ಮುಖ್ಯ ನ್ಯಾಯಮೂರ್ತಿಗೆ ನಾಲ್ವರು ನ್ಯಾಯಾಧೀಶರು ಬರೆದ ಪತ್ರದ ಪೂರ್ಣ ಪಾಠ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ವಿರುದ್ಧ ಬಂಡೆದ್ದಿರುವ ನಾಲ್ವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮುಖ್ಯ ನ್ಯಾಯಮೂರ್ತಿಗೆ 2 ತಿಂಗಳ ಹಿಂದೆ ಬರೆದ ಪತ್ರದ ಪೂರ್ಣ ಪಾಠ.

ಪ್ರಿಯ ಮುಖ್ಯ ನ್ಯಾಯಮೂರ್ತಿಯವರೇ,

ಈ ನ್ಯಾಯಾಲಯ (ಸುಪ್ರೀಂ ಕೋರ್ಟ್) ನೀಡಿರುವ ಕೆಲವು ಆದೇಶಗಳನ್ನು ತಮ್ಮ ಗಮನಕ್ಕೆ ತರುವುದಕ್ಕಾಗಿ ಈ ಪತ್ರವನ್ನು ತಮಗೆ ಬರೆಯಲು ಅತ್ಯಂತ ವಿಷಾದ ಮತ್ತು ಕಳವಳದಿಂದ ನಾವು ನಿರ್ಧರಿಸಿದೆವು. ಈ ಆದೇಶಗಳು ನ್ಯಾಯ ಪ್ರದಾನ ವ್ಯವಸ್ಥೆಯ ಒಟ್ಟಾರೆ ಕಾರ್ಯನಿರ್ವಹಣೆ ಮತ್ತು ಹೈಕೋರ್ಟ್‌ಗಳ ಸ್ವಾತಂತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಅದೇ ವೇಳೆ, ಗೌರವಾನ್ವಿತ ಭಾರತದ ಮುಖ್ಯ ನ್ಯಾಯಾಧೀಶರ ಕಚೇರಿಯ ಆಡಳಿತಾತ್ಮಕ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರಿವೆ.

 ಕಲ್ಕತ್ತಾ, ಬಾಂಬೆ ಮತ್ತು ಮೆಡ್ರಾಸ್- ಈ ಮೂರು ಚಾರ್ಟರ್ಡ್ ಹೈಕೋರ್ಟ್‌ಗಳ ಸ್ಥಾಪನೆಯಾದಂದಿನಿಂದ, ನ್ಯಾಯಾಂಗ ಆಡಳಿತದಲ್ಲಿ ಕೆಲವೊಂದು ಸಂಪ್ರದಾಯಗಳು ಮತ್ತು ರೀತಿನೀತಿಗಳು ಬೇರೂರಿಕೊಂಡು ಬಂದಿವೆ. ಈ ಮೂರು ಚಾರ್ಟರ್ಡ್ ಹೈಕೋರ್ಟ್‌ಗಳು ಸ್ಥಾಪನೆಯಾದ ಬಹುತೇಕ ಒಂದು ಶತಮಾನದ ಬಳಿಕ ಅಸ್ತಿತ್ವಕ್ಕೆ ಬಂದ ಈ ನ್ಯಾಯಾಲಯ (ಸುಪ್ರೀಂ ಕೋರ್ಟ್) ಕೂಡ ಆ ಸಂಪ್ರದಾಯಗಳನ್ನು ಅನುಸರಿಸುತ್ತಾ ಬಂದಿದೆ. ಈ ಸಂಪ್ರದಾಯಗಳು ಮತ್ತು ರೀತಿನೀತಿಗಳ ಮೂಲ ಆ್ಯಂಗ್ಲೊ ಸ್ಯಾಕ್ಸನ್ ನ್ಯಾಯವ್ಯವಸ್ಥೆ ಮತ್ತು ಆಚರಣೆಗಳಲ್ಲಿವೆ.

