ಅಸ್ಥಿರಂಧ್ರತೆ: ಲಕ್ಷಣಗಳು ಮತ್ತು ಕಾರಣಗಳು

ಆಸ್ಟಿಯೊಪೊರೊಸಿಸ್ ಅಥವಾ ಅಸ್ಥಿರಂಧ್ರತೆಯು ಮೂಳೆಗಳ ಕಾಯಿಲೆಯಾಗಿದ್ದು, ನಮ್ಮ ಮೂಳೆಗಳ ಸಾಂದ್ರತೆ ಕಡಿಮೆಯಾದಾಗ ಮತ್ತು ಮೂಳೆಗಳನ್ನು ಉತ್ಪಾದಿಸುವ ಶರೀರದ ಸಾಮರ್ಥ್ಯವೂ ಕಡಿಮೆಯಾದಾಗ ಕಾಣಿಸಿಕೊಳ್ಳುತ್ತದೆ.

ಪುರುಷರು ಮತ್ತು ಮಹಿಳೆಯರು ಇಬ್ಬರೂ ಈ ಕಾಯಿಲೆಗೆ ಗುರಿಯಾಗುತ್ತಾರಾದರೂ, ಋತುಬಂಧಗೊಂಡ ಮಹಿಳೆಯರ ಶರೀರದಲ್ಲಿ ಈಸ್ಟ್ರೋಜೆನ್ ಹಾರ್ಮೋನ್ ಕೊರತೆಯಿರುವುದರಿಂದ ಅವರು ಹೆಚ್ಚು ಸುಲಭವಾಗಿ ಈ ಕಾಯಿಲೆಗೀಡಾಗುತ್ತಾರೆ.

ಅಸ್ಥಿರಂಧ್ರತೆಯಿಂದ ಬಳಲುತ್ತಿರುವರಿಗೆ ಸಣ್ಣ ಏಟು ಬಿದ್ದರೂ ಮೂಳೆ ಮುರಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಪೃಷ್ಠ, ಮಣಿಕಟ್ಟು ಮತ್ತು ಬೆನ್ನುಮೂಳೆ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತವೆ.

ಅಸ್ಥಿರಂಧ್ರತೆಯ ಲಕ್ಷಣಗಳು
ಸುಲಭವಾಗಿ ಮುರಿತಕ್ಕೊಳಗಾಗುವ ಪೆಡುಸಾದ ಮೂಳೆಗಳು, ಬೆನ್ನುನೋವಿಗೆ ಕಾರಣವಾಗುವ ಬೆನ್ನುಮೂಳೆ ಮುರಿತ, ವಯಸ್ಸಾಗುತ್ತಿದ್ದಂತೆ ವ್ಯಕ್ತಿ ಕುಬ್ಜನಾಗುವುದು ಮತ್ತು ಬೆನ್ನು ಬಾಗುವುದು ಇವು ಅಸ್ಥಿರಂಧ್ರತೆಯ ಸಾಮಾನ್ಯ ಲಕ್ಷಣಗಳಾಗಿವೆ.

ಕಾರಣಗಳು
ಈಸ್ಟ್ರೋಜೆನ್ ಕೊರತೆ: ಮಹಿಳೆಯರಲ್ಲಿ ಋತುಬಂಧದ ಸಂದರ್ಭದಲ್ಲಿ ಈಸ್ಟ್ರೋಜೆನ್ ಮಟ್ಟ ಇಳಿಯಲಾರಂಭಿಸುತ್ತದೆ. ಈ ಹಾರ್ಮೋನ್‌ನ ಕೊರತೆಯಿಂದಾಗಿ ಮೂಳೆಗಳು ಪೆಡಸಾಗುತ್ತವೆ ಮತ್ತು ದುರ್ಬಲಗೊಳ್ಳುತ್ತವೆ, ಹೀಗಾಗಿ ಅವರು ಅಸ್ಥಿರಂಧ್ರತೆ ಮತ್ತು ಮೂಳೆ ಮುರಿತದ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ.

