ಸಾತ್ವಿಕ ನಾಯಕರ ತಾಮಸ ಹೇಳಿಕೆಯ ಅಡಕತ್ತರಿಯಲ್ಲಿ ಬಡಪಾಯಿ ಈರುಳ್ಳಿ! | Vartha Bharati- ವಾರ್ತಾ ಭಾರತಿ

ಸಾತ್ವಿಕ ನಾಯಕರ ತಾಮಸ ಹೇಳಿಕೆಯ ಅಡಕತ್ತರಿಯಲ್ಲಿ ಬಡಪಾಯಿ ಈರುಳ್ಳಿ!

ಸಾತ್ವಿಕ ಆಹಾರ ಸೇವನೆಯ ಮೂಲಕ ಆಧ್ಯಾತ್ಮಿಕ ಹಾದಿ ಹಿಡಿದು ಮೋಕ್ಷ ಪ್ರಾಪ್ತಿಗೆ ಪ್ರಯತ್ನಿಸಬೇಕಾದ ಸಚಿವರಿಗೆ ರಜಸ್ಸು ಮತ್ತು ತಮಸ್ಸಿನ ಆಹಾರ ಸೇವಿಸದೆಯೇ ಆಗಿಂದಾಗ್ಗೆ ಸಿಟ್ಟು, ಸೊಕ್ಕು ಹೇಗೆ ಬರುತ್ತದೆಂಬುದು ನಿಜಕ್ಕೂ ಅಚ್ಚರಿಯ ವಿಷಯ!

ಅಧಿಕಾರದ ದರ್ಪ ಮತ್ತು ಮೇಲ್ಜಾತಿಯ ಅಹಂ ಯಾವುದೇ ವ್ಯಕ್ತಿಯ ಅಸಮರ್ಥತೆಯನ್ನು ಮರೆಮಾಚಲು ಸಾಧ್ಯವಿಲ್ಲ ಎಂಬುದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಇತ್ತೀಚಿನ ಹೇಳಿಕೆಗಳೇ ಸಾಕ್ಷಿ. ಎನ್‌ಡಿಎ-2 ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಒಂದಿಲ್ಲೊಂದು ಅಪ್ರಬುದ್ಧ ಹಾಸ್ಯಾಸ್ಪದ ಹೇಳಿಕೆಗಳಿಂದ ನಗೆಪಾಟಲಿಗೀಡಾಗುತ್ತಿರುವ ಸಚಿವರು ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಅನುಸರಿಸುತ್ತಿರುವ ಅಹಂಕಾರದ ಎಲೀಟ್ ಧೋರಣೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆಗೆ ಒಳಗಾಗುತ್ತಿರುವುದು ಸುಳ್ಳಲ್ಲ. ಗುರುವಾರ ಸಂಸತ್ತಿನಲ್ಲಿ ಎನ್‌ಸಿಪಿ ಸದಸ್ಯೆ ಸುಪ್ರಿಯಾ ಸುಳೆ ಈರುಳ್ಳಿ ಬೆಲೆ ಏರಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸುವ ಭರದಲ್ಲಿ ತಮಗರಿವಿಲ್ಲದಂತೆಯೇ ಜಾತಿಯ ಉಲ್ಲೇಖ ಮಾಡಿ ಪ್ರಮಾದ ಎಸಗಿದ್ದಾರೆ. ‘‘ನಾನು ಈರುಳ್ಳಿ ಹೆಚ್ಚು ತಿನ್ನುವುದಿಲ್ಲ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸದ ಕುಟುಂಬದಿಂದ ನಾನು ಬಂದಿದ್ದೇನೆ’’ ಎಂದು ಹೇಳಿಕೆ ನೀಡುವ ಮೂಲಕ ತಮ್ಮ ಬ್ರಾಹ್ಮಣ ಜಾತಿಯ ಮೂಲವನ್ನು ಅನೂಚಾನವಾಗಿ ಪ್ರದರ್ಶಿಸಿದ್ದಾರೆ. ಬಡವರ ದಿನನಿತ್ಯದ ಬಳಕೆಯ ಈರುಳ್ಳಿ ಬೆಲೆ ಗಗನಕ್ಕೇರುತ್ತಿರುವುದನ್ನು ನಿಯಂತ್ರಿಸಲು ವಿಫಲವಾಗಿರುವ ಸರಕಾರ ಮತ್ತು ಅಸಮರ್ಥ ಸಚಿವರು ಈ ರೀತಿಯ ಸೊಕ್ಕಿನ ಹೇಳಿಕೆಗಳ ಮೂಲಕ ತಮ್ಮ ಜವಾಬ್ದಾರಿಗಳಿಂದ ವಿಮುಖರಾಗುತ್ತಿದ್ದಾರೆ.

