ನೋಡುವ ಬಗೆಯೊಂದಿದ್ದರೆ - 2 | Vartha Bharati- ವಾರ್ತಾ ಭಾರತಿ

---

ಫೋಟೋಗ್ರಫಿ ಸುತ್ತಮುತ್ತ

ನೋಡುವ ಬಗೆಯೊಂದಿದ್ದರೆ - 2

ಭಾಗ 17

ಚಿತ್ರಕಲೆಯಾಗಲಿ ಅಥವಾ ಛಾಯಾಗ್ರಹಣವೇ ಆಗಲಿ ಆರಂಭದಿಂದಲೂ ನಗ್ನತೆ ಎಂಬುದು ಇವುಗೊಂದಿಗೆ ಬೆಸೆದುಕೊಂಡು ಬಂದಿದೆ. ಪುರುಷನ ಅಥವ ಹೆಣ್ಣಿನ ನಗ್ನತೆಯನ್ನು ನೂರಾರು ವರ್ಷಗಳಿಂದ ಇಂದಿನವರೆಗೂ ಚಿತ್ರಕಲಾವಿದನಲ್ಲಿ ಅತಿ ಮಹತ್ವದ್ದೆಂದು ಪರಿಗಣಿಸಲಾಗಿದೆ. ಚಿತ್ರಕಲೆಯಲ್ಲಂತೂ ನಗ್ನತೆಗೆ ಅದರದ್ದೇ ಆದ ಉನ್ನತ ಸ್ಥಾನಮಾನವಿದೆ. ಆದರೆ ಫೋಟೋಗ್ರಫಿಯಲ್ಲಿ ನಗ್ನತೆಯನ್ನು ಕಲಾತ್ಮಕವಾಗಿ ಹಿಡಿದಿಡುವುದು ಸವಾಲಿನ ಕೆಲಸ. ಕೊಂಚ ಏರುಪೇರಾದರೂ ನಗ್ನತೆಯು ತನ್ನ ಕಲಾತ್ಮಕತೆ ಕಳೆದುಕೊಂಡು ಅಶ್ಲೀಲತೆಯ ಮುಖವಾಡ ಹೊತ್ತುಕೊಳ್ಳಬಹುದಾಗಿದೆ. ಜಗತ್ತಿನ ಯಾವ ಶ್ರೇಷ್ಠ ಕಲಾವಿದನನ್ನೇ ನೋಡಿದರೂ ಆತನ ಚಿತ್ರಗಳಲ್ಲಿ ಒಂದರಲ್ಲಾದರೂ ನಗ್ನತೆಯೇ ಒಂದು ವಿಷಯವಾಗಿ ನಿರೂಪಿಸಲ್ಪಟ್ಟಿರುತ್ತದೆ. ನಗ್ನತೆಗೂ ಅಶ್ಲೀಲತೆಗೂ ಬಹು ದೊಡ್ಡ ವ್ಯತ್ಯಾಸವಿದೆ. ಮೂಲ ವ್ಯತ್ಯಾಸವೆಂದರೆ ನಗ್ನತೆಯನ್ನು ಕಲೆಯ ಪಾವಿತ್ರತೆಯ ಹಿನ್ನೆಲೆಯಲ್ಲಿ ನೋಡಲಾಗುತ್ತಿದೆ. ಅಶ್ಲೀಲತೆಯನ್ನು ಅಭಿರುಚಿಹೀನ, ಕಾಮೋದ್ರೇಕ ಮತ್ತು ಅಸಭ್ಯಕರ ಎಂದು ನಂಬಲಾಗಿದೆ. ಇವೆರಡೂ ಮನುಷ್ಯನ ನೋಡುವ ಬಗೆಯನ್ನು ಬದಲಿಸಬಲ್ಲ ಅಥವಾ ದೃಷ್ಟಿಕೋನವನ್ನು ಬೆಳೆಸಬಲ್ಲ ಸೂಕ್ಷ್ಮಸಂವೇದಿ ವಿಷಯವಾಗಿದೆ.

