ಪುಟ್ಟ ಇಲಿಗೆ ಹೆದರಿ ಓಡಿದ ಪೊಲೀಸಪ್ಪ...!
ಇಲ್ಲಿದೆ ನೋಡಿ ವೀಡಿಯೊ
ಇದು ಅಮೆರಿಕದ ಫ್ಲೋರಿಡಾದ ಸೈಂಟ್ ಪೀಟರ್ಸ್ಬರ್ಗ್ನ ಪೊಲೀಸಪ್ಪನ ಕತೆ. ಆನ್ಲೈನ್ನಲ್ಲಿ ಹರಿದಾಡುತ್ತಿರುವ ವೀಡಿಯೊ ಪುಟ್ಟಇಲಿ ಮತ್ತು ಕಡಿದರೆ ಮೂರು ಆಳಾಗುವಂತಿರುವ ಪೊಲೀಸ್ ಅಧಿಕಾರಿಯ ಮುಖಾಮುಖಿಯ ನಿಖರಗಳಿಗೆಗಳನ್ನು ದಾಖಲಿಸಿದೆ. ಇಲಿಯನ್ನು ಕಂಡ ಪೊಲೀಸ್ ಅಧಿಕಾರಿ ಹೆದರಿ ಓಡುತ್ತಿರುವ,ನೋಡುವವರಲ್ಲಿ ನಗೆಯನ್ನುಕ್ಕಿಸುವ ದೃಶ್ಯವನ್ನು ಈ ವೀಡಿಯೊ ದಾಖಲಿಸಿದೆ. ಕಚೇರಿಯಲ್ಲಿ ಕೆಲಸ ಮುಗಿಸಿದ ಬಳಿಕ ಈ ಪೊಲೀಸ್ ಅಧಿಕಾರಿ ಕಾರಿಡಾರ್ನಲ್ಲಿ ನಡೆದುಕೊಂಡು ಬರುತ್ತಿದಾಗ ಎದುರಿನಿಂದ ದಿಢೀರ್ನೆ ಇಲಿ ಓಡಿ ಬಂದಿತ್ತು. ಮನುಷ್ಯನನ್ನು ಕಂಡು ಹೆದರಿ ಇಲಿ ಓಡಿದರೆ ಪೊಲೀಸ್ ಅಧಿಕಾರಿಯೂ ಕಂಗಾಲಾಗಿ ಓಡಿದ್ದಾನೆ.
ಇಲಿ ಕೋಣೆಯೊಂದನ್ನು ಸೇರಿಕೊಂಡಿದ್ದು, ಅದೆಲ್ಲಿ ಹೋಯಿತು ಎಂದು ದೂರದಿಂದಲೇ ಹುಡುಕುತ್ತಿರುವ ಪೊಲೀಸ್ ಅಧಿಕಾರಿ ಇನ್ನಷ್ಟು ನಗು ಹುಟ್ಟಿಸುತ್ತಾನೆ.
ವೀಡಿಯೊ ಇಲ್ಲಿದೆ,ನೋಡಿ......
Next Story