ನಾಪೊಕ್ಲು ಕೊಟ್ಟಮುಡಿ ನಿರಾಶ್ರಿತ ಶಿಬಿರದಲ್ಲಿರುವ ಸಂತ್ರಸ್ತರ ಗೋಳು ಕೇಳೋರಿಲ್ಲ

ಚುನಾವಣಾ ಸಮಯದಲ್ಲಿ ಓಡಿ ಬರುವ ರಾಜಕಾರಣಿಗಳಿಗೆ ಈಗ ನಮ್ಮ ನೆನಪಿಲ್ಲ!

#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ

ಮಡಿಕೇರಿ, ಆ.28: ಚುನಾವಣಾ ಸಮಯದಲ್ಲಿ ಬೆಟ್ಟಗುಡ್ಡ ಹತ್ತಿ ನಮ್ಮ ಬಳಿಗೆ ಮತ ಕೇಳಲು ಬರುವ ರಾಜಕಾರಣಿಗಳಿಗೆ ಈಗ ನಮ್ಮ ನೆನಪಿಲ್ಲ. ಪ್ರಕೃತಿ ವಿಕೋಪಕ್ಕೆ ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ನಮ್ಮನ್ನು ಯಾವುದೇ ಜನಪ್ರತಿನಿಧಿಗಳಾಗಲಿ, ಉನ್ನತ ಅಧಿಕಾರಿಗಳಾಗಲಿ ಭೇಟಿ ಮಾಡಿ ಧೈರ್ಯ ತುಂಬಿಲ್ಲ. ನಮ್ಮ ಗೋಳನ್ನು ಕೇಳುವವರಿಲ್ಲ ಎಂದು ತಾಲೂಕಿನ ನಾಪೊಕ್ಲು ಗ್ರಾಮದ ಮದ್ರಸವೊಂದರಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರು ಅಳಲು ತೋಡಿಕೊಂಡಿದ್ದಾರೆ.

ಮಡಿಕೇರಿ ತಾಲೂಕಿನ ಎರಡನೇ ಮೊಣ್ಣಂಗೇರಿ ಗ್ರಾಮದ ಮದೆ ಎಂಬ ಊರು ತೀವ್ರ ಪ್ರಕೃತಿ ವಿಕೋಪಕ್ಕೆ ತುತ್ತಾಗಿದೆ. ತಮ್ಮ ಮನೆ, ಜಮೀನನ್ನು ಕಳೆದುಕೊಂಡ ಇಲ್ಲಿನ 22 ಕುಟುಂಬಗಳ 83 ಮಂದಿ ನಾಪೊಕ್ಲು ಹೊದವಾಡ ಗ್ರಾಮದ ಕೊಟ್ಟಂಮುಡಿ ಹಳೆ ಜುಮಾ ಮಸೀದಿಯ ಆಧೀನದ ದಾರುಲ್ ಉಲೂಂ ಸುನ್ನೀ ಮದ್ರಸದಲ್ಲಿ ತೆರೆದಿರುವ ನಿರಾಶ್ರಿತ ಶಿಬಿರದಲ್ಲಿ ವಾಸವಿದ್ದಾರೆ. ಈ ಕೇಂದ್ರಕ್ಕೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರು, ಅಧ್ಯಕ್ಷರು, ಸ್ಥಳೀಯ ಶಾಸಕ, ಸಂಸದರ ಸಹಿತ ಜಿಲ್ಲೆಯಲ್ಲಿರುವ ಯಾವುದೇ ಜನಪ್ರತಿನಿಧಿಗಳು, ರಾಜಕಾರಣಿಗಳು ಇದುವರೆಗೂ ಭೇಟಿ ನೀಡಿಲ್ಲ ಎಂದು ನಿರಾಶ್ರಿತರು ಆರೋಪಿಸಿದ್ದಾರೆ.

