'12 ಗಂಟೆಗಳಲ್ಲಿ ಕೊರೊನಾವೈರಸ್ ಸಾಯುತ್ತದೆ': ನಗೆಪಾಟಲಿಗೀಡಾದ ಸೋನು ನಿಗಮ್ 'ಸಂಶೋಧನೆ'!
ಕೊರೊನಾವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ನಡುವೆಯೇ ಸುಳ್ಳು ಸುದ್ದಿಗಳೂ ಕೂಡ ಅಷ್ಟೇ ವೇಗವಾಗಿ ಹಬ್ಬುತ್ತಿದೆ. ಇಂತಹ ಸುಳ್ಳು ಸುದ್ದಿಯೊಂದನ್ನು ನಂಬಿ ಅದನ್ನು ವಿಡಿಯೋದಲ್ಲಿ ತಿಳಿಸಿದ ಖ್ಯಾತ ಗಾಯಕ ಸೋನು ನಿಗಮ್ ಈಗ ನಗೆಪಾಟಲಿಗೀಡಾಗಿದ್ದಾರೆ.
ದೇಶದಲ್ಲಿ ಕೊರೊನಾ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ರವಿವಾರ 'ಜನತಾ ಕರ್ಫ್ಯೂ'ಗೆ ಕರೆ ನೀಡಿದ್ದರು. ಪ್ರಧಾನಿಯ ಈ ಕರೆಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಸೆಲೆಬ್ರಿಟಿಗಳೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಪಟ್ಟಿಗೆ ಸೋನು ನಿಗಮ್ ಅವರೂ ಸೇರಿದ್ದು, ಪ್ರಧಾನಿಯನ್ನು ಹೊಗಳುವ ಭರದಲ್ಲಿ ಅವರು ಎಡವಟ್ಟು ಮಾಡಿಕೊಂಡು ನಗೆಪಾಟಲಿಗೀಡಾಗಿದ್ದಾರೆ.
ವಿಡಿಯೋ ಒಂದರಲ್ಲಿ ಮಾತನಾಡಿರುವ ಸೋನು ನಿಗಮ್, "ಜನತಾ ಕರ್ಫ್ಯೂ ನಡೆ ಭಾರತದ ಮಾಸ್ಟರ್ ಸ್ಟ್ರೋಕ್" ಎಂದಿದ್ದಾರೆ. 14 ಗಂಟೆಗಳ ಕರ್ಫ್ಯೂಗೆ ಪ್ರಧಾನಿ ಕರೆ ನೀಡಿದ್ದರೆ, ಸೋನು ಅವರು, 12 ಗಂಟೆಗಳಲ್ಲಿ ಕೊರೊನಾವೈರಸ್ ಸಾಯುತ್ತದೆ. ಇದು ಯಾವುದೇ ಕೊರೊನಾಪೀಡಿತ ರಾಷ್ಟ್ರಗಳು ಯೋಚಿಸದ ಮಾಸ್ಟರ್ ಸ್ಟ್ರೋಕ್ ಎಂದಿದ್ದಾರೆ. ಆದರೆ ಸೋನು ನಿಗಮ್ ಹೇಳಿದಂತೆ ವೈರಸ್ ಗಳು 12 ಗಂಟೆಗಳಲ್ಲಿ ಸಾಯುವುದಿಲ್ಲ.
ಪ್ಲಾಸ್ಟಿಕ್ ಮತ್ತು ಸ್ಟೀಲ್ ಗಳಲ್ಲಿ ಕೊರೊನಾವೈರಸ್ 3 ದಿನಗಳ ಕಾಲ ಬದುಕಿರುತ್ತದೆ ಎಂದು ಅಧ್ಯಯನಗಳು ತಿಳಿಸುತ್ತದೆ. ಸೋನು ನಿಗಮ್ ಅವರ ಈ ಸುಳ್ಳು ಸುದ್ದಿಯನ್ನು ಹಲವು ಟ್ವಿಟರಿಗರು ಟೀಕಿಸಿದ್ದಾರೆ.
Small Request to everyone
— AA (@aiyazahmed08) March 21, 2020
It's Important to Follow The Social Distancing Idea... Not Just for next 24-36 hours But for coming weeks
So Start it from Today itself, Janta Curfew will be A Part of it
But Just dont spread this Kind of Misinformation and Make people even more chill https://t.co/BZzM0Z3tOg
There is big problem in india, Evwryone thinks everyone has a deep knowledge of several things.::;:Sonu Nigam::::When you dont know dont spread the rumours..Sorry its not your default its ur news channel..Ridiculous amount of misinformation in the video
— Ahsan kafe72 (@AKafe72) March 21, 2020
Ridiculous amount of misinformation in this video
— Dhruv Rathee (@dhruv_rathee) March 21, 2020
Coronavirus will not disappear just because of a 14 hour self imposed curfew. It needs days and weeks of lockdowns to slow its spread. pic.twitter.com/wgItELuEf4
"Coronavirus 12 ghante mein nishkriya ho jata hai aur Janata Curfew 14 ghante k liye hai"
— Subhayan Chakraborty (@CricSubhayan) March 21, 2020
Sonu Nigam ji ne ye konsa whatsapp message padh liya!!!
Saddest thing is certain people don't even bother to educate themselves a bit. pic.twitter.com/DWrLJ6eGzc