ವಿವಿಗಳ ದಲಿತ ಮತ್ತು ಅಲ್ಪಸಂಖ್ಯಾತರ ಸಂಶೋಧನಾ ಕೇಂದ್ರಗಳಿಗೆ ಬಡಿದ ಗ್ರಹಣ | Vartha Bharati- ವಾರ್ತಾ ಭಾರತಿ

ವಿವಿಗಳ ದಲಿತ ಮತ್ತು ಅಲ್ಪಸಂಖ್ಯಾತರ ಸಂಶೋಧನಾ ಕೇಂದ್ರಗಳಿಗೆ ಬಡಿದ ಗ್ರಹಣ

ಇಂತಹ ಕೇಂದ್ರಗಳು ಹೊಸ ಮತ್ತು ವಿಮರ್ಶಾತ್ಮಾಕ ಸಂಶೋಧನಾ ಅಜೆಂಡಾ ಹೊಸ ರಕ್ತದ ಹೊಸ ತಲೆಮಾರಿನ ಸಂಶೋಧಕರ ಅಂತರ ಶಿಸ್ತಿನ ಕೇಂದ್ರಗಳಾಗಿ ರೂಪುಗೊಳ್ಳುವ ಹಂತದಲ್ಲೇ ಅವುಗಳಿಗೆ ಯುಜಿಸಿ ಅನುದಾನವನ್ನು ಕಡಿಮೆಗೊಳಿಸುತ್ತಿದೆ ಎನ್ನುವುದು ತೀರಾ ಬೇಸರದ/ಆತಂಕದ ಸಂಗತಿ. ಸಾಮಾಜಿಕ ಸಂಶೋಧನಾ ಕೇಂದ್ರಗಳ ಅನುದಾನ ಕಡಿತಗೊಳಿಸಿ ಅಲ್ಲಿ ಹುಟ್ಟಬಹುದಾದ ಸಾಮಾಜಿಕ ಪ್ರತಿಭಟನೆಗಳ ಹೊಸ ರೂಪ ಮತ್ತು ಅಯಾಮವನ್ನು ಹತ್ತಿಕ್ಕಲು ನಡೆಸುತ್ತಿರುವ ಪ್ರಯತ್ನ ಎಂಬುದು ತಜ್ಞರ ವಾದವಾಗಿದೆ.

ಅಭಿವೃದ್ಧಿಯ ವಿಚಾರದಲ್ಲಿ ಪಂಚವಾರ್ಷಿಕ ಯೋಜನೆಗಳು ಜಾರಿ ಇರುವ ಹಾಗೆ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲೂ ಕೂಡ ಪ್ರತಿ ಐದು ವರ್ಷಕ್ಕೊಮ್ಮೆ ಹೊಸ ಹೊಸ ಯೋಜನೆಗಳನ್ನು ಯುಜಿಸಿಯು ಜಾರಿಗೊಳಿಸುತ್ತದೆ. ದೇಶದಲ್ಲಿರುವ ಸದ್ಯ 700ಕ್ಕಿಂತಲೂ ಹೆಚ್ಚಿನ ವಿವಿಗಳಿಗೆ ಧನ ಸಹಾಯ ಮತ್ತು ಮೇಲ್ವಿಚಾರಣೆಯನ್ನು ಮಾಡುವ ಹೊಣೆ ಯುಜಿಸಿಯದು ಅಲ್ಲದೆ ಉನ್ನತ ಶಿಕ್ಷಣ ಬಗ್ಗೆ ನೀತಿಯನ್ನು ರೂಪಿಸುವುದು ಸಹ ಯುಜಿಸಿಯ ಹೊಣೆಯಾಗಿರುತ್ತದೆ. ಯುಜಿಸಿಯು ತನ್ನ 11ನೇ ಯೋಜನೆಯಲ್ಲಿ (2007-12) ದೇಶದ ಆಯ್ದ ವಿವಿಗಳಲ್ಲಿ ಸಮಾಜ ವಿಜ್ಞಾನದಲ್ಲಿ ಹೊಸ ರೀತಿಯ ಸಂಶೋಧನೆಯನ್ನು ಉತ್ತೇಜಿಸಲು ವಿವಿಧ ಹೊಸ ಸಂಶೋಧನಾ ಕೇಂದ್ರಗಳನ್ನು ಆರಂಭಿಸುವ ಯೋಜನೆ ರೂಪಿಸಿತ್ತು. ಇದಕ್ಕಾಗಿ ಸುಮಾರು 325 ಕೋಟಿ ರೂ. ಮೀಸಲಿಟ್ಟಿತ್ತು. ಈ ಸಂಶೋಧನಾ ಕೇಂದ್ರಗಳು ಪ್ರತಿ 5 ವರ್ಷಕ್ಕೊಮ್ಮೆ ನವೀಕರಣಗೊಳ್ಳುವಂತೆ ರೂಪಿಸಲಾಗಿತ್ತು. ಇಂತಹ ಸಂಶೋಧನಾ ಕೇಂದ್ರಗಳಲ್ಲಿ ಕೆಲವು ಹೆಸರಿಸಬಹುದಾದುದ್ದು ಎಂದರೆ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರ, ಅಲ್ಪಸಂಖ್ಯಾತರ ಅಧ್ಯಯನ ಕೇಂದ್ರ, ಮಾನವ ಹಕ್ಕುಗಳ ಅಧ್ಯಯನ ಕೇಂದ್ರ, ಪ್ರಾದೇಶಿಕ ಅಧ್ಯಯನ ಕೇಂದ್ರ, ಭಾಷಾ ಅಧ್ಯಯನ ಕೇಂದ್ರ, ಮಹಿಳಾ ಅಧ್ಯಯನ ಕೇಂದ್ರ ಇತ್ಯಾದಿ. ಈ ಕೇಂದ್ರಗಳಲ್ಲಿ ಕಳೆದ 8-10 ವರ್ಷಗಳಲ್ಲಿ ಸಾಕಷ್ಟು ರೀತಿಯ ಅಧ್ಯಯನಗಳು ನಡೆದಿದ್ದು ದಲಿತ, ಆದಿವಾಸಿ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಬಗ್ಗೆ ಹೊಸ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸಮಾಜದ ಅಂಚಿನಲ್ಲಿ ವಾಸಿಸುತ್ತಿರುವ ಈ ವರ್ಗದ ಜನರ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಈ ಹೊಸ ಸಂಶೋಧನಾ ಕೇಂದ್ರಗಳು ಸಾಕಷ್ಟು ಕೊಡುಗೆ ನೀಡಿವೆ.

ಆದರೆ ಈ ವರ್ಷದಿಂದ ಇಂತಹ ಕೇಂದ್ರಗಳ ಮೇಲೆ ತೂಗುಕತ್ತಿ ನೇತಾಡಲು ಆರಂಭವಾಗಿದೆ. ಯುಜಿಸಿಯು ಹನ್ನೊಂದನೆ ಯೋಜನೆಯಲ್ಲಿ ಆರಂಭಿಸಿದ್ದ ಸಂಶೋಧನಾ ಕೇಂದ್ರಗಳಿಗೆ ನೀಡುತ್ತಿದ್ದ ಅನುದಾನವನ್ನು ಹಠಾತ್ತಾಗಿ ಕಡಿಮೆಗೊಳಿಸಿದೆ. ಇಂತಹ ಕೇಂದ್ರಗಳು ಸಂಪೂರ್ಣವಾಗಿ ಯುಜಿಸಿ ಅನುದಾನದಿಂದಲೇ ನಡೆಯುತ್ತಿವೆ. ಕೆಲವು ವಿವಿಗಳಲ್ಲಿ ಇಂತಹ ಕೇಂದ್ರಗಳು ಪೂರ್ಣ ಪ್ರಮಾಣದ ಅಧ್ಯಯನ ಕೇಂದ್ರಗಳಾಗಿ ರೂಪುಗೊಂಡಿವೆ. ಯುಜಿಸಿಯ ಅನುದಾನ ಒಂದೊಮ್ಮೆ ಹಠಾತ್ತಾಗಿ ನಿಂತು ಹೋದರೆ ಸಂಬಂಧಿಸಿದ ರಾಜ್ಯಸರಕಾರವೇ ಇಂತಹ ಕೇಂದ್ರಗಳ ಖರ್ಚುವೆಚ್ಚವನ್ನು ಹೊರಬೇಕೆಂದು ಯುಜಿಸಿಯು ಈ ಮೊದಲೇ ಸೂಚಿಸಿದ್ದರೂ ಸಹ ದೇಶದ ಯಾವ ರಾಜ್ಯ ಸರಕಾರವು ಸಹ ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಈ ಕಾರಣದಿಂದ ಇಂತಹ ಕೇಂದ್ರಗಳಿಗೆ ಯುಜಿಸಿಯು ನೀಡುತ್ತಿದ್ದ ಅನುದಾನ ಹಠಾತ್ತಾಗಿ ಕಡಿಮೆಯಾಗಿದೆ. ಇದರಿಂದ ಇಂತಹ ಕೇಂದ್ರಗಳ ಅಸ್ಥಿತ್ವಕ್ಕೆ ಧಕ್ಕೆ ಉಂಟಾಗಿದ್ದು ಕೇಂದ್ರಗಳಿಗೆ ದಿಕ್ಕು ಕಾಣದಂತಾಗಿದೆ. ಈ ವಿಚಾರದ ಕುರಿತು ಮಾಧ್ಯಮಗಳು ಮಧ್ಯಪ್ರವೇಶ ಮಾಡಿದವು. ಜೆಎನ್‌ಯು ವಿವಿಯಲ್ಲೂ ಸಹ ಹೋರಾಟದ ಮುನ್ಸೂಚನೆ ದೊರೆಯಿತು. ಎಚ್ಚೆತ್ತುಕೊಂಡ ಯುಜಿಸಿ ಒಂದು ವರ್ಷದ ಮಟ್ಟಿಗೆ ಇಂತಹ ಎಲ್ಲಾ ಕೇಂದ್ರಗಳಿಗೆ ಅನುದಾನವನ್ನು ಮುಂದುವರಿಸುವುದಾಗಿ ಘೋಷಿಸಿ ಕೈ ತೊಳೆದುಕೊಂಡಿತ್ತು. ಅಲ್ಲಿಗೆ ಬಾಣಲೆಯಿಂದ ನೇರವಾಗಿ ಒಲೆಗೆ ಬಿದ್ದ ಅನುಭವ ಈ ಕೇಂದ್ರಗಳದ್ದು.

ನಿಜ ಸಂಗತಿ ಎಂದರೆ ದೇಶದ ಎಷ್ಟೋ ವಿವಿಗಳಿಗೆ ಇಂತಹ ಕೇಂದ್ರಗಳು ಮುಂದುವರಿಯುವುದು ಇಷ್ಟವಿಲ್ಲ. ವಿವಿಯ ಪ್ರಮುಖ ಸ್ಥಾನಗಳನ್ನು ಅಲಂಕರಿಸಿರುವ ಮೇಲ್ವರ್ಗದ ಅಧಿಕಾರಿಗಳು ಇಂತಹ ಕೇಂದ್ರಗಳ ಅಸ್ತಿತ್ವವನ್ನು ದಮನ ಮಾಡಲು ನಿರಂತರವಾಗಿ ಯತ್ನಿಸುತ್ತಿದ್ದಾರೆ ಎಂಬ ಆರೋಪವಿದೆ. ಇಂತಹ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರಿಗೆ ಬೇರೆ ಯಾವ ಸೌಲಭ್ಯವನ್ನೂ ನೀಡಿಲ್ಲ. ಇಂತಹ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಅಧ್ಯಾಪಕರಿಗೆ 3 ಅಥವಾ 6 ತಿಂಗಳಿಗೊಮ್ಮೆ ವೇತನ ನೀಡಲಾಗುತ್ತದೆ. ಕಾರಣ ಕೇಳಿದರೆ ವಿವಿಗಳು ಯುಜಿಸಿಯತ್ತ ಬೊಟ್ಟು