ಟೆಸ್ಟೋಸ್ಟರೋನ್ ಕೊರತೆ: ಪುರುಷರಿಗೆ ತಮ್ಮ ಮೂಳೆಗಳ ಆರೋಗ್ಯವನ್ನು ಕಾಯ್ದುಕೊಳ್ಳಲು ಟೆಸ್ಟೋಸ್ಟರೋನ್ ಮತ್ತು ಈಸ್ಟ್ರೋಜೆನ್ ಹಾರ್ಮೋನ್‌ಗಳು ಅಗತ್ಯವಾಗಿವೆ. ಈ ಹಾರ್ಮೋನ್‌ಗಳ ಕೊರತೆಯಾದರೆ ಮೂಳೆಗಳ ಸಾಂದ್ರತೆಯು ಕಡಿಮೆಯಾಗುತ್ತದೆ ಮತ್ತು ಪುರುಷರಲ್ಲಿ ಪ್ರಷ್ಠ, ಬೆನ್ನುಮೂಳೆ ಇತ್ಯಾದಿಗಳ ಮುರಿತದ ಅಪಾಯ ಹೆಚ್ಚುತ್ತದೆ.

ಇತರ ಹಾರ್ಮೋನ್‌ಗಳೂ ಕಾರಣವಾಗುತ್ತವೆ: ಪ್ಯಾರಾಥೈರಾಯ್ಡಾ ಮತ್ತು ಬೆಳವಣಿಗೆಯ ಹಾರ್ಮೋನ್‌ಗಳು ಮೂಳೆ ಸಾಂದ್ರತೆಗೆ ಸಂಬಂಧಿಸಿದಂತೆ ತಮ್ಮದೇ ಆದ ಪಾತ್ರವನ್ನು ಹೊಂದಿವೆ. ಪ್ಯಾರಾಥೈರಾಯ್ಡಾ ಹಾರ್ಮೋನ್‌ಗಳು ಶರೀರದಲ್ಲಿ ಅತಿಯಾಗಿ ಸ್ರವಿಸಲ್ಪಟ್ಟಾಗ ಮೂಳೆಗಳು ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಅನ್ನು ರಕ್ತದಲ್ಲಿ ಬಿಡುಗಡೆಗೊಳಿಸುತ್ತವೆ ಮತ್ತು ಇದು ಮೂಳೆಗಳ ಸಾಂದ್ರತೆ ಕಡಿಮೆಯಾಗಲು ಕಾರಣವಾಗುತ್ತದೆ.

ಕ್ಯಾಲ್ಸಿಯಂ ಕೊರತೆ: ಕ್ಯಾಲ್ಸಿಯಂ ಮೂಳೆಗಳ ಆರೋಗ್ಯವನ್ನು ಕಾಯ್ದಕೊಳ್ಳಲು ನಮ್ಮ ಶರೀರಕ್ಕೆ ಅಗತ್ಯವಾಗಿರುವ ಪ್ರಮುಖ ಖನಿಜವಾಗಿದೆ. ಕ್ಯಾಲ್ಸಿಯಂ ಕೊರತೆಯುಂಟಾದಾಗ ಅದನ್ನು ನಮ್ಮ ಶರೀರವು ಮೂಳೆಗಳಿಂದ ಪಡೆದುಕೊಳ್ಳುತ್ತದೆ ಮತ್ತು ಇದು ಮೂಳೆಗಳು ದುರ್ಬಲ ಮತ್ತು ಶಿಥಿಲಗೊಳ್ಳಲು ಕಾರಣವಾಗುತ್ತದೆ.

ವಿಟಾಮಿನ್ ಡಿ ಕೊರತೆ: ಸನ್‌ಶೈನ್ ವಿಟಾಮಿನ್ ಎಂದೂ ಕರೆಯಲಾಗುವ ಡಿ ವಿಟಾಮಿನ್ ನಮ್ಮ ಶರೀರವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ನೆರವಾಗುತ್ತದೆ. ಈ ವಿಟಾಮಿನ್ ಕೊರತೆಯು ಮೂಳೆಗಳು ದುರ್ಬಲಗೊಳ್ಳಲು ಕಾರಣವಾಗುತ್ತದೆ.

ವ್ಯಾಯಾಮದ ಕೊರತೆ: ಮೂಳೆಗಳ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ನಿಯಮಿತವಾಗಿ ವ್ಯಾಯಾಮ ಮಾಡುವುದು ಮುಖ್ಯವಾಗಿದೆ. ಹೆಚ್ಚು ಚಟುವಟಿಕೆಗಳಿಲ್ಲದ ಜೀವನಶೈಲಿಯು ಮೂಳೆಗಳ ಸಾಂದ್ರತೆ ಬಹುಬೇಗ ಕಡಿಮೆಯಾಗಲು ಕಾರಣವಾಗುತ್ತದೆ.