ಈ ಅನುಮೋದಿತ ನಿಯಮಗಳ ಪೈಕಿ ಒಂದು, ಮುಖ್ಯ ನ್ಯಾಯಾಧೀಶರು ‘ಮಾಸ್ಟರ್ ಆಫ್ ದ ರೋಸ್ಟರ್’ (ನ್ಯಾಯಾಧೀಶರಿಗೆ ಮೊಕದ್ದಮೆಗಳ ಹಂಚಿಕೆಯ ಹೊಣೆ ಹೊರುವುದು) ಆಗಿರುವುದು. ಇದರ ಪ್ರಕಾರ, ಮೊಕದ್ದಮೆಗಳನ್ನು ನ್ಯಾಯಪೀಠಗಳಿಗೆ ಹಂಚಿಕೆ ಮಾಡುವ ಅಧಿಕಾರ ಅವರಿಗಿರುತ್ತದೆ. ಒಂದಕ್ಕಿಂತ ಹೆಚ್ಚಿನ ನ್ಯಾಯ ಕಲಾಪಗಳಲ್ಲಿ, ಕಲಾಪಗಳು ಸುಗಮವಾಗಿ ಹಾಗೂ ಕ್ರಮಬದ್ಧವಾಗಿ ನಡೆಯಲು ಸಾಧ್ಯವಾಗುವಂತೆ, ಈ ನ್ಯಾಯಾಲಯದ ಯಾವ ಸದಸ್ಯ/ಪೀಠ (ಯಾವುದು ಅನ್ವಯವಾಗುತ್ತದೋ ಅದು) ಯಾವ ಪ್ರಕರಣ ಅಥವಾ ಪ್ರಕರಣಗಳನ್ನು ಕೈಗೆತ್ತಿಕೊಳ್ಳಬೇಕು ಎನ್ನವುದನ್ನು ಇತ್ಯರ್ಥಪಡಿಸಲು ಈ ವ್ಯವಸ್ಥೆ ಅವಶ್ಯಕವಾಗಿದೆ.

ರೋಸ್ಟರ್ (ಯಾವ ಮೊಕದ್ದಮೆಗಳನ್ನು ಯಾರಿಗೆ ವಹಿಸಬೇಕು ಎನ್ನುವುದರ ಪಟ್ಟಿ) ಸಿದ್ಧಪಡಿಸಿ ನ್ಯಾಯಾಲಯದ ವಿವಿಧ ಸದಸ್ಯರು/ಪೀಠಗಳಿಗೆ ಮೊಕದ್ದಮೆಗಳನ್ನು ಹಂಚಿಕೆ ಮಾಡುವ ಹಕ್ಕು ಸಾಂಪ್ರದಾಯಿಕವಾಗಿ ಮುಖ್ಯ ನ್ಯಾಯಾಧೀಶರಿಗೆ ಬಂದಿರುವುದು ನ್ಯಾಯಾಲಯದ ಕಲಾಪಗಳು ಶಿಸ್ತುಬದ್ಧವಾಗಿ ಮತ್ತು ದಕ್ಷತೆಯಿಂದ ನಡೆಯಬೇಕು ಎನ್ನುವ ಉದ್ದೇಶದಿಂದಲೇ ಹೊರತು, ಮುಖ್ಯ ನ್ಯಾಯಾಧೀಶರು ತನ್ನ ಸಹೋದ್ಯೋಗಿಗಳಿಗಿಂತ ಹೆಚ್ಚಿನ ಅಧಿಕಾರವನ್ನು ಹೊಂದಿದ್ದಾರೆ ಎನ್ನುವುದರಿಂದಲ್ಲ.

