---

ಬಹುಮುಖಿ ಪ್ರತಿಭಾವಂತ ಖಗೋಳಶಾಸ್ತ್ರಜ್ಞ ಸಾಮಂತ ಚಂದ್ರಶೇಖರ

ಭಾರತದಲ್ಲಿ ಆಧುನಿಕ ಖಗೋಳಶಾಸ್ತ್ರ, ಅಂತೆಯೇ ಇಂಗ್ಲಿಷ್ ಬೋಧನಾ ಮಾಧ್ಯಮವಾಗಿರುವ ಮುಕ್ತ ಶಿಕ್ಷಣದೊಂದಿಗೆ ಪಶ್ಚಿಮದ ವಿಜ್ಞಾನದ ಆಗಮನ ಮತ್ತು ಬೆಳವಣಿಗೆಗಳಿಗೆ ಹತ್ತೊಂಬತ್ತನೆಯ ಶತಮಾನವು ಸಾಕ್ಷಿಯಾಯಿತು. ವಸಾಹತುಶಾಹಿ ಸರಕಾರದಲ್ಲಿ ಅಧಿಕಾರಿಗಳಾಗಿ/ಸಿಬ್ಬಂದಿಯಾಗಿ ಬಂದ ಕೆಲವು ಯೂರೋಪಿಯನ್ನರು ಹಿಂದೂ ಖಗೋಳಶಾಸ್ತ್ರ ಗ್ರಂಥಗಳಲ್ಲಿ ಆಸಕ್ತಿ ತೋರಿದರು. ಈ ಹೊಸ ಗಾಳಿ ಮತ್ತು ಪ್ರಭಾವಗಳ ಮಧ್ಯದಲ್ಲಿಯೇ, ಒಡಿಶಾದ ರಾಜ ಮನೆತನದಲ್ಲಿ ಸಾಮಂತ ಚಂದ್ರಶೇಖರ್ ಎಂಬ ಬಹುಮುಖಿ ಪ್ರತಿಭಾವಂತ ಖಗೋಳಶಾಸ್ತ್ರಜ್ಞನಾಗಿ ಹೋದನು (ಜನ್ಮ 1835). ಇನ್ನೂ ನಾಲ್ಕು ವರ್ಷದ ಎಳೆಯ ಹುಡುಗನಾಗಿದ್ದಾಗಲೇ ಅವನು ತೀವ್ರಾಸಕ್ತಿಯ ಆಕಾಶ ವೀಕ್ಷಕನಾಗಿದ್ದನು ಮತ್ತು ಉಜ್ವಲ ಗ್ರಹವಾದ ಶುಕ್ರನನ್ನು ಗುರುತಿಸಲು ಶಕ್ತನಾಗಿದ್ದನು.

