---

ಫೋಟೋಗ್ರಫಿ: ಸುತ್ತ-ಮುತ್ತ

ಜಗತ್ತನ್ನು ತಲ್ಲಣಿಸಿದ ಚಿತ್ರಗಳು

ಭಾಗ-13

ಈ ಮೂರು ಚಿತ್ರಗಳು ಜಗತ್ತಿನ ಮೂರು ಭೀಕರ ದುರಂತ ಗಳ ದಾರುಣ ಚಿತ್ರಣಕ್ಕೆ ಸಾಕ್ಷಿಯಾಗಿದೆ. ಇವೇನು ಕೈಯಲ್ಲಿ ಕ್ಯಾಮರಾ ಹಿಡಿದು ಸುಮ್ಮನೇ ಕ್ಲಿಕ್ಕಿಸಿದ ಚಿತ್ರಗಳಲ್ಲ. ಪ್ರಶಸ್ತಿಯ ಹಪಾಹಪಿತನಕ್ಕೆ ಬಿದ್ದು ಚಿತ್ರಿಸಿದ ಛಾಯಾಚಿತ್ರಗಳೂ ಅಲ್ಲ. ಹಾಗಾದರೆ ಈ ಮೂರು ಚಿತ್ರಗಳು ನೀಡುವ ಸಂದೇಶವೇನು? ಯಾಕೆ ಇವು ವಿಶೇಷ? ಇವುಗಳ ಹಿನ್ನೆಲೆ ಏನು ಎಂಬುದನ್ನು ನೋಡೊಣ.

ಮೊದಲನೆದಾಗಿ ದೇಹವೆಲ್ಲ ನೆಲದಲ್ಲಿ ಹೂತುಹೋಗಿರುವ ಮಗುವಿನ ಮುಖಮಾತ್ರ ಕಾಣುತ್ತಿರುವ ಈ ಚಿತ್ರ ನಮ್ಮ ದೇಶದಲ್ಲಿ ತೆಗೆದದ್ದು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಸಂಭವಿಸಿದ ಯೂನಿಯನ್ ಕಾರ್ಬೈಡ್ ಕಂಪೆನಿಯ ಅನಿಲ ದುರಂತದ ದಾರುಣ ಕತೆಯನ್ನು ಈ ಚಿತ್ರ ಹೇಳುತ್ತದೆ. ಗಾಢ ನಿದ್ರೆಯ ಸುಖ ಉಣ್ಣುತ್ತಿರುವಂತೆ ಮಲಗಿರುವ ಈ ಮಗುವಿನ ಮುಖ ನೋಡಿದರೆ ಒಂದು ಕ್ಷಣದ ಮಟ್ಟಿಗಾದರೂ ನಾವೇ ಸತ್ತಂತೆ ನಮಗೆ ಕಲ್ಪಿಸಿಕೊಳ್ಳದೆ ಇರಲಾಗುವುದಿಲ್ಲ. 1984 ಡಿಸೆಂಬರ್‌ನ ಮಧ್ಯರಾತ್ರಿಯಲ್ಲಿ ನಡೆದ ಮೀಥೇನ್ ಐಸೋಸೈನೇಟ್ ಎಂಬ ವಿಷ ಭೋಪಾಲ್ ನಗರದ ಗಾಳಿಯಲ್ಲಿ ಬೆರೆತು ಉಸಿರಾಟದಿಂದಾಗಿ ಸಾವಿರಾರು ಜನ ಸಾವನ್ನಪ್ಪಿರುವ ದುರಂತ ಘಟನೆಯನ್ನು ಈ ಚಿತ್ರ ಕಟ್ಟಿಕೊಡುತ್ತದೆ. ರಘುರಾಯ್ ತೆಗೆದ ಈ ಚಿತ್ರ ಜಗತ್ತಿನ ಮನುಕುಲದ ಮನ ಕಲುಕಿದೆ. ಐದು ಲಕ್ಷ ಜನವಸತಿ ಪ್ರದೇಶವಾದ ಭೋಪಾಲ್‌ನ ಒಂದು ಭಾಗದ ಚಿತ್ರಣವನ್ನು ಈ ಒಂದೇ ಒಂದು ಚಿತ್ರ ಕಟ್ಟಿಕೊಡುತ್ತದೆ.

ಮತ್ತೊಂದು ಕೆವಿನ್ ಕಾರ್ಟರ್ ತೆಗೆದ ರಣಹದ್ದು ಮತ್ತು ಹೆಣ್ಣು ಮಗುವೊಂದರ ಚಿತ್ರ. ಆಹಾರವನ್ನರಸಿ ಗಂಜಿಕೇಂದ್ರದ ಕಡೆ ತೆವಳಲು ಸಾಧ್ಯವಾಗದೆ ಕುಸಿದು ಧರೆಗೆ ತಲೆಯೊಡ್ಡಿದ ಆ ಹುಡುಗಿಯ ಸಾವಿಗೆ ಕಾದು ಕುಳಿತ ಹದ್ದು ಈ ಚಿತ್ರದಲ್ಲಿದೆ. ಚಿತ್ರ ಪ್ರಕಟಗೊಂಡ ತಕ್ಷಣ ಜಗದ್ವಿಖ್ಯಾತಿ ಪಡೆಯಿತಲ್ಲದೆ ಕೆವಿನ್‌ಗೆ ಪುಲಿಟ್ಜರ್ ಪ್ರಶಸ್ತಿಯೂ ಅರಸಿ ಬಂತು. ಆಫ್ರಿಕಾದ ಸೂಡಾನಿನ ಭೀಕರ ಕ್ಷಾಮದ ಕತೆ ಹೇಳುವ ಈ ಚಿತ್ರದ ಬಗ್ಗೆ ಅಷ್ಟೇ ವೇಗವಾಗಿ ಜಗತ್ತಿನ ಮೂಲೆಮೂಲೆಯಿಂದ ವ್ಯಾಪಕ ಆಕ್ರೋಶವೂ ವ್ಯಕ್ತವಾಯಿತು. ಚಿತ್ರ ತೆಗೆದ ಕೆವಿನ್ ಆ ಮಗುವನ್ನು ರಕ್ಷಿಸಲಿಲ್ಲವೇಕೆ ಎಂಬುದು ಎಲ್ಲರ ಆಕ್ಷೇಪ. ಆದರೆ ಸೇಂಟ್ ಪೀಟರ್ಸ್‌ ಬರ್ಗ್ ಟೈಮ್ಸ್ ಎಂಬ ಪತ್ರಿಕೆ, ಅಂದು ಅಲ್ಲಿದ್ದದ್ದು ಒಂದಲ್ಲ ಎರಡು ರಣಹದ್ದುಗಳು. ಇನ್ನೊಂದು ರಣಹದ್ದು ಸರಿಯಾದ ಕೋನ ಮತ್ತು ಭಿನ್ನ ಚಿತ್ರಕ್ಕಾಗಿ ಅಲ್ಲಿ ಹೊಂಚುಹಾಕಿ ಕುಳಿತಿತ್ತು. ಎಂದು ಕೆವಿನ್‌ನನ್ನು ಖಂಡಿಸಿ ಸುದ್ದಿ ಪ್ರಕಟಿಸಿತು. ಆದರೆ ಪ್ರಶಸ್ತಿ ಸ್ವೀಕರಿಸಿದ ಎರಡೇ ತಿಂಗಳಲ್ಲಿ ತೀವ್ರ ಖಿನ್ನತೆಗೆ ಒಳಗಾದ ಕೆವಿನ್ ಎಂಬ ಈ ಛಾಯಾಗ್ರಾಹಕ ತನ್ನ 33ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾದ. ಚಿತ್ರವೊಂದು ಎಂತೆಂತಹ ಸನ್ನಿವೇಶವನ್ನು ಹುಟ್ಟುಹಾಕಬಲ್ಲದು ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇರಲಾರದು.