ಸಾತ್ವಿಕ ಆಹಾರ ಸೇವನೆಯ ಮೂಲಕ ಆಧ್ಯಾತ್ಮಿಕ ಹಾದಿ ಹಿಡಿದು ಮೋಕ್ಷ ಪ್ರಾಪ್ತಿಗೆ ಪ್ರಯತ್ನಿಸಬೇಕಾದ ಸಚಿವರಿಗೆ ರಜಸ್ಸು ಮತ್ತು ತಮಸ್ಸಿನ ಆಹಾರ ಸೇವಿಸದೆಯೇ ಆಗಿಂದಾಗ್ಗೆ ಸಿಟ್ಟು, ಸೊಕ್ಕು ಹೇಗೆ ಬರುತ್ತದೆಂಬುದು ನಿಜಕ್ಕೂ ಅಚ್ಚರಿಯ ವಿಷಯ! ಇದ್ದಕ್ಕಿದ್ದಂತೆ ಏರಿಕೆಯಾಗುವ ತಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ತಾಮಸ ಬೆಳ್ಳುಳ್ಳಿ-ಈರುಳ್ಳಿಗಳು ಅವಶ್ಯಕವೆಂದು ಆಧುನಿಕ ವೈದ್ಯ ವಿಜ್ಞಾನ ಸಾಬೀತುಪಡಿಸಿರುವುದನ್ನು ಅರಗಿಸಿಕೊಳ್ಳುವ ವ್ಯವಧಾನವಿದೆಯೇ ಮಂತ್ರಿ ಮಹೋದಯರಿಗೆ?! ರಾಹುವಿನ ರಕ್ತದಿಂದ ಸೃಷ್ಟಿಯಾದ ಬೆಳ್ಳುಳ್ಳಿ ದೇಹದ ಕೆಟ್ಟ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯಾಘಾತದಿಂದ ರಕ್ಷಣೆ ಒದಗಿಸುವುದು ಇನ್ನೋರ್ವ ವಿಚಿತ್ರ ‘ಸಸ್ಯಾಹಾರಿ’ ಕೇಂದ್ರ ಸಚಿವ ಅಶ್ವಿನಿ ಚೌಬೆ ಅವರಿಗೆ ತಿಳಿದಿದೆಯೇ? ಆಹಾರಕ್ರಮದಲ್ಲಿ, ದವಸ ಧಾನ್ಯಗಳಲ್ಲಿ ಭೇದವೆಣಿಸುವ ಮಂದಿಗೆ ರಾಮಧಾನ್ಯ (ರಾಗಿ) ಕುರಿತ ಕನಕದಾಸರ ಕೀರ್ತನೆ ಉತ್ತರ ನೀಡಬಲ್ಲದು. ‘‘ಹೊಸತಲೆಮಾರಿನ ಯುವ ಪೀಳಿಗೆ ಓಲಾ, ಉಬರ್ ಮತ್ತಿತರ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಬಳಸುತ್ತಿರುವುದು ಆಟೊಮೊಬೈಲ್ ಕ್ಷೇತ್ರದ ಕುಸಿತಕ್ಕೆ ಪ್ರಮುಖ ಕಾರಣಗಳಲ್ಲೊಂದು’’ ಎಂದು ಇತ್ತೀಚೆಗೆ ಹೇಳಿಕೆ ನೀಡುವ ಮೂಲಕ ತಮ್ಮ ಆರ್ಥಿಕ ಪಾಂಡಿತ್ಯ! ಪ್ರದರ್ಶಿಸಿದ್ದ ನಿರ್ಮಲಾ ಅವರು, ಸುದ್ದಿ ಗೋಷ್ಠಿಯಲ್ಲಿ ಎದುರಾಗುವ ಕಠಿಣ ಸವಾಲುಗಳಿಗೆ ಉತ್ತರಿಸಲಾಗದೆ ಅಧಿಕಾರಿಗಳಿಗೆ ಮೈಕ್ ಹಸ್ತಾಂತರಿಸುವುದು ಬಹುತೇಕ ಸಾಮಾನ್ಯವಾಗಿಬಿಟ್ಟಿದೆ. ಇನ್ನು ವಾಣಿಜ್ಯ ಸಚಿವ ಪಿಯುಶ್ ಗೋಯಲ್ ‘‘ಗಣಿತದ ಬಗ್ಗೆ, ಅಂಕಿ ಸಂಖ್ಯೆಗಳ ಬಗ್ಗೆ ನನಗೆ ಚಿಂತೆಯಿಲ್ಲ. ಯಾಕೆಂದರೆ ಗುರುತ್ವಾಕರ್ಷಣೆಯನ್ನು ಕಂಡುಹಿಡಿದವರು ಐನ್‌ಸ್ಟೈನ್’’ ಎಂದು ಹೇಳಿಕೆ ನೀಡಿ ಜಗತ್ತಿನಾದ್ಯಂತ ಭಾರತದ ಮಾನ ಹರಾಜು ಹಾಕಿದ್ದು ಇನ್ನೂ ಮರೆತಿಲ್ಲ. ಇಂತಹ ಅಸಂಬದ್ಧವಾದ, ಮೂರ್ಖತನದ, ಅವೈಜ್ಞಾನಿಕವಾದ ಹೇಳಿಕೆಗಳು ಆಡಳಿತಾರೂಢ ಕೇಂದ್ರ ಸಚಿವರು, ನಾಯಕರ ಟ್ರೇಡ್‌ಮಾರ್ಕ್ ಆಗಿದೆ ಎಂದರೆ ತಪ್ಪಾಗಲಾರದು. ಆರ್ಥಿಕ ಹಿನ್ನಡೆಯೇ ಬೇರೆ, ಆರ್ಥಿಕ ಕುಸಿತವೇ ಬೇರೆ ಎಂದು ಇನ್ನೂ ವಾದಿಸುತ್ತಿರುವ ವಿತ್ತ ಸಚಿವರ ಚಿತ್ತಕ್ಕೆ ಶರಣು!

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ‘ಸೇಇಟ್‌ಲೈಕ್‌ನಿರ್ಮಲಾತಾಯ್’ ಟ್ರೆಂಡಿಂಗ್ ವಿಷಯವಾಗಿ ಚರ್ಚೆಯಾಗಿ ಹಲವಾರು ವ್ಯಂಗ್ಯ ಮೀಮ್‌ಗಳ ಮೂಲಕ ಟೆಕ್ ಪ್ರೇಮಿಗಳಾದ ನವ ತಲೆಮಾರಿನ ಮಿಲೇನಿಯಲ್‌ಗಳಿಂದ ಟೀಕೆಗೆ ಗುರಿಯಾಗಿದ್ದರೂ ಗಂಭೀರವದನರಾದ ನಿರ್ಮಲಾ ಅವರು ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಿರುವುದು ನಮ್ಮ ನಾಯಕರ ಬೌದ್ಧಿಕ ಮಟ್ಟವನ್ನು ಪ್ರತಿಬಿಂಬಿಸುತ್ತದೆ ಎಂದಷ್ಟೇ ಹೇಳಿ ಸುಮ್ಮನಾಗಬೇಕು!

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top