ಇಂದು ಗೃಹರಕ್ಷಕರ ದಿನ

ನಿಸ್ವಾರ್ಥ ಸೇವೆಯ ಗೃಹರಕ್ಷಕರು

ಗೃಹರಕ್ಷಕರು ಎಂದರೆ ಯಾರು?

ಗೃಹರಕ್ಷಕದಳ ಎನ್ನುವುದು ಸರಕಾರದ ಅಧೀನದಲ್ಲಿ ರುವ ಸ್ವತಂತ್ರವಾದ, ಶಿಸ್ತುಬದ್ಧವಾದ ಸಮವಸ್ತ್ರದಾರಿ ಸ್ವಯಂ ಸೇವಕರನ್ನು ಒಳಗೊಂಡ ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಸಮಾಜಕ್ಕೆ ತುರ್ತು ಅಗತ್ಯದ ಸಂದರ್ಭಗಳಲ್ಲಿ ಸೇವೆ ಸಲ್ಲಿಸುವ ಸಂಸ್ಥೆಯಾಗಿರುತ್ತದೆ. ನಿಸ್ವಾರ್ಥ ಸೇವೆ ಎಂಬ ಮೂಲಮಂತ್ರದೊಂದಿಗೆ ಸಮಾಜದ ಎಲ್ಲಾ ವರ್ಗದ ಜನರಿಗೆ ರಕ್ಷಣೆ ನೀಡುವ ಧ್ಯೇಯವನ್ನು ಹೊಂದಿರುತ್ತದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಹಿಟ್ಲರನ ನಾಜಿ ಸೈನ್ಯ ಪಡೆಯನ್ನು ಹಿಮ್ಮೆಟ್ಟಿಸಲು ಪೊಲೀಸ್ ಮತ್ತು ಮಿಲಿಟರಿ ಪಡೆಗೆ ಪರ್ಯಾಯವಾಗಿ ದೇಶದ ಜನರೇ ಪ್ರಾಣ ತ್ಯಾಗ ಮಾಡಿ ದೇಶವನ್ನು ರಕ್ಷಿಸಲು ಹುಟ್ಟುಹಾಕಿದ ನಾಗರಿಕ ಪಡೆ ಮೊದಲು LDV ಅಂದರೆ Local Defence Volunteer  (ಸ್ಥಳೀಯ ರಕ್ಷಣಾ ಕಾರ್ಯಕರ್ತ) ಎಂದು ಕರೆಯಲಾಗುತ್ತಿತ್ತು. 1946ರಲ್ಲಿ ಭಾರತದ ಬಾಂಬೆ ರಾಜ್ಯದಲ್ಲಿ ಗೃಹ ರಕ್ಷಕ ದಳದ ಮೂಲ ಅಸ್ತಿತ್ವಕ್ಕೆ ಬಂದಿತು. ನೌಕಾದಳ, ವಾಯುದಳ, ಭೂ ಸೇವಾದಳದ ಜೊತೆಗೆ ಜನರಿಗೆ ಮತ್ತು ದೇಶಕ್ಕೆ ತುರ್ತು ಸಂದರ್ಭಗಳಲ್ಲಿ ರಕ್ಷಣೆ ನೀಡುವ ಉದ್ದೇಶದಿಂದ ಪೌರ ರಕ್ಷಣೆ ಮತ್ತು ಗೃಹರಕ್ಷಕದಳ ಎಂಬುದಾಗಿ ಡಿಸೆಂಬರ್ 6ರಂದು ಅಸ್ತಿತ್ವಕ್ಕೆ ಬಂದಿತು. ದಿವಂಗತ ಮೊರಾರ್ಜಿ ದೇಸಾಯಿಯವರು ಪ್ರಧಾನಿಯಾಗಿದ್ದ ಕಾಲದಲ್ಲಿ ಗೃಹರಕ್ಷಕದಳದ ಕಾಯ್ದೆ ಮತ್ತು ಕಾನೂನುಗಳನ್ನು ಗೃಹ ಸಚಿವಾಲಯದ ಅಡಿಯಲ್ಲಿ ತರಲಾಯಿತು. ಮತೀಯ ಗಲಭೆ ಹಿಂಸಾವಾದಗಳ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ರಕ್ಷಣೆ ಒದಗಿಸಲು ಈ ರೀತಿಯ ಸ್ವಯಂ ಸೇವಕರ ಪಡೆ ನಿಯೋಜಿಸಲಾಗಿತ್ತು. ಸಾಮಾನ್ಯ ದಿರಿಸಿನಲ್ಲಿ ಪೊಲೀಸರಿಗೆ ಸಹಾಯ ನೀಡುವ ಸದುದ್ದೇಶದಿಂದ ಈ ಅಂಗಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಬಾಂಬೆ ರಾಜ್ಯದಿಂದ ಆರಂಭವಾದ ಈ ಸ್ವಯಂ ಸೇವಕರ ಪಡೆಯನ್ನು ಬೇರೆ ರಾಜ್ಯಗಳಲ್ಲೂ ಆರಂಭಿಸಲಾಯಿತು. ಕ್ರಮೇಣ 1962ರಲ್ಲಿ ಭಾರತ ಚೀನಾ ಯುದ್ಧದ ಸಂದರ್ಭದಲ್ಲಿ ಈ ಸ್ವಯಂ ಸೇವಕರ ಸೇವೆಯನ್ನು ರಕ್ಷಣಾ ಕಾರ್ಯಕ್ಕೆ ಬಳಸುವ ಉದ್ದೇಶದಿಂದ ಕೇಂದ್ರ ಸರಕಾರ ಎಲ್ಲಾ ರಾಜ್ಯ ಸರಕಾರ ಮತ್ತು ಕೇಂದ್ರಾಡಳಿತ ರಾಜ್ಯಗಳ ಸ್ವಯಂಸೇವಕರ ತಂಡಗಳನ್ನು ಗೃಹರಕ್ಷಕ ದಳ ಎಂಬುದಾಗಿ ಸಮಸ್ತ್ರ ನೀಡಿ ಮನ್ನಣೆಯನ್ನು ನೀಡಿತು.

