ವಿಕಾಸ ಮತ್ತು ಹಿಂಚಲನೆ | Vartha Bharati- ವಾರ್ತಾ ಭಾರತಿ

ವಿಕಾಸ ಮತ್ತು ಹಿಂಚಲನೆ

ದಲಿತರೇನು ಮಲ ತೆಗೆಯಬೇಕು ಅಂತ ಬಯಸಿಕೊಂಡು ತೆಗೆಯುತ್ತಿಲ್ಲ. ಹಾಗೆಯೇ ನೀಗ್ರೋಗಳು ತಮ್ಮದು ಗುಲಾಮಗಿರಿಯ ಹಾಗೂ ಅನ್ಯಾಯದ ಚರಿತ್ರೆ ಆಗಿರಲಿ ಅಂತ ಬಯಸಿರಲಿಲ್ಲ. ಹಿಂಸೆ ರಾಜಕೀಯ ಪ್ರತಿರೋಧದ ಒಂದು ರೂಪ. (ಸಾಮಾನ್ಯವಾಗಿ ಇಂತಹ ಹಿಂಸೆಯಲ್ಲಿ ಮುಗ್ಧರೇ ಸಾಯುತ್ತಿದ್ದರು.) ಆ ಹಿಂಸೆಯ ಪರಂಪರೆಯನ್ನು ಇಂದು ಮುಸ್ಲಿಮ್ ಭಯೋತ್ಪಾದಕತೆ ಮುಂದುವರಿಸಿಕೊಂಡು ಹೋಗುತ್ತಿದೆ. ಹಲವು ಬಂಗಾಲಿಗಳು ಮತ್ತು ಮಹಾರಾಷ್ಟ್ರದ (ಹಿಂದುತ್ವದ ಪ್ರಬಲ ಪ್ರತಿಪಾದಕ ವಿನಾಯಕ ದಾಮೋದರ್ ಸಾವರ್ಕರ್ ಸೇರಿದಂತೆ) ಹಿಂದೂಗಳು ಇದನ್ನು ಬ್ರಿಟಿಷರ ವಿರುದ್ಧ ಬಳಸಿದ್ದರು. ಯಹೂದಿ ನಾಗರಿಕ ಹೋರಾಟಗಾರರು ಬ್ರಿಟಿಷರ ವಿರುದ್ಧ ಬಳಸಿದ್ದರು. ಆಗ ಅದು ಫೆಲೆಸ್ತೀನ್ ಆಗಿತ್ತು. ಐರಿಷ್ ಕೆಥೊಲಿಕರು ಇತ್ತೀಚಿನ ಕೆಲವು ವರ್ಷಗಳವರೆಗೆ ತಮ್ಮ ಇಂಗ್ಲಿಷ್ ಧಣಿಗಳ ವಿರುದ್ಧ ಬಳಸಿದ್ದರು. ಈಗ ಆ ಚರಿತ್ರೆ ಹೆಚ್ಚು ಕಡಿಮೆ ಮರೆತೇಹೋಗಿದೆ. 2001ರ ನಂತರ ಕೇವಲ ಮುಸ್ಲಿಮರು ಮಾತ್ರ ಭಯೋತ್ಪಾದಕರು ಎಂದಾಗಿಬಿಟ್ಟಿದೆ.