ಮಾಡುತ್ತವೆ. ಯುಜಿಸಿಯನ್ನು ಕೇಳಿದರೆ ಅದು ಸರಕಾರದತ್ತ ಬೊಟ್ಟು ಮಾಡುತ್ತದೆ. ಒಟ್ಟಿನಲ್ಲಿ ಇಂತಹ ಕೇಂದ್ರಗಳ ಬಗ್ಗೆ ಎಲ್ಲರಿಗೂ ಒಂದು ರೀತಿಯ ನಿರ್ಲಕ್ಷ; ಯಾರಿಗೂ ಜವಾಬ್ದಾರಿ ಮತ್ತು ಉತ್ತರದಾಯಿತ್ವ ಇಲ್ಲ. ಇಂತಹ ಕೇಂದ್ರಗಳು ತಮ್ಮ ಉಳಿವಿಗಾಗಿ ಹೋರಾಟ ನಡೆಸುವ ಹಂತಕ್ಕೆ ಬಂದಿವೆೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಶೋಧಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಹ ಆತಂಕಕ್ಕೆ ಒಳಗಾಗಿದ್ದಾರೆ. ಪ್ರತಿ ಐದು ವರ್ಷಗಳಿಗೊಮ್ಮೆ ನವೀಕರಣಗೊಳ್ಳುತ್ತಿದ್ದ ಇಂತಹ ಸಂಶೋಧನಾ ಕೇಂದ್ರಗಳು ಇಂದು ವಷರ್ಕ್ಕೊಮ್ಮೆ ನವೀಕರಣಗೊಳ್ಳುತ್ತಿದೆ. ಮಹಿಳಾ ಅಧ್ಯಯನ ಕೇಂದ್ರಗಳು ದೇಶದ ವಿವಿಗಳಲ್ಲಿ 70ರ ದಶಕದಲ್ಲೇ ಆರಂಭವಾದರೂ ಯುಜಿಸಿಯಿಂದ 1980ರ ನಂತರ ಅನುದಾನ ಪಡೆಯಲು ಆರಂಭಿಸಿತು. 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಒಳಗೊಳ್ಳುವಿಕೆಯ ಬೆಳವಣಿಗೆಗೆ ಒತ್ತು ನೀಡಿದ್ದರಿಂದ ಅದಕ್ಕೆ ಪೂರಕವಾಗುವಂತಹ ಸಂಶೋಧನೆಯನ್ನು ನಡೆಸಲು ಇಂತಹ ವಿಶೇಷವಾದ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಅಧ್ಯಯನ ಕೇಂದ್ರಗಳಿಗೆ ಪೂರ್ಣಪ್ರಮಾಣದ ಸ್ಥಾನಮಾನ ನೀಡಿ ಅದನ್ನು ಉನ್ನತೀಕರಿಸುವ ಯೋಜನೆ ಹಾಕಿಕೊಂಡಿತ್ತು. ಅದರಲ್ಲಿ ಮುಖ್ಯವಾದುದ್ದು ಸಾಮಾಜಿಕ ಹೊರಗುಳಿಯುವಿಕೆ ಅಧ್ಯಯನ ಕೇಂದ್ರ ಮತ್ತು ಮಾನವ ಹಕ್ಕುಗಳ ಅಧ್ಯಯನ ಕೇಂದ್ರ, ಮಹಿಳಾ ಅಧ್ಯಯನ ಕೇಂದ್ರಗಳ ತೆರೆಯುವಿಕೆಯ ಹಿಂದೆ ಇದ್ದ ಮುಖ್ಯ ಉದ್ದೇಶ ಮಹಿಳಾ ಅಧ್ಯಯನ ವಸ್ತುವನ್ನು ಅಂತರ ಶಿಸ್ತಿನ ವಿಷಯವಾಗಿ ಪರಿವರ್ತಿಸುವುದು. ಇದರ ಮೂಲಕ ಇತರ ಸಾಮಾಜಿಕ ಅಧ್ಯಯನ ವಿಷಯವನ್ನು ಪ್ರಭಾವಿಕರಿಸುವುದು ಮಹಿಳಾ ಅಭಿವೃದ್ದಿಗೆ ಹೊಸ ನೀತಿಯ ಪೋಷಣೆ, ದಲಿತ, ಆದಿವಾಸಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರ ಅಭಿವೃದ್ಧಿಗೆ ಹೊಸ ನೀತಿ ರೂಪಿಸುವುದು ಇತ್ಯಾದಿ. ಇಂತಹ ಸಂಶೋಧನೆಗಳು ಪೂರಕ ದತ್ತಾಂಶ ಒದಗಿಸಲು ದೇಶದ ವಿವಿಗಳಲ್ಲಿ ಸಾಮಾಜಿಕ ಹೊರಗುಳಿಯುವಿಕೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಯಿತು. ಇಂತಹ ಕೇಂದ್ರಗಳು ಹೊಸ ಮತ್ತು ವಿಮರ್ಶಾತ್ಮಾಕ ಸಂಶೋಧನಾ ಅಜೆಂಡಾ ಹೊಸ ರಕ್ತದ ಹೊಸ ತಲೆಮಾರಿನ ಸಂಶೋಧಕರ ಅಂತರ ಶಿಸ್ತಿನ ಕೇಂದ್ರಗಳಾಗಿ ರೂಪುಗೊಳ್ಳುವ ಹಂತದಲ್ಲೇ ಅವುಗಳಿಗೆ ಯುಜಿಸಿ ಅನುದಾನವನ್ನು ಕಡಿಮೆಗೊಳಿಸುತ್ತಿದೆ ಎನ್ನುವುದು ತೀರಾ ಬೇಸರದ/ಆತಂಕದ ಸಂಗತಿ. ಸಾಮಾಜಿಕ ಸಂಶೋಧನಾ ಕೇಂದ್ರಗಳ ಅನುದಾನ ಕಡಿತಗೊಳಿಸಿ ಅಲ್ಲಿ ಹುಟ್ಟಬಹುದಾದ ಸಾಮಾಜಿಕ ಪ್ರತಿಭಟನೆಗಳ ಹೊಸ ರೂಪ ಮತ್ತು ಅಯಾಮವನ್ನು ಹತ್ತಿಕ್ಕಲು ನಡೆಸುತ್ತಿರುವ ಪ್ರಯತ್ನ ಎಂಬುದು ತಜ್ಞರ ವಾದವಾಗಿದೆ.

ಇಂದಿಗೂ ಕೇಳುವ ಪ್ರಶ್ನೆ ದೇಶದಲ್ಲಿ ಸಾಮಾಜಿಕ ಮತ್ತು ವಿಜ್ಞಾನ ಮತ್ತು ವಿಜ್ಞಾನ ವಿಭಾಗದ ನಡುವೆ ಭೇದ-ಭಾವ ಏಕೆ! ಸಾಮಾಜಿಕ ವಿಜ್ಞಾನ ಮತ್ತು ವಿಜ್ಞಾನ ಎರಡನ್ನೂ ಸಮನಾಗಿ ಪರಿಭಾವಿಸುವ ವಾತಾವರಣ ನಮ್ಮ ದೇಶದಲ್ಲಿ ಇನ್ನೂ ಇಲ್ಲ ಎಂಬುದನ್ನು ವಿವಿಗಳು ಯೋಚಿಸಬೇಕಾಗಿದೆ. ಇದಕ್ಕೆ ಮುಖ್ಯ ಕಾರಣ ಸ್ವರೂಪ, ಸಮಾಜ ಶ್ರೇಣಿ ಮತ್ತು ಸಮಾಜ ವಿಜ್ಞಾನ ಅನೇಕ ರೀತಿಯಲ್ಲಿ ಕವಲು ಒಡೆದಿರುವುದು ಮತ್ತು ಸಮಾಜ ವಿಜ್ಞಾನವನ್ನು ಆಯ್ದುಕೊಳ್ಳುವ ವಿದ್ಯಾರ್ಥಿಗಳ ಹಿನ್ನೆಲೆ ಸದ್ಯ ನಮಗೆ ಬೇಕಾಗಿರುವುದು ಸಮಾಜ ವಿಜ್ಞಾನದ ಸ್ವರೂಪ ಮತ್ತು ತಳಮಟ್ಟದ ಸಿದ್ಧಾಂತಗಳು ಬಹುವಾಗಿ ವಿಸ್ತರಿಸಿ ಅದು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮೊದಲು ಆಗಬೇಕು. ಇಂತಹ ಅನೇಕ ದೂರದೃಷ್ಟಿಯ ಅಂಶಗಳನ್ನು ಇಟ್ಟುಕೊಂಡು ದೇಶದ ವಿವಿಗಳಲ್ಲಿ ಮೇಲ್ಕಂಡ ವಿವಿಧ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ದೇಶದ ಒಂದು ವರ್ಗದವರಿಗೆ ಇರುವ ಬಹುಮುಖ್ಯ ಭಯವೆಂದರೆ ಇಂತಹ ಕೇಂದ್ರಗಳು ಕ್ರಮೇಣ ಸಾಂಪ್ರದಾಯಕ ಸಮಾಜ ವಿಜ್ಞಾನಕ್ಕೆ ಉಂಟು ಮಾಡಿರುವ ಸವಾಲುಗಳ ಜೊತೆಗೆ ಬಲಪಂಥಿಯ ವಿಚಾರಧಾರೆಯಲ್ಲಿನ ಹುಳುಕು ಸಮಾಜದಲ್ಲಿನ ಸ್ಥಾಪಿತ ವರ್ಗ, ಸಂಸ್ಥೆಗಳ ಮುಖವಾಡ ತೆಗೆಯುವುದು, ಸಾಂಪ್ರದಾಯಿಕ ಜಾತಿ ವರ್ಗ ಸಿದ್ಧಾಂತದ ವಿರುದ್ಧದ ಹೊಸ ಆಯಾಮದ ಸಂಶೋ ಧನೆ ಮತ್ತು ಚಳವಳಿ ಇತ್ಯಾದಿ ವಿಚಾರಗಳಲ್ಲಿ ಹೊಸ ಸವಾಲನ್ನು ಉಂಟು ಮಾಡಬಹುದು ಎಂಬ ಭಯ.

ಇಂತಹ ಹೊಸ ಸಂಶೋಧನಾ ಕೇಂದ್ರಗಳ ಆರಂಭದ ಸಮಯದಲ್ಲಿ ಅಂದರೆ 2007ರಲ್ಲಿ ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕೇಂದ್ರೀಯ ವಿವಿಗಳಲ್ಲಿ ಮೀಸಲಾತಿ ನೀಡುವ ವಿಚಾರ ಮಹತ್ವ ಪಡೆದಿತ್ತು. ಹೊಸ ಮೀಸಲಾತಿ ಜಾರಿಗೆ ತರಬೇಕಾದರೆ ಸಂಸ್ಥೆಗಳನ್ನು ಇತರ ವಿದ್ಯಾರ್ಥಿಗಳಿಗೆ ಕಲ್ಪಿಸಬೇಕಾದ ಸೀಟ್‌ಗಳ ಸಂಖ್ಯೆಯನ್ನು ಸಹ ಅನಿವಾರ್ಯವಾಗಿ ಹೆಚ್ಚಿಸಬೇಕಾಗಿತ್ತು (2006ರ ಕಾಯ್ದೆ) ಇಂತಹ ಹೊಸ ಮೀಸಲಾತಿ ವ್ಯವಸ್ಥೆ ಉನ್ನತ ಶಿಕ್ಷಣದಲ್ಲಿನ ವೈವಿಧ್ಯಪೂರ್ಣ ವಿದ್ಯಾರ್ಥಿಗಳನ್ನು ಕಾಣಲು ಸಾಧ್ಯವಾಯಿತು. ಇಂತಹ ಸಂಕ್ರಮಣ ಕಾಲದಲ್ಲಿ ಆರಂಭಗೊಂಡ ಈ ಹಿಂದೆ ಹೇಳಿದ ಸಂಶೋಧನಾ ಕೇಂದ್ರಗಳು ಜಾತಿ, ರಾಷ್ಟ್ರೀಯತೆ, ಸಮಾಜದ ಒಳಗೊಳ್ಳುವಿಕೆ, ಸರಕಾರದ ಪಾತ್ರ ಮುಂತಾದ ವಿಚಾರಗಳ ಬಗ್ಗೆ ಹೊಸ ಸಿದ್ಧಾಂತಗಳನ್ನು ಪರಿಚಯಿಸಲು ಶುರುಮಾಡಿದವು. ಕ್ರಮೇಣ ಇದರಿಂದ ಪ್ರೇರೆಪಣೆಗೊಂಡು ರೋಹಿತ್ ವೇಮುಲಾರಿಗೆ ನ್ಯಾಯ ಒದಗಿಸುವ ಗುಂಪು (ವಿ.ವಿಗಳಲ್ಲಿನ ದಲಿತ ವಿದ್ಯಾರ್ಥಿಗಳ ವಿರುದ್ಧದ ತಾರತಮ್ಯ) ಪಿಂಜ್‌ರ ಟೂಟ್ ಗುಂಪು (ಹಾಸ್ಟೆಲ್ ಮತ್ತು ವಿವಿಗಳಲ್ಲಿ ವಿದ್ಯಾರ್ಥಿನಿಯರನ್ನು ಮಾತ್ರ ಗುರಿಯಾಗಿಸಿಟ್ಟುಕೊಳ್ಳುವುದು) ಹೊಕ್ ಕೋಲೊರಟ್ (ಜಾಧವ್‌ಪುರ ವಿವಿಯಲ್ಲಿ ವಿದ್ಯಾರ್ಥಿನಿಯ ಲೈಂಗಿಕ ಕಿರುಕುಳ ಪ್ರಕರಣ)ಮತ್ತು ಮದ್ರಾಸ್‌ನ ಐಐಟಿಯಲ್ಲಿ ಅಂಬೇಡ್ಕರ್ ಸಂಘಟನೆಯ ಮಾನ್ಯತೆಯನ್ನು ತೆಗೆದು ಹಾಕಿದ್ದರ ವಿರುದ್ಧ ನಡೆದ ಹೋರಾಟ ಹೊಸ ರೂಪದ ಚಳವಳಿಗಳು, ಲಿಂಗ ತಾರತಮ್ಯ ಮತ್ತು ಉನ್ನತ ಶಿಕ್ಷಣದ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯ, ವಿದ್ಯಾರ್ಥಿಗಳ ಸಂಘಟನೆಯಲ್ಲಿ ಸರಕಾರಗಳ ಪಾತ್ರ ಮುಂತಾದ ಹುಳುಕುಗಳು ದಿಢೀರ್ ಬೆಳಕಿಗೆ ಬಂದವು. ನಾವು ಇಲ್ಲಿ ನೆನಪಿಡಬೇಕಾದದ್ದು ಇಂತಹ ಹೊರಾಟಗಳು ಹುಟ್ಟಿಕೊಂಡಿದ್ದು ದೇಶದ ವಿವಿಗಳ ಸಂಶೋಧನಾ ಕೇಂದ್ರಗಳಲ್ಲಿ ಮಾತ್ರ. ಆದರೆ ದೇಶದ ಖಾಸಗಿ ಮತ್ತು ಡೀಮ್ಡ್ ವಿವಿಗಳಲ್ಲಿ ಇಂತಹ ಹೋರಾಟ ಕಂಡು ಬರದಿರುವುದು ತೀರಾ ಆಶ್ಚರ್ಯ. ಪ್ರಕೃತಿಯಲ್ಲಿ ಆಗೊಮ್ಮೆ ಈಗೊಮ್ಮೆ ಗ್ರಹಣ ಬಂದರೆ, ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರತಿದಿನವೂ ಗ್ರಹಣ ಬರುತ್ತಲೇ ಇರುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top