ಧೂಮಪಾನ ಮತ್ತು ಅತಿ ಮದ್ಯಪಾನ

ಧೂಮಪಾನ ಮತ್ತು ಮದ್ಯಪಾನ ವಿವಿಧ ಆರೋಗ್ಯ ಸಮಸ್ಯೆಗಳನ್ನುಂಟು ಮಾಡುವ ಜೊತೆಗೆ ಮೂಳೆಗಳ ಆರೋಗ್ಯದ ಮೇಲೂ ದುಷ್ಪರಿಣಾಮಗಳನ್ನು ಬೀರುತ್ತವೆ ಮತ್ತು ಅಸ್ಥಿರಂಧ್ರತೆಗೆ ಕಾರಣವಾಗುತ್ತವೆ. ಸಿಗರೇಟ್‌ನಲ್ಲಿರುವ ನಿಕೋಟಿನ್ ಮೂಳೆಗಳ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ, ಕ್ಯಾಲ್ಸಿಯಂ,ವಿಟಾಮಿನ್ ಡಿ ಮತ್ತು ಈಸ್ಟ್ರೋಜೆನ್‌ಗಳನ್ನು ಬಳಸಿಕೊಳ್ಳುವ ಶರೀರದ ಸಾಮರ್ಥ್ಯಕ್ಕೆ ತಡೆಯನ್ನುಂಟು ಮಾಡುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಇದೇ ರೀತಿ ಅತಿಯಾದ ಮದ್ಯಪಾನವು ಮೇದೋಜ್ಜೀರಕ ಗ್ರಂಥಿಯ ಕಾರ್ಯನಿರ್ವಹಣೆಯ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಕ್ಯಾಲ್ಸಿಯಂ ಹಾಗೂ ವಿಟಾಮಿನ್ ಡಿ ಅನ್ನು ಹೀರಿಕೊಳ್ಳುವ ನಮ್ಮ ಶರೀರದ ಸಾಮರ್ಥ್ಯವನ್ನು ಕುಂದಿಸುತ್ತದೆ.

ಇತರ ಕಾರಣಗಳು: ಕಾರ್ಟಿಸೋನ್, ಗ್ಲುಕೊಕಾರ್ಟಿಕಾಯ್ಡ್ಸ, ಪ್ರೆಡ್ನಿಸೋನ್, ಹೈಡ್ರೋಕಾರ್ಟಿಸೋನ್‌ನಂತಹ ಕೆಲವು ಔಷಧಿಗಳು ಅಸ್ಥಿರಂಧ್ರತೆಯನ್ನುಂಟು ಮಾಡುವ ಇತರ ಕಾರಣಗಳಲ್ಲಿ ಸೇರಿವೆ. ಅಸ್ತಮಾ, ಕೊಲೈಟಿಸ್ ಅಥವಾ ದೊಡ್ಡಕರುಳಿನ ಉರಿಯೂತ, ರುಮಟಾಯ್ಡಿ ಸಂಧಿವಾತ, ಸೋರಿಯಾಸಿಸ್‌ನಂತಹ ವಿವಿಧ ರೋಗಗಳ ಚಿಕಿತ್ಸೆಯಲ್ಲಿ ಬಳಕೆಯಾಗುವ ಈ ಔಷಧಿಗಳು ಮೂಳೆಗಳಿಗೆ ಹಾನಿಕಾರಕವಾಗಿವೆ. ಸ್ಟಿರಾಯ್ಡಿ ಔಷಧಿಗಳು ಮೂಳೆಗಳನ್ನು ದುರ್ಬಲಗೊಳಿಸಿ ಅಸ್ಥಿರಂಧ್ರತೆಯನ್ನುಂಟು ಮಾಡಬಲ್ಲವು.

ಚಿಕಿತ್ಸೆ
ಅಸ್ಥಿರಂಧ್ರತೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಕ್ಯಾಲ್ಸಿಯಂ ಮತ್ತು ವಿಟಾಮಿನ್ ಡಿ ಸಮೃದ್ಧ ಆಹಾರಗಳ ಸೇವನೆ, ಧೂಮಪಾನ ಮತ್ತು ಮದ್ಯಪಾನ ವರ್ಜನೆ, ನಿಯಮಿತ ವ್ಯಾಯಾಮ ಹಾಗೂ ಸೂಕ್ತ ಔಷಧಿಗಳ ಸೇವನೆ ಇತ್ಯಾದಿಗಳ ಮೂಲಕ ಈ ರೋಗವನ್ನು ನಿಭಾಯಿಸಬಹುದಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top