ನನ್ನ ರಮಝಾನ್ ಅನುಭವ

ಅಬುಧಾಬಿಯ ಅಪಾರ್ಟ್‌ಮೆಂಟಿನಲ್ಲಿ 'ಭಾರತೀಯ ಇಫ್ತಾರ್'

ಕೋಮು ಸೌಹಾರ್ದದ ವಿಷಯ ಬಂದಾಗ ಸಾಮಾನ್ಯವಾಗಿ ಎಲ್ಲರೂ ಹೇಳುವ ಮಾತು, ನಾವು ರಮಝಾನ್ ಹಬ್ಬದ ದಿನ ಅವರ ಮನೆಗೆ ಹೋಗಿ ಖೀರ್ ತಿನ್ನುತ್ತೇವೆ, ಅವರು ನಮ್ಮ ಮನೆಗೆ ದೀಪಾವಳಿಗೆ ಬಂದು ಒಬ್ಬಟ್ಟು, ಹೋಳಿಗೆ ತಿನ್ನುತ್ತಾರೆ ಇತ್ಯಾದಿ ಇತ್ಯಾದಿ. 

ಕಳೆದ ಮೂರೂವರೆ ವರ್ಷದಿಂದ ಅಬುಧಾಬಿಯಲ್ಲಿ ನಾವಿರುವ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ವಾಸವಾಗಿರುವ ಭಾರತದ ನಾನಾ ಭಾಗಗಳಿಂದ ಬಂದ ಹತ್ತಾರು ಕುಟುಂಬಗಳು ಮತೀಯ ಸೌಹಾರ್ದವನ್ನು ಬರೀ ಈ ರೀತಿಯ ಸಾಂಕೇತಿಕತೆಗೆ ಸೀಮಿತಗೊಳಿಸದೆ ಬದುಕಿನ ಸಹಜ ತತ್ವವಾಗಿ ಆಚರಿಸಿಕೊಂಡು ಬಂದಿದ್ದೇವೆ. ಅದರಲ್ಲೂ ನಮ್ಮ ಮಟ್ಟಿಗೆ ರಮಝಾನ್‌ನ ಮೂವತ್ತು ದಿನಗಳಲ್ಲಿಯೂ ಈ ಮುಸ್ಲಿಮೇತರ ನೆರೆಕರೆಯವರು ತೋರುವ ಉಪಚಾರ, ಮರ್ಯಾದೆ ಮತ್ತು ಆತಿಥ್ಯವು ಮರೆಯಲಾಗದಂತಹ ಅನುಭವ. ಪ್ರಾಯಶಃ ಭಾರತದ ವಿವಿಧ ಪ್ರದೇಶಗಳ ಅಷ್ಟೂ ಖಾದ್ಯಗಳನ್ನು ಸೇವಿಸಿ ಉಪವಾಸ ತೊರೆಯುವ ಅದೃಷ್ಟ ಸಿಗುತ್ತಿರುವುದು ನಮಗೆ ಮಾತ್ರವೇನೋ!