ಕೋತಿ ಮನುಷ್ಯನಾಗುವುದನ್ನು ನಾವ್ಯಾರೂ ನೋಡಿಲ್ಲ. ಆದರೆ ಮನುಷ್ಯರು ಮಂಗಗಳಾಗುವುದನ್ನು ಆಗೀಗ ನೋಡುತ್ತಿರುತ್ತೇವೆ. ತಾನು ಕಂಡೇ ಇಲ್ಲದ್ದನ್ನು, ಯಾರೂ ಯಾವತ್ತೂ ಕಾಣದ್ದನ್ನು ಕಲ್ಪಿಸಿಕೊಳ್ಳುವ ವಿಶಿಷ್ಟ ಸಾಮರ್ಥ್ಯ ಮನುಷ್ಯನಿಗೆ ಮಾತ್ರ ಸಾಧ್ಯ. ಚಿಂಪಾಂಜಿಗಳಿಗೆ ಕೆಲವು ಗುರುತುಗಳನ್ನು ಗ್ರಹಿಸಿಕೊಳ್ಳಲಿಕ್ಕೆ ಸಾಧ್ಯವಾಗಬಹುದು, ಕೆಲವು ಪದಗಳನ್ನೂ ಕಲಿಯಬಹುದು. ಆದರೆ ಯಾವುದೇ ಚಿಂಪಾಂಜಿಗೂ ಗಣೇಶನನ್ನೋ ಅಥವಾ ಒಂದು ಏಕಶೃಂಗಿಯನ್ನೋ ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಈ ಪ್ರಮುಖ ಗುಣವನ್ನು ಅಲ್ಲಗಳೆಯುವುದೇ ಜಗತ್ತಿನೆಲ್ಲೆಡೆ ಬಲಪಂಥೀಯ ಜನಪ್ರಿಯ ರಾಜಕೀಯದ ಪ್ರಮುಖ ಕಸುಬಾಗಿಬಿಟ್ಟಿದೆೆೆ. ದಲಿತರು ಅಂದರೆ ಮಲ ತೆಗೆಯುವವರು. ಅವರ ವ್ಯವಹಾರ ಎಲ್ಲಾ ಏನಿದ್ದರೂ ಸತ್ತ ಪ್ರಾಣಿಗಳು, ಮನುಷ್ಯರ ಕಕ್ಕಸ್ಸಿನ ಜೊತೆಗೆ. ಅವರ ಕೈಯಲ್ಲಿ ನೀರೇ ಕುಡಿಯುವುದಿಲ್ಲ. ಇನ್ನು ಅವರಿಗೆ ಮಗಳನ್ನು ಕೊಡುವುದೇ? ಮುಸಲ್ಮಾನರು ಮುಗ್ದ ಜನರನ್ನು ಬಾಂಬು ಹಾಕಿ ಕೊಲ್ಲುವವರು. ಹಿಂಸೆ ಅವರ ಭಾಗವಾಗಿಬಿಟ್ಟಿದೆ, ಕರಿಯರು ಅಂದರೆ ಡ್ರಗ್ಸ್ ಮಾರುವವರು, ಅಪರಾಧಿಗಳು ಅಂತ ಯಾರಿಗೆ ತಾನೆ ಗೊತ್ತಿಲ್ಲ? ಜೈಲು ತುಂಬಾ ಅವರೇ ಇದ್ದಾರೆ. ಅವರು ನಮಗೆ ಸಮಾನರಾಗೋದಕ್ಕೆ ಹೇಗೆ ಸಾಧ್ಯ? ಹೀಗೆಲ್ಲಾ ಮಾತನಾಡುತ್ತಾರೆ.