ಇದು ನೋಡುವ ಬಗೆಯ ಒಂದು ಹಂತವಾದರೆ ಮತ್ತೊಂದು ಹಂತ ಹೀಗಿದೆ - ಆಗಸದಲ್ಲಿ ಒಗ್ಗೂಡಿದ ಕಾರ್ಮೋಡಗಳೋ, ಚದುರಿ ತೇಲುವ ಬೆಣ್ಣೆಯ ಬಂಡೆಯಂತೆ ಕಾಣುವ ಮೋಡಗಳೋ, ಹಿಂಜಿದ ಹತ್ತಿಯಂತೆ ಬಾನಂಗಳದಲ್ಲಿ ಆಡುವ ಧೂಮಸ್ತೋಮವೋ, ಶುಭ್ರಾಕಾಶದಲ್ಲಿ ಒಂಟಿಯಾಗಿ ವಿಹರಿಸುವ ಮೇಘವೋ-ಇವುಗಳನ್ನು ನಾವು ತದೇಕಚಿತ್ತದಿಂದ ನೋಡುತ್ತಿದ್ದರೆ ಹತ್ತಾರು ಭಿನ್ನ ಆಕೃತಿಗಳು ಗೋಚರಿಸುತ್ತವೆ. ನೆಲದ ಮೇಲೆ ಚೆಲ್ಲಾಡಿದ ನೀರಿನ ಹನಿಗಳಲ್ಲಿ ನಾನಾಬಗೆಯ ಚಿತ್ತಾರಗಳು ಮೂಡಿ ನಮ್ಮ ಕಣ್ಮನಗಳಿಗೆ ಅದಾವುದೋ ಅಗೋಚರ ವಿನ್ಯಾಸಗಳು ಕಾಣುತ್ತಿರುತ್ತವೆ. ಗೋಡೆಗಳ ಮೇಲೆ ಮೂಡಿದ ಕಲೆಯ ಗುರುತುಗಳಲ್ಲೂ ಹೊಸತನದ ಚಿತ್ರಗಳು ಕಂಡು ಕಲಾವಿದನ ಕಲ್ಪನೆಗಳು ನಮ್ಮಿಳಗೂ ಮೊಳೆಯುತ್ತವೆ. ಅದೇ ಬಗೆಯಲ್ಲಿ ನಾವು ನೋಡುವ ದೃಷ್ಟಿ ಭಿನ್ನವಾಗುತ್ತಿದ್ದಂತೆ ನಾವು ನೋಡುವಲ್ಲೆಲ್ಲ ಹೊಸ ಹೊಸ ದೃಶ್ಯಗಳು ನಮಗೆ ದಕ್ಕುತ್ತಲೇ ಇರುತ್ತವೆ.

ಒಂದೇ ತೆರನಾದ ಚಿತ್ತಾರ ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ರೀತಿಯಲ್ಲಿಯೇ ಕಾಣುತ್ತವೆ. ಎಲ್ಲರಿಗೂ ಒಂದೇ ತೆರನಾಗಿ ಕಾಣಬೇಕೆಂಬ ನಿಯಮವಿಲ್ಲವಲ್ಲ. ಅದು ಅವರವರ ಕಲ್ಪನಾವಿಲಾಸಕ್ಕೆ ಬಿಟ್ಟ ವಿಚಾರ. ಹಾಗೆಯೇ ಅತಿ ಸಹಜವಾದ ವಿದ್ಯಮಾನವು ನಾವು ನೋಡುವ ರೀತಿಯಲ್ಲಿ ವ್ಯಕ್ತವಾಗುತ್ತದೆ. ಉದಾಹರಣೆಗೆ ನೀರಿನಲ್ಲಿ ಆಹಾರ ಅರಸುತ್ತ ಓಡಾಡುವ ಸಣ್ಣ ಸಣ್ಣ ಪಕ್ಷಿಗಳಿಂದ ಹಿಡಿದು ಕೊಕ್ಕರೆ, ಫ್ಲೆಮಿಂಗೋಗಳಿರಬಹುದು. ಬರೀ ಅದರ ದೇಹರಚನೆ, ಸೌಂದರ್ಯ, ಹಾರಾಟಗಳನ್ನು ಸೆರೆಹಿಡಿದರೆ ಅದು ಎಲ್ಲರಿಗೂ ಕಾಣುವ ಸಹಜ ಚಿತ್ರವಾಗುತ್ತದೆ. ಅದರ ಬದಲಾಗಿ ಅವುಗಳು ತಮ್ಮ ಕತ್ತು ಕೊಂಕಿಸಿ, ಆಟವಾಡುತ್ತಲಿರುವುದನ್ನು ಕ್ಯಾಮರಾದ ಫ್ರೇಮಿನೊಳಕ್ಕೆ ಹೃದಯದಾಕಾರದಂತೆ ಮತ್ತು ಶೃಂಗಾರ ರಸಭಾವ ಉಕ್ಕುವಂತೆ ಚಿತ್ರಿಸಿ ತೋರಿಸಬಹುದು. ಹಾಗೆಯೇ ನೀರಿನಲ್ಲಿ ಅವುಗಳ ಪ್ರತಿಬಿಂಬವನ್ನು ಬಗೆಬಗೆಯಲ್ಲಿ ಚಿತ್ರಿಸಿ ಸುಂದರ ಕಲಾಕೃತಿಗಳಾಗಿಸಬಹುದು..

