ಪಾಕಿಸ್ತಾನದ ಬಾಲಕನ ‘ಕಣ್ಣುಗುಡ್ಡೆಗಳ ಕಮಾಲ್ ’ನೋಡಿ
14ರ ಹರೆಯದ ಪಾಕಿಸ್ತಾನದ ಬಾಲಕನೋರ್ವ ತನ್ನ ಕಣ್ಣುಗುಡ್ಡೆಗಳನ್ನು ಹೊರಗೆ ತೆಗೆಯುವ ಕೌಶಲವನ್ನು ಪ್ರದರ್ಶಿಸುವ ಮೂಲಕ ಇಂಟರ್ನೆಟ್ ಸೆನ್ಸೇಷನ್ ಆಗಿಬಿಟ್ಟಿದ್ದಾನೆ. ಅಹ್ಮದ್ ಖಾನ್ ತನ್ನ ಕಣ್ಣುಗುಡ್ಡೆಗಳನ್ನು 10 ಮಿ.ಮೀ.ನಷ್ಟು ಹೊರಗೆ ತೆಗೆಯುವ ವಿಲಕ್ಷಣ ಕಲೆಯನ್ನು ಮೈಗೂಡಿಸಿಕೊಂಡಿದ್ದಾನೆ.
ಲಾಹೋರ್ನ ಸ್ಥಳೀಯ ಶಾಲೆಯೊಂದರ ವಿದ್ಯಾರ್ಥಿಯಾಗಿರುವ ಅಹ್ಮದ್ ತನಗೆ ಇಂತಹ ವಿಶಿಷ್ಟ ಸಾಮರ್ಥ್ಯವಿರುವುದನ್ನು ಕಳೆದ ವರ್ಷ ಕಂಡುಕೊಂಡಿದ್ದ. ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಟಿಸುವುದು ಆತನ ಗುರಿಯಾಗಿದೆ.
ಅಂದ ಹಾಗೆ ಹೆಚ್ಚು ಕಾಲ ತನ್ನ ಈ ಕಲೆಯನ್ನು ಪ್ರದರ್ಶಿಸುತ್ತಿದ್ದರೆ ಮಾತ್ರ ಕಣ್ಣುಗಳಲ್ಲಿ ಸ್ವಲ್ಪ ನೀರು ತುಂಬಿಕೊಳ್ಳುತ್ತದೆ. ಇದನ್ನು ಬಿಟ್ಟರೆ ಇತರ ಯಾವುದೇ ಸಮಸ್ಯೆ ತನಗೆ ಎದುರಾಗಿಲ್ಲ ಎನ್ನುತ್ತಾನೆ ಅಹ್ಮದ್.
Next Story