ಮೂರನೇಯ ಚಿತ್ರ ತೀರಾ ಇತ್ತೀಚಿನದು. ಸಿರಿಯಾ ದೇಶದಲ್ಲಿ ಐಸಿಸ್ ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿ ಸಾಗರದ ಎದುರು ಸಾವನಪ್ಪಿದ ಮೂರು ವರ್ಷದ ಹಸುಳೆಯ ಚಿತ್ರ. ಸೆಪ್ಟಂಬರ್ 3, 2015ರ ಜಾಗತಿಕ ಸುದ್ದಿ ಮಾಧ್ಯಮದ ಕೇಂದ್ರಬಿಂದುವಾದ ಅಲನ್ ಕುರ್ದಿ ಎಂಬ ಈ ಮಗು ಮೆಡಿಟರೇನಿಯನ್ ಸಾಗರ ತೀರದಲ್ಲಿ ಮುಳುಗಿ ಸಾವನ್ನಪ್ಪಿತು. ಸಿರಿಯಾದಿಂದ ಯೂರೋಪಿಗೆ ಆಶ್ರಯವನ್ನರಸಿ ಬಂದು ಸಿರಿಯಾ ಸಂರ್ಘಷಕ್ಕೆ ಈತನ ಇಡೀ ಕುಟುಂಬ ಬಲಿಯಾಯಿತು. ನೀಲೂಫರ್ ಡೆಮಿರ್ ಎಂಬ ಪತ್ರಕರ್ತ ತೆಗೆದ ಈ ಚಿತ್ರ ಕಾಳ್ಗಿಚ್ಚಿನಂತೆ ಹಬ್ಬಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಮಾಡಿತು. 2015ರ ಕೆನಡಾ ಚುನಾವಣೆಯ ಮೇಲೆ ಈ ಚಿತ್ರ ಭಾರೀ ಪರಿಣಾಮ ಬೀರಿತು.

ಈ ಮೂರು ಚಿತ್ರಗಳನ್ನು ಒಂದಲ್ಲ ಒಂದು ಸಂದರ್ಭದಲ್ಲಿ ನೀವು ನೋಡಿಯೇ ಇರುತ್ತೀರಿ. ಮನುಕುಲವನ್ನು ತಲ್ಲಣಗೊಳಿಸಿದ ಈ ಚಿತ್ರಗಳು ಇತಿಹಾಸದ ಬಹುದೊಡ್ಡ ದಾಖಲೆಗಳಾಗಿ ನಿಂತಿವೆ. ಇವೇ ಅಲ್ಲ, ಮಹಾಯುದ್ಧ, ಹಿಟ್ಲರನ ಸೆರೆ ಶಿಬಿರ, ಹಿರೋಶಿಮಾ - ನಾಗಸಾಕಿ ದುರಂತ, ಪ್ರಾಕೃತಿಕ ವಿಕೋಪ, ಅಂತರಿಕ್ಷ ಉಡ್ಡಯನ ಚಿತ್ರ, ಮುಂತಾದ ಚಿತ್ರಗಳು ಎಲ್ಲಾ ಕಾಲಕ್ಕೂ ಸಲ್ಲುವ ಚಿತ್ರಗಳಾಗಿವೆ. ಅಥವಾ ನಮ್ಮ ಸುತ್ತಮುತ್ತಲಿನ ಸಣ್ಣ ಸಣ್ಣ ಸಂಗತಿಗಳೇ ಇರಬಹುದು. ನಾವು ಅವುಗಳನ್ನು ಗ್ರಹಿಸುವ ಮತ್ತು ಚಿತ್ರಿಸುವ ಪರಿ ಹೇಗಿರಬೇಕು ಎಂಬುದು ಮುಖ್ಯವಾಗಬೇಕು. ಚಿತ್ರಗಳು ಇತಿಹಾಸದ ದಾಖಲೆಗಳಾಗದಿದ್ದರೂ ಸರಿ, ಆದರೆ ತನ್ನೊಳಗೆ ತಾನೇ ಒಂದು ವಿಶೇಷ ಚಿತ್ರವಾದರೂ ಸಾಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top