ಅವನು ಹದಿನೈದು ವರ್ಷದವನಾಗುವ ಹೊತ್ತಿಗಾಗಲೇ ಎರಡನೇಯ ಭಾಸ್ಕರನ ‘ಸೂರ್ಯ ಸಿದ್ಧಾಂತ’ ಮತ್ತು ‘ಸಿದ್ಧಾಂತ ಶಿರೋಮಣಿ’ಗಳನ್ನು ಅಧ್ಯಯನ ಮಾಡಿದ್ದನು. ಅವೆರಡೂ ಅವನಿಗೆ ಸಿದ್ಧಾಂತ-ಖಗೋಳಶಾಸ್ತ್ರದ ವಿಮರ್ಶಾತ್ಮಕ ತಿಳುವಳಿಕೆಯನ್ನೊದಗಿಸಿದವು. ಗ್ರಹಗಳ ಗತಿಗೆ ಸಂಬಂಧಿಸಿದ ನಿಖರ ವೀಕ್ಷಣೆ ಮತ್ತು ಕಾಲಗಣನೆ ಮಾಡುವುದಕ್ಕೋಸ್ಕರ ಅವನು ತನ್ನದೇ ಆದ ಯಂತ್ರಗಳನ್ನು ವಿನ್ಯಾಸಗೊಳಿಸಿಕೊಂಡಿದ್ದನು. ‘ಮಾನಯಂತ್ರ’ವೆಂಬುದು ಅವುಗಳಲ್ಲೊಂದು. ಸಿದ್ಧಾಂತ ಗ್ರಂಥಗಳ ಪ್ರಕಾರ ಗಣನೆ ಮಾಡಿ ಬರುವ ಗ್ರಹಗಳ ಸ್ಥಾನ ಮತ್ತು ಪ್ರತ್ಯಕ್ಷ ವೀಕ್ಷಣೆ ಮಾಡಿದಾಗ ಕಂಡುಬರುವ ಸ್ಥಾನಗಳಲ್ಲಿ ವ್ಯತ್ಯಾಸವಿರುವ ಅವನ ಗಮನಕ್ಕೆ ಬಂದಿತು. ಗ್ರಹಗಳ ಗತಿಗೆ ಸಂಬಂಧಿಸಿದ ಪಾರಂಪರಿಕ ಕಲ್ಪನೆಗಳಿಗೆ ಬೇರೆಯದೇ ಆದ ನಿಟ್ಟಿನಲ್ಲಿ ಪರೀಕ್ಷಿಸುವ ಅಗತ್ಯವಿದೆಯೆಂದೂ ಮತ್ತು ಅವುಗಳನ್ನು ಪ್ರತ್ಯಕ್ಷ ವೀಕ್ಷಣೆಯ ಮೇಲೆ ಆಧರಿಸಬೇಕೆಂದೂ ಅವನಿಗೆ ಮನವರಿಕೆಯಾಯಿತು. ಅಂತೆಯೇ, ಅವನು ತನ್ನದೇ ಯಂತ್ರಗಳನ್ನು ವಿನ್ಯಾಸಗೊಳಿಸಲು ಸುಮಾರು ಎರಡು ದಶಕಗಳ ಕಾಲ ಶ್ರಮಿಸಿದನು.

1869ರಲ್ಲಿ ಅವನು ಮೂವತ್ತನಾಲ್ಕನೆಯ ವಯಸ್ಸಿನವನಿದ್ದಾಗ, ‘ಸಿದ್ಧಾಂತದರ್ಪಣ’ ಎಂಬ 2,500 ಶ್ಲೋಕಗಳುಳ್ಳ ಸಮಗ್ರ ಗ್ರಂಥವೊಂದನ್ನು ಒರಿಯಾ ಲಿಪಿಯಲ್ಲಿ ಸಂಸ್ಕೃತ ಭಾಷೆಯಲ್ಲಿ ತಾಳೆಗರಿಗಳ ಮೇಲೆ ಬರೆದನು. ಆದರೆ ಈ ಯುವ ಖಗೋಳಶಾಸ್ತ್ರಜ್ಞನ ಮಹತ್ವದ ಕೃತಿಯು ಸಂಸ್ಕೃತ ದೇವನಾಗರಿ ಲಿಪಿಯಲ್ಲಿ ಪ್ರಕಟವಾಗಲು ಮೂವತ್ತು ವರ್ಷ ಕಾಯಬೇಕಾಯಿತು. 1899ರಲ್ಲಿ ಮಯೂರಭಂಜ್ ಮತ್ತು ಆತ್ಮಾಲಿಕ್ ರಾಜರ ಧನಸಹಾಯದಿಂದ ಕಲ್ಕತ್ತದಲ್ಲಿ ಅದು ಪ್ರಕಟಿಸಲ್ಪಟ್ಟಿತು. ಒಡಿಶಾದಲ್ಲಿಯ ಕಟಕ್ ಕಾಲೇಜಿನ (ಈಗ ರೇವನ್‌ಶಾ ಕಾಲೇಜು ಎಂದು ಕರೆಯಲ್ಪಡುತ್ತದೆ) ಜೋಗೇಶ ಚಂದ್ರ ರೇ ಮತ್ತು ಕಲ್ಕತ್ತಾದ ಸಂಸ್ಕೃತ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಮಹೇಶಚಂದ್ರ ನ್ಯಾಯರತ್ನ ಇವರು ಸಾಮಂತನ ಗ್ರಂಥದ ಅಂತಃಸತ್ವವನ್ನು ಗುರುತಿಸಿದರು ಮತ್ತು ಜೋಗೇಶಚಂದ್ರ ರೇಯವರ ಪ್ರಯತ್ನದಿಂದ ‘ಸಿದ್ಧಾಂತ ದರ್ಪಣ’ ಬೆಳಕು ಕಂಡಿತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top