ರ‍್ಯಾಗಿಂಗ್ | Vartha Bharati- ವಾರ್ತಾ ಭಾರತಿ

ರ‍್ಯಾಗಿಂಗ್

ನಂಬಲು ಕಷ್ಟವಾದರೂ ರ್ಯಾಗಿಂಗ್ ಕೆಜಿ ತರಗತಿಗಳಿಂದಲೇ ಪ್ರಾರಂಭವಾಗುತ್ತದೆ. ಆದರೆ ಅದನ್ನು ರ್ಯಾಗಿಂಗ್ ಅನ್ನುವುದಿಲ್ಲ. ರ್ಯಾಗಿಂಗ್‌ಗೆ ಸ್ಪಷ್ಟ ವ್ಯಾಖ್ಯಾನವೆಂದರೆ ಸಹಪಾಠಿಗಳಿಂದ ಅಥವಾ (ಹಾಸ್ಟೆಲ್ ಆದರೆ) ಸಹನಿವಾಸಿಗಳಿಂದ ಕಿರುಕುಳ. ಇದು ಸಾಮಾನ್ಯವಾಗಿ ಅಕಾರಣವಾಗಿಯೇ ಇರುತ್ತದೆ. ಆದರೂ ಸ್ಥೂಲ ನೋಟದಿಂದ ಗುರುತಿಸುವುದಾದರೆ ರ್ಯಾಗಿಂಗ್‌ಗೆ ಒಳಗಾಗುವ ಮಕ್ಕಳ ಮೃದು ಸ್ವಭಾವ ಮತ್ತು ರ್ಯಾಗಿಂಗ್ ಮಾಡುವ ಆಕ್ರಮಣಕಾರಿ ಸ್ವಭಾವವೇ ಇದಕ್ಕೆ ಮುಖ್ಯಕಾರಣವಾಗುತ್ತದೆ.

ರ‍್ಯಾಗಿಂಗ್ ಶುರುವಾಗುವುದು ಎಲ್ಲಿಂದ?

ವಿದ್ಯಾರ್ಥಿಗಳೆಂದರೆ ಮಕ್ಕಳ ಹಂತದಿಂದ ಹಿಡಿದು ಯುವ ಜನತೆಯ ಹಂತದವರೆಗೂ ಮಾತ್ರವಲ್ಲದೆ ಅದನ್ನೂ ದಾಟಿ ವಯಸ್ಕರ ಮಟ್ಟವನ್ನೂ ಮುಟ್ಟುತ್ತದೆ. ಆದ್ದರಿಂದ ವಿದ್ಯಾರ್ಥಿಗಳೆನ್ನುವಾಗ ನಾವು ಯಾವ ಹಂತದ ವಿದ್ಯಾರ್ಥಿಗಳೆಂದು ಸ್ಪಷ್ಟಪಡಿಸಬೇಕಾದ ಅಗತ್ಯವಿದೆ.

ಇನ್ನು ರ‍್ಯಾಗಿಂಗ್ಗೆ ಒಳಗಾಗುವ ವಿದ್ಯಾರ್ಥಿಗಳೂ ಅಷ್ಟೇ ಹಲವಾರು ಹಂತಗಳಲ್ಲಿ ಕಾಣಬರುತ್ತಾರೆ.

ನಂಬಲು ಕಷ್ಟವಾದರೂ ರ‍್ಯಾಗಿಂಗ್ ಕೆಜಿ ತರಗತಿಗಳಿಂದಲೇ ಪ್ರಾರಂಭವಾಗುತ್ತದೆ. ಆದರೆ ಅದನ್ನು ರ್ಯಾಗಿಂಗ್ ಅನ್ನುವುದಿಲ್ಲ. ರ‍್ಯಾಗಿಂಗ್ಗೆ ಸ್ಪಷ್ಟ ವ್ಯಾಖ್ಯಾನವೆಂದರೆ ಸಹಪಾಠಿಗಳಿಂದ ಅಥವಾ (ಹಾಸ್ಟೆಲ್ ಆದರೆ) ಸಹನಿವಾಸಿಗಳಿಂದ ಕಿರುಕುಳ. ಇದು ಸಾಮಾನ್ಯವಾಗಿ ಅಕಾರಣವಾಗಿಯೇ ಇರುತ್ತದೆ. ಆದರೂ ಸ್ಥೂಲ ನೋಟದಿಂದ ಗುರುತಿಸುವುದಾದರೆ ರ್ಯಾಗಿಂಗ್‌ಗೆ ಒಳಗಾಗುವ ಮಕ್ಕಳ ಮೃದು ಸ್ವಭಾವ ಮತ್ತು ರ‍್ಯಾಗಿಂಗ್ ಮಾಡುವ ಆಕ್ರಮಣಕಾರಿ ಸ್ವಭಾವವೇ ಇದಕ್ಕೆ ಮುಖ್ಯಕಾರಣವಾಗುತ್ತದೆ.