ಬಿಹಾರ ಮೂಲದ ಸದ್ಯ ದೆಹಲಿಯಲ್ಲಿ ವಾಸವಾಗಿರುವ ನಮ್ಮ ಪಕ್ಕದ ಫ್ಲ್ಯಾಟ್‌ನ ಕೀರ್ತಿ ಠಾಕೋರ್ ಮತ್ತವರ ಪರಿವಾರವಿದೆ. 
ಈಕೆ ನನ್ನ ಮನೆಯಾಕೆಯ ಆಪ್ತ ಗೆಳತಿ. ಕಳೆದ ಮೂರು ವರ್ಷದಿಂದಲೂ ಪ್ರತಿ ರಮಝಾನ್‌ನ ಇಫ್ತಾರ್ ವೇಳೆ ಇವರು ತಮ್ಮ ಇಬ್ಬರು ಮುದ್ದು ಮಕ್ಕಳ ಜೊತೆ ಹಾಜರ್. ಜೊತೆಗೆ ನಿತ್ಯ ದಹೀ ವಡಾ, ಪೋಹಾ, ಸ್ಯಾಂಡ್‌ವಿಚ್ ಹೀಗೆ ಏನಾದರೂ ತಿಂಡಿಯ ಪಾತ್ರೆಯೊಂದಿಗೇ ಬರುತ್ತಾರೆ. ಒಟ್ಟಿಗೆ ಕೂತು ಇಫ್ತಾರ್ ಮಾಡುತ್ತೇವೆ. ನಾವು ಎಷ್ಟೇ ಒತ್ತಾಯಿಸಿದರೂ ಖರ್ಜೂರ, ಒಂದೆರಡು ಹಣ್ಣಿನ ಹೋಳು ಬಿಟ್ಟರೆ ಬೇರೇನೂ ತಿನ್ನುವುದಿಲ್ಲ.

ನಮಗೆ ತಿನ್ನಿಸುವುದರಲ್ಲೇ ಆಕೆಗೆ ಖುಷಿ. ನನ್ನ ಮಗಳಿಗೆ ಒಂದೆರಡು ಗ್ಲಾಸ್ ನೀರನ್ನು ಒತ್ತಾಯ ಮಾಡಿ ಕುಡಿಸುವುದೂ ಇದೆ. ನಿನ್ನೆ ಈ ಬಾರಿಯ ಮೊದಲ ಇಫ್ತಾರ್‌ಗೆ ಮನೆಗೆ ಬಂದಾಗ ಈಕೆಯ ಇಬ್ಬರು ಪುಟಾಣಿ ಮಕ್ಕಳು ತಮ್ಮೊಂದಿಗೆ ತಾವೇ ಕೈಯಾರೆ ರಚಿಸಿದ ಸುಂದರವಾದ ರಮಝಾನ್ ಗ್ರೀಟಿಂಗ್ ಕಾರ್ಡನ್ನೂ ತಂದಿದ್ದರು.

ರಮಝಾನ್ ನ ಈ ವಿಶೇಷ ಹಾಸ್ಪಿಟಾಲಿಟಿ ಶುರುವಾಗಿದ್ದರ ಹಿಂದೆ ಒಂದು ಕತೆಯಿದೆ. ದಿನಪತ್ರಿಕೆಯೊಂದರ ಸುದ್ದಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಾಮಾನ್ಯವಾಗಿ 10-11 ಗಂಟೆ ರಾತ್ರಿಯವರೆಗೂ ಕಚೇರಿಯಲ್ಲಿ ಕೆಲಸವಿರುತ್ತದೆ. ಅದು ನಾನು ಅಬುಧಾಬಿಗೆ ಬಂದ ಆರಂಭದ ವರ್ಷ. ರಮಝಾನ್ ತಿಂಗಳಲ್ಲೂ ನನಗೆ ಇಫ್ತಾರ್ ವೇಳೆಗೆ ಮನೆಗೆ ಬರಲು ಸಾಧ್ಯವಾಗಿರಲಿಲ್ಲ. ನನ್ನಾಕೆಗೆ ಗಲ್ಫ್‌ನಲ್ಲಿ ಮೊದಲ ರಮಝಾನ್ ಆಗಿದ್ದರಿಂದ ಊರಿನ ನೆನಪು ಕಾಡತೊಡಗಿತ್ತು. ಆಗಷ್ಟೇ ಪರಿಚಯವಾಗಿದ್ದ ತನ್ನ ಸ್ನೇಹಿತೆಯೊಡನೆ ಈ ವಿಷಯ ಹಂಚಿಕೊಂಡಿದ್ದಳು.