ದಲಿತರೇನು ಮಲ ತೆಗೆಯಬೇಕು ಅಂತ ಬಯಸಿಕೊಂಡು ತೆಗೆಯುತ್ತಿಲ್ಲ. ಹಾಗೆಯೇ ನೀಗ್ರೋಗಳು ತಮ್ಮದು ಗುಲಾಮಗಿರಿಯ ಹಾಗೂ ಅನ್ಯಾಯದ ಚರಿತ್ರೆ ಆಗಿರಲಿ ಅಂತ ಬಯಸಿರಲಿಲ್ಲ. ಹಿಂಸೆ ರಾಜಕೀಯ ಪ್ರತಿರೋಧದ ಒಂದು ರೂಪ. (ಸಾಮಾನ್ಯವಾಗಿ ಇಂತಹ ಹಿಂಸೆಯಲ್ಲಿ ಮುಗ್ಧರೇ ಸಾಯುತ್ತಿದ್ದರು.) ಆ ಹಿಂಸೆಯ ಪರಂಪರೆಯನ್ನು ಇಂದು ಮುಸ್ಲಿಮ್ ಭಯೋತ್ಪಾದಕತೆ ಮುಂದುವರಿಸಿಕೊಂಡು ಹೋಗುತ್ತಿದೆ. ಹಲವು ಬಂಗಾಲಿಗಳು ಮತ್ತು ಮಹಾರಾಷ್ಟ್ರದ (ಹಿಂದುತ್ವದ ಪ್ರಬಲ ಪ್ರತಿಪಾದಕ ವಿನಾಯಕ ದಾಮೋದರ್ ಸಾವರ್ಕರ್ ಸೇರಿದಂತೆ) ಹಿಂದೂಗಳು ಇದನ್ನು ಬ್ರಿಟಿಷರ ವಿರುದ್ಧ ಬಳಸಿದ್ದರು. ಯಹೂದಿ ನಾಗರಿಕ ಹೋರಾಟಗಾರರು ಬ್ರಿಟಿಷರ ವಿರುದ್ಧ ಬಳಸಿದ್ದರು. ಆಗ ಅದು ಫೆಲೆಸ್ತೀನ್ ಆಗಿತ್ತು. ಐರಿಷ್ ಕೆಥೊಲಿಕರು ಇತ್ತೀಚಿನ ಕೆಲವು ವರ್ಷಗಳವರೆಗೆ ತಮ್ಮ ಇಂಗ್ಲಿಷ್ ಧಣಿಗಳ ವಿರುದ್ಧ ಬಳಸಿದ್ದರು. ಈಗ ಆ ಚರಿತ್ರೆ ಹೆಚ್ಚು ಕಡಿಮೆ ಮರೆತೇಹೋಗಿದೆ. 2001ರ ನಂತರ ಕೇವಲ ಮುಸ್ಲಿಮರು ಮಾತ್ರ ಭಯೋತ್ಪಾದಕರು ಎಂದಾಗಿಬಿಟ್ಟಿದೆ. ಹೀಗೆ ವಾಚ್ಯಾರ್ಥವನ್ನು ನಿರೂಪಿಸುವ ಈ ಪ್ರವೃತ್ತಿಯೇ ಭೂಮಿ ಚಪ್ಪಟೆಯಾಗಿದೆ ಎಂಬ ಚಳವಳಿಗೂ ಸ್ಫೂರ್ತಿ ನೀಡಿದೆ. ಅಮೆರಿಕದಲ್ಲಿ ಟ್ರಂಪ್ ಬೆಂಬಲಿಗರಲ್ಲಿ ಇದು ತುಂಬಾ ಜನಪ್ರಿಯವಾಗಿದೆ: ‘‘ನನಗೆ ಭೂಮಿ ಚಪ್ಪಟೆಯಾಗಿ ಕಾಣುತ್ತಿದೆ. ಅಷ್ಟೇ ಅಲ್ಲ ಬೈಬಲಿನಲ್ಲೂ ಹಾಗೆ ಹೇಳಿದೆ.’’ ಜೊತೆಗೆ ಈ ಬೈಬಲ್ ಗೆಳೆಯರು ಹಾಗೂ ನಮ್ಮ ಹಿಂದಿ ವಲಯದವರು ಪಾಪ ಡಾರ್ವಿನ್‌ನನ್ನು ಕೂಡ ಟೀಕಿಸುತ್ತಿದ್ದಾರೆ. ಡಾರ್ವಿನ್ ಹೇಳಿರುವುದು ಅವರ ಧರ್ಮಗ್ರಂಥಗಳಿಗೆ ಅನುಗುಣವಾಗಿ ಇಲ್ಲವಂತೆ. ಹೀಗೆಲ್ಲಾ ವಾದಿಸುವುದನ್ನು ಮೇಲ್‌ಸ್ತರದವರ ವಿಜ್ಞಾನ ಹಾಗೂ ಸಮಾಜವಿಜ್ಞಾನದ ಚಿಂತನೆಗಳನ್ನು ತಳಸಮುದಾಯದವರು ವಿರೋಧಿಸುವ ಕ್ರಮ ಅಂತ ಭಾವಿಸಿಬಿಡಬಹುದು. ಆದರೆ ಅದು ತಪ್ಪು. ಹಾಗೆ ಮಾಡುತ್ತಾ ಹೋದರೆ ಕೊನೆಗೆ ತಳಸ್ತರದವರನ್ನು ಓಲೈಕೆ ಮಾಡಿದಂತೆ ಆಗುತ್ತದೆ. ವಿಜ್ಞಾನ ಅಂತ ನೀವು ಹೇಳುತ್ತಿರುವುದು ನನಗೆ ಕಾಣುತ್ತಿಲ್ಲ ಅಂತ ಒಬ್ಬ ಸಾಮಾನ್ಯ ಹೆಂಗಸು ಹೇಳುವುದಿಲ್ಲ. ಅವಳಿಗೂ ನಮ್ಮ ನಾಯಕರಷ್ಟೇ ಅಥವಾ ಅವರಿಗಿಂತ ಹೆಚ್ಚು ಅಮೂರ್ತವಾದ ಕಲ್ಪನೆಗಳನ್ನು ಗ್ರಹಿಸಿಕೊಳ್ಳೋದಕ್ಕೆ ಸಾಧ್ಯ. ಯಾಕೆಂದರೆ ಅವಳು ಅಷ್ಟೊಂದು ಸಿನಿಕಲ್ ಆಗಿಲ್ಲ. ಅವಳು ದಿನಾ ಮೈಕ್ರೋವೇವ್ ಬಳಸುತ್ತಾಳೆ. ಬೆಂಕಿಯಿಲ್ಲದೆ ಶಾಖ ಹೇಗೆ ಬಂತು ಅಂತ ಅವಳು ಕೇಳೋಲ್ಲ. ಅವಳಿಗೆ ಅಷ್ಟು ಜಾಣತನ ಇದೆ. ವಿಜ್ಞಾನದ ಎಷ್ಟೋ ಕೆಲಸಗಳು ಹಿನ್ನೆಲೆಯಲ್ಲಿ ನಡೆಯುತ್ತಿರುತ್ತವೆ. ಅವು ಕಣ್ಣಿಗೆ ಕಾಣಿಸುವುದಿಲ್ಲ ಅನ್ನುವುದು ಅವಳಿಗೆ ಗೊತ್ತು. ವಿಕಾಸ ಅನ್ನುವುದು ನನ್ನ ಕಣ್ಣ ಮುಂದೆ ನಡೆಯಬೇಕು ಅಂತ ಅವಳು ಕೇಳುವುದಿಲ್ಲ.

ಮುಸ್ಲಿಮರನ್ನು ದ್ವೇಷಿಸುವುದಕ್ಕೇ ಆಗಲಿ, ದಲಿತರನ್ನು ಕೀಳಾಗಿ ಕಾಣುವುದಕ್ಕೇ ಆಗಲಿ ನಮ್ಮ ನೇರ ಅನುಭವ ಕಾರಣ ಅಲ್ಲ. ನಮ್ಮಲ್ಲಿ ಬಹುಪಾಲು ಮಂದಿಗೆ ಅಂತಹ ಯಾವುದೇ ಅನುಭವ ಆಗಿಲ್ಲ. ನಮ್ಮ ಅಕ್ಕಪಕ್ಕದ ಮುಸ್ಲಿಮರು ಉಳಿದ ಎಲ್ಲರಂತೆಯೇ ಇರುತ್ತಾರೆ. ಅದು ನಮ್ಮ ದಿನನಿತ್ಯದ ಅನುಭವ. ಆದರೆ ನಿಜವಾದ ಸಮಸ್ಯೆಯೆಂದರೆ ಈಗ ನಮ್ಮ ಅಕ್ಕಪಕ್ಕದಲ್ಲಿ ಮುಸ್ಲಿಮರು ವಾಸಿಸುತ್ತಿಲ್ಲ. ಅವರಲ್ಲಿ ಹೆದರಿಕೆ ಹುಟ್ಟಿಸಿ, ತಮ್ಮಷ್ಟಕ್ಕೆ ತಾವೇ ಅವರು ಅದೃಶ್ಯರಾಗುವಂತೆ ಮಾಡಿದ್ದೇವೆ. ನಾವು ಅವರನ್ನು ಇಂದು ನೋಡುತ್ತಿರುವುದು ವೃತ್ತಪತ್ರಿಕೆಯ ಪುಟಗಳಲ್ಲಿ ಅಥವಾ ಮಾಂಸದ ಅಂಗಡಿಗಳಲ್ಲಿ. ಅದು ನಮ್ಮ ಪೂರ್ವಗ್ರಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಇನ್ನು ನಮ್ಮ ಮಗಳನ್ನು ಮದುವೆಯಾಗಲಿರುವ ಕೆಳಜಾತಿಯ ಅಳಿಯನ ವಿಷಯಕ್ಕೆ ಬಂದರೆ, ಅವನ ಮೋಹಕ ಗುಣ, ಜಗತ್ತಿನಲ್ಲಿ ಅವನು ಸಾಧಿಸಿರುವ ಯಶಸ್ಸನ್ನು ತಿರಸ್ಕರಿಸುವುದಕ್ಕೆ ನಮಗೆ ಆಗುವುದಿಲ್ಲ. ಅದಕ್ಕೇ ಅವನು ಅಪಾಯಕಾರಿಯಾಗಿ ಕಾಣುತ್ತಾನೆ. ಹಾಗಾಗಿಯೇ ಖಾಪ್ ಪಂಚಾಯತ್‌ಗಳು ಅವರನ್ನು ಹೆದರಿಸಿ, ಬೆದರಿಸುವ ಕೆಲಸಕ್ಕೆ ಕೈಹಾಕಿವೆ.

ಸಂಕುಚಿತ ಮನಸ್ಸಿನ, ಪೂರ್ವಗ್ರಹದ ಕಥೆಗಳಲ್ಲಿ ಆರ್ಗಾನಿಕ್ ಆದದ್ದು ಅಥವಾ ಸತ್ಯ ಅನ್ನುವಂತಹದ್ದು ಏನೂ ಇಲ್ಲ. ಇಲ್ಲೊಂದಿಷ್ಟು ಕೊಂಕು, ಅಲ್ಲೊಂದಿಷ್ಟು ಅರ್ಧ ಸತ್ಯ ಸೇರಿಕೊಂಡು ಜಾಗರೂಕತೆಯಿಂದ ಈ ಕಥೆಯನ್ನು ಹೆಣೆಯಲಾಗಿದೆ. ಇಂದು ಪದ್ಮಾವತಿ, ನಾಳೆ ಅಯೋಧ್ಯಾ ಇಂತಹ ಘಟನೆಗಳು. ನಿರಂತರವಾಗಿ ಯುದ್ಧವೊಂದು ನಡೆಯುತ್ತಿದೆ, ತಮಗೆ ಅದರಲ್ಲಿ ಸೋಲಾಗಬಹುದು ಅನ್ನುವ ಭಾವನೆಯನ್ನು ಜನರಲ್ಲಿ ಮೂಡಿಸುತ್ತಿವೆೆ. ಇಂತಹ ಘಟನೆಗಳನ್ನು ನಿರಂತರವಾಗಿ ಸೃಷ್ಟಿಸುತ್ತಾ, ಉರಿ ಆರದ ಹಾಗೆ ನೋಡಿಕೊಳ್ಳುತ್ತಿವೆ. ಬೇರೆ ಏನೂ ವಿಷಯ ಸಿಗದೇ ಹೋದಾಗ, ವಿಕಾಸದ ವಿಷಯವನ್ನು ಯಾಕೆ ಪ್ರಯತ್ನಿಸಬಾರದು? ಈ ಕಚ್ಚಾಟದಲ್ಲಿ ಯಾರಾದರೂ ಒಂದಿಷ್ಟು ಜನ ತೊಡಗಿಕೊಳ್ಳಬಹುದು ಅನ್ನೋ ಯೋಚನೆ ಇವರಿಗೆ ಬರುತ್ತೆ. ನಾವೆಲ್ಲಾ ಕೋತಿಗಳಾಗುತ್ತಿರುವುದು ಹೀಗೆ. ನಿಜವಾಗಿ ಆತಂಕದ ವಿಷಯ ಅಂದರೆ ಈ ಕುರಿತು ಏನೂ ಮಾಡುತ್ತಿಲ್ಲ. ನನ್ನದೇ ವಿಷಯಕ್ಕೆ ಬಂದರೆ ಕೈ ಹಿಸುಕಿಕೊಂಡು ಒಳ್ಳೆಯ ಶಿಕ್ಷಣ ಬೇಕು ಅಂತ ಮಾತನಾಡುತ್ತೇನೆ. ನಿಜ ಹೇಳಬೇಕೆಂದರೆ ಆಶೋಕ ವಿಶ್ವವಿದ್ಯಾನಿಲಯದಲ್ಲಿ ಮತ್ತು ಅಹಮದಾಬಾದ್ ವಿಶ್ವವಿದ್ಯಾನಿಲಯಗಳಲ್ಲ್ಲಿ ಒಳ್ಳೆಯ ಕೆಲಸಗಳು ಆಗುತ್ತಿವೆ. ಒಂದು ಉದಾರವಾದಿ ಶಿಕ್ಷಣ ಕೊಡುವ ಅದ್ಭುತವಾದ ಕೆಲಸ ಅಲ್ಲಿ ನಡೆಯುತ್ತಿದೆ. ಹಾಗೆಯೇ ಚೆನ್ನೈನಲ್ಲಿನ ಇನ್‌ಸ್ಟಿಟ್ಯೂಟ್ ಫಾರ್ ಫೈನಾನ್ಸಿಯಲ್ ಮ್ಯಾನೇಜ್‌ಮೆಂಟ್ ಆ್ಯಂಡ್ ರೀಸರ್ಚ್ ಅಂತಹ ಸಂಸ್ಥೆಗಳಲ್ಲೂ ಒಳ್ಳೆ ಕೆಲಸ ಆಗುತ್ತಿದೆ. ಆದರೆ ತುಂಬಾ ಕಡಿಮೆ. ತುಂಬಾ ಸಮಯ ಉಳಿದಿಲ್ಲ.

ನಮ್ಮ ದೇಶವನ್ನು ಉಳಿಸಲು ಅಥವಾ ನಮ್ಮಲ್ಲಿ ಅನೇಕರು ಇದೆ ಅಂದುಕೊಂಡಿದ್ದ ದೇಶವನ್ನು ಉಳಿಸಲು ಒಂದು ಚಳವಳಿಯನ್ನು ಮಾಡಬೇಕಾಗಿದೆ. ನಮ್ಮ ದೇಶದಲ್ಲಿನ ಮುಕ್ತತೆಯ, ಕುತೂಹಲದ, ಸಂವಾದದ, ಅಮೂರ್ತತೆಯ, ಆತಿಥ್ಯದ ಮತ್ತು ಕಾರುಣ್ಯದ ಸಂಪ್ರದಾಯಗಳನ್ನು ಗೌರವಿಸಿ, ಮೆಚ್ಚುವ ಚಳವಳಿಯೊಂದನ್ನು ಹುಟ್ಟುಹಾಕಬೇಕಾಗಿದೆ. ಈ ಚಳವಳಿಯಲ್ಲಿ ಧಾರ್ಮಿಕರು ಮತ್ತು ನಿರೀಶ್ವರವಾದಿಗಳು; ಅಂತೆಯೇ ತೀವ್ರವಾದ ಭಾವುಕತೆ ಹಾಗೂ ವೈಚಾರಿಕತೆ ಮತ್ತು ವಿಶಿಷ್ಟವಾಗಿ ಭಾರತೀಯವೇ ಆಗಿರುವ ಇವೆಲ್ಲವುಗಳು ಒಟ್ಟಾಗಿ ಸೇರಿಕೊಂಡ ಚಳವಳಿಯೊಂದು ಆಗಬೇಕಾಗಿದೆ. ಹೊಸ ರಾಷ್ಟ್ರೀಯ ಚಳವಳಿಯೊಂದು ಬೇಕಾಗಿದೆ.

ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top