''ಹನ್ನೊಂದು ದಿನಗಳಿಂದ ಈ ನಿರಾಶ್ರಿತ ಶಿಬಿರದಲ್ಲಿ ಇದ್ದೇವೆ. ಸ್ಥಳೀಯ ಜಮಾಅತ್ ಕಮಿಟಿ ಹಾಗೂ ಈ ಊರಿನ ಎಲ್ಲರೂ ನಮಗೆ ಸಹಕಾರ ನೀಡಿದ್ದಾರೆ. ಮದ್ರಸದಲ್ಲಿ ನಡೆಯುತ್ತಿದ್ದ ತರಗತಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಿ ನಮಗೆ ವಸತಿ ಕಲ್ಪಿಸಿದ್ದಾರೆ. ನಮಗೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿದ್ದಾರೆ. ಜೊತೆಗೆ ವಿವಿಧೆಡೆಯಿಂದ ನೆರವು ಸಾಮಗ್ರಿಗಳು ದೊರೆತಿವೆ. ಜಿಲ್ಲಾಡಳಿತವು ಆರೋಗ್ಯ ಸೇವೆ ಹಾಗೂ ಪೊಲೀಸ್ ಭದ್ರತೆಯನ್ನು ಒದಗಿಸಿದೆ. ಆದರೆ ಬೇಸರದ ಸಂಗತಿಯೆಂದರೆ ತಾಲೂಕು ಪಂಚಾಯತ್ ಅಥವಾ ಜಿಲ್ಲಾ ಪಂಚಾಯತ್‌ನ ಸದಸ್ಯರು ಅಥವಾ ಜನಪ್ರತಿನಿಧಿಗಳು ನಮ್ಮನ್ನು ಬೇಟಿ ಮಾಡಿ ಕಷ್ಟಸುಖ ವಿಚಾರಿಸಲು ಮುಂದಾಗಿಲ್ಲ ಎಂಬುದು. ಚುನಾವಣೆ ಬರುವಾಗ ಮಾತ್ರ ನಮ್ಮನ್ನು ನೆನಪಾಗುವ ರಾಜಕಾರಣಿಗಳಿಗೆ ಈಗ ನಮ್ಮ ನೆನಪಿಲ್ಲ. ನಾವು ಎಲ್ಲಿದ್ದೇವೆ, ನಮಗೆ ಏನಾಗಿದೆ ಎಂಬುದನ್ನು ಅರಿಯುವಷ್ಟು ಸಮಯ ಅವರಿಗೆ ಇನ್ನೂ ಸಿಕ್ಕಿಲ್ಲ. ನಾವು ಮನೆ, ಜಮೀನನ್ನು ಕಳೆದುಕೊಂಡು ನಿರ್ಗತಿಕರಾಗಿದ್ದೇವೆ. ನಮ್ಮ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಿ ಶಾಶ್ವತ ನೆಲೆ ಕಲ್ಪಿಸಬೇಕು ಎಂಬುದೇ ನಮ್ಮ ಬೇಡಿಕೆ ಎಂದು ಶಿಬಿರದಲ್ಲಿರುವ ಸಂತ್ರಸ್ತೆ'' ನೂರುಜಹಾನ್ ಎಂಬವರು ಮನವಿ ಮಾಡಿದ್ದಾರೆ.

ನಾವು ಬೆಟ್ಟಗುಡ್ಡಗಳನ್ನು ನಂಬಿ ಬದುಕುತ್ತಿದ್ದವರು. ಆದರೆ ಇದೀಗ ಬೆಟ್ಟಗುಡ್ಡಗಳು ಪ್ರಕೃತಿ ವಿಕೋಪಕ್ಕೆ ಸಿಲುಕಿದ್ದರಿಂದ ಅಲ್ಲಿದ್ದ ನಮ್ಮ ಮನೆ, ತೋಟಗಳು ಭೂಗರ್ಭ ಸೇರಿವೆ. ಇಸ್ರೋ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿರುವ ಬೆಟ್ಟಗಳು ಬಿರುಕು ಬಿಟ್ಟಿದ್ದು, ಯಾವ ಸಂದರ್ಭದಲ್ಲೂ ಕುಸಿಯಬಹುದು. ಇದು ಇನ್ನು ವಾಸ ಯೋಗ್ಯವಾದ ಪ್ರದೇಶವಲ್ಲ ಎಂದಿದ್ದಾರೆ.ಕೃಷಿಯನ್ನು ಅವಲಂಬಿಸಿರುವ ನಾವೀಗ ಸಂಕಷ್ಟದಲ್ಲಿದ್ದೇವೆ. ಇಲ್ಲಿರುವ ಎಲ್ಲ ಕುಟುಂಬಗಳಿಗೂ ಪರಿಹಾರ ನೀಡುವ ಮೂಲಕ ಶಾಶ್ವತ ಮನೆಗಳನ್ನು ನಿರ್ಮಿಸಿ ಕೊಡಬೇಕು ಎಂದು ನಿರಾಶ್ರಿತ ಶಿಬಿರದಲ್ಲಿರುವ ವಿದ್ಯಾರ್ಥಿ ಎಂ.ಬಿ.ಫಯಾಝ್ ಎಂಬವರು ಸರಕಾರವನ್ನು ಒತ್ತಾಯಿಸಿದ್ದಾರೆ.