ಇನ್ನು ಇದರಲ್ಲಿ ಕಾರಣಗಳನ್ನು ಹುಡುಕಲು ಹೋದರೆ ಮೃದು ಸ್ವಭಾವ ಅಥವಾ ಆಕ್ರಮಣಕಾರಿ ಸ್ವಭಾವವು ಮಕ್ಕಳಲ್ಲಿ ಕಾಣುವುದು ಅವರವರ ಕೌಟುಂಬಿಕ ಮತ್ತು ಸಾಮಾಜಿ ಪರಿಸರದ ಪ್ರಭಾವವಾಗಿರುತ್ತದೆ.

ಆಗಷ್ಟೇ ಶಾಲೆಗೆ ಕಾಲಿಟ್ಟಿರುವ ಮಕ್ಕಳಲ್ಲೇ ದುಂಡಾವರ್ತಿ ಅಥವಾ ಆಕ್ರಮಣ ಸ್ವಭಾವಗಳು ಕಾಣುತ್ತವೆ. ಅಂತಹ ಸಮಯದಲ್ಲಿ ಶಿಕ್ಷಕರು ಅಂತಹ ಜೋರಿನ ಮಕ್ಕಳನ್ನು ಓಲೈಸಿ ತಹಬಂದಿಗೆ ತಂದಿಟ್ಟುಕೊಳ್ಳಲು ಯತ್ನಿಸುತ್ತಾರೆ. ಇದು ಸಾಕಾಗುವುದಿಲ್ಲ. ಇದರಿಂದ ಆ ಮಗುವಿನ ಆಕ್ರಮಣಕಾರಿ ಮನಸ್ಥಿತಿಯಲ್ಲಿ ಯಾವುದೇ ರೀತಿಯ ಬದಲಾವಣೆ ಕಾಣುವುದಿಲ್ಲ. ತಕ್ಷಣಕ್ಕೆ ಅದು ಸುಮ್ಮನಾಗುವುದು. ನಂತರ ಯಾವಾಗಲಾದರೂ ಅದನ್ನು ಪ್ರದರ್ಶಿಸುವ ಆತುರವನ್ನು ಸದಾ ಹೊಂದಿರುತ್ತದೆ.

ಗಮನಿಸಿ ನೋಡಿ. ಆಗಷ್ಟೇ ಎಲ್‌ಕೆಜಿಗೆ ಅಥವಾ ಪ್ಲೇ ಹೋಂಗೆ ಕಾಲಿಟ್ಟಿರುವ ಮಕ್ಕಳಲ್ಲಿ ಇದ್ದಕ್ಕಿದ್ದಂತೆ ಜಿಗುಟುವವರನ್ನು, ಗುದ್ದುವವರನ್ನು, ಹೊಡೆಯುವವರನ್ನು ಕಾಣುತ್ತೇವೆ. ಇದ್ದಕ್ಕಿದ್ದಂತೆ ತನ್ನ ಪಕ್ಕದಲ್ಲಿರುವ ಮಗುವಿನ ಮೇಲೆ ದಾಳಿ ಮಾಡುತ್ತದೆ. ಅಷ್ಟೇ ಏಕೆ ಶಿಕ್ಷಕರನ್ನೂ ಅಣಕಿಸುತ್ತದೆ. ಡಿಶ್ಹುಂ ಡಿಶ್ಹುಂ ಎಂದು ಆಟವಾಡುವಂತೆ ಬರುತ್ತಾ ನಿಜವಾಗಿಯೇ ದೊಡ್ಡವರಿಗಾಗಲಿ, ಚಿಕ್ಕವರಿಗಾಗಲಿ, ತನ್ನ ಸಮವಯಸ್ಕರಿಗಾಗಲಿ ಗುದ್ದುತ್ತದೆ. ಇನ್ನು ಅದರ ಪೋಷಕರು ಈ ವಿಷಯವನ್ನು ತಿಳಿಸಿದರೆ, ‘‘ಅಯ್ಯೋ ಹೌದು. ಮನೇಲೂ ಹಾಗೇ ಮಾಡುತ್ತಾನೆ. ಎಷ್ಟು ಹೇಳಿದರೂ ಕೇಳುವುದಿಲ್ಲ. ಹೊಡೆದರೂ, ಬೈದರೂ ಅಷ್ಟೇ ಏನೂ ಪ್ರಯೋಜನವಿಲ್ಲ. ನೀವೇ ಸರಿ ಮಾಡಬೇಕು’’ ಎಂದು ಅಲವತ್ತುಕೊಳ್ಳುತ್ತಾರೆ.

ತಮ್ಮ ಕೈಯಲ್ಲಿ ರಿಪೇರಿ ಮಾಡಲಾಗುತ್ತಿಲ್ಲ. ನೀವು ರಿಪೇರಿ ತಜ್ಞರು, ನೀವೇ ರಿಪೇರಿ ಮಾಡಿ ಎಂದು ವಸ್ತುವೊಂದನ್ನು ಕೈಗಿಟ್ಟು ಹೋದಂತೆ ನಡೆದುಕೊಳ್ಳುವ ಪೋಷಕರು ನಿಜವಾಗಿ ಎಡವುವುದೆಲ್ಲೆಂದರೆ, ಆಕ್ರಮಣಕಾರಿಯಾಗಿರುವ ಆ ಮಕ್ಕಳ ಆ ವರ್ತನೆಗೆ ಮೂಲವೆಲ್ಲಿದೆ ಎಂಬುದನ್ನು ತಮ್ಮಲ್ಲಿ ಕಂಡುಕೊಳ್ಳಲು, ತಮ್ಮ ಮನೆಯಲ್ಲಿಯೇ ಹುಡುಕಲು ನಿರಾಕರಿಸುವುದು. ಅದನ್ನು ಅವರು ಅವಮಾನವೆಂದು ಬಗೆಯುತ್ತಾರೆ.

ಆಗಷ್ಟೇ ಶಾಲೆಗೆ ಕಾಲಿಟ್ಟಿರುವ ಮಕ್ಕಳಲ್ಲಿ ಜಿಗುಟುವುದು, ಹೊಡೆಯುವುದು, ದೂಡುವುದು, ದೂರುವುದು, ತಿವಿಯುವುದು, ಬೇರೆ ಮಕ್ಕಳ ಪುಸ್ತಕ ಹರಿಯುವುದು, ಸ್ಕೇಲು ಅಥವಾ ಇನ್ನೇನಾದರೂ ಮುರಿಯುವುದು, ಅವರದ್ದನ್ನು ತನಗೆ ಬೇಕೆಂದು ಕಸಿದಿಟ್ಟುಕೊಂಡು ಮತ್ತೆ ಕೊಡುವುದಿಲ್ಲ ಎಂದು ಹಟ ಮಾಡುವುದು, ತನ್ನ ಬಯಕೆಯ ವಸ್ತು ತನಗೆ ಸಿಗದಿದ್ದರೆ ಜೋರು ಅಳುವುದು; ಹೀಗೆಲ್ಲಾ ಮಾಡುವುದನ್ನು ಬಹಳಷ್ಟು ಪೋಷಕರು ತಮ್ಮ ಮನೆಯಲ್ಲಿಯೇ ಕಂಡಿರುತ್ತಾರೆ. ಆದರೆ ಅದನ್ನು ಹೊರಗೆಡವದೆ ಮುಂದೆ ಒಂದು ದಿನ ಮಗುವು ಶಾಲೆಗೆ ಹೋಗಲಾರಂಭಿಸಿದ ಮೇಲೆ ಶಾಲಾ ಪರಿಸರ ಮತ್ತು ಗೆಳೆಯರ ಸಹವಾಸದೋಷವೆಂದು ದೂರಲು ಸಿದ್ಧರಾಗಿರುತ್ತಾರೆ. ಹಾಗಾಗಿಯೇ ಆ ಮಕ್ಕಳು ಕೂಡ ಬದಲಾಗಲು ಅವಕಾಶವಿಲ್ಲದೇ ಹೋಗುವುದು.

ಇಂತಹ ಮಕ್ಕಳು ತಾವು ಬೆಳೆದಂತೆ ತಮ್ಮ ಸಹಪಾಠಿಗಳಿಗೆ ಕೊಡುವ ಕಿರುಕುಳವನ್ನು ಮುಂದುವರಿಸುವುದು ಮಾತ್ರವಲ್ಲದೆ ಅದನ್ನು ತರಹೇವಾರಿಯಾಗಿ ಪ್ರಯೋಗಿಸಲೂ ಮುಂದಾಗುತ್ತಾರೆ. ಮಾತ್ರವಲ್ಲ, ಅಂತಹ ಮಕ್ಕಳಿಗೆ ಅಂತಹದೇ ಮಕ್ಕಳು ಜೊತೆಯಾಗುತ್ತಾರೆ. ಅವರದೊಂದು ತಂಡ ಕಟ್ಟಲ್ಪಡು್ತದೆ. ಅದು ವಿಸ್ತಾರವೂ ಆಗುತ್ತದೆ.

ರ‍್ಯಾಗಿಂಗ್ ಅಂತ ಗೊತ್ತಿರುವುದಿಲ್ಲ

ಮಕ್ಕಳಿಗೆ ತಾವು ಮಾಡುವ ಕಿಡಿಗೇಡಿತನಗಳು ರ್ಯಾಗಿಂಗ್ ಅಂತ ಗೊತ್ತಿರುವುದಿಲ್ಲ. ದೊಡ್ಡವರೂ ಹಾಗೆ ಕರೆಯುವುದಿಲ್ಲ. ಜೊತೆಯವರಿಗೆ ಕಾಟ ಕೊಡುವುದನ್ನು ಅವರು ದೊಡ್ಡದಾಗಿ ಪರಿಗಣಿಸುವುದೇ ಇಲ್ಲ. ಚೇಷ್ಟೆ ಮಾಡುವುದು ಎಂದು ಗುರುತಿಸುತ್ತಾರೆ. ಚೇಷ್ಟೆಗೂ ಕಿಡಿಗೇಡಿತನಕ್ಕೂ ವ್ಯತ್ಯಾಸವಿದೆ. ಮೊದಲು ನಾವು ನಮ್ಮ ಮಕ್ಕಳು ಚೇಷ್ಟೆ ಮಾಡುವರೋ ಕಿಡಿಗೇಡಿತನ ಮಾಡುವರೋ ನೋಡಿಕೊಳ್ಳಬೇಕಾಗಿದೆ. ಚೇಷ್ಟೆಯು ಕಿಡಿಗೇಡಿತನಕ್ಕೆ ತಿರುಗುವುದು ದೊಡ್ಡ ವಿಷಯವೇನಲ್ಲ. ಆದರೆ ಕಿಡಿಗೇಡಿತನವು ಗಂಭೀರವಾದದ್ದು. ಚೇಷ್ಟೆ ಲಘುವಾದದ್ದು. ನಮ್ಮ ಮಗು ಚಿತ್ರದಲ್ಲಿರುವ ಮಹಿಳೆಯ ಮೂಗಿನ ಕೆಳಗೆ ಮೀಸೆ ಬರೆಯುವುದು ಅಥವಾ ಯಾರಾದರೂ ಕುಳಿತುಕೊಳ್ಳುವ ಚೇರಿನ ಮೇಲೆ ನೀರು ಚೆಲ್ಲಿರುವುದು; ಈ ರೀತಿಯಲ್ಲಿ ಹಾನಿಕಾರಕವಲ್ಲದ್ದು ಮಾಡಿ ಬರೀ ನಗುವಂತಹುದೇ ಆಗಿದ್ದರೆ ಅದು ಬರಿಯ ಚೇಷ್ಟೆ ಎನಿಸಿಕೊಳ್ಳುವುದು. ಅದೇ ಮಗುವು ಯಾರಾದರೂ ಕುಳಿತುಕೊಳ್ಳುವ ಜಾಗದಲ್ಲಿ ಕಂಬಿಯನ್ನೋ, ಪೆನ್ನನ್ನೋ, ಮುಳ್ಳನ್ನೋ ಇಟ್ಟು ಅದರ ಮೇಲೆ ಕುಳಿತು ಅವರು ನೋವಿನಿಂದ ಚೀರುವುದು ಕಿಡಿಗೇಡಿತನಕ್ಕೆ ಸೇರುತ್ತದೆ. ಕಿಡಿಗೇಡಿಗಳು ಮೊನಚುವಸ್ತುಗಳನ್ನು, ಕಲ್ಲುಗಳನ್ನು ಬಳಸುವುದು, ಗಾಜಿನಂತಹ ವಸ್ತುಗಳನ್ನು ಒಡೆಯುವುದು, ಬೆಂಕಿಯನ್ನು ಹೊತ್ತಿಸುವುದು ಇತ್ಯಾದಿಗಳನ್ನು ಮಾಡುುದು ಇವೆಲ್ಲವೂ ಕಿಡಿಗೇಡಿತನಗಳೇ.

ಹಾಸ್ಯಕ್ಕೂ, ಸ್ಯಾಡಿಸ್ಟ್ (ಕ್ರೌರ್ಯದಿಂದ ಆನಂದ ಪಡೆಯುವುದು) ನಡವಳಿಕೆಗಳಿಗೂ ಇರುವ ವ್ಯತ್ಯಾಸವೇ ಚೇಷ್ಟೆ ಮತ್ತು ಕಿಡಿಗೇಡಿತನಕ್ಕೂ ಇರುವುದು.

ಹಾಗೆಯೇ ಚೇಷ್ಟೆಯೂ ಅಲ್ಲದ, ಕಿಡಿಗೇಡಿತನವೂ ಅಲ್ಲದ ಮತ್ತೊಂದು ಬಗೆಯ ಗುಣಧರ್ಮವನ್ನು ಮಕ್ಕಳಲ್ಲಿ ಗುರುತಿಸಬಹುದು. ಅದೇನೆಂದರೆ, ಕಸಿಯುವುದು, ಗುದ್ದುವುದು, ಜಿಗುಟುವುದು, ಪರಚುವುದು ಇತ್ಯಾದಿ. ಇದು ಸ್ವಭಾವ ದೋಷವಾಗಿರುತ್ತದೆ. ಇದು ಅತ್ಯಂತ ಅಪಾಯಕಾರಿ. ಅಂತಹ ಮಕ್ಕಳು ನೋಡುವ ಮತ್ತು ವರ್ತಿಸುವ ರೀತಿಗಳಂತೂ ಕೆಲವೊಮ್ಮೆ ತೀರಾ ಅಸ್ವಾಭಾವಿಕವಾಗಿದ್ದು ಅವರನ್ನು ನೋಡಿದ ಕೂಡಲೇ ಬುದ್ಧಿವಿಕಲರಂತೆ ಕಾಣುತ್ತಾರೆ. ಹೀಗಿರುವಂತವರನ್ನೂ ಕೂಡ ಪೋಷಕರು ಗಂಭೀರವಾಗಿ ಪರಿಗಣಿಸಿರುವುದೇ ಇಲ್ಲ. ತೀಟೆ, ಚೇಷ್ಟೆ ಎಂದೇ ಸುಮ್ಮನಾಗಿಬಿಡುತ್ತಾರೆ. ಆದರೆ ಅದು ಚೇಷ್ಟೆ, ತಲೆಹರಟೆ, ಕಿಡಿಗೇಡಿತನ ಇವುಗಳೆಲ್ಲವನ್ನೂ ಮೀರಿರುವ ಸ್ವಭಾವ ದೋಷ. ಇದು ಬಹಳ ಗಂಭೀರವಾದದ್ದು. ಈ ಬಗೆಯ ಸ್ವಭಾವದ ಅಥವಾ ನಡವಳಿಕೆಯ ವುಕ್ಕಳಿಂದ ರ್ಯಾಗಿಂಗ್ ನಡೆಯುವುದು.

ಮೂಲ ಕಾರಣಗಳು

ಮಕ್ಕಳು ಹಾಗಾಡಲು ಹಲವು ಕಾರಣಳಿವೆ. ಅವುಗಳಲ್ಲಿ ಮುಖ್ಯವಾದವು;

1. ಮನೆಯಲ್ಲಿ ಅತೀ ಮುದ್ದು ಮತ್ತು ಮಗುವು ಹಟ ಹಿಡಿಯುವುದನ್ನೆಲ್ಲಾ ಪೂರೈಸುವ ಮನಸ್ಥಿತಿಯ ತಂದೆ ತಾಯಿ ಮ್ತು ಇತರ ಕುಟುಂಬದ ಸದಸ್ಯರು.

2. ತಂದೆ ಅಥವಾ ತಾಯಿ ಅಥವಾ ಇನ್ನಾರೇ ಕುಟುಂಬದ ಸದಸ್ಯರು ಆಕ್ರಮಣಕಾರಿಯಾಗಿರುವುದು. ಹಾಗೂ ಅವರು ತಮ್ಮ ಹಟವನ್ನು ಸಾಧಿಸಿಕೊಂಡು ಎಲ್ಲಾ ವಿಷಯಗಳಲ್ಲೂ ತಾವು ಗೆದ್ದವರಂತೆ ಕಾಣುವುದು.

3. ಮಗುವು ಬೇರೆ ಮಗುವಿನೊಂದಿಗೆ ಜಗಳವಾಡಿಕೊಂಡು ದೂರನ್ನು ಹೊತ್ತು ತಂದಾಗ ಹಿರಿಯರು ಅದರ ಪರವಾಗಿ ನಿಲ್ಲುವುದು. ಪೂರ್ವಾಪರ ವಿಚಾರಿಸದೇ ತವ್ಮು ಮಗುವಿಗೇ ಪರವಹಿಸುವುದು.

2. ‘‘ನೀನು ಹೋಗು ಇಷ್ಟ ಬಂದದ್ದು ಮಾಡು, ಯಾರಾದರೂ ಬಂದರೆ ನಾನು ವಿಚಾರಿಸಿಕೊಳ್ಳುತ್ತೇನೆ’’ ಎಂದು ರೌಡಿ ಮಾದರಿಯ ಮಾತುಗಳನ್ನು ಹಿರಿಯರಿಂದ ಕೇಳುವುದು.

3. ತಮಾಷೆಗೆ ಎಂದು ಡಿಶ್ಹುಂ ಡಿಶ್ಹುಂ ಆಡುತ್ತಾ, ಹೊಡೆದಾಡುವ ಆಟಗಳನ್ನು ಪ್ರೋತ್ಸಾಹಿಸುವುದು.

4. ನಿಮ್ಮ ಅಪ್ಪನಿಗೆ ಬುದ್ಧಿ ಇಲ್ಲ, ನಿಮ್ಮ ಅಮ್ಮನಿಗೆ ಬುದ್ಧಿ ಇಲ್ಲ ಎಂದು ಹಾಸ್ಯಕ್ಕೆ ಪರಸ್ಪರ ಹೇಳುತ್ತಾ ಮಗುವಿನ ಪರವಾಗಿ ತಪ್ಪಿದ್ದರೂ ವಾದಕ್ಕೆ ನಿಲ್ಲುವುದು.

5. ಕೆಲವರ ಮನೆಯಲ್ಲಿಯೇ ಅಂತಹ ವಾತಾವರಣವಿರುತ್ತದೆ. ಪೋಷಕರು ಮತ್ತು ಇತರ ಕುಟುಂಬದ ಸದಸ್ಯರೇ ಆಕ್ರಮಣಕಾರಿ ಮನೋಭಾವವನ್ನು ಹೊಂದಿರುತ್ತಾರೆ. ಅವರೋ ಮಾತಾಡುವುದೆಂದರೆ ರಣಕಹಳೆ ಊದಿದಂತೆ. ಯಾರೇ ಒಬ್ಬರ ಬಗ್ಗೆ ಮಾತಾಡುವುದೆಂದರೆ ‘ಯಾವನೋ, ಯಾವಳೋ’ ಎಂದು. ಹೀಗಿರುವಾಗ ಮಕ್ಕಳು ತಮ್ಮನ್ನು ತಮ್ಮ ಮನೆಯವರನ್ನು ಬಿಟ್ಟು ಉಳಿದೆಲ್ಲರನ್ನೂ ಲಘುವಾಗಿ ಕಾಣುವುದಲ್ಲದೆ, ಅವರು ತಮ್ಮ ಅಧೀನದಲ್ಲಿರಬೇಕು ಎಂದು ಬಯಸುತ್ತಾರೆ. ಅದನ್ನೇ ತಮ್ಮ ಸಹಪಾಠಿಗಳಲ್ಲೂ ಕಾಣಲು ಇಚ್ಛಿಸುತ್ತಾರೆ.

6. ಮಾದಕ ವಸ್ತುಗಳ ವ್ಯಸನಿಗಳಾಗಿರುವ ಕುಟುಂಬದ ಸದಸ್ಯರು ನಡೆದುಕೊಳ್ಳುವ ರೀತಿ ನೀತಿಗಳು ಕೂಡ ಮಕ್ಕಳಲ್ಲಿ ಕ್ರೌರ್ಯದ ನಡಳಿಕೆ ಹುಟ್ಟಲು ಕಾರಣವಾಗಿರುತ್ತದೆ.

7. ಮಕ್ಕಳು ತಮ್ಮ ಓರಗೆಯವರ ಮೇಲೆ ಅಥವಾ ಸಹಪಾಠಿಗಳ ಮೇಲೆ ದೂರು ಹೇಳಲು, ತಕ್ಷಣವೇ ಜಗಳಕ್ಕೆ ಹೋಗುವ ಪೋಷಕರೇನೂ ಕಡಿಮೆ ಇಲ್ಲ. ಅವರು ತಮ್ಮ ಮಗುವಿನ ತಪ್ಪನ್ನು ಬಿಟ್ಟುಕೊಡದೆ, ತಮ್ಮ ಮಗುವು ಅತ್ಯಂತ ಒಳ್ಳೆಯ ಮಗುವೆಂದೂ ಅದರ ಮೇಲೆ ವೃಥಾ ದೋಷಾರೋಪಣೆ ಮಾಡುತ್ತಾರೆಂದೂ ದೂರುತ್ತಾ ಕದನ ಕುತೂಹಲದಲ್ಲಿಯೇ ಇರುವುದು ಕೂಡಾ ಮಕ್ಕಳು ಕಠೋರವಾಗುತ್ತಾ, ದೋಷಪೂರ್ಣ ಸ್ವಭಾವವನ್ನು ಹೊಂದುವರು. ಅಷ್ಟೇ ಅಲ್ಲದೆ ಆ ಮಕ್ಕಳು ರ್ಯಾಗಿಂಗ್ ಮಾಡುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

8. ಇನ್ನೂ ಕೆಲವು ಸಲ ಚೆನ್ನಾಗಿ ಓದುವ ವಿದ್ಯಾರ್ಥಿಗಳು ಉಪಾಧ್ಯಾಯರಿಂದ ಪಡೆಯುವ ಪ್ರಶಂಸೆ ಮತ್ತು ಆದರಗಳನ್ನು ಸಹಿಸದ ಅಸಹನೆಯ ಮನಸ್ಸುಗಳು ರ್ಯಾಗಿಂಗ್ ಮಾಡುತ್ತವೆ.ಇದಕ್ಕೆ ಅಸೂಯೆ, ಅಸಹನೆ ಮಾತ್ರವಲ್ಲದೇ ತಾವು ಅವರ ಕಾರಣದಿಂದ ಅಪಮಾನಕ್ಕೀಡಾಗುತ್ತಿದ್ದೇವೆ ಎಂಬ ಮನೋಭಾವವೂ ಕೂಡ ್ಯಾಗಿಂಗ್ ಮಾಡಲು ಕಾರಣವಾಗುತ್ತದೆ.

ವೈವಿಧ್ಯಮಯ ಕಿರುಕುಳಗಳು

ಸ್ವಭಾವ ದೋಷದಿಂದ ನೀಡುವ ಕಿರುಕುಳಗಳು ಒಂದು ಬಗೆಯಾದರೆ, ಸಾಮಾನ್ಯವಾಗಿ ರ್ಯಾಗಿಂಗ್‌ಗಳು ನಡೆಯುವುದು ಕಿರುಕುಳ ನೀಡಿ ಅದರಿಂದ ಮೋಜು ಪಡೆಯುವುದು.

1. ತಮ್ಮ ಪಕ್ಕದವರ ಅಥವಾ ಚೆನ್ನಾಗಿ ಓದುವವರ ಪುಸ್ತಕ ಅಥವಾ ಬರೆಯುವ ಸಾಮಗ್ರಿಗಳನ್ನು ಕದಿಯುವುದು ವುತ್ತು ಅವನ್ನು ನಾಶಪಡಿಸುವುದು.

2. ಓದುವಾಗ ಅಥವಾ ಬರೆಯುವಾಗ ಬೇರೇನನ್ನೋ ಮಾಡುತ್ತಾ ಅವರು ಓದಿನ ಕಡೆ ಗವುನ ನೀಡಲಾರದಂತೆ ಮಾಡುವುದು.

3. ಅಕಸ್ಮಾತ್ ಎಂಬಂತೆ ಮೊನಚು ಸಾಮಗ್ರಿಗಳನ್ನು ತಗುಲಿಸಿ ಗಾುಗೊಳಿಸಿ ನೋವುಂಟು ಮಾಡುವುದು.

4. ಆಟವಾಡುವಾಗ ಬೇಕೆಂದೇ ಬೀಳಿಸುವುದು.

5. ಎನ್ನೆಸ್ಸೆಸ್ ಕ್ಯಾಂಪ್ ಅಥವಾ ಎನ್‌ಸಿಸಿ ಕ್ಯಾಂಪ್‌ಗಳಿಗೆ ಹೋದಾಗ ನಿದ್ರಿಸುವ ಅಮಾಯಕರ ಬಾಯಲ್ಲಿ ಮಣ್ಣು, ಪೇಸ್ಟ್ ಅಥವಾ ಇನ್ನೇನಾದರೂ ವಸ್ತುಗಳನ್ನು ತುಂಬುವುದು. 5. ಹಲ್ಲಿನ ಮೇಲೆ ಫೆವಿಕಾಲ್ ಅಥವಾ ಆ ಬಗೆಯ ಅಂಟುವಸ್ತುಗಳನ್ನು ಹಾಕಿದ್ದು ಬೆಳಗೆದ್ದಾಗ ಅಂಟಿಕೊಂಡಂತಾಗಿ ಕಿರುಕುಳ ಅನುಭವಿಸುವುದು. 6. ಸಮವಸ್ತ್ರವನ್ನು ಅಥವಾ ಇನ್ನಿತರ ಅಗತ್ಯ ವಸ್ತುಗಳನ್ನು ಬಚ್ಚಿಡುವುದು ಅಥವಾ ಎಸೆದುಬಿಡುವುದು.

7. ತಿನ್ನುವ ಅಥವಾ ಕುಡಿಯುವುದರಲ್ಲಿ ಭೇದಿಯಾಗುವಂತಹ ಔಷಧಿ ಅಥವಾ ಪದಾರ್ಥವನ್ನು ಬೆರೆಸುವುದು.

8. ಜೋರು ಮಾಡಿ ತಮ್ಮ ಕೆಲಸವನ್ನು ಮಾಡಿಸುವುದು. ತಮ್ಮ ಬಾತ್ ರೂಂ ಕ್ಲೀನ್ ಮಾಡಿಸುವುದರಿಂದ ಹಿಡಿದು, ತಮ್ಮ ಇತರೇ ಖಾಸಗಿ ಕೆಲಸಗಳನ್ನೂ ದಬ್ಬಾಳಿಕೆಯಿಂದ ಮಾಡಿಸುವುದು.

9. ಮೂತ್ರ ಕುಡಿಸುವುದು, ಬೆತ್ತಲಾಗಿ ಓಡುವುದು, ಮಲ ಎಸೆಯುವುದು; ಇತ್ಯಾದಿ ನಾವು ಕಲ್ಪಿಸಿಕೊಳ್ಳಲಾಗದಂತಹ ವಿಕೃತ ಕೃತ್ಯಗಳನ್ನು ಮಾಡಿಸುವಷ್ಟರ ಮಟ್ಟಕ್ಕೆ ರ್ಯಾಗಿಂಗ್‌ಗಳು ಬೆಳೆದ ವಿದ್ಯಾರ್ಥಿಗಳಲ್ಲಿ ಕಾಣುವುದು. ಎಷ್ಟೋ ಬಾರಿ ಈ ಕಿರುಕುಳಗಳನ್ನು ತಡೆಯದೇ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳೂ ಕೂಡ ವಿಶ್ವಾದ್ಯಂತ ಇವೆ. ಭಾರತವೂ ಇದಕ್ಕೆ ಹೊರತೇನಲ್ಲ.

ಶಿಕ್ಷಣ ಸಂಸ್ಥೆಗಳಲ್ಲಿ ರ‍್ಯಾಗಿಂಗ್ ಮಾಡುತ್ತಿರುವವರನ್ನು ಮತ್ತು ಅದಕ್ಕೆ ಗುರಿಯಾಗಿರುವವರನ್ನು ಗುರುತಿಸುವುದು ಕಷ್ಟವೇನಲ್ಲ. ಅದಕ್ಕೆ ಅನೇಕ ಮಾರ್ಗಗಳಿವೆ. ಅವುಗಳನ್ನು ಮುಂದೆ ತಿಳಿಯೋಣ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top