ಮಂಗಳೂರಲ್ಲಾದರೆ ರಮಝಾನ್ ತಿಂಗಳಲ್ಲಿ ಮನೆ ತುಂಬಾ ಜನರು ಇರ್ತಾರೆ ಮತ್ತು ಒಂದು ರೀತಿ ಹಬ್ಬದ ವಾತಾವರಣ ಇರ್ತಾ ಇತ್ತು. ಇಲ್ಲಿ ನನಗೆ ಅದೆಲ್ಲಾ ಮಿಸ್ ಆಗ್ತಾ ಇದೆ ಎಂದು ಹೇಳಿಕೊಂಡಿದ್ದಳು. ಇದನ್ನು ಕೇಳಿ ಆ ಹೆಣ್ಣು ಮಗಳಿಗೆ ಏನನ್ನಿಸಿತೋ ಮರುದಿನದಿಂದ ಇಫ್ತಾರ್‌ಗೆ ಆಕೆ ನಿತ್ಯ ಹಾಜರ್. ಇನ್ನು ನಿನಗೆ ಊರಿನ ನೆನಪು ಬಾರದ ಹಾಗೆ ನಾನು ನೋಡುತ್ತೇನೆ ಎಂದು ಹೇಳಿದ ಆಕೆ ನಂತರದ ಪ್ರತಿ ರಮಝಾನ್ ನಲ್ಲೂ ತನ್ನ ಮಾತು ಉಳಿಸಿಕೊಂಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಹೆಂಡತಿ ಮಗಳ ಜತೆ ಉಪವಾಸ ತೊರೆಯಲು ಕೆಲಸದಿಂದ ಸ್ವಲ್ಪ ಬಿಡುವು ಮಾಡಿಕೊಂಡು ನಾನೂ ಮನೆಗೆ ಬರುತ್ತೇನೆ. ಆದರೆ ನನ್ನನ್ನು ಭಯ್ಯ ಎಂದು ಪ್ರೀತಿಯಿಂದ ಕರೆಯುವ ನನ್ನ ಈ ಒಡಹುಟ್ಟದ ಸೋದರಿ ಮಾತ್ರ ತನ್ನ ಇಫ್ತಾರ್ ನಂಟನ್ನು ತೊರೆದಿಲ್ಲ.

ಪ್ರತಿ ಮಂಗಳವಾರ ಉಪವಾಸ ಆಚರಿಸುವ, ಹಿಂದೂ ಧರ್ಮದ ಆಚರಣೆಗಳನ್ನು ಚಾಚೂ ತಪ್ಪದೆ ಪಾಲಿಸುವ ಈಕೆ ರಮಝಾನನ್ನು ಕೂಡಾ ಅಷ್ಟೇ ಪ್ರೀತಿ, ಶ್ರದ್ಧೆಯಿಂದ ಕಾಣುತ್ತಿರುವುದನ್ನು ನೋಡಿ ನಾನು ಮತ್ತು ನನ್ನಾಕೆ ದಂಗಾಗಿದ್ದೇವೆ. 

ನಮ್ಮ ಮಗಳು ಮತ್ತು ಅವರ ಇಬ್ಬರು ಮಕ್ಕಳ ನಡುವಿನ ಸ್ನೇಹದಿಂದಾಗಿ ನಮ್ಮೆರಡು ಪರಿವಾರದ ನಡುವಿನ ನಂಟೂ ಗಟ್ಟಿಯಾಗಿದೆ. ಆಕೆಯ ಪತಿ, ಅಲೋಕ್ ಠಾಕೂರ್, ಪ್ರೀತಿ ವಿಶ್ವಾಸದ ಈ ನಂಟಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಅಬುಧಾಬಿಯ ನನ್ನ ಬದುಕು, ರಮಝಾನ್ ನ ನೆಪದಲ್ಲಿ ಜಾತಿ, ಧರ್ಮ, ಭಾಷೆ, ಪ್ರಾಂತ್ಯಗಳಿಗೆ ಮೀರಿದ ಸ್ನೇಹದ ಹೊಸ ಅನುಭವವೊಂದನ್ನು ನಮಗೆ ಒದಗಿಸಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top