ವಿಶ್ವದಲ್ಲಿ ಯಾರ ಬಳಿ ಅತ್ಯಂತ ಹೆಚ್ಚು ಅಣ್ವಸ್ತ್ರಗಳಿವೆ ಊಹಿಸಬಲ್ಲಿರಾ?
ಅದು ಅಮೆರಿಕವಂತೂ ಅಲ್ಲ
ಯುದ್ಧರಂಗದಲ್ಲಿ ಅಣ್ವಸ್ತ್ರ ಬಳಕೆಯಾಗಿ ಅರ್ಧ ಶತಮಾನಕ್ಕೂ ಹೆಚ್ಚಿನ ಕಾಲ ಕಳೆದಿದೆ. 1945,ಆಗಸ್ಟ್ನಲ್ಲಿ ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕವು ಜಪಾನಿನ ಹಿರೋಷಿಮಾ ಮತ್ತು ನಾಗಾಸಾಕಿ ನಗರಗಳ ಮೇಲೆ ‘ಲಿಟ್ಲ್ ಬಾಯ್’ ಮತ್ತು ‘ಫ್ಯಾಟ್ ಮ್ಯಾನ್’ ಎಂಬ ಸಂಕೇತ ನಾಮಗಳನ್ನು ಹೊಂದಿದ್ದ ಎರಡು ಅಣುಬಾಂಬ್ಗಳನ್ನು ಸುರಿಸಿತ್ತು. ಇದರ ಪರಿಣಾಮವಾಗಿ 1.20 ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಅದೆಷ್ಟೋ ಜನರು ವಿಕಿರಣಕ್ಕೆ ಗುರಿಯಾಗಿ ಕ್ಯಾನ್ಸರ್ನಂತಹ ಮಾರಕ ರೋಗಗಳಿಂದ ಜೀವಮಾನವಿಡೀ ನರಳಿದ್ದರು. ಅಂದಿನ ವಿಕಿರಣದ ಪ್ರಭಾವ ಇಂದಿಗೂ ತಲೆಮಾರುಗಳಿಂದ ತಲೆಮಾರುಗಳಿಗೆ ಹರಡುತ್ತಲೇ ಇದೆ. ನಂತರದ ಬೂದಿ ಮುಚ್ಚಿದ ಕೆಂಡದಂತಹ ಶಾಂತಸ್ಥಿತಿಯ ವರ್ಷಗಳಲ್ಲಿ ಹಲವಾರು ರಾಷ್ಟ್ರಗಳು ಮತ್ತೆಲ್ಲಾದರೂ ಯುದ್ಧ ಸಂಭವಿಸಿದರೆ ಆತ್ಮರಕ್ಷಣೆಗಿರಲಿ ಎಂದು ಅಣ್ವಸ್ತ್ರಗಳನ್ನು ಪೇರಿಸಿಕೊಳ್ಳುತ್ತಲೇ ಇವೆ.
ಭವಿಷ್ಯದಲ್ಲಿ ಯುದ್ಧಗಳು ಸಂಭವಿಸಿದರೆ ಅಣ್ವಸ್ತ್ರಗಳಲ್ಲಿ ಮೇಲುಗೈ ಹೊಂದಿರುವ ದೇಶಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅವುಗಳನ್ನು ಬಳಸುವ ಅಪಾಯವನ್ನು ತಳ್ಳಿಹಾಕುವಂತಿಲ್ಲ. ಪ್ರತಿ ದೇಶವೂ ತನ್ನ ಆಯುಧಾಗಾರದಲ್ಲಿರುವ ಅಣ್ವಸ್ತ್ರಗಳ ನಿಖರ ಸಂಖ್ಯೆಯನ್ನು ಅತ್ಯಂತ ರಹಸ್ಯವಾಗಿ ಕಾದಿಟ್ಟುಕೊಂಡಿದೆ.
ಸ್ಟಾಕ್ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ, ಆರ್ಮ್ಸ್ ಕಂಟ್ರೋಲ್ ಅಸೋಸಿಯೇಷನ್ ಮತ್ತು ಅಮೆರಿಕನ್ ವಿಜ್ಞಾನಿಗಳ ಒಕ್ಕೂಟ ಸಂಕಲನಗೊಳಿಸಿರುವ ದತ್ತಾಂಶಗಳಂತೆ ಪರಮಾಣುಚಾಲಿತ ಕ್ಷಿಪಣಿಗಳನ್ನು ಹೊಂದಿರುವ ದೇಶಗಳ ಪಟ್ಟಿಯಿಲ್ಲಿದೆ....
ದೇಶ ಒಟ್ಟು ಅಣ್ವಸ್ತ್ರಗಳ ಸಂಖ್ಯೆ ಒಟ್ಟು ಪರಮಾಣು ಪರೀಕ್ಷೆಗಳು ಮೊದಲ ಪರೀಕ್ಷೆ ಇತ್ತೀಚಿನ ಪರೀಕ್ಷೆ
9) ಉ.ಕೊರಿಯಾ 20 6 2006 2017
8) ಇಸ್ರೇಲ್ 80 0 ---- -----
7) ಭಾರತ 140 3 1974 1998
6) ಪಾಕಿಸ್ತಾನ 150 2 1998 1998
5) ಬ್ರಿಟನ್ 215 45 1942 1991
4) ಚೀನಾ 280 45 1964 1996
3) ಫ್ರಾನ್ಸ್ 300 210 1960 1960
2) ಅಮೆರಿಕ 6,450 1,030 1945 1992
1) ರಷ್ಯಾ 6,850 715 1949 1990