌ಗಳು, ಆರ್ಥಿಕ ಸಂಸ್ಥೆಗಳು, ವಿಶೇಷ ನಿಧಿಗಳು ಭರಿಸಲು ತಯಾರಾಗುತ್ತಿವೆ. ಈ ಪ್ರಾಜೆಕ್ಟ್ ಸಿದ್ಧಗೊಂಡರೆ 60 ದೇಶಗಳ ಆರ್ಥಿಕ ಪರಿಸ್ಥಿತಿಗಳು ಬದಲಾಗುತ್ತವೆ ಎಂಬ ಚೀನಾದ ಮಾತನ್ನು ನಂಬಿ 60 ದೇಶಗಳೂ ಚೀನಾಕ್ಕೆೆ ಬೆಂಬಲ ನೀಡುವುದು ಅನುಮಾನ. ಭಾರತ ಸೇರಿದಂತೆ ಏಶ್ಯಾ ಯುರೋಪ್‌ಗಳು ಚೀನಾ ಎಂದರೆ ಗುರುಗುಟ್ಟುತ್ತವೆಂಬುದು ಸರ್ವವಿಧಿತ.

 ಪಕ್ಕೆಯಲ್ಲಿನ ಮುಳ್ಳು ‘ಒನ್ ಬೆಲ್ಟ್ ಒನ್ ರೋಡ್’ ಸ್ಕೀಂನಲ್ಲಿ ಅತ್ಯಂತ ಪ್ರಮುಖವಾದುದು ಚೀನಾ, ಪಾಕಿಸ್ತಾನ್ ಇಕನಾಮಿಕ್ ಕಾರಿಡಾರ್ ಸಿಪಿಇಸಿ ಚೀನಾದಲ್ಲಿನ ಜಿನ್‌ಜಿಯಾಂಗ್ ರಾಜ್ಯದಲ್ಲಿನ ಕಪ್ಲರ್‌ನು ಪಾಕಿಸ್ತಾನ್‌ದಲ್ಲಿನ ಅರಬೀ ಸಮುದ್ರ ತೀರದ ನಗರ ಗ್ವಾದರ್‌ನು ಅನುಸಂಧಾನ ಮಾಡಲಿರುವುದು. ಈಗಾಗಲೇ ಆ ಎರಡು ದೇಶಗಳ ನಡುವೆ 50ಕ್ಕೂ ಹೆಚ್ಚು ಒಪ್ಪಂದಗಳಾಗಿವೆ. ಪಾಕ್‌ನಲ್ಲಿ ರಹದಾರಿಗಳು, ರೈಲ್ವೆ ಲೈನ್‌ಗಳ ನಿರ್ಮಾಣ, ಅಭಿವೃದ್ಧಿ, ಹೊಸ ವಿದ್ಯುತ್ ಯೋಜನೆಗಳು, ಸೆಜ್‌ಗಳು ಈ ಕಾರಿಡಾರ್‌ನ ಭಾಗಗಳಾಗಿವೆ. ಈ ಕಾರಿಡಾರ್‌ನಿಂದ ಪಾಕಿಸ್ತಾನದಲ್ಲಿ 7 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಆ ಕಾರಣವಾಗಿ (!) ಒಂಟಿಯಾಗಿರುವ ಪಾಕಿಸ್ತಾನ್ ಚೀನಾದೊಂದಿಗೆ ಕೈ ಜೋಡಿಸಲು ಉತ್ಸಾಹದಿಂದಿದೆ. ತನ್ನ ಜಿಡಿಪಿ ಶೇ.3 ಹೆಚ್ಚುತ್ತದೆಂಬುದು ಪಾಕ್ ಅಂದಾಜು. ಈ ಪ್ರಾಜೆಕ್ಟ್ ಗಾಗಿ ಕರಾಚಿಯಿಂದ ಲಾಹೋರ್‌ಗೆ 100 ಕಿ.ಮೀ.