ಕೆಲಸ ಬಿಟ್ಟು ಕುವೈತ್‌ನಿಂದ ಬಂದ ಸಲೀಂ

ಕುವೈತ್‌ನಲ್ಲಿ ದುಡಿಯುತ್ತಿದ್ದ ನನಗೆ ಆಗಸ್ಟ್ 17ರಂದು ದೂರವಾಣಿ ಕರೆ ಮಾಡಿದ ಪತ್ನಿ ಪ್ರಕೃತಿ ವಿಕೋಪದ ಭೀಕರತೆಯನ್ನು ವಿವರಿಸಿದಳು. ಅದಾಗಲೇ ನಮ್ಮ ಮನೆ ನೆಲಸಮಗೊಂಡು ಅವರೆಲ್ಲರೂ ಸುರಕ್ಷಿತ ಆಶ್ರಯ ತಾಣವನ್ನು ಹುಡುಕಿಕೊಂಡು ಹೋಗುತ್ತಿದ್ದರು. ನಮ್ಮ ಮನೆಯಲ್ಲಿ ಪತ್ನಿ, ಇಬ್ಬರು ಮಕ್ಕಳು ಮಾತ್ರ ಇದ್ದರು. ಆ ಬಳಿಕ ನನಗೆ ಅಲ್ಲಿ ನಿಲ್ಲಲು ಮನಸ್ಸು ಒಪ್ಪಲಿಲ್ಲ. ನಾನು ಮನವಿ ಮಾಡಿದರೂ ನಮ್ಮ ಕಫೀಲ್ (ಮಾಲಕ) ನನಗೆ ಊರಿಗೆ ಬರಲು ರಜೆಯೂ ನೀಡಿಲ್ಲ. ಆದರೆ ನಾನು ಗೆಳೆಯರ ಸಹಕಾರದಿಂದ ಊರಿಗೆ ಹಿಂದಿರುಗಿದೆ. ಆ.27ರಂದು ವಾಪಸ್ ಬರುವಂತೆ ಕಫೀಲ್ ಸೂಚಿಸಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹೇಗೆ ಹೋಗುವುದು ಎಂದು ಗೊತ್ತಾಗುತ್ತಿಲ್ಲ. ಇದೀಗ ಯಾವುದೇ ಕೆಲಸ ಇಲ್ಲದೆ ನಿರಾಶ್ರಿತ ಶಿಬಿರಲ್ಲಿದ್ದೇವೆ ಎಂದು ಎಂ.ಬಿ.ಸಲೀಂ ಎಂಬವರು ‘ವಾರ್ತಾಭಾರತಿ’ ಜೊತೆ ತನ್ನ ಅಳಲು ತೋಡಿಕೊಂಡರು.


ಮದ್ರಸವನ್ನು ಖಾಲಿ ಮಾಡಿ ಆಶ್ರಯ ನೀಡಿದೆವು

ಭೂಕುಸಿತದಿಂದ ಮನೆಗಳನ್ನು ಕಳೆದುಕೊಂಡು ಇಲ್ಲಿಗೆ ಬಂದ 83 ನಿರಾಶ್ರಿತರಿಗೆ ಮದ್ರಸದಲ್ಲಿ ಆಶ್ರಯ ಕಲ್ಪಿಸಿದ್ದೆವೆ. ಈ ಹಿನ್ನೆಲೆಯಲ್ಲಿ ಮದ್ರಸ ತಗರತಿಗಳನ್ನು ಹೊರಗಿನ ಶೆಡ್‌ಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಈ ನಿರಾಶ್ರಿತರನ್ನು ಜವಾಬ್ದಾರಿ ಸ್ಥಾನದಲ್ಲಿರುವ ಯಾವೊಬ್ಬ ಜನಪ್ರತಿನಿಧಿಯಾಗಲಿ, ರಾಜಕಾರಣಿಗಳಾಗಲಿ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿಲ್ಲ. ಉನ್ನತ ಅಧಿಕಾರಿಗಳೂ ಭೇಟಿ ನೀಡಿ ಧೈರ್ಯ ತುಂಬುವ ಕಾರ್ಯ ಮಾಡಿಲ್ಲ. ಆರಂಭದ ಮೂರು ದಿನಗಳ ಕಾಲ ಇಲ್ಲಿಗೆ ಸರಕಾರದಿಂದ ಯಾವುದೇ ನೆರವು ಬಂದಿರಲಿಲ್ಲ. ಆ ಸಂದರ್ಭ ಊರಿನವರ ಸಹಕಾರದಿಂದ ಇವರಿಗೆ ಆಹಾರ ಒದಗಿಸಲಾಗಿತ್ತು. ಕೊನೆಗೆ ನಾವೇ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿದ ಬಳಿಕ ಅಧಿಕಾರಿಗಳು, ಜಿಲ್ಲಾಡಳಿತವು ನಿರಾಶ್ರಿತರಿಗೆ ಆರೋಗ್ಯ ಸೇವೆ, ಪೊಲೀಸ್ ಭದ್ರತೆ ಒದಗಿಸಿದರು. ಸದ್ಯ ಇಲ್ಲಿ ನಿರಾಶ್ರಿತರಿಗೆ ಎಲ್ಲ ವ್ಯವಸ್ಥೆ ಮಾಡಿಕೊಡಲಾಗಿದೆ. ಆದರೆ ಇವರು ಇನ್ನೆಷ್ಟು ದಿನ ಇಲ್ಲಿ ಇರಲು ಸಾಧ್ಯ? ಜಿಲ್ಲಾಡಳಿತ ಈ ನಿರಾಶ್ರಿತರಿಗೆ ಶಾಶ್ವತ ನೆಲೆ ಕಲ್ಪಿಸಬೇಕು ಎಂದು ಕೊಟ್ಟಂಮುಡಿ ಹಳೆ ಜುಮಾ ಮಸೀದಿಯ ಕಾರ್ಯದರ್ಶಿ, ಜೊತೆ ಕಾರ್ಯದರ್ಶಿ ಹಸನ್ ಮತ್ತು ಮುಹಮ್ಮದ್ ಒತ್ತಾಯಿಸಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top