ಭಾರತವು ಬಹಿರ್ದೆಸೆ ಮುಕ್ತ ರಾಷ್ಟ್ರವೇ? | Vartha Bharati- ವಾರ್ತಾ ಭಾರತಿ

---

ಇಂದು ವಿಶ್ವ ಶೌಚಾಲಯ ದಿನ

ಭಾರತವು ಬಹಿರ್ದೆಸೆ ಮುಕ್ತ ರಾಷ್ಟ್ರವೇ?

ಐದು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 2, 2014ರಂದು ಪ್ರಾರಂಭಿಸಿದ ‘ಸ್ವಚ್ಛ ಭಾರತ್ ಮಿಷನ್’ ಇಡೀ ಭಾರತವನ್ನು ಒಳಗೊಳ್ಳುವ ಒಂದು ಕಾರ್ಯಕ್ರಮವೆಂದು ಘೋಷಿತವಾಗಿದ್ದರೂ ಇದು ತನ್ನ ನಿಗದಿತ ಗುರಿ ತಲುಪುವಲ್ಲಿ ವಿಫಲವಾಗಿದೆಯೆಂದೇ ಹೇಳಬೇಕು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ರಾಜಕೀಯ ಇಚ್ಛಾಶಕ್ತಿ ಮತ್ತು ಸರಕಾರದ ತಡೆರಹಿತ ಬೆಂಬಲವು ನಿರ್ಣಾಯಕವಾಗಿದ್ದರೂ, ಜನ ಸಮುದಾಯದಲ್ಲಿ ಬದಲಾಯಿಸಲಾಗದ ನಡವಳಿಕೆಯ ಕಾರಣದಿಂದಾಗಿ ಇಂತಹ ಕಾರ್ಯಕ್ರಮಗಳು ಸಾಕಷ್ಟು ಯಶಸ್ಸು ಕಾಣುತ್ತಿಲ್ಲ. ಸ್ವಚ್ಛ ಭಾರತ ಮಿಷನ್ ದತ್ತಾಂಶದ ಪ್ರಕಾರ, ಹೆಚ್ಚಿನ ಗ್ರಾಮಗಳು ತಮ್ಮನ್ನು ಬಹಿರ್ದೆಸೆ ಮುಕ್ತ ಎಂದು ಘೋಷಿಸಿಕೊಂಡಿವೆ ಮತ್ತು ಈ ದತ್ತಾಂಶದಲ್ಲಿರುವ ಮಾಹಿತಿಯ ಸ್ಯಾಸತ್ಯತೆ ಕೂಡಾ ಪ್ರಶ್ನಾರ್ಹವಾಗಿದೆ.

ಉದಾಹರಣೆಗೆ, ಒಡಿಶಾದಲ್ಲಿ, ಕೇವಲ ಶೇ. 51 ಹಳ್ಳಿಗಳು ಮಾತ್ರ ಮೊದಲ ಹಂತದ ಪರಿಶೀಲನೆಗೊಳಪಟ್ಟಿವೆ. ಬಿಹಾರ ತನ್ನ 38,000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಶೇ. 58ರಷ್ಟು ಪ್ರಥಮ ಹಂತದ ಪರಿಶೀಲನೆಯನ್ನು ನಡೆಸಿತ್ತು. ಈ ಮಾಹಿತಿಯನ್ನು ನಂತರ ಸ್ವಚ್ಛ ಭಾರತ್ ಮಿಷನ್ ದತ್ತಾಂಶದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಮತ್ತು ಸಂಬಂಧಪಟ್ಟ ಗ್ರಾಮವನ್ನು ‘ಬಹಿರ್ದೆಸೆ ಮುಕ್ತ ಘೋಷಿತ’ ಎಂದು ಗುರುತಿಸಲಾಗುತ್ತದೆ.

ಬಹಿರ್ದೆಸೆ ಮುಕ್ತ ಘೋಷಣೆಯ ಪರಿಶೀಲನೆಗಾಗಿ, ಮಾರ್ಗಸೂಚಿಗಳು ‘ಕನಿಷ್ಠ’ ಎರಡು ಹಂತದ ಪರಿಶೀಲನೆಗಳನ್ನು ಕೈಗೊಳ್ಳಬೇಕೆಂದು ಸೂಚಿಸುತ್ತವೆ. ಮೊದಲ ಹಂತದ ಪರಿಶೀಲನೆಯ ಘೋಷಣೆಯನ್ನು ಮೂರು ತಿಂಗಳೊಳಗೆ ಮಾಡಬೇಕು ಮತ್ತು ಎರಡನೇ ಹಂತ ಆರು ತಿಂಗಳೊಳಗೆ- ಹಳ್ಳಿಗಳು ಬಹಿರ್ದೆಸೆ ಮುಕ್ತ ಸ್ಥಿತಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು.

 ಮಾರ್ಗಸೂಚಿಗಳು ಸೂಚಿಸಿದಂತೆ ಎರಡನೇ ಹಂತದ ಪರಿಶೀಲನೆಯನ್ನು ನಡೆಸಲಾಗಿಲ್ಲ. 97,000ಕ್ಕೂ ಹೆಚ್ಚು ಗ್ರಾಮಗಳನ್ನು ಹೊಂದಿರುವ ಉತ್ತರ ಪ್ರದೇಶವು ಎರಡನೇ ಬಾರಿಗೆ ಶೇ. 10 ಹಳ್ಳಿಗಳನ್ನು ಮಾತ್ರ ಪರಿಶೀಲಿಸಿದೆ. ಸುಮಾರು 47,000 ಹಳ್ಳಿಗಳು ಇರುವ ಒಡಿಶಾದಲ್ಲಿ, ಒಂದು ಹಳ್ಳಿಯಲ್ಲೂ ಎರಡನೇ ಹಂತದ ಪರಿಶೀಲನೆ ನಡೆದಿಲ್ಲ. ಒಟ್ಟಾರೆಯಾಗಿ, ಯಾವುದೇ ಎರಡನೇ ಹಂತದ ಪರಿಶೀಲನೆ ನಡೆಸದ ಹತ್ತು ರಾಜ್ಯಗಳಿವೆ.

ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ರಾಷ್ಟ್ರೀಯ ವಾರ್ಷಿಕ ಗ್ರಾಮೀಣ ನೈರ್ಮಲ್ಯ ಸಮೀಕ್ಷೆಯನ್ನು (NAARS) ನಡೆಸುತ್ತದೆ. ನವೆಂಬರ್ 2018 ಮತ್ತು ಫೆಬ್ರವರಿ 2019ರ ನಡುವೆ ನಡೆಸಲಾದ ಇತ್ತೀಚಿನ ಸಮೀಕ್ಷೆ ಪ್ರಕಾರ, ಬಹಿರ್ದೆಸೆ ಮುಕ್ತ ಎಂದು ಘೋಷಿಸಲ್ಪಟ್ಟ ಹಳ್ಳಿಗಳಲ್ಲಿನ ಹಲವಾರು ಮನೆಗಳಿಗೆ ಶೌಚಾಲಯಗಳಿಲ್ಲ. ಯುನಿಸೆಫ್ ಪ್ರಕಾರ, ಮಲ ಮಾಲಿನ್ಯ ಮತ್ತು ಕಳಪೆ ನೈರ್ಮಲ್ಯವು ಮಕ್ಕಳ ಮರಣ, ಕಾಯಿಲೆ ಮತ್ತು ಪೌಷ್ಟಿಕಾಂಶ ಕುಂಠಿತಕ್ಕೆ ಪ್ರಮುಖ ಕಾರಣವಾಗಿದೆ. ಮುಕ್ತ ಮಲವಿಸರ್ಜನೆಯು ಮಹಿಳೆಯರು ಮತ್ತು ಹುಡುಗಿಯರನ್ನು ದೈಹಿಕ ದಾಳಿ ಮತ್ತು ಅತ್ಯಾಚಾರದ ಅಪಾಯಕ್ಕೆ ಒಡ್ಡುತ್ತದೆ. ಸಾಕಷ್ಟು ಶೌಚಾಲಯಗಳಲ್ಲಿ ನೀರಿನ ಸೌಲಭ್ಯಗಳು ಲಭ್ಯವಿಲ್ಲ; ಜೊತೆಗೆ ಸರಿಯಾದ ನೈರ್ಮಲ್ಯ ಮತ್ತು ನೈರ್ಮಲ್ಯದ ಬಗ್ಗೆ ಅರಿವಿನ ಕೊರತೆಯು ಕೂಡಾ ಜನರು ಬಹಿರ್ದೆಸೆಯನ್ನು ಆಯ್ದು ಕೊಳ್ಳಲು ಕಾರಣಗಳಾಗಿವೆ.

ಭಾರತದಲ್ಲಿ ಮಲವಿಸರ್ಜನೆಯ ಬಗೆಗಿನ ಅಭ್ಯಾಸವನ್ನು ತೊಡೆದುಹಾಕುವುದು ಮಹತ್ವದ ಸವಾಲಾಗಿದೆ. ಗ್ರಾಮೀಣ ಪ್ರದೇಶದ ಹಲವರು ಮನೆಯೊಳಗೆ ಶೌಚಾಲಯವನ್ನು ಹೊಂದಿರುವುದಕ್ಕಿಂತ ತೆರೆದ ಜಾಗದಲ್ಲಿ ಮಲವಿಸರ್ಜನೆ ಸ್ವಚ್ಛ ಎಂದು ಪರಿಗಣಿಸುತ್ತಾರೆ.

ಶೌಚಾಲಯ ವ್ಯಾಪ್ತಿ ಮತ್ತು ನಡವಳಿಕೆಯ ಬದಲಾವಣೆ ಎರಡನ್ನೂ ವರದಿ ಮಾಡುವ ಒತ್ತಡವನ್ನು ‘ಸ್ವಚ್ಛ ಭಾರತ್ ಮಿಷನ್’ ಎದುರಿಸಿತು. ಆದರೆ ಕೆಲವು ಮಹೋನ್ನತ ಜಿಲ್ಲೆಗಳಲ್ಲಿ, ನಿಜವಾದ ಭೌತಿಕ ಸಾಧನೆಗಳು ಸಾಧ್ಯವೆಂದು ತೋರುತ್ತಿವೆ. ವರದಿಯಾದ ಶೌಚಾಲಯ ವ್ಯಾಪ್ತಿಯು ಗಮನಾರ್ಹವಾಗಿ ಹೆಚ್ಚಾಗಿದೆ.

‘ಸ್ವಚ್ಛ ಭಾರತ್’ ಸಾಧಿಸಲು ಇನ್ನೂ ಹಲವಾರು ಸವಾಲುಗಳನ್ನು ಎದುರಿಸಬೇಕಾಗಿದೆ. ಇನ್ನ್ನು ಶೌಚಾಲಯಗಳ ಕೊರತೆ, ಭಾಗಶಃ ಶೌಚಾಲಯದ ಬಳಕೆಯನ್ನು ನಿವಾರಿಸುವುದು ಮತ್ತು ಇನ್ನೂ ಸಮರ್ಥನೀಯವಾಗಿ ಸುರಕ್ಷಿತವಾಗಿರದ ರೆಟ್ರೊಫಿಟ್ ಶೌಚಾಲಯಗಳನ್ನು ಸೇರಿಸುವುದು ಬೃಹತ್ ಕಾರ್ಯವಾಗಿದೆ. ನೈರ್ಮಲ್ಯ ಮತ್ತು ಸರಿಯಾದ ತ್ಯಾಜ್ಯ ನಿರ್ವಹಣೆಯ ವಿಷಯದಲ್ಲಿ ಹೆಚ್ಚಿನ ಪ್ರಮಾಣದ ತೆರೆದ ಮಲವಿಸರ್ಜನೆ ಹೊಂದಿರುವ ಪ್ರದೇಶಗಳು ಭಾರೀ ಸಮಸ್ಯೆಯನ್ನು ಅನುಭವಿಸುತ್ತಿವೆ ಎಂದು ವಿಶ್ವ ಬ್ಯಾಂಕ್ ಅಂಕಿಅಂಶಗಳು ಸೂಚಿಸಿವೆ.

‘ಸ್ವಚ್ಛ ಭಾರತ್ ಮಿಷನ್’ನಲ್ಲಿ ಶೌಚಾಲಯ ನಿರ್ಮಾಣದ ಕಾರ್ಯಕ್ರಮಕ್ಕಿಂತ ಸಾಂಪ್ರದಾಯಿಕ ಅಭ್ಯಾಸಗಳು ಮತ್ತು ನಡವಳಿಕೆಗಳನ್ನು ಬದಲಾಯಿಸುವ ಪ್ರಯತ್ನ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗಿದೆ. ಜೊತೆಗೆ ನೆಲ ಮತ್ತು ನೀರಿನ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಸಮುದಾಯದ ಆರೋಗ್ಯವನ್ನು ಸುಧಾರಿಸಲು ಹೆಚ್ಚು ಶ್ರಮವಹಿಸಬೇಕಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top