ಗಳಷ್ಟು ಹೊಸ ರಹದಾರಿ ನಿರ್ಮಿಸಿದ್ದಾರೆ. ರಾವಲ್ಪಿಂಡಿಯಿಂದ ಚೀನಾ ಗಡಿಗಳವರೆಗೆ ಇರುವ ಪಾರಾಕೋರ ಹೈವೇಯ ಪುನರ್ ನಿರ್ಮಾಣವಾಗುತ್ತದೆ. ಈ ಕಾರಿಡಾರ್‌ನಲ್ಲಿನ ಭಾಗವಾಗಿ ತೈಲ, ಗ್ಯಾಸ್ ಪೈಪ್‌ಲೈನ್‌ಗಳನ್ನು ಏರ್ಪಾಟು ಮಾಡಿದ್ದಾರೆ. 800ಕಿ.ಮೀ. ಆಪ್ಟಿಕ್ ಫೈಬರ್ ಲೈನ್ ಸಹಾ ಇದರಲ್ಲಿ ಸೇರುತ್ತದೆ. ಗ್ವಾದರ್ ಪೋರ್ಟ್ ಮೂಲಕ ಗಲ್ಫ್‌ನಿಂದ ತೈಲವನ್ನು ಪೈಪ್‌ಲೈನ್ ಮೂಲಕ ಆಮದು ಮಾಡಿಕೊಂಡು ತಮ್ಮ ದೇಶಕ್ಕೆ ತರುವುದು ಚೀನಾಗೆ ಸುಲಭವಾಗುತ್ತದೆ. ಭಾರತದ ಪಶ್ಚಿಮ ತೀರದಲ್ಲಿ ಚೀನಾ ತನ್ನ ನೌಕಾದಳವನ್ನು ನೆಲೆಗೊಳಿಸುವ ಅಂಶವೇ ಭಾರತವನ್ನು ಬೆಚ್ಚಿ ಬೀಳಿಸಿದೆ. ಸಿಪಿಇಸಿ ಮೇಲ್ನೋಟಕ್ಕೆ ವಾಣಿಜ್ಯ ಒಪ್ಪಂದವಾಗಿದ್ದರೂ ಒಳಗೆ ಭಾರತದ ಭದ್ರತೆಗೆ ಗಂಡಾಂತರಕಾರಿ ಯಾಗಬಲ್ಲದು. ಮೇಲಾಗಿ ಈ ಕಾರಿಡಾರ್ ಪಾಕ್ ಆಕ್ರಮಿತ ಭೂಭಾಗದ ಮೂಲಕ ಹಾದು ಹೋಗುತ್ತಿದೆ. ಪಾಕಿಸ್ತಾನವಲ್ಲದೆ ಭಾರತಕ್ಕೆ ನಿಕಟವಾಗಿರುವ ಅನೇಕ ದೇಶಗಳಲ್ಲಿ ಚೀನಾ ಭಾರೀ ಬಂಡವಾಳ ಹಾಕಿ ಬಲಿಷ್ಠಗೊಳ್ಳಲಿದೆ. ನೇಪಾಳ, ಮಾಲ್ಡೀವ್ಸ್‌ಗಳಲ್ಲೂ ಚೀನಾ ತನ್ನ ವ್ಯಾಪಾರಗಳನ್ನು ನೆಲೆಗೊಳಿಸುತ್ತಿದ್ದು ಭಾರತವನ್ನು (OBR) ಪ್ರಾಜೆಕ್ಟ್‌ನಲ್ಲಿ ಪಾಲುದಾರನಾಗಲು ಆಹ್ವಾನಿಸಿದೆ. ಭಾರತ ತನ್ನ ದ್ವೇಷಪೂರಿತ ದೃಷ್ಟಿಯನ್ನು ತ್ಯಜಿಸಿ ಚೀನಾದೊಂದಿಗೆ ಕೈ ಜೋಡಿಸುವುದು ಒಳ್ಳೆಯದೇ. ಎನ್‌ಡಿಎ ಸರಕಾರ ಬಾಯಲ್ಲಿ ಅಭಿವೃದ್ಧಿ ಮಂತ್ರ ಜಪಿಸುತ್ತಾ ಕೈಲಿ ಕತ್ತಿ ಝಳಪಿಸುತ್ತಿದ್ದರೆ ಏನನ್ನೂ ಸಾಧಿಸಲಾಗುವುದಿಲ್ಲ.