ಗೃಹರಕ್ಷಕದಳದ ಪ್ರಾಥಮಿಕ ಧ್ಯೇಯಗಳು

ಗೃಹರಕ್ಷಕದಳ ಎನ್ನುವುದು ದೇಶದ ಕಾನೂನು ಮತ್ತು ಶಿಸ್ತು ಪಾಲನೆಯಲ್ಲಿ ಪೊಲೀಸ್ ಇಲಾಖೆಗೆ ಪೂರಕ ಪಡೆಯಾಗಿ ಕೆಲಸ ಮಾಡುತ್ತದೆ. ಪ್ರಾಕೃತಿಕ ಮತ್ತು ಮಾನವ ನಿರ್ಮಿತ ಎಲ್ಲಾ ಬಗೆಯ ವಿಪತ್ತುಗಳ ವಿಷಮ ಪರಿಸ್ಥಿತಿಗಳಲ್ಲಿ ಜೀವ ಮತ್ತು ಆಸ್ತಿ ಸಂರಕ್ಷಣೆ ವಿಪತ್ತು ನಿರ್ವಹಣೆ, ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಲ್ಲಿ ಸಮುದಾಯಕ್ಕೆ ಅಗತ್ಯ ನೆರವು ನೀಡುತ್ತದೆ. ಅದೇ ರೀತಿ ಬೆಂಕಿ ಅವಘಡ, ವೈಮಾನಿಕ ದಾಳಿ, ಸುನಾಮಿ, ಪ್ರಳಯ, ಭೂಕಂಪ ಅಥವಾ ಸಾಂಕ್ರಾಮಿಕ ರೋಗಗಳು ಉಲ್ಬಣವಾದಾಗ, ಸಾಮಾಜಿಕ ಶಾಂತಿ, ಸುವ್ಯವಸ್ಥೆ ಮತ್ತು ನೆಮ್ಮದಿಯನ್ನು ಪುನರ್‌ಸ್ಥಾಪಿಸಲು ಪೊಲೀಸ್ ಪಡೆಗೆ ಮತ್ತು ಸರಕಾರಕ್ಕೆ ಪೂರಕವಾಗಿ ಕೆಲಸ ನಿರ್ವಹಿಸಿರುತ್ತದೆ. ದೇಶಾದ್ಯಂತ ಸುಮಾರು 6 ಲಕ್ಷ ಗೃಹರಕ್ಷಕ ಸಿಬ್ಬಂದಿ ಯಿದ್ದು ದೇಶದ ಎಲ್ಲಾ ರಾಜ್ಯಗಳಲ್ಲಿ (ಕೇರಳ ಮತ್ತು ಅರುಣಾಚಲ ಪ್ರದೇಶ ಹೊರತು ಪಡಿಸಿ) ಮತ್ತು ಕೇಂದ್ರಾಡಳಿತ ಪ್ರೇಶಗಳಲ್ಲಿ ಕೆಲಸ ನಿರ್ವಹಿಸುತ್ತವೆ.

ಯಾರು ಗೃಹರಕ್ಷಕ ದಳವನ್ನು ಸೇರಬಹುದು?

ಗೃಹರಕ್ಷಕ ದಳಕ್ಕೆ ಸೇರಲು ಮುಖ್ಯವಾಗಿ ಸಮಾಜದ ಸೇವೆ ಮಾಡಬೇಕು ಎನ್ನುವ ತುಡಿತ ಇರಬೇಕು. ಸ್ವಯಂ ಸೇವಾ ಮನೋಭಾವವುಳ್ಳ ಸಮಾಜದ ಎಲ್ಲಾ ಸ್ತರದ ವ್ಯಕ್ತಿಗಳು ಈ ಸಂಂಸ್ಥೆಯನ್ನು ಸೇರಬಹುದು. ದೈಹಿಕವಾಗಿ ಆರೋಗ್ಯವಾಗಿದ್ದು ಸಮಾಜದ ಉನ್ನತಿಗೆ ಯಾವುದೇ ಲಾಭ ನಷ್ಟದ ಲೆಕ್ಕಾಚಾರವಿಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುವ ಮನೋಧರ್ಮವನ್ನು ಹೊಂದಿರಬೇಕು. ಕನಿಷ್ಠ ವಿದ್ಯಾರ್ಹತೆ 4ನೇ ತರಗತಿ (ಯಾವುದೇ ಭಾಷಾಮಾಧ್ಯಮದಲ್ಲಿ) ಮತ್ತು ವಯೋಮಿತಿ 20ರಿಂದ 50 ವರ್ಷದ ಒಳಗಾಗಿರಬೇಕು. ಸಾಮಾನ್ಯವಾಗಿ ಒಮ್ಮೆ ದಾಖಲಾತಿ ಮಾಡಿದ ಬಳಿಕ 3 ವರ್ಷಗಳಿಗೊಮ್ಮೆ ಪುನಃ ಮರು ದಾಖಲಾತಿ ಮಾಡಿಸಿಕೊಳ್ಳಬೇಕು. ಸರಕಾರವೇ ನಿಗದಿಪಡಿಸಿದ ಅರ್ಜಿ ನಮೂನೆಗಳು ಗೃಹರಕ್ಷಕದಳದ ಜಿಲ್ಲಾ ಕಚೇರಿಗಳಲ್ಲಿ ಉಚಿತವಾಗಿ ದೊರಕುತ್ತದೆ. ಅದನ್ನು ಭರ್ತಿಮಾಡಿ ನಿಗದಿತ ದಿನಾಂಕದಲ್ಲಿ ಅರ್ಜಿಯ ಜೊತೆಗೆ ವಿದ್ಯಾರ್ಹತೆ, ವಯಸ್ಸಿನ ದಾಖಲೆ ಮತ್ತು ವಾಸ ಸ್ಥಳಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳ ನಕಲು ಪ್ರತಿ ಲಗತ್ತಿಸಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ವ್ಯಕ್ತಿಯ ಮೇಲೆ ಯಾವುದೇ ರೀತಿಯ ಪೊಲೀಸ್ ದೂರು ಅಥವಾ ಕ್ರಿಮಿನಲ್ ದಾಖಲೆ ಇಲ್ಲವೆಂದು ಸಾಬೀತಾದ ಬಳಿಕ ಅಭ್ಯರ್ಥಿಯ ಆಯ್ಕೆಗೆ ಸಂದರ್ಶನ ನಡೆಯುತ್ತದೆ. ಈ ಆಯ್ಕೆ ಸಮಿತಿಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠರು, ಜಿಲ್ಲಾ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಗೃಹರಕ್ಷಕ ಸಮಾದೇಷ್ಠರು ಇರುತ್ತಾರೆ. ಈ ರೀತಿ ಆಯ್ಕೆಯಾದ ವ್ಯಕ್ತಿಗಳಿಗೆ ಆರು ತಿಂಗಳ ಕಾಲ ಮೂಲ ತರಬೇತಿ ನೀಡಲಾಗುತ್ತದೆ. ಈ ತರಬೇತಿ ಶಿಬಿರದಲ್ಲಿ ಕರ್ತವ್ಯಗಳನ್ನು ಶಿಸ್ತುಬದ್ಧವಾಗಿ ಪರಿಣಾಮಕಾರಿಯಾಗಿ ಮತ್ತು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಸದಸ್ಯರಿಗೆ ಪ್ರಥಮ ಚಿಕಿತ್ಸೆ, ಪ್ರವಾಹ ರಕ್ಷಣೆ, ಅಗ್ನಿಶಮನ, ಸಂಚಾರ ನಿಯಂತ್ರಣ ಮೊದಲಾದ ವಿಷಯಗಳಲ್ಲಿ ನಿಶಸ್ತ್ರ ಹಾಗೂ ಶಸ್ತ್ರ ತರಬೇತಿ ಜಿಲ್ಲಾ ಮಟ್ಟದಲ್ಲೂ ಹಾಗೂ ಉನ್ನತ ತರಬೇತಿಗಳನ್ನು ಬೆಂಗಳೂರಿನ ಗೃಹರಕ್ಷ ಮತ್ತು ಪೌರ ತರಬೇತಿ ರಕ್ಷಣಾ ಅಕಾಡಮಿಯಲ್ಲಿ ನೀಡಿ ಸಜ್ಜುಗೊಳಿಸಲಾಗುತ್ತದೆ. ಸಾಮಾನ್ಯವಾಗಿ ಗೃಹರಕ್ಷಕರಾಗಿ ಸಮಾಜದ ಎಲ್ಲಾ ಸ್ತರದ ಅಂದರೆ ವಿದ್ಯಾರ್ಥಿ, ಕೃಷಿಕರು, ವೈದ್ಯರು, ಅಭಿಯಂತರರು, ವಕೀಲರು, ಶಿಕ್ಷಕರು ಕೂಲಿಕಾರ್ಮಿಕರು ಹೀಗೆ ಎಲ್ಲಾ ವರ್ಗದ ಜನರನ್ನು ಸೇರಿಸಿಕೊಳ್ಳಲಾಗುತ್ತದೆ. ಒಟ್ಟಿನಲ್ಲಿ ಗೃಹರಕ್ಷಕರು ಅಂದರೆ ನಾವು, ನೀವು ಮತ್ತು ನಮ್ಮ ನಿಮ್ಮಂತಹ ಸಾಮಾನ್ಯ ಸ್ತ್ರೀ ಪುರುಷರು ಆಗಿದ್ದು, ನಮ್ಮ ದಿನನಿತ್ಯದ ಕೆಲಸದ ವೇಳೆಯಿಂದಾಚೆಗೆ ವಿಶಿಷ್ಟ ತರಬೇತಿ ಪಡೆಯಲು ಮುಂದಾಗುವುದಲ್ಲದೆ ಅವಶ್ಯಕ ಮತ್ತು ತುರ್ತು ಅಗತ್ಯದ ಸಂದರ್ಭಗಳಲ್ಲಿ ತಮ್ಮ ಸೇವೆಯನ್ನು ಜಿಲ್ಲೆಗೆ, ರಾಜ್ಯಕ್ಕೆ, ದೇಶಕ್ಕೆ ಮುಡಿಪಾಗಿಡುವ ನಿಸ್ವಾರ್ಥ ಸ್ವಯಂ ಸೇವಕರು ಎಂದರೂ ತಪ್ಪಲ್ಲ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top