 ನಮ್ಮ ಸುತ್ತಲಿನ ಸಹಜವಾದ ಬದುಕಾಗಲಿ, ಪ್ರಕೃತಿಯಲ್ಲಿ ನಡೆಯುವ ಸಾಧಾರಣ ಕ್ರಿಯೆ- ಪ್ರತಿಕ್ರಿಯೆಗಳಾಗಲಿ ನೋಡುವಾಗ ಎಲ್ಲರಿಗೆ ಅದು ಮಾಮೂಲಿಯಾಗಿ ಕಾಣುತ್ತದೆ. ಆದರೆ ಆ ವಿದ್ಯಮಾನದಲ್ಲಿ ಏನೋ ವಿಶೇಷವೊಂದು ಸಹ ನಡೆಯುತ್ತಿರುತ್ತದೆ. ಅದನ್ನು ಗ್ರಹಿಸಿ, ನೋಡಿ ಛಾಯಾಗ್ರಹಣ ಮಾಡುವವನೇ ನಿಜವಾದ ಕಲಾವಿದನಾಗುತ್ತಾನೆ. ಒಂದೇ ಸ್ಥಳದಲ್ಲಿ ಹತ್ತಾರು ಜನ ಒಂದೇ ಘಟನೆಯನ್ನು ಅವರವರ ಭಾವಕ್ಕೆ ತಕ್ಕಂತೆ ಗ್ರಹಿಸಬಹುದು. ಹತ್ತಾರು ಬಗೆಯಲ್ಲಿ ಪ್ರಸೆಂಟ್ ಮಾಡಬಹುದು. ಒಬ್ಬರ ಒಂದೇ ಚಿತ್ರ ಹತ್ತಾರು ವಿಷಯಗಳನ್ನು ಹೇಳುವಂತೆ ತೋರಿಸಬಹುದು. ಆದರೆ ಸಹಜವಾಗಿ ನೋಡುವಾಗ ಅದು ಇತರರಿಗೆ ಗೋಚರಿಸಿರಲಾರದು. ಹಾಗಾಗಿ ನೋಡುವ ಕ್ರಿಯೆ, ಗ್ರಹಿಸುವ ಮನಸ್ಸು, ಒಳನೋಟವನ್ನು ಕಾಣುವ ಕಣ್ಣು ಇಲ್ಲಿ ಬಹಳ ಮಹತ್ವದ್ದು. ನಿಜವಾದ ಛಾಯಾಗ್ರಹಣ ಮೂಲತಃ ನಡೆಯಬೇಕಾಗಿರುವುದು ನಮ್ಮ ಕಣ್ಣು ಮತ್ತು ಮನಸಿನಲ್ಲಿ, ಕ್ಯಾಮರಾದಲ್ಲಲ್ಲ. ಕ್ಯಾಮರಾ ಆ ನೋಟವನ್ನು ಸೆರೆಹಿಡಿಯಲು ಬೇಕಾದ ಒಂದು ಸಾಧನವಷ್ಟೇ. ಕಾಣುವುದನ್ನು ಭಿನ್ನ ನೆಲೆಯಲ್ಲಿ ತೋರಿಸಲು ದುಬಾರಿ ಕ್ಯಾಮರಾಕ್ಕಿಂತ ನಮ್ಮ ಜೇಬಿನಲ್ಲಿರುವ ಸ್ಮಾರ್ಟ್ ಫೋನೇ ಸಾಕು. ಆದರೆ ಅದನ್ನು ಸಮರ್ಥವಾಗಿ ಬಳಸುವ ರೀತಿ ನಮಗೆ ತಿಳಿದಿರಬೇಕಷ್ಟೇ. ಅದಕ್ಕೆ ಒಂದಷ್ಟು ತಿಳುವಳಿಕೆ, ಒಂದಷ್ಟು ಅಧ್ಯಯನ, ಒಂದಷ್ಟು ಪ್ರಯೋಗಶೀಲ ಮನಸ್ಸಿದ್ದರೆ ಸಾಕು...

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top