ಪಶ್ಚಿಮ ಏಶ್ಯಾ ದೇಶಗಳತ್ತ...

(OBR) ಜರ್ಮನಿ, ಫ್ರಾನ್ಸ್, ಬ್ರಿಟನ್, ಪೋಲೆಂಡ್, ಇಟಲಿ, ನೆದರ್‌ಲ್ಯಾಂಡ್, ಹಂಗೇರಿಯಂಥ ಐರೋಪ್ಯ ದೇಶಗಳೊಂದಿಗೆ ಮಾತ್ರವಲ್ಲ ಇರಾನ್, ಪಾಕಿಸ್ತಾನ ಗಳೊಂದಿಗೆ ಚೀನಾ ರೈಲ್ವೆ ನೆಟ್‌ವರ್ಕ್‌ಗಳನ್ನು ನಿರ್ಮಿಸುತ್ತಿದೆ. ರಶ್ಯಾ, ಮಂಗೋಲಿಯಾ, ಕಜಕಿಸ್ತಾನ್, ತುರ್ಕ್ ಮೆನಿಸ್ತಾನ್‌ಗಳೊಂದಿಗೆ ಚರ್ಚಿಸುತ್ತಿದೆ. ಚೀನಾ ಇರಾನ್ ರೈಲ್ವೆ ನೆಟ್‌ವರ್ಕ್ ಆರಂಭವಾಗಿದ್ದು ಆಗಿದೆ. 2016ರ ಜನವರಿಯಲ್ಲಿ ಚೀನಾ-ಟೆಹರಾನ್ ಕಾರ್ಗೋ ರೈಲು ಸೇವೆ ಮೊದಲಾಯಿತು. ಪಶ್ಚಿಮ ಏಶ್ಯಾ ದೇಶಗಳೊಂದಿಗೆ ಚೀನಾ ಸತ್ಸಂಬಂಧ ಇಟ್ಟುಕೊಂಡಿದೆ. ತೈಲ ರಾಷ್ಟ್ರಗಳಿಗೆ ಚೀನಾ ಹತ್ತಿರ ಆಗುತ್ತಿರುವುದು ಅಮೆರಿಕ, ಭಾರತಗಳಿಗೆ ಕಣ್ಣುರಿಯಾಗಿದೆ ಎಂದು ಭಾವಿಸಲಾಗುತ್ತದೆ. 2003ರಲ್ಲಿ ಕೇವಲ 400 ಕೋಟಿ ಡಾಲರ್‌ಗಳಿದ್ದ ಚೀನಾ, ಇರಾನ್ ದ್ವೈಪಾಕ್ಷಿಕ ವಾಣಿಜ್ಯ 2013ರ ಕಾಲಕ್ಕೆ 5,300 ಕೋಟಿ ಡಾಲರ್‌ಗಳಿಗೆ ಏರಿತು. ಇದನ್ನು 60 ಸಾವಿರ ಕೋಟಿ ಡಾಲರ್‌ಗಳಿಗೆ ಏರಿಸಲು ಚೀನಾ ಧಾವಿಸುತ್ತಿದೆ. ಪಾಕಿಸ್ತಾನ್ ಪಶ್ಚಿಮ ತೀರದಲ್ಲಿರುವ ಗ್ವಾದರ್ ಬಂದರನ್ನು ಚೀನಾ ತನ್ನ ಪ್ರಧಾನ ಸ್ಥಾವರವನ್ನಾಗಿ ಬದಲಿಸಿಕೊಂಡಿದೆ. ಇದಕ್ಕಾಗಿ ಚೀನಾ ಟು ಗ್ವಾದರ್ ರೈಲ್ವೆ ಲೈನ್ ನಿರ್ಮಾಣ ಆಗುತ್ತಿದೆ. ಮುಂದೆ ಆಫ್ರಿಕಾವರೆಗೆ ತನ್ನ ರೈಲ್ವೆ ನೆಟ್‌ವರ್ಕ್ ವಿಸ್ತರಣೆಯ ಬ್ಲೂಪ್ರಿಂಟ್ ಸಹಾ ಚೀನಾದಲ್ಲಿ ಸಿದ್ಧಗೊಳ್ಳುತ್ತಿದೆ. ಒಟ್ಟಿನಲ್ಲಿ ಅಮೆರಿಕವನ್ನು ಕಂಡರಾಗದ ದೇಶಗಳು ಚೀನಾಗೆ ನಿಕಟವಾಗಿದ್ದು, ರಾಜಕೀಯ ಆಶಯಗಳು ಇದರಲ್ಲಿ ತಲೆ ಹಾಕಿವೆ. ಇವನ್ನೆಲ್ಲಾ ಈಡೇರಿಸಿ ಕೊಳ್ಳುವುದಕ್ಕೆ ಮುಂದೆ ಬಂದಿದೆ.

ಡ್ರ್ಯಾಗನ್ ಹೆಡೆಯ ಕೆಳಗೆ

ಚೀನಾ ಮೇಡ್ ವಸ್ತುಗಳು 3 ದಶಕಗಳ ಅವಧಿಯಲ್ಲಿ ಜಗತ್ತಿನ ಎಲ್ಲ ದೇಶಗಳ ಮಾರುಕಟ್ಟೆಗಳಲ್ಲೂ ಕಣ್ಣು ಮಿಟುಕಿಸುತ್ತಿವೆ. ನಿರ್ಮಾಣ ರಂಗಗಳಲ್ಲಿ ಚೀನಾ ಕಂಪೆನಿಗಳು ಮೇಲುಗೈ ಸಾಧಿಸುತ್ತಿವೆ. 2015ರಲ್ಲಿ ಚೀನಾ ರಫ್ತುಗಳ ಮೌಲ್ಯ 2.28 ಲಕ್ಷ ಕೋಟಿ ಡಾಲರ್ಸ್‌. (ಇದು ಭಾರತದ ಜಿಡಿಪಿಗೆ ಸಮಾನ). ಹೀಗಾಗಿ ಚೀನಾ ಬಳಿ ಸಂಪತ್ತಿನ ಬೆಟ್ಟವೇ ಇದೆ. ಇತ್ತ ಟ್ರಂಪ್ ಮತ್ತು ಮೋದಿಗಳು ‘ಮೇಕ್ ಇನ್ ಅಮೆರಿಕ’/ಇನ್ ಇಂಡಿಯಾ’ ಪಲ್ಲವಿ ಹಾಡುತ್ತಿದ್ದಾರೆ.

ಚೀನಾ ತಂತ್ರ ಬದಲಿಸಿದೆ. ತನ್ನಲ್ಲಿರುವ ಸಂಪತನ್ನು ಏಶ್ಯಾದ ವಿವಿಧ ದೇಶಗಳಲ್ಲಿ ಬಂಡವಾಳವಾಗಿಟ್ಟು ಯುರೋಪ್ ಮಾರು ಕಟ್ಟೆಗಳನ್ನು ತಲುಪುವ ಸನ್ನಾಹದಲ್ಲಿದೆ. ಇದರ ಭಾಗವಾಗಿಯೇ ಏಶ್ಯಾ- ಯುರೋಪ್‌ಗಳನ್ನು ಸೇರಿಸುವ ರೈಲ್ವೆ ನೆಟ್‌ವರ್ಕ್ ವಿಸ್ತರಣೆ ಆಗಲಿದೆ. ಚೀನಾದ ಉದ್ದಿಮೆಗಳು ಕೇವಲ ಬಂದರಿನ ಹತ್ತಿರದಲ್ಲಿ ಮಾತ್ರವಲ್ಲ, ತೀರ ಪ್ರಾಂತಗಳಿಗೆ ದೂರದಲ್ಲೂ ನೆಲೆಗೊಂಡಿವೆ. ಆ ಉತ್ಪಾದನಾ ಕೇಂದ್ರಗಳಿಂದ ಸರಕುಗಳನ್ನು ಬಂದರಿಗೆ ತಲುಪಿಸಿ ಅಲ್ಲಿಂದ ನೌಕೆಗಳಿಗೆ ಸಾಗಿಸುವುದು ಭಾರೀ ಖರ್ಚು ಶ್ರಮಗಳಿಂದ ಕೂಡಿದ ಕೆಲಸ. ಉತ್ಪಾದನಾ ಕೇಂದ್ರಗಳಿರುವ ನಗರಗಳಿಂದ ಸಾವಿರ ಮೈಲುಗಳಾಚೆ ಇರುವ ಮಾರ್ಕೆಟ್‌ಗಳಿಗೆ ರೈಲುಗಳ ಮೂಲಕ ಸರಕುಗಳನ್ನು ಸಾಗಿಸುವುದು ಲಾಭದಾಯಕ.

ಅಭಿವೃದ್ಧಿ ಶೀಲ ದೇಶಗಳಲ್ಲಿ ಬಂದರುಗಳು, ಏರ್‌ಪೋರ್ಟ್ ಗಳು, ರೈಲ್ವೆ ಲೈನ್ ವಿದ್ಯುತ್ ಕೇಂದ್ರಗಳ ಮೇಲೆ ಬಂಡವಾಳ ಹೂಡಿದರೆ ಆ ದೇಶಗಳು ಆರ್ಥಿಕವಾಗಿ ಪ್ರಗತಿ ಸಾಧಿಸುತ್ತವೆ. ಚೀನಾ ಉತ್ಪಾದನೆಗಳಿಗೆ ಖಾಯಂ ಮಾರುಕಟ್ಟೆ ಒದಗಿಸುತ್ತವೆ. ಚೀನಾ ತನ್ನ ಸೇನಾ ಬಲವನ್ನು ಭರ್ಜರಿಯಾಗಿ ಹೆಚ್ಚಿಸಿ ಕೊಂಡಿದೆ. ತಾನು ಬಂಡವಾಳ ಹೂಡಿದ ದೇಶಗಳಲ್ಲಿ ಬಂದರುಗಳು, ವಿಮಾನ ನಿಲ್ದಾಣಗಳ ನಿರ್ವಹಣೆ ತನ್ನ ವಶದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಕ್ಸಿ ಜಿನ್‌ಪಿಂಗ್‌ರ ಸಿಲ್ಕ್ ರೋಡ್ ವ್ಯೆಹದಲ್ಲಿ ಚೀನಾ ಇಕನಾಮಿಕ್ ಕಾರಿಡಾರ್ ನಿರ್ಮಾಣ ಭಾರತಕ್ಕೆ ಆತಂಕಕಾರಿ ಎನಿಸಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top