ಮುಖ್ಯ ನ್ಯಾಯಾಧೀಶರು ಸಮಾನ (ನ್ಯಾಯಾಧೀಶರ)ರ ನಡುವೆ ಮೊದಲಿಗರು- ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ ಎನ್ನುವುದು ಈ ದೇಶದ ನ್ಯಾಯ ವ್ಯವಸ್ಥೆಯಲ್ಲಿ ಬೆರೆತುಹೋಗಿದೆ. ರೋಸ್ಟರ್ ನಿರ್ಧಾರದಲ್ಲಿ ಮುಖ್ಯ ನ್ಯಾಯಾಧೀಶರಿಗೆ ಮಾರ್ಗದರ್ಶನ ನೀಡುವ ಸ್ಥಾಪಿತ ಹಾಗೂ ಸಾಬೀತಾಗಿರುವ ನಿದರ್ಶನಗಳಿವೆ. ಈ ನಿದರ್ಶನಗಳು ನಿರ್ದಿಷ್ಟ ಪ್ರಕರಣವನ್ನು ನಿಭಾಯಿಸಲು ಅಗತ್ಯವಾದ ಪೀಠದ ಸದಸ್ಯರ ಸಂಖ್ಯೆಗೆ ಸಂಬಂಧಿಸಿದ್ದಾಗಿರಬಹುದು ಅಥವಾ ಪೀಠದಲ್ಲಿ ಯಾರು ಇರಬೇಕು ಎನ್ನುವುದಕ್ಕೆ ಸಂಬಂಧಿಸಿದ್ದಾಗಿರಬಹುದು.

ಮೇಲೆ ಪ್ರಸ್ತಾಪಿಸಲಾದ ಸಂಪ್ರದಾಯದ ಒಂದು ಪ್ರಮುಖ ಲಕ್ಷಣವೆಂದರೆ, ಈ ನ್ಯಾಯಾಲಯ ಸೇರಿದಂತೆ ಯಾವುದೇ ಬಹು ಸಂಖ್ಯೆಯ ಸದಸ್ಯರಿರುವ ನ್ಯಾಯಾಂಗ ವ್ಯವಸ್ಥೆಯು, ಸೂಕ್ತ ಪೀಠಗಳಿಂದ ವಿಚಾರಣೆಗೊಳಪಡಬೇಕಾದ ಮೊಕದ್ದಮೆಗಳನ್ನು ನಿಭಾಯಿಸುವ ಅಧಿಕಾರವನ್ನು ತಮ್ಮ ಮೇಲೆ ಹೇರಿಕೊಳ್ಳುವುದಿಲ್ಲ.

ಮೇಲೆ ಪ್ರಸ್ತಾಪಿಸಲಾದ ಈ ಎರಡು ನಿಯಮಗಳಿಂದ ವಿಮುಖರಾದರೆ, ಅನಪೇಕ್ಷಿತ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ ಹಾಗೂ ಸಂಸ್ಥೆಯ ಪ್ರಾಮಾಣಿಕತೆಯ ಬಗ್ಗೆ ಸಂಶಯಗಳು ಹುಟ್ಟುತ್ತವೆ. ಅದೇ ವೇಳೆ, ಇದರಿಂದ ಹುಟ್ಟಿಕೊಳ್ಳುವ ಅರಾಜಕತೆಯ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು.

ಇತ್ತೀಚಿನ ದಿನಗಳಲ್ಲಿ, ಮೇಲೆ ಹೇಳಲಾದ ಈ ಅವಳಿ ನಿಯಮಗಳನ್ನು ಅನುಸರಿಸಲಾಗುತ್ತಿಲ್ಲ ಎಂದು ಹೇಳಲು ನಾವು ವಿಷಾದಿಸುತ್ತೇವೆ. ದೇಶ ಮತ್ತು ಸಂಸ್ಥೆ (ಸುಪ್ರೀಂ ಕೋರ್ಟ್)ಯ ಮೇಲೆ ದೂರಗಾಮಿ ಪರಿಣಾಮಗಳನ್ನು ಹೊಂದಿರುವ ಪ್ರಕರಣಗಳನ್ನು ಮುಖ್ಯ ನ್ಯಾಯಾಧೀಶರು ಯಾವುದೇ ತಾರ್ಕಿಕ ಆಧಾರವಿಲ್ಲದೆ ‘ತಮ್ಮ ಆದ್ಯತೆಯ’ ಪೀಠಗಳಿಗೆ ನೀಡಿರುವುದನ್ನು ನಾವು ನೋಡಿದ್ದೇವೆ. ಯಾವುದೇ ಬೆಲೆ ತೆತ್ತಾದರೂ ಇದರ ವಿರುದ್ಧ ನಾವು ಎಚ್ಚರಿಕೆಯಿಂದಿರಬೇಕಾಗಿದೆ.

   ಸಂಸ್ಥೆಗೆ (ನ್ಯಾಯಾಲಯಕ್ಕೆ) ಮುಜುಗರ ಉಂಟು ಮಾಡುವುದನ್ನು ತಡೆಯುವ ಒಂದೇ ಉದ್ದೇಶದಿಂದ ನಾವು ಈ ಕುರಿತ ವಿವರಗಳನ್ನು ನೀಡುತ್ತಿಲ್ಲ. ಆದರೆ, ಇಂಥ ಪ್ರವೃತ್ತಿಯಿಂದ ಸಂಸ್ಥೆಗೆ ಈಗಾಗಲೇ ಸಾಕಷ್ಟು ಹಾನಿಯಾಗಿದೆ ಎಂಬುದನ್ನು ತಾವು ಗಮನಿಸಬೇಕು.

ಈ ಕಳವಳಕ್ಕೆ ಪೂರಕವಾಗಿ, ಮಹತ್ವದ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ‘ಮೆಮರಾಂಡಮ್ ಆಫ್ ಪ್ರೊಸೀಜರ್’ನ್ನು ಇನ್ನೂ ಹೆಚ್ಚಿನ ವಿಳಂಬವಿಳ್ಳದೆ ಅಂತಿಮಗೊಳಿಸಬೇಕೆಂದು ತಮ್ಮನ್ನು ಒತ್ತಾಯಿಸುತ್ತೇವೆ. ಇದಕ್ಕೆ ಪೂರಕವಾಗಿ, ‘ಆರ್.ಪಿ. ಲೂತ್ರ ವರ್ಸಸ್ ಭಾರತ ಸರಕಾರ’ ಪ್ರಕರಣಕ್ಕೆ ಸಂಬಂಧಿಸಿ 2017 ಅಕ್ಟೋಬರ್ 27ರಂದು ಹೊರಬಿದ್ದ ಆದೇಶವನ್ನು ನಾವು ತಮ್ಮ ಗಮನಕ್ಕೆ ತರುತ್ತೇವೆ.

‘ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಶನ್ ಆ್ಯಂಡ್ ಎಎನ್‌ಆರ್ ವರ್ಸಸ್ ಭಾರತ ಸರಕಾರ’ ((2016)5ಎಸ್‌ಸಿಸಿ1) ಪ್ರಕರಣದಲ್ಲಿ, ಈ ನ್ಯಾಯಾಲಯದ ಸಾಂವಿಧಾನಿಕ ಪೀಠದ ತೀರ್ಪಿನ ಆಧಾರದಲ್ಲಿ ‘ಮೆಮರಾಂಡಮ್ ಆಫ್ ಪ್ರೊಸೀಜರ್’ ನಿರ್ಧಾರವಾಗಬೇಕಾಗಿತ್ತು. ಆದರೆ, ಈ ವಿಷಯವನ್ನು ಬೇರೆ ಯಾವುದೇ ಪೀಠವು ಹೇಗೆ ನಿಭಾಯಿಸಲು ಸಾಧ್ಯ ಎನ್ನುವುದನ್ನು ಅರ್ಥಮಾಡಿಕೊಳ್ಳಲು ನಮಗೆ ಕಷ್ಟವಾಗಿದೆ.

ಮೇಲಿನದನ್ನು ಬಿಟ್ಟುಬಿಡೋಣ. ಸಾಂವಿಧಾನಿಕ ಪೀಠದ ತೀರ್ಪಿನ ಬಳಿಕ ಐವರು ನ್ಯಾಯಾಧೀಶರ ಕೊಲೀಜಿಯಂ (ನಿಮ್ಮನ್ನೂ ಒಳಗೊಂಡು) ಈ ವಿಷಯದ ಬಗ್ಗೆ ವಿವರವಾದ ಚರ್ಚೆ ನಡೆಸಿತು. 2017ರ ಮಾರ್ಚ್‌ನಲ್ಲಿ ಅಂದಿನ ಗೌರವಾನ್ವಿತ ಮುಖ್ಯ ನ್ಯಾಯಾಧೀಶರು ಮೆಮರಾಂಡಮ್ ಆಫ್ ಪ್ರೊಸೀಜರ್‌ನ್ನು ಅಂತಿಮಗೊಳಿಸಿ ಭಾರತ ಸರಕಾರಕ್ಕೆ ಕಳುಹಿಸಿಕೊಟ್ಟರು. ಭಾರತ ಸರಕಾರ ಇದಕ್ಕೆ ಪ್ರತಿಕ್ರಿಯಿಸಿಲ್ಲ. ಸರಕಾರದ ಈ ವೌನದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್-ಅಸೋಸಿಯೇಶನ್ (ಎಸ್‌ಯುಪಿಆರ್‌ಎ) ಪ್ರಕರಣದಲ್ಲಿ ಈ ನ್ಯಾಯಾಲಯ ನೀಡಿದ ತೀರ್ಪಿನಂತೆ, ಕೊಲೀಜಿಯಂ ಅಂತಿಮಗೊಳಿಸಿದ ಮೆಮರಾಂಡಮ್ ಆಫ್ ಪ್ರೊಸೀಜರ್‌ನ್ನು ಭಾರತ ಸರಕಾರ ಸ್ವೀಕರಿಸಿದೆ ಎಂಬುದಾಗಿ ಪರಿಗಣಿಸಬೇಕು. ಹಾಗಾಗಿ, ಮೆಮರಾಂಡಮ್ ಆಫ್ ಪ್ರೊಸೀಜರ್‌ನ ಅಂತಿಮ ರೂಪಕ್ಕೆ ಸಂಬಂಧಿಸಿ ಯಾವುದೇ ನಿಲುವು ತೆಗೆದುಕೊಳ್ಳಲು ಪೀಠಕ್ಕೆ ಅಧಿಕಾರವಿಲ್ಲ ಅಥವಾ ಈ ವಿಷಯ ಅನಿರ್ದಿಷ್ಟಾವಧಿಗೆ ಅತಂತ್ರವಾಗಿರಲೂ ಸಾಧ್ಯವಿಲ್ಲ.

 2017 ಜುಲೈ 4ರಂದು, ಈ ನ್ಯಾಯಾಲಯದ 7 ನ್ಯಾಯಾಧೀಶರ ಪೀಠವೊಂದು ಗೌರವಾನ್ವಿತ ಶ್ರೀ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ (2017) ಪ್ರಕರಣದಲ್ಲಿ ತೀರ್ಪು ನೀಡಿತು. ಆ ತೀರ್ಪಿನಲ್ಲಿ, ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯನ್ನು ಮರುಪರಿಶೀಲಿಸುವ ಹಾಗೂ ವಾಗ್ದಂಡನೆಗೆ ಹೊರತಾಗಿ ಸುಧಾರಣಾ ಕ್ರಮಗಳ ವ್ಯವಸ್ಥೆಯೊಂದನ್ನು ಸ್ಥಾಪಿಸುವ ಅಗತ್ಯವನ್ನು ನಮ್ಮ ಪೈಕಿ ಇಬ್ಬರು ಪ್ರತಿಪಾದಿಸಿದರು. ಮೆಮರಾಂಡಮ್ ಆಫ್ ಪ್ರೊಸೀಜರ್‌ಗೆ ಸಂಬಂಧಿಸಿದಂತೆ ಏಳು ನ್ಯಾಯಾಧೀಶರ ಪೈಕಿ ಯಾರೊಬ್ಬರೂ ಏನೂ ಮಾತನಾಡಲಿಲ್ಲ.

 ಮೆಮರಾಂಡಮ್ ಆಫ್ ಪ್ರೊಸೀಜರ್‌ಗೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಸಮ್ಮೇಳನದಲ್ಲಿ ಹಾಗೂ ಪೂರ್ಣ ನ್ಯಾಯಾಲಯದಲ್ಲಿ ಚರ್ಚೆಯಾಗಬೇಕು. ಇಂಥ ಗಂಭೀರ ಮಹತ್ವದ ವಿಷಯವು ನ್ಯಾಯಾಂಗ ಪರಿಶೀಲನೆಗೆ ಒಳಪಡಬೇಕಾದ ಅಗತ್ಯವಿದ್ದಲ್ಲಿ, ಅದನ್ನು ಸಾಂವಿಧಾನಿಕ ಪೀಠವಲ್ಲದೆ ಬೇರೆ ಯಾವುದೇ ಪೀಠ ನಿಭಾಯಿಸಬಾರದು.

ಮೇಲಿನ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಪರಿಸ್ಥಿತಿಯನ್ನು ಸುಧಾರಿಸುವುದು ಹಾಗೂ ಸೂಕ್ತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದು ಗೌರವಾನ್ವಿತ ಭಾರತದ ಮುಖ್ಯ ನ್ಯಾಯಾಧೀಶರ ಕರ್ತವ್ಯವಾಗಿದೆ. ಇದಕ್ಕಾಗಿ ಅವರು ಕೊಲೀಜಿಯಂನ ಇತರ ಸದಸ್ಯರ ಜೊತೆ ಹಾಗೂ ಅಗತ್ಯ ಬಿದ್ದರೆ ನಂತರದ ಹಂತದಲ್ಲಿ ಈ ನ್ಯಾಯಾಲಯದ ಇತರ ಗೌರವಾನ್ವಿತ ನ್ಯಾಯಾಧೀಶರ ಜೊತೆ ಪೂರ್ಣ ಪ್ರಮಾಣದ ಮಾತುಕತೆಗಳನ್ನು ನಡೆಸಬೇಕು.

 ಮೇಲೆ ಪ್ರಸ್ತಾಪಿಸಿದ ‘ಆರ್.ಪಿ. ಲೂತ್ರ ವರ್ಸಸ್ ಭಾರತ ಸರಕಾರ’ ಪ್ರಕರಣದಲ್ಲಿ 2017 ಅಕ್ಟೋಬರ್ 27ರಂದು ಹೊರಬಿದ್ದ ಆದೇಶದಿಂದ ಉದ್ಭವಿಸಿದ ವಿವಾದವನ್ನು ತಾವು ಸಂಪೂರ್ಣವಾಗಿ ಬಗೆಹರಿಸಿದರೆ ಹಾಗೂ ಅತ್ಯಂತ ಅಗತ್ಯವಾದರೆ, ಈ ನ್ಯಾಯಾಲಯ ನೀಡಿರುವ ಹಾಗೂ ಮೇಲಿನದೇ ರೀತಿಯಲ್ಲಿ ನಿಭಾಯಿಸಬೇಕಾಗಿರುವ ಇತರ ನಿರ್ದಿಷ್ಟ ಆದೇಶಗಳನ್ನು ತಮ್ಮ ಗಮನಕ್ಕೆ ತರುತ್ತೇವೆ.

ವಂದನೆಗಳೊಂದಿಗೆ,

ಜೆ. ಚೆಲ್ಲಮೇಶ್ವರ್

ರಂಜನ್ ಗೊಗೊಯ್

ಮದನ್ ಬಿ. ಲೋಕುರ್

ಕುರಿಯನ್ ಜೋಸೆಫ್

Dear Chief Justice,

It is with great anguish and concern that we have thought it proper to address this letter to you so as to highlight certain judicial orders passed by this Court which has adversely affected the overall functioning of the justice delivery system and the independence of the High Courts besides impacting the administrative functioning of the Office of the Hon’ble the Chief Justice of India.

From the date of establishment of the three chartered High Courts of Calcutta, Bombay and Madras, certain traditions and conventions in the judicial administration have been well established. The traditions were embraced by this Court which came into existence almost a century after the above mentioned chartered High Courts. These traditions have their roots in the anglo saxon jurisprudence and practice.

Once of the well settled principles is that the Chief Justice is the master of the roster with a privilege to determine the roster, necessity in multi numbered courts for an orderly transaction of business and appropriate arrangements with respect to matters with which member/bench of this Court (as the case may be) is required to deal with which case or class of cases is to be made. The convention of recognizing the privilege of the Chief Justice to form the roster and assign cases to different members/benches of the court is a convention designed for a disciplined and efficient transaction of business of the Court but not a recognition of any superior authority, legal or factual, of the Chief Justice over his colleagues. It is too well settled in the jurisprudence of this country that the Chief Justice is only the first amongst equals — nothing more or nothing less. In the matter of the determination of the roster there are well-settled and time-honoured conventions guiding the Chief Justice, be the conventions dealing with the strength of the bench which is required to deal with a particular case or the composition thereof.

A necessary corollary to the above mentioned principle is that the members of any multi numbered judicial body including this Court would not arrogate to themselves the authority to deal with and pronounce upon matters which ought to be heard by appropriate benches, both composition wise and strength wise with due regard to the roster fixed.

Any departure from the above two rules would not only lead to unpleasant and undesirable consequences of creating doubt in the body politic about the integrity of the institution. Not to talk about the chaos that would result from such departure.

We are sorry to say that off late the twin rules mentioned above have not been adhered to. There have been instances where case having far reaching consequences for the Nation and the institution had been assigned by the Chief Justices of the Court selectively to the benches “of their preference” without any rationale basis for such assignment. This must be guarded against at all costs.

We are not mentioning details only to avoid embarrassing the institution but note that such departures have already damaged the image of this institution to some extent.

In the above context, we deem it proper to address you presently with regard to the Order dated 27th October, 2017 in R.P. Luthra vs. Union of India to the effect that there should be no further delay in finalizing the Memorandum of Procedure in the larger public interest. When the Memorandum of Procedure was the subject matter of a decision of a Constitution Bench of this Court in Supreme Court Advocates-on-Record Association and Anr. vs. Union of India [ (2016) 5 SCC 1] it is difficult to understand as to how any other Bench could have dealt with the matter.

The above apart, subsequent to the decision of the Constitution Bench, detailed discussions were held by the Collegium of five judges (including yourself) and the Memorandum of Procedure was finalized and sent by the then Hon’ble the Chief Justice of India to the government of India in March 2017. The Government of India has not responded to the communication and in view of this silence, it must be taken that the Memorandum of Procedure as finalized by the Collegium has been accepted by the Government of India on the basis of the order of this Court in Supreme Court Advocates-on-Record-Association (Supra). There was, therefore, no occasion for the Bench to make any observation with regard to the finalization of the Memorandum of Procedure or that that issue cannot linger on for an indefinite period.

On 4th July, 2017, a Bench of seven Judges of this Court decided In Re, Hon’ble Shri Justice C.S. Karnan (2017) 1SCC 1]. In that decision (refer to in R.P. Luthra), two of us observed that there is a need to revisit the process of appointment of judges and to set up a mechanism for corrective measures other than impeachment. No observation was made by any of the seven learned judges with regard to the Memorandum of Procedure.

Any issue with regard to the Memorandum of Procedure should be discussed in the Chief Justices’ Conference and by the Full Court. Such a matter of grave importance, if at all required to be taken on the judicial side, should be dealt with by none other than a Constitution Bench.

The above development must be viewed with serious concern. The Hon’ble Chief Justice of India is duty bound to rectify the situation and take appropriate remedial measures after a full discussion with the other members of the Collegium and at a later state, if required, with other Hon’ble Judges of this Court.

Once the issue arising from the order dated 27th October, 2017 in R.P. Luthra vs. Union of India, mentioned above, is adequately addressed by you and if it becomes so necessary, we will apprise you specifically of the other judicial orders passed by this Court which would require to be similarly dealt with.

With kind regards

J. Chellameshwar

Ranjan Gogoi

Madan B. Lokur

